ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

ಫೆಬ್ರುವರಿ 5ರಿಂದ ಆರಂಭವಾಗಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಲು ಭರ್ಜರಿ ತಯಾರಿ ನಡೆಸಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ವಿವಿಧ ಮಾದರಿಯ ನಾಲ್ಕು ಕಾರು ಮಾದರಿಗಳನ್ನು ಅನಾವರಣಗೊಳಿಸಲಿದ್ದು, ಹೊಸ ಕಾರುಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಸಂಸ್ಥೆಯು ಸದ್ಯ ಸೆಲ್ಟೊಸ್ ಕಂಪ್ಯಾಕ್ಟ್ ಎಸ್‌ಯುವಿ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಕಾರು ಮಾದರಿಗಳನ್ನು ರಸ್ತೆಗಿಳಿಸಲಿದೆ. ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆಯನ್ನು ಸಹ ಮಾಡಿರುವ ಕಿಯಾ ಸಂಸ್ಥೆಯು ವಾರ್ಷಿಕವಾಗಿ 3 ಲಕ್ಷ ಕಾರು ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಮಧ್ಯಮ ಗಾತ್ರದ ಕಾರುಗಳ ಜೊತೆಗೆ ಐಷಾರಾಮಿ ಕಾರುಗಳನ್ನು ಸಹ ಬಿಡುಗಡೆ ಮಾಡಲಿದೆ. ಹಾಗಾದ್ರೆ 2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿರುವ ಕಾರುಗಳ ಪಟ್ಟಿಯಲ್ಲಿ ಯಾವ ಕಾರುಗಳಿವೆ ಎನ್ನುವುದನ್ನು ಇಲ್ಲಿ ಚರ್ಚಿಸಲಾಗಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

01. ಕಿಯಾ ಕ್ಯೂವೈಎ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಸ್ಟೊನಿಕ್ ಮಾದರಿಯಲ್ಲೇ ಅಭಿವೃದ್ದಿಗೊಂಡಿರುವ ಕ್ಯೂವೈಎ ಕೊಡ್ ಆಧರಿತ ಕಾರು(ಸೊನೆಟ್) ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಈಗಾಗಲೇ ವಿವಿಧ ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7 ಲಕ್ಷದಿಂದ ರೂ.11 ಲಕ್ಷ ಬೆಲೆ ಅಂತರ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ಕಾರಿನ ಮತ್ತಷ್ಟು ತಾಂತ್ರಿಕ ಮಾಹಿತಿಗಳು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಲಭ್ಯವಾಗಲಿವೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

ಮಾಹಿತಿಗಳ ಪ್ರಕಾರ ಹೊಸ ಕಾರಿನಲ್ಲಿ 1.2-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್, 1.0-ಲೀಟರ್ ಟರ್ಬೋ ಚಾರ್ಜ್ಡ್ ತ್ರೀ ಸಿಲಿಂಡರ್ ಪೆಟ್ರೋಲ್, 1.6-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಫೋರ್ ಸಿಲಿಂಡರ್ ಪೆಟ್ರೋಲ್ ಮತ್ತು 1.4-ಲೀಟರ್ ಟರ್ಬೋಚಾರ್ಜ್ಡ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಆಯ್ಕೆ ಪಡೆಯುವ ಸಾಧ್ಯತೆಗಳಿವೆ. ಜೊತೆಗೆ ಪರ್ಫಾಮೆನ್ಸ್ ಪ್ರಿಯರಿಗಾಗಿ ಟರ್ಬೋ ಪೆಟ್ರೋಲ್ ಕಾರು ಆವೃತ್ತಿಯನ್ನು ಸಹ ಪಡೆದುಕೊಳ್ಳಲಿದ್ದು, 2020ರ ಏಪ್ರಿಲ್ ಅಥವಾ ಮೇ ಹೊತ್ತಿಗೆ ಹೊಸ ಕಾರು ಬಿಡುಗಡೆಗೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

02. ಕಿಯಾ ಸೆಲ್ಟೊಸ್ ಎಕ್ಸ್-ಲೈನ್

ಸದ್ಯ ಮಾರುಕಟ್ಟೆಯಲ್ಲಿರುವ ಸೆಲ್ಟೊಸ್ ಆಫ್ ರೋಡ್ ಮಾದರಿಯಾದ ಸೆಲ್ಟೊಸ್ ಎಕ್ಸ್-ಲೈನ್ ಕಾರು ಸಂಪೂರ್ಣವಾಗಿ ಆಫ್ ರೋಡ್ ಪರ್ಫಾಮೆನ್ಸ್ ಮಾದರಿಯಾಗಿ ಅಭಿವೃದ್ದಿಗೊಂಡಿದ್ದು, 2019ರ ಲಾಸ್ ಏಂಜಲೀಸ್ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಈ ಕಾರು ಇದೀಗ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

ಸಾಮಾನ್ಯ ಸೆಲ್ಟೊಸ್ ಕಾರಿಗಿಂತಲೂ ಹೆಚ್ಚಿನ ಮಟ್ಟದ ಎಂಜಿನ್ ಜೊತೆಗೆ ಆಫ್ ರೋಡ್ ವೈಶಿಷ್ಟ್ಯತೆಗಳಾದ ಹೈ ಗ್ರೌಂಡ್ ಕ್ಲಿಯೆರೆನ್ಸ್, ಆಕ್ಸಿಲೆರಿ ಲೈಟ್ಸ್ ಸೌಲಭ್ಯಗಳು ಗಮನಸೆಳೆಯಲಿದ್ದು, ಬಿಎಸ್-6 ಡೀಸೆಲ್ ಎಂಜಿನ್‌ನೊಂದಿಗೆ 2020ರ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

03. ಕಿಯಾ ಆಪ್ಟಿಮಾ ಕೆ5 ಸೆಡಾನ್

ಕಿಯಾ ಮೋಟಾರ್ಸ್ ತನ್ನ ಹೊಸ ಮಾದರಿಯ ಆಪ್ಟಿಮಾ ಕೆ5 ಐಷಾರಾಮಿ ಸೆಡಾನ್ ಕಾರ್ ಅನ್ನು ಜಾಗತಿಕ ಮಟ್ಟದಲ್ಲಿ ಅನಾವರಣಗೊಳಿಸಲಾಗಿದ್ದು, ಇದೀಗ ಭಾರತದಲ್ಲಿ ಸ್ಕೋಡಾ ಸೂಪರ್ಬ್, ಹೋಂಡಾ ಅಕಾರ್ಡ್ ಮತ್ತು ಟೊಯೊಟಾ ಕ್ಯಾಮ್ರಿ ಕಾರುಗಳಿಗೆ ಪೈಪೋಟಿಯಾಗಿ ಬಿಡುಗಡೆ ಮಾಡುತ್ತಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

2.5-ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಮತ್ತು 1.6-ಲೀಟರ್ ಟರ್ಬೋ ಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿರುವ ಆಪ್ಟಿಮಾ ಕೆ5 ಕಾರು ರೂ. 24 ಲಕ್ಷದಿಂದ ರೂ.30 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

04. ಕಿಯಾ ಕಾರ್ನಿವಾಲ್

2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣ ನಂತರ ಬಿಡುಗಡೆಯಾಗಲಿರುವ ಕಾರ್ನಿವಾಲ್ ಎಂಪಿವಿ ಕಾರು ಗ್ರಾಹಕರ ಬೇಡಿಕೆಯೆಂತೆ 7 ಸೀಟರ್, 8 ಸೀಟರ್ ಮತ್ತು 9 ಸೀಟರ್‌ನೊಂದಿಗೆ ಬಿಡುಗಡೆಯಾಗುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, 9 ಸೀಟರ್ ಮಾದರಿಯು ಎಂಟ್ರಿ ಲೆವಲ್ ಮಾದರಿಯಾಗಲಿದ್ದರೆ 7 ಸೀಟರ್ ಮಾದರಿಯು ಹೈ ಎಂಡ್ ಆವೃತ್ತಿಯಾಗಿ ಮಾರಾಟಗೊಳ್ಳಲಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

ಇದರಲ್ಲಿ ಮಧ್ಯದ ಆವೃತ್ತಿಯಾದ 8 ಸೀಟರ್ ಮಾದರಿಯು ಕೂಡಾ ಹಲವು ಪ್ರೀಮಿಯಂ ಫೀಚರ್ಸ್‌ನೊಂದಿಗೆ ಮಾರಾಟವಾಗಲಿದ್ದು, ಎಂಪಿವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ. 7 ಸೀಟರ್ ಮಾದರಿಯು 2+2+3 ಆಸನ ವ್ಯವಸ್ಥೆಯನ್ನು ಹೊಂದಿದ್ದರೆ 8 ಸೀಟರ್ ಮಾದರಿಯು 2+3+3 ಮತ್ತು 9 ಸೀಟರ್ ಮಾದರಿಯು 2+2+2+3 ಆಸನ ಸೌಲಭ್ಯವನ್ನು ಪಡೆದುಕೊಳ್ಳಲಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ವಿವಿಧ ಮಾದರಿಗಳನ್ನು ಖರೀದಿ ಮಾಡಬಹುದಾಗಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

ಎಂಪಿವಿ ಕಾರುಗಳ ಮಾರಾಟ ವಿಭಾಗದಲ್ಲಿ ಸದ್ಯ ಭಾರೀ ಬೇಡಿಕೆ ಹೊಂದಿರುವ ಟೊಯೊಟಾ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗುತ್ತಿರುವ ಕಾರ್ನಿವಾಲ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 20 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.25 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

ಕಾರ್ನಿವಾಲ್ ಕಾರು 5, 115-ಎಂಎಂ ಉದ್ದ, 1,985-ಎಂಎಂ ಅಗಲ ಮತ್ತು 1,755 ಎತ್ತರವನ್ನು ಹೊಂದಿದ್ದು, ಇದ್ದು ಇನೋವಾ ಕ್ರಿಸ್ಟಾ ಕಾರಿಗಿಂತಲೂ 375-ಎಂಎಂ ಹೆಚ್ಚು ಉದ್ದ,155-ಎಂಎಂ ಹೆಚ್ಚು ಅಗಲ ಮತ್ತು 40-ಎಂಎಂ ನಷ್ಟು ಕಡಿಮೆ ಎತ್ತರವನ್ನು ಪಡೆದುಕೊಂಡಿರಲಿದೆ.

ಆಟೋ ಎಕ್ಸ್‌ಪೋ 2020: ನಾಲ್ಕು ಹೊಸ ಕಾರುಗಳನ್ನು ಪ್ರದರ್ಶನಗೊಳಿಸಲಿದೆ ಕಿಯಾ ಮೋಟಾರ್ಸ್

ಎಂಜಿನ್ ಸಾಮರ್ಥ್ಯ

ಕಾರ್ನಿವಾಲ್ ಕಾರು ಇನೋವಾ ಕ್ರಿಸ್ಟಾಗೆ ಪೈಪೋಟಿಯಾಗಿ 2.2-ಲೀಟರ್ ಟರ್ಬೋ ಡೀಸೆಲ್ ಜೊತೆ 3.3-ಲೀಟರ್ ವಿ6 ಎಂಪಿಐ ಪೆಟ್ರೋಲ್ ಎಂಜಿನ್ ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಮಾದರಿಯು ಬೆಲೆ ತಗ್ಗಿಸುವುದಕ್ಕಾಗಿ 2.5-ಲೀಟರ್ ಡೀಸೆಲ್ ಎಂಜಿನ್ ಮತ್ತು 2.6-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಗಳಿವೆ.

Most Read Articles

Kannada
English summary
KIA Motors will showcase 4 new car in auto expo. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X