ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಕಿಯಾ ಸೊನೆಟ್ ಇದೀಗ ನಂ.1

ದಸರಾ ಮತ್ತು ದೀಪಾವಳಿ ಸಂಭ್ರಮದಲ್ಲಿ ನೀರಿಕ್ಷೆಗೂ ಮೀರಿ ಬೇಡಿಕೆ ಪಡೆದುಕೊಂಡಿರುವ ಕಿಯಾ ಮೋಟಾರ್ಸ್ ಕಂಪನಿಯು ಕಳೆದ ವರ್ಷಕ್ಕಿಂತಲೂ ಕಾರು ಮಾರಾಟದಲ್ಲಿ ಶೇ.50ರಷ್ಟು ಬೆಳವಣಿಗೆ ಸಾಧಿಸಿದ್ದು, ಟಾಪ್ 10 ಕಾರುಗಳ ಮಾರಾಟ ಪಟ್ಟಿಯಲ್ಲಿ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಅಗ್ರಸ್ಥಾನಕ್ಕೇರಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಕಿಯಾ ಸೊನೆಟ್ ಇದೀಗ ನಂ.1

ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಮಾರುತಿ ಸುಜುಕಿಯು ಅಕ್ಟೋಬರ್ ಅವಧಿಯ ಟಾಪ್ 10 ಕಾರು ಮಾರಾಟ ಪಟ್ಟಿಯಲ್ಲಿ ಒಟ್ಟು 7 ಕಾರು ಮಾದರಿಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಇನ್ನುಳಿದ ಮೂರು ಸ್ಥಾನಗಳಲ್ಲಿ ಎರಡು ಸ್ಥಾನಗಳು ಹ್ಯುಂಡೈ ಕಂಪನಿಯ ಕಾರುಗಳಿಗೆ ಮತ್ತು ಒಂದು ಸ್ಥಾನ ಕಿಯಾ ಮೋಟಾರ್ಸ್ ಪಾಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಕಿಯಾ ಸೊನೆಟ್ ಇದೀಗ ನಂ.1

ಟಾಪ್ 10 ಕಾರು ಮಾರಾಟದಲ್ಲಿ ಸದ್ಯ ಮಾರುತಿ ಸುಜುಕಿಯ ಸ್ವಿಫ್ಟ್, ಬಲೆನೊ, ವ್ಯಾಗನ್-ಆರ್, ಆಲ್ಟೋ, ಡಿಜೈರ್, ಇಕೋ, ಎರ್ಟಿಗಾ ಕಾರು ಮುಂಚೂಣಿಯಲ್ಲಿದ್ದರೆ ಹ್ಯುಂಡೈ ನಿರ್ಮಾಣದ ಕ್ರೆಟಾ, ಗ್ರ್ಯಾಂಡ್ ಐ10 ಸ್ಥಾನಪಡೆದುಕೊಂಡಿವೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಕಿಯಾ ಸೊನೆಟ್ ಇದೀಗ ನಂ.1

ಕಿಯಾ ಮೋಟಾರ್ಸ್ ನಿರ್ಮಾಣದ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ನವೆಂಬರ್ ಅವಧಿಯಲ್ಲಿ ಒಟ್ಟು 11,417 ಯುನಿಟ್ ಮಾರಾಟದೊಂದಿಗೆ ಏಳನೇ ಸ್ಥಾನದಲ್ಲಿದ್ದು, ಬಿಡುಗಡೆಯಾದ ಆರಂಭದಲ್ಲೇ ಹೊಸ ಕಾರಿಗೆ ಭಾರೀ ಪ್ರಮಾಣದ ಬೇಡಿಕೆ ಹರಿದುಬಂದಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಕಿಯಾ ಸೊನೆಟ್ ಇದೀಗ ನಂ.1

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಅಗ್ರಸ್ಥಾನದತ್ತ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್ ಹೊಚ್ಚ ಹೊಸ ಸೊನೆಟ್ ಕಾರು ಮಾದರಿಯು ಹಲವು ಹೊಸ ದಾಖಲೆಗಳಿಗೆ ಕಾರಣವಾಗಿದ್ದು, ಅತಿ ಕಡಿಮೆ ಅವಧಿಯಲ್ಲಿ ಬರೋಬ್ಬರಿ 70 ಸಾವಿರ ಯುನಿಟ್‌ಗೆ ಬುಕ್ಕಿಂಗ್ ಪಡೆದುಕೊಂಡಿದೆ. ಸೆಪ್ಟೆಂಬರ್ 18ರಂದು ಬಿಡುಗಡೆಗೊಂಡಿದ್ದ ಸೊನೆಟ್ ಕಾರು ಆಕರ್ಷಕ ಬೆಲೆಯೊಂದಿಗೆ ವಿವಿಧ ವೆರಿಯೆಂಟ್‌ಗಳನ್ನು ಹೊಂದಿದ್ದು, ಪ್ರೀಮಿಯಂ ಫೀಚರ್ಸ್‌ಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿವೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಕಿಯಾ ಸೊನೆಟ್ ಇದೀಗ ನಂ.1

ಕಿಯಾ ಮೋಟಾರ್ಸ್ ನಿರ್ಮಾಣದ ಮೂರನೇ ಕಾರು ಮಾದರಿಯಾಗಿ ಬಿಡುಗಡೆಯಾಗಿರುವ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 1.2-ಲೀಟರ್ ಪೆಟ್ರೋಲ್, 1.5-ಲೀಟರ್ ಡೀಸೆಲ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಕಿಯಾ ಸೊನೆಟ್ ಇದೀಗ ನಂ.1

ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಸೊನೆಟ್ ಕಾರು ಆರಂಭಿಕವಾಗಿ ರೂ. 6.71 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 12.89 ಲಕ್ಷ ಬೆಲೆ ಹೊಂದಿದ್ದು, ಹೊಸ ಕಾರನ್ನು ಜಿಟಿ-ಲೈನ್ ಮತ್ತು ಟೆಕ್-ಲೈನ್ ವೆರಿಯೆಂಟ್‌ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಕಿಯಾ ಸೊನೆಟ್ ಇದೀಗ ನಂ.1

ಜಿಟಿ-ಲೈನ್ ಮಾದರಿಯಲ್ಲಿ ಹೆಚ್‌ಟಿಇ, ಹೆಚ್‌ಟಿಕೆ, ಹೆಚ್‌ಟಿಕೆ ಪ್ಲಸ್, ಹೆಚ್‌ಟಿಎಕ್ಸ್ ಮತ್ತು ಹೆಚ್‌ಟಿಎಕ್ಸ್ ಪ್ಲಸ್ ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದಲ್ಲಿ ಜಿಟಿ ಲೈನ್‌ನಲ್ಲಿ ಜಿಟಿಎಕ್ಸ್ ಪ್ಲಸ್ ವೆರಿಯೆಂಟ್ ಖರೀದಿಗೆ ಲಭ್ಯವಿದೆ. ಹೊಸ ಸೊನೆಟ್ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಬ್ ಫೋರ್ ಮೀಟರ್ ಕಾರು ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಕಿಯಾ ಸೊನೆಟ್ ಇದೀಗ ನಂ.1

ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ವೆನ್ಯೂ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
Kia Sonet becomes bestselling compact SUV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X