ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಕಿಯಾ ಮೋಟಾರ್ಸ್ ನಿರ್ಮಾಣದ ಸೆಲ್ಟೊಸ್ ಕಾರು ಮಾದರಿಯು ಮಧ್ಯಮ ಕ್ರಮಾಂಕದ ಕಾರು ಮಾರಾಟದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಿಯಾ ಕಂಪನಿಯು ಹೊಸ ಕಾರು ಮಾದರಿಗಾಗಿ ಗ್ರಾಹಕರ ಬೇಡಿಕೆಯೆಂತೆ ಉತ್ಕೃಷ್ಟ ಗುಣಮಟ್ಟದ ರೆಡಿಯಲ್ ಟೈರ್ ಜೋಡಣೆ ಮಾಡಲು ನಿರ್ಧರಿಸಿದೆ.

ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಸೆಲ್ಟೊಸ್ ಎಸ್‌ಯುವಿ ಕಾರು ಮಾದರಿಗಾಗಿ ಜೆಕೆ ಟೈರ್ ಕಂಪನಿಯು ಯುಕೆ ರಾಯಲ್ 215/60 ಆರ್17 ರೆಡಿಯಲ್ ಟೈರ್ ಒದಗಿಸಲಿದ್ದು, ಶೀಘ್ರದಲ್ಲೇ ಹೊಸ ಟೈರ್ ಸೌಲಭ್ಯ ಹೊಂದಿರುವ ಸೆಲ್ಟೊಸ್ ಕಾರು ಮಾದರಿಯು ಖರೀದಿಗೆ ಲಭ್ಯವಿರಲಿದೆ. ಕಂಫರ್ಟ್ ಮತ್ತು ಹ್ಯಾಂಡ್ಲಿಂಗ್ ಗುಣಮಟ್ಟ ಸುಧಾರಿಸಲು ಹೊಸ ಟೈರ್ ಮಾದರಿಯನ್ನು ಆಯ್ಕೆ ಮಾಡಲಾಗಿದ್ದು, ಭಾರತೀಯ ರಸ್ತೆಗಳಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಈ ಟೈರ್ ಮಾದರಿಯಾಗಿದೆ.

ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಜೊತೆಗೆ ಅತಿ ಕಡಿಮೆ ನಿರ್ವಹಣೆ ಹೊಂದಿರುವ ರೆಡಿಯಲ್ ಟೈರ್ ಮಾದರಿಯು ಸ್ಮೂತ್ ಡ್ರೈವಿಂಗ್ ಜೊತೆಗೆ ಆಫ್ ರೋಡ್‌ಗಳಲ್ಲೂ ಉತ್ತಮ ಹಿಡಿತ ಹೊಂದಿದ್ದು, ಭಾರತೀಯ ರಸ್ತೆಗಳಲ್ಲಿ ಪರಿಸ್ಥಿತಿಗೆ ಹೊಸ ಟೈರ್ ಉತ್ತಮ ಆಯ್ಕೆಯಾಗಿದೆ.

ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಇನ್ನು ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿ ಅಗಸ್ಟ್ ಅವಧಿಗೆ 1 ವರ್ಷ ಪೂರೈಸಿದ್ದು, ಸೆಲ್ಟೊಸ್ ಕಾರು ಮಾರಾಟವು ಇದುವರೆಗೆ ಭಾರತದಲ್ಲಿ 1.27 ಲಕ್ಷ ಯುನಿಟ್ ಕಾರು ಮಾರಾಟದೊಂದಿಗೆ ಕಂಪನಿಯ ಶೇ.84 ರಷ್ಟು ಕಾರು ಮಾರಾಟ ಪಾಲು ಹೊಂದಿದೆ.

ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಹೊಸ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಸೆಲ್ಟೊಸ್ ಕಾರು ಎಸ್‌ಯುವಿ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.89 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.17.34 ಲಕ್ಷ ಬೆಲೆ ಹೊಂದಿದೆ. ಬಿಎಸ್-6 ನಿಯಮ ಅನುಸಾರ ಜಿಟಿ ಲೈನ್ ಕಾರುಗಳಲ್ಲಿ 1.4-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದರೆ ಸಾಮಾನ್ಯ ಮಾದರಿಯ ಟೆಕ್-ಲೈನ್ ಕಾರುಗಳು ಬಿಎಸ್-6 ಪ್ರೇರಿತ ನ್ಯಾಚುರಲಿ ಆಸ್ಪೆರೆಟೆಡ್ 1.5-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಸಿಆರ್‌ಡಿಐ ಡೀಸೆಲ್ ಎಂಜಿನ್ ಪಡೆದುಕೊಂಡಿವೆ.

ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇತ್ತೀಚೆಗೆ ಕಂಪನಿಯು ಆ್ಯನಿವರ್ಸರಿ ಎಡಿಷನ್ ಬಿಡುಗಡೆಗೊಳಿಸುವ ಮೂಲಕ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುತ್ತಿದೆ.

ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಆ್ಯನಿವರ್ಸರಿ ಎಡಿಷನ್ ಮಾದರಿಯು ಪ್ರಮುಖ ಮೂರು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಮಾದರಿಯು ರೂ. 13.75 ಲಕ್ಷ, ಮಧ್ಯಮ ಕ್ರಮಾಂಕದ ಮಾದರಿಯು ರೂ. 14.75 ಲಕ್ಷ ಮತ್ತು ಉನ್ನತ ಮಾದರಿಯು ರೂ. 14.85 ಲಕ್ಷ ಬೆಲೆ ಹೊಂದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಸ್ಟ್ಯಾಂಡರ್ಡ್ ಮಾದರಿಗಿಂತ ಆ್ಯನಿವರ್ಸರಿ ಎಡಿಷನ್ ಮಾದರಿಯು ರೂ. 41 ಸಾವಿರ ಹೆಚ್ಚುವರಿ ಬೆಲೆ ಹೊಂದಿದ್ದು, ಹೆಚ್ಚುವರಿ ಬೆಲೆಗೆ ತಕ್ಕಂತೆ ವಿಶೇಷ ಮಾದರಿಯಲ್ಲಿ ಹಲವು ಹೆಚ್ಚುವರಿ ಫೀಚರ್ಸ್‌ಗಳನ್ನು ಜೋಡಣೆ ಮಾಡಿರುವುದು ಆ್ಯನಿವರ್ಸರಿ ಎಡಿಷನ್‌ ಆಕರ್ಷಣೆಯನ್ನು ಹೆಚ್ಚಿಸಿದೆ.

ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ತಾಂತ್ರಿಕವಾಗಿ ಸ್ಟ್ಯಾಂಡರ್ಡ್ ಮಾದರಿಯಂತೆಯೇ ಸೌಲಭ್ಯಗಳನ್ನು ಹೊಂದಿರುವ ಆ್ಯನಿವರ್ಸರಿ ಎಡಿಷನ್ ಮಾದರಿಯಲ್ಲಿ ಆಕರ್ಷಣೆಗಾಗಿ ಫಾಗ್ ಲೈಟ್, ಸೈಡ್ ಸ್ಕರ್ಟ್ಸ್, ಫ್ಲಕ್ಸ್ ಡ್ಯುಯಲ್ ಎಕ್ಸಾಸ್ಟ್, ರಿಯರ್ ಬಂಪರ್ ಮತ್ತು ಅಲಾಯ್ ವೀಲ್ಹ್ ಸುತ್ತ ಆರೇಂಜ್ ಆಕ್ಸೆಂಟ್ ನೀಡಲಾಗಿದೆ. ಹಾಗೆಯೇ ಟೈಲ್‌ಲೈಟ್ ಬಳಿಯಲ್ಲಿ ಆ್ಯನಿವರ್ಸರಿ ಎಡಿಷನ್ ಬ್ಯಾಡ್ಜ್, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಹೊಸ ವಿನ್ಯಾಸದ ಬಂಪರ್ ಜೊತೆಗೆ ಫ್ಲಕ್ಸ್ ಸ್ಕ್ರೀಡ್ ಪ್ಲೇಟ್ ಜೋಡಿಸಲಾಗಿದ್ದು, ಸೈಡ್ ಸ್ಕರ್ಟ್ಸ್‌ಗಳನ್ನು ಸಹ ಸಿಲ್ವರ್ ಲೇಪನದೊಂದಿಗೆ ನೀಡಲಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಿಯಾ ಸೆಲ್ಟೊಸ್ ಕಾರು ಮಾದರಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಜೆಕೆ ಟೈರ್

ಇದಲ್ಲದೆ ಹೊಸ ಕಾರಿಗೆ ಮತ್ತಷ್ಟು ಮೆರಗು ನೀಡಲು ಗ್ರಾವಿಟಿ ಗ್ರೇ, ಅರೋರಾ ಬ್ಲ್ಯಾಕ್, ಸ್ಟ್ಪೀಲ್ ಸಿಲ್ವರ್, ಅರೋರಾ ಬ್ಲ್ಯಾಕ್ ಪರ್ಲ್ ಜೊತೆಗೆ ಡ್ಯುಯಲ್ ಮಾದರಿಯಾಗಿ ಅರೋರಾ ಬ್ಲ್ಯಾಕ್ ಪರ್ಲ್ ಪೇಂಟ್ ಶೇಡ್ ಹಾಗೂ ಗಾರ್ಸಿರ್ ವೈಟ್ ಡ್ಯುಯಲ್ ಟೋನ್ ಬಣ್ಣಗಳನ್ನು ನೀಡಲಾಗಿದೆ.

Most Read Articles

Kannada
English summary
JK Tyre becomes OE supplier for Kia Seltos. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X