ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಜೋಡಣೆ ಮಾಡಲಾಗುತ್ತಿದ್ದ ಕನೆಕ್ಟೆಡ್ ಕಾರ್ ಫೀಚರ್ಸ್‌ಗಳು ಇದೀಗ ಮಧ್ಯಮ ಗಾತ್ರದ ಕಾರುಗಳನ್ನು ಜನಪ್ರಿಯವಾಗುತ್ತಿದ್ದು, ಕಿಯಾ ಮೋಟಾರ್ಸ್ ಕಂಪನಿಯು ಇದುವರೆಗೆ ಬರೋಬ್ಬರಿ 50 ಸಾವಿರ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ

37 ಫೀಚರ್ಸ್ ಒಳಗೊಂಡಿರುವ ಬ್ಲ್ಯೂ ಲಿಂಕ್ ಸೂಟ್ಸ್‌ ಹೊಂದಿರುವ ಯುವಿಒ ಕನೆಕ್ಟ್ ಟೆಕ್ನಾಲಜಿ ಸೌಲಭ್ಯದಿಂದಾಗಿ ಹೊಸ ಸೆಲ್ಟೊಸ್ ಮತ್ತು ಕಾರ್ನಿವಾಲ್ ಕಾರಿಗೆ ಗರಿಷ್ಠ ಭದ್ರತೆ ದೊರೆತಿದ್ದು, ಇದು ಕಿಯಾ ಹೊಸ ಕಾರುಗಳ ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ. ಸ್ಮಾರ್ಟ್ ಫೋನ್ ಅಥವಾ ಸ್ಮಾರ್ಟ್ ವಾಚ್ ಮೂಲಕವೇ ಕಾರಿನ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಇದರಿಂದ ವಾಹನ ಕಳ್ಳತನದಂತಹ ಸಮಸ್ಯೆಗಳಿಗೆ ಗರಿಷ್ಠ ಭದ್ರತೆ ದೊರೆಯಲಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ

ಸದ್ಯ ಕಿಯಾ ಮೋಟಾರ್ಸ್ ಕಂಪನಿಯು ಹೊಸ ಕನೆಕ್ಟೆಡ್ ಫೀಚರ್ಸ್‌ಗಳನ್ನು ಕಾರ್ನಿವಾಲ್‌ನಲ್ಲಿ ಸ್ಟ್ಯಾಂಡರ್ಡ್ ಆಗಿ ಮತ್ತು ಸೆಲ್ಟೊಸ್‌ ಕಾರಿನ ಹೈಎಂಡ್ ಮಾದರಿಗಳಲ್ಲಿ ಮಾತ್ರವೇ ನೀಡಲಾಗುತ್ತಿದ್ದು, ಸಾಮಾನ್ಯ ಕಾರುಗಳಿಗಿಂತಲೂ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಕಾರುಗಳೇ ಹೆಚ್ಚು ಮಾರಾಟವಾಗಿವೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ

ಇನ್ನು ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ಆಟೋ ಉದ್ಯಮವು ಮರು ಚಾಲನೆಗೊಂಡಿದ್ದು, ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಆಟೋ ಕಂಪನಿಗಳು ಪರದಾಡುತ್ತಿವೆ. ಹೀಗಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಆಟೋ ಕಂಪನಿಗಳು ಹಲವು ಹೊಸ ಆಫರ್‌ಗಳನ್ನು ಘೋಷಿಸುತ್ತಿವೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ

ಕರೋನಾ ವೈರಸ್‌ನಿಂದಾಗಿ ಆಟೋ ಮೊಬೈಲ್ ಸೇರಿದಂತೆ ಎಲ್ಲಾ ವಲಯದಲ್ಲೂ ಆರ್ಥಿಕ ಸ್ಥಿತಿ ಶೋಚನೀಯ ಸ್ಥಿತಿಗೆ ತಲುಪಿದೆ. ಲಾಕ್‌ಡೌನಿಂದಾಗಿ ಕುಸಿದಿರುವ ವ್ಯಾಪಾರ ಅಭಿವೃದ್ದಿಯನ್ನು ಸರಿದಾರಿಗೆ ತರುವುದು ಒಂದು ಸವಾಲಾಗಿ ಪರಿಣಿಮಿಸಿದ್ದು, ಕಿಯಾ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದೆ. ಹೊಸ ಕುಸಿದಿರುವ ಕಾರು ಮಾರಾಟಕ್ಕೆ ಚೇತರಿಕೆ ನೀಡಲಿದ್ದು, ಸಂಕಷ್ಟದ ಸಮಯದಲ್ಲೂ ಗ್ರಾಹಕರನ್ನು ಸೆಳೆಯಲು ಕೆಲವು ಆಕರ್ಷಕ ಯೋಜನೆಗಳನ್ನು ರೂಪಿಸಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ

ಲಾಕ್‌ಡೌನ್‌ಗೂ ಮೊದಲ ವಾಹನಗಳ ಖರೀದಿಗೆ ಮುಂಗಡ ಪಾವತಿಸಿದ್ದ ಗ್ರಾಹಕರು ಇದೀಗ ವಾಪಸ್ ಪಡೆದುಕೊಳ್ಳುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದ್ದು, ವಾಹನ ಮಾರಾಟಕ್ಕೆ ವಿನಾಯ್ತಿ ಸಿಕ್ಕರೂ ಇದೀಗ ಗ್ರಾಹಕರು ಮಾರಾಟ ಮಳಿಗೆಗಳತ್ತ ಸುಳಿಯುತ್ತಿಲ್ಲ.

ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ

ಇದರಿಂದ ಆತಂಕದಲ್ಲಿರುವ ಆಟೋ ಕಂಪನಿಗಳು ಗ್ರಾಹಕರನ್ನು ಸೆಳೆಯಲು ವಿವಿಧ ಮಾದರಿಯ ಹಲವಾರು ಸರಳ ಹಣಕಾಸು ಸೇವೆಗಳನ್ನು ನೀಡಲು ಮುಂದಾಗಿದ್ದು, ಕಿಯಾ ಕೂಡಾ ಸೆಲ್ಟೊಸ್ ಕಾರು ಖರೀದಿ ಮೇಲೆ ವಿವಿಧ ಆಫರ್‌ಗಳನ್ನು ನೀಡಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ

ಸೆಲ್ಟೊಸ್ ಕಾರು ಖರೀದಿಯ ಮಾಡಿದ ಮೊದಲ ಆರು ತಿಂಗಳು 1 ಲಕ್ಷಕ್ಕೆ ರೂ.777 ಇಎಂಐ ಅನ್ವಯವಾಗುವಂತೆ ಇಎಂಐ ವಿಧಿಸುತ್ತಿದ್ದು, 7ನೇ ತಿಂಗಳಿನಿಂದ ಸಾಮಾನ್ಯ ಮಾದರಿಯಲ್ಲಿ ಇಎಂಐ ವಿಧಿಸಲಿದೆ. ಇದು ಲಾಕ್‌ಡೌನ್ ಸಂಕಷ್ಟದಿಂದ ಕಾರು ಖರೀದಿ ಮುಂದೂಡಿರುವ ಗ್ರಾಹಕರಿಗೆ ಅನುಕೂಲವಾಗಲಿದೆ.

ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ

ಜೊತೆಗೆ ಹೊಸ ಕಾರು ಖರೀದಿ ಮೇಲೆ ಶೇ.100ರಷ್ಟು ಆನ್-ರೋಡ್ ಸಾಲ ಸೌಲಭ್ಯ, 8 ವರ್ಷಗಳ ದೀರ್ಘಾವಧಿಯ ಸಾಲ ಮತ್ತು ಆಯ್ದ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಗ್ಯಾರಂಟಿ ಆಫರ್ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಕನೆಕ್ಟೆಡ್ ಫೀಚರ್ಸ್‌ವುಳ್ಳ 50 ಸಾವಿರ ಕಾರು ಮಾರಾಟ ಮಾಡಿದ ಕಿಯಾ

ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ 2020ರ ಸೆಲ್ಟೊಸ್ ಕಾರು ಎಸ್‌ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬೆಲೆ ಹೊಂದಿದೆ.

Most Read Articles

Kannada
English summary
Kia Motors Sells 50,000 Connected Cars. Read in Kannada.
Story first published: Tuesday, July 7, 2020, 22:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X