ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಭಾರತದಲ್ಲಿ ಕಾರು ಮಾರಾಟವನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಜನಪ್ರಿಯ ಕಾರು ಮಾರಾಟ ಸಂಸ್ಥೆಗಳನ್ನೇ ಹಿಂದಿಕ್ಕಿ ಟಾಪ್ 5 ಸ್ಥಾನಕ್ಕೇರಿರುವ ಕಿಯಾ ಮೋಟಾರ್ಸ್‌ ಸಂಸ್ಥೆಯು ಸದ್ಯ ರಾಜಕೀಯ ಕಲಹದಲ್ಲಿ ಸಿಲುಕಿದ್ದು, ಆಂಧ್ರದಲ್ಲಿ ನಿರ್ಮಾಣವಾಗಿರುವ ತನ್ನ ಹೊಸ ಕಾರು ಉತ್ಪಾದನಾ ಘಟಕವನ್ನು ಹೊರ ರಾಜ್ಯಕ್ಕೆ ಸ್ಥಳಾಂತರ ಮಾಡಲಿದೆ ಎನ್ನುವ ಸುದ್ದಿಗೆ ಕೊನೆಗೂ ಸ್ಪಷ್ಟನೆ ನೀಡಿದೆ.

ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಪೆನುಗೊಂಡ ಬಳಿ ನಿರ್ಮಾಣವಾಗಿರುವ ಕಿಯಾ ಮೋಟಾರ್ಸ್ ಹೊಸ ಕಾರು ಉತ್ಪಾದನಾ ಘಟಕವು ವಾರ್ಷಿಕವಾಗಿ 3 ಲಕ್ಷ ಕಾರು ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದ್ದು, ಈ ಘಟಕವನ್ನು ಸದ್ಯದಲ್ಲೇ ಕಿಯಾ ಸಂಸ್ಥೆಯು ಹೊರ ರಾಜ್ಯಗಳಿಗೆ ಸ್ಥಳಾಂತರ ಮಾಡಲಿದೆ ಎನ್ನುವ ವರದಿಯನ್ನು ರಾಯಿರ್ಟಸ್ ಸುದ್ದಿಸಂಸ್ಥೆಯು ವರದಿ ಮಾಡಿತ್ತು. ಇದಾದ ಬಳಿಕ ಸ್ಥಳಾಂತರ ವಿಚಾರವು ಹೊಸ ರಾಜಕೀಯ ತಿರುವು ಪಡೆದುಕೊಂಡಿದ್ದಲ್ಲದೆ ಸಾಕಷ್ಟು ಪರ-ವಿರೋಧ ಚರ್ಚೆಗಳು ಶುರುವಾಗಿದ್ದವು.

ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಆಂಧ್ರಪ್ರದೇಶದಲ್ಲಿ ಜಾರಿಗೆ ತರಲಾದ ಹೊಸ ಉದ್ಯಮ ನೀತಿಯಿಂದಾಗಿ ಕಿಯಾ ಮೋಟಾರ್ಸ್ ಸಂಸ್ಥೆಯು ತೀವ್ರ ನಷ್ಟಕ್ಕೆ ಗುರಿಯಾಗುವ ಸಾಧ್ಯತೆಗಳಿದ್ದು, ಅನಿವಾರ್ಯವಾಗಿ ಆಂಧ್ರದಿಂದ ಹೊರನಡೆಯುತ್ತಿದೆ ಎನ್ನುವ ಬಗ್ಗೆ ವರದಿಯಾಗಿತ್ತು.

ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಆದರೆ, ರಾಯಿಟರ್ಸ್ ವರದಿ ಕುರಿತಂತೆ ಕೊನೆಗೂ ಸ್ಪಷ್ಟನೆ ನೀಡಿರುವ ಕಿಯಾ ಮೋಟಾರ್ಸ್ ಇಂಡಿಯಾ ಹಿರಿಯ ಅಧಿಕಾರಿಗಳು ಯಾವುದೇ ಕಾರಣಕ್ಕೂ ಆಂಧ್ರದಿಂದ ಸ್ಥಳಾಂತರ ಮಾಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಹೊಸ ಕಾರು ಉತ್ಪಾದನಾ ಘಟಕದ ಮೇಲೆ ಸುಮಾರು ರೂ.7 ಸಾವಿರ ಕೋಟಿ ಹೂಡಿಕೆ ಮಾಡಲಾಗಿದ್ದು, ಇಷ್ಟು ದೊಡ್ಡ ಪ್ರಮಾಣದ ಹೂಡಿಕೆ ಮಾಡಿ ಘಟಕವನ್ನು ಸ್ಥಳಾಂತರ ಮಾಡುತ್ತಾರೆ ಎನ್ನುವುದು ಉಹಾಪೋಹವೆಂದಿದ್ದಾರೆ.

ಇನ್ನು ಕಿಯಾ ಮೋಟಾರ್ಸ್ ಹೊಸ ಉತ್ಪಾದನಾ ಘಟಕ ನಿರ್ಮಾಣದ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಸರ್ಕಾರದಲ್ಲಿ ಹಲವಾರು ವಿನಾಯ್ತಿ ನೀಡುವ ಮೂಲಕ ಸ್ಥಳೀಯರಿಗೆ ಇಂತಿಷ್ಟು ಪ್ರಮಾಣದಲ್ಲಿ ಉದ್ಯೋಗ ಅವಕಾಶಗಳನ್ನು ನೀಡಬೇಕೆಂಬ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು.

ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಇದೀಗ ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರವು ಕಿಯಾ ಮೋಟಾರ್ಸ್‌ಗೆ ನೀಡಿದ್ದ ಪ್ರಮುಖ ವಿನಾಯ್ತಿಗಳನ್ನು ಹಿಂಪಡೆದಿದ್ದು, ಸ್ಥಳೀಯರಿಗೆ ಇನ್ನು ಹೆಚ್ಚಿನ ಮಟ್ಟದ ಉದ್ಯೋಗಗಳನ್ನು ಕಡ್ಡಾಯವಾಗಿ ನೀಡಬೇಕೆಂಬ ಹೊಸ ನೀತಿಯನ್ನು ಜಾರಿಗೆ ತರಲಾಗಿತ್ತು.

ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಇದೇ ಕಾರಣಕ್ಕೆ ಕಿಯಾ ಮೋಟಾರ್ಸ್ ಸಂಸ್ಥೆಯು ಆಂಧ್ರ ಸರ್ಕಾರದ ಹೊಸ ನೀತಿಯನ್ನು ಒಪ್ಪಲು ನಿರಾಕರಿಸಿ ಹೊಸ ಕಾರು ಉತ್ಪಾದನಾ ಘಟಕವನ್ನೇ ಪಕ್ಕದ ತಮಿಳುನಾಡಿಗೆ ಸ್ಥಳಾಂತರ ಮಾಡುತ್ತಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡ ತೊಡಗಿದವು.

ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಅಂತಿಮವಾಗಿ ಸುಳ್ಳು ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಆಂಧ್ರದಲ್ಲೇ ಕಾರು ಉತ್ಪಾದನಾ ಮುಂದುವರಿಸುವ ಭರವಸೆ ನೀಡಿದ್ದು, ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ವಿಚಾರದಲ್ಲಿ ಕಂಪನಿಯು ಬದ್ದವಾಗಿದೆ ಎಂದಿದೆ.

ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಕಾರು ಮಾರಾಟದಲ್ಲಿ ಹೊಸ ಸಂಚಲನ..!

ಹೌದು, ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್ಸ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳು ಅನುಕ್ರಮವಾಗಿ ಒಂದು, ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದು, ಇದೀಗ ಹೊಸದಾಗಿ ಕಿಯಾ ಮೋಟಾರ್ಸ್ ಸಂಸ್ಥೆಯು ಸೆಲ್ಟೊಸ್ ಕಾರು ಮಾರಾಟದ ಮೂಲಕ ಐದನೇ ಅತಿದೊಡ್ಡ ಕಾರು ಮಾರಾಟ ಸಂಸ್ಥೆಯಾಗಿ ಸ್ಥಾನ ಪಡೆದಿದೆ.

ಹೊಸ ಕಾರು ಉತ್ಪಾದನಾ ಘಟಕ ಸ್ಥಳಾಂತರ ಕುರಿತು ಸ್ಪಷ್ಟನೆ ನೀಡಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಅಬ್ಬರದ ಮುಂದೆ ಟೊಯೊಟಾ ಮತ್ತು ಹೋಂಡಾ ಸಂಸ್ಥೆಗಳು ಸಹ ನೆಲಕಚ್ಚಿದ್ದು, ಶೀಘ್ರದಲ್ಲೇ ಮೂರನೇ ಸ್ಥಾನದತ್ತ ಮುನ್ನುಗ್ಗುವ ತವಕದಲ್ಲಿದೆ. ಇದಕ್ಕಾಗಿ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ನಮೂನೆಯ ಕೈಗೆಟುಕುವ ಬೆಲೆಯ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

Most Read Articles

Kannada
English summary
KIA motors to stay at Anantapur, rumors of relocation dismissed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X