ಜೂನ್ ಅವಧಿಯಲ್ಲಿ 7,275 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಲಾಕ್‌ಡೌನ್ ಸಡಿಲಿಕೆ ನಂತರ ಕಾರು ಮಾರಾಟದಲ್ಲಿ ಚೇತರಿಕೆ ಕಾಣುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಜೂನ್ ಅವಧಿಯಲ್ಲಿ ಒಟ್ಟು 7,275 ಕಾರುಗಳನ್ನು ಮಾರಾಟ ಮಾಡಿದ್ದು, ಮೇ ಅವಧಿಗಿಂತ ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಜೂನ್ ಅವಧಿಯಲ್ಲಿ 7,275 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಮೇ ಅವಧಿಯಲ್ಲಿ ಕೇವಲ 2 ಸಾವಿರ ಯುನಿಟ್ ಮಾತ್ರ ಮಾರಾಟ ಮಾಡಿದ್ದ ಕಿಯಾ ಕಂಪನಿಯು ಇದೀಗ ವಿವಿಧ ಆಫರ್‌ಗಳ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಂಡಿದ್ದು, ಜೂನ್ ಅವಧಿಯ ಕಾರು ಮಾರಾಟದಲ್ಲಿ ಒಟ್ಟು 7,275 ಯುನಿಟ್ ಮಾರಾಟ ಮಾಡುವ ಮೂಲಕ ಗಮನಸೆಳೆದಿದೆ. 7,275 ಯುನಿಟ್‌ಗಳಲ್ಲಿ ಸೆಲ್ಟೊಸ್ ಮಾದರಿಯು 7,114 ಯುನಿಟ್ ಮಾರಾಟಗೊಂಡಿದ್ದರೆ 161 ಯುನಿಟ್ ಕಾರ್ನಿವಾಲ್ ಕಾರು ಮಾರಾಟವಾಗಿದೆ.

ಜೂನ್ ಅವಧಿಯಲ್ಲಿ 7,275 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಸೆಲ್ಟೊಸ್ ಮತ್ತು ಕಾರ್ನಿವಾಲ್ ಕಾರುಗಳನ್ನು ಮಾತ್ರವೇ ಮಾರಾಟ ಮಾಡುತ್ತಿರುವ ಕಿಯಾ ಮೋಟಾರ್ಸ್ ಪ್ರಸ್ತುತ ಮಾರುಕಟ್ಟೆಯಲ್ಲಿನ ಕಾರು ಮಾರಾಟವನ್ನು ಸುಧಾರಿಸಲು ಹಲವಾರು ಮಹತ್ವದ ಕ್ರಮಗಳೊಂದಿಗೆ ವಿಶೇಷ ಆಫರ್‌ಗಳನ್ನು ಘೋಷಣೆ ಮಾಡಿದೆ.

ಜೂನ್ ಅವಧಿಯಲ್ಲಿ 7,275 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಸೆಲ್ಟೊಸ್ ಕಾರು ಖರೀದಿಯ ಮಾಡಿದ ಮೊದಲ ಆರು ತಿಂಗಳು 1 ಲಕ್ಷಕ್ಕೆ ರೂ.777 ಇಎಂಐ ಅನ್ವಯವಾಗುವಂತೆ ಇಎಂಐ ವಿಧಿಸುತ್ತಿದ್ದು, 7ನೇ ತಿಂಗಳಿನಿಂದ ಸಾಮಾನ್ಯ ಮಾದರಿಯಲ್ಲಿ ಇಎಂಐ ವಿಧಿಸಲಿದೆ. ಇದು ಲಾಕ್‌ಡೌನ್ ಸಂಕಷ್ಟದಿಂದ ಕಾರು ಖರೀದಿ ಮುಂದೂಡಿರುವ ಗ್ರಾಹಕರಿಗೆ ಅನುಕೂಲವಾಗಲಿದೆ.

ಜೂನ್ ಅವಧಿಯಲ್ಲಿ 7,275 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಜೊತೆಗೆ ಹೊಸ ಕಾರು ಖರೀದಿ ಮೇಲೆ ಶೇ.100ರಷ್ಟು ಆನ್-ರೋಡ್ ಸಾಲ ಸೌಲಭ್ಯ, 8 ವರ್ಷಗಳ ದೀರ್ಘಾವಧಿಯ ಸಾಲ ಮತ್ತು ಆಯ್ದ ಕಾರು ಮಾದರಿಗಳ ಮೇಲೆ ಬೈಬ್ಯಾಕ್ ಗ್ಯಾರಂಟಿ ಆಫರ್ ನೀಡುತ್ತಿರುವುದು ಪ್ರಮುಖ ಆಕರ್ಷಣೆಯಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಜೂನ್ ಅವಧಿಯಲ್ಲಿ 7,275 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಇನ್ನು ಹೊಸ ಫೀಚರ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ 2020ರ ಸೆಲ್ಟೊಸ್ ಕಾರು ಎಸ್‌ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬೆಲೆ ಹೊಂದಿದೆ.

ಜೂನ್ ಅವಧಿಯಲ್ಲಿ 7,275 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಸೆಲ್ಟೊಸ್ ಕಾರು ಗ್ರಾಹಕರ ಬೇಡಿಕೆಯೆಂತೆ ಬಿಎಸ್-6 ಪ್ರೇರಿತ 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು 1.4-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಹಲವಾರು ಹೊಸ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಜೂನ್ ಅವಧಿಯಲ್ಲಿ 7,275 ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್

ಲಾಕ್‌ಡೌನ್ ಸಡಿಲಿಕೆಯ ನಂತರ ಹೊಸ ಸುರಕ್ಷಾ ಮಾರ್ಗಸೂಚಿ ಅನ್ವಯ ಆಟೋ ಉದ್ಯಮವು ಮರು ಚಾಲನೆಗೊಂಡಿದ್ದು, ನೀರಿಕ್ಷಿತ ಮಟ್ಟದಲ್ಲಿ ಗ್ರಾಹಕರಿಲ್ಲದೆ ಆಟೋ ಕಂಪನಿಗಳು ಪರದಾಡುತ್ತಿವೆ. ಹೀಗಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಆಟೋ ಕಂಪನಿಗಳು ಹಲವು ಹೊಸ ಆಫರ್‌ಗಳನ್ನು ಘೋಷಿಸುತ್ತಿವೆ.

Most Read Articles

Kannada
English summary
Kia Sold 7,275 Units Of Seltos & Carnival In June 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X