ಫಸ್ಟ್ ಲುಕ್ ರಿವ್ಯೂ: ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ ಕಿಯಾ ಸೊನೆಟ್?

ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಕಾರು ಮಾರಾಟ ಆರಂಭಿಸಿ ಒಂದು ವರ್ಷ ಪೂರೈಸಿದ್ದು, ಬರೋಬ್ಬರಿ 1 ಲಕ್ಷ ಕಾರು ಮಾರಾಟ ಮಾಡುವ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸಿದೆ. ಸದ್ಯ ಸೆಲ್ಟೊಸ್ ಮತ್ತು ಕಾರ್ನಿವಾಲ್ ಕಾರು ಮಾರಾಟವನ್ನು ಹೊಂದಿರುವ ಕಿಯಾ ಕಂಪನಿಯು ಶೀಘ್ರದಲ್ಲೇ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ಮತ್ತೊಂದು ಹಂತದ ಸಂಚಲನ ಸೃಷ್ಠಿಸಲಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಪ್ರಸ್ತುತ ಮಾರುಕಟ್ಟೆಯಲ್ಲಿ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳು ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿದ್ದು, ಈ ನಿಟ್ಟಿನಲ್ಲಿ ಹಲವಾರು ಆಟೋ ಕಂಪನಿಗಳು ವಿವಿಧ ಮಾದರಿಯ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳನ್ನು ಮಾರಾಟ ಮಾಡುತ್ತಿವೆ. ಇದೀಗ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಕಂಪನಿಯು ಸಹ ಸೆಲ್ಟೊಸ್ ಮಾದರಿಗಿಂತ ಕೆಲದರ್ಜೆಯ ಕಾರು ಮಾದರಿಯಾಗಿ ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಹಲವಾರು ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2020ರ ಆಟೋ ಎಕ್ಸ್‌ಫೋದಲ್ಲಿ ಮೊದಲ ಬಾರಿಗೆ ಸೊನೆಟ್ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದ ಕಿಯಾ ಮೋಟಾರ್ಸ್ ಕಂಪನಿಯು ಇದೀಗ ಉತ್ಪಾದನಾ ಆವೃತ್ತಿಯನ್ನು ಸಹ ಅನಾವರಣಗೊಳಿಸಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಹೊಸ ಕಾರಿನ ಉತ್ಪಾದನಾ ಆವೃತ್ತಿಯನ್ನು ಅನಾವರಣಗೊಳಿಸುವುದಕ್ಕೂ ಮುನ್ನ ಮಾಧ್ಯಮ ಪ್ರತಿನಿಧಿಗಾಗಿ ವಿಶೇಷ ಅನಾವರಣ ಏರ್ಪಡಿಸಿದ್ದ ಕಿಯಾ ಮೋಟಾರ್ಸ್ ಕಂಪನಿಯು ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದು, ಫಸ್ಟ್ ಲುಕ್ ರಿವ್ಯೂನಲ್ಲಿ ಹೊಸ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಅತ್ಯುತ್ತಮ ಫೀಚರ್ಸ್ ಪಡೆದುಕೊಂಡಿರುವುದು ಮಾರಾಟದಲ್ಲಿ ಮುಂಚೂಣಿ ಸಾಧಿಸುವ ಸುಳಿವು ನೀಡಿದೆ.

ಸೆಲ್ಟೊಸ್ ನಂತರ 'ಮೇಡ್ ಇನ್ ಇಂಡಿಯಾ' ಕಾರು ಮಾದರಿಯಾಗಿ ಮಾರಾಟಗೊಳ್ಳಲಿರುವ ಸೊನೆಟ್ ಕಾರು ಭಾರತದಲ್ಲೇ ಪೂರ್ಣಪ್ರಮಾಣದಲ್ಲಿ ಉತ್ಪಾದನೆಗೊಂಡು ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಳ್ಳುವ ಸಿದ್ದತೆಯಲ್ಲಿದ್ದು,

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಹಾಗಾದ್ರೆ ಪ್ರತಿಸ್ಪರ್ಧಿ ಕಾರು ಮಾದರಿಗಳಿಂತ ಭಿನ್ನವಾದ ವಿನ್ಯಾಸ ಮತ್ತು ತಂತ್ರಜ್ಞಾನ ಹೊಂದಿರುವ ಸೊನೆಟ್ ಕಾರಿನ ವಿಶೇಷತೆ ಏನು? ಪ್ರತಿಸ್ಪರ್ಧಿ ಕಾರು ಮಾದರಿಗಳಿಂತಲೂ ಹೇಗೆ ವಿಭಿನ್ನವಾಗಿದೆ ಎನ್ನುವುದನ್ನು ಫಸ್ಟ್ ಲುಕ್ ರಿವ್ಯೂನಲ್ಲಿ ತಿಳಿಯೋಣ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಕಿಯಾ ಮೋಟಾರ್ಸ್ ಸಹೋದರ ಸಂಸ್ಥೆ ಹ್ಯುಂಡೈ ನಿರ್ಮಾಣದ ವೆನ್ಯೂ ಕಾರು ಆಧರಿಸಿರುವ ಸೊನೆಟ್ ಕಾರು ವೆನ್ಯೂ ಕಾರಿನೊಂದಿಗೆ ಚಾರ್ಸಿ ಮತ್ತು ಎಂಜಿನ್ ಹಂಚಿಕೊಂಡಿದ್ದು, ವಿನ್ಯಾಸ ಮತ್ತು ಪ್ರೀಮಿಯಂ ಸೌಲಭ್ಯಗಳ ವಿಚಾರದಲ್ಲಿ ಸೊನೆಟ್ ಕಾರು ವೆನ್ಯೂಗಿಂತಲೂ ಅಗ್ರಸ್ಥಾನದಲ್ಲಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಡಿಸೈನ್ ಮತ್ತು ಸ್ಟೈಲ್

ಶಾರ್ಪ್ ಸ್ಟೈಲಿಷ್ ಲುಕ್ ಹೊಂದಿರುವ ಹೊಸ ಕಿಯಾ ಸೊನೆಟ್ ಕಾರು ಕ್ರೌನ್ ಜ್ಯುವೆಲ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್ ಮತ್ತು ಟರ್ನ್ ಇಂಡಿಕೇಟರ್, ಎಲ್ಇಡಿ ಪ್ರೋಜೆಕ್ಟರ್ ಫಾಗ್ ಲ್ಯಾಂಪ್, ಹಾರ್ಟ್‌ಬೀಟ್ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಟೈಲ್ ಲೈಟ್‌ಗೆ ಹೊಂದಿಕೊಂಡಿರುವ ರಿಪ್ಲೆಕ್ಟರ್ ಸ್ಟ್ಪೀಪ್ ಆಕರ್ಷಕವಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಹಾಗೆಯೇ ಹೊಸ ಕಾರಿನಲ್ಲಿ ಡ್ಯುಯಲ್ ಮಫ್ಲರ್ ಕೂಡಾ ಆಕರ್ಷಕವಾಗಿದ್ದು, ಮುಂಭಾಗದಲ್ಲಿ ಸ್ಕೀಡ್ ಪ್ಲೇಟ್, ಫ್ರಂಟ್ ಮತ್ತು ರಿಯರ್ ಬಂಪರ್, 16-ಇಂಚಿನ ಡ್ಯುಯಲ್ ಟೋನ್ ಅಯಾಲ್ ವೀಲ್ಹ್ ಮತ್ತು ಸ್ಕ್ವಾರಿಷ್ ಆರ್ಚ್ ನೀಡಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಡ್ಯುಯಲ್ ಟೋನ್ ಬ್ಲ್ಯಾಕ್ ಔಟ್ ರೂಫ್, ಸಿಲ್ವರ್ ರೈಲ್ಸ್, ಟರ್ಬೋ ಶೇಫ್ ಸ್ಕೀಡ್ ಪ್ಲೇಟ್, ಟೈಗರ್ ನೋಸ್ ಫ್ರಂಟ್ ಗ್ರಿಲ್, ತ್ರಿ ಡಿ ಡೈಮೆಷನ್ ಮೆಷ್ ಕೂಡಾ ಈ ಕಾರಿನಲ್ಲಿದ್ದು, ಇವು ಕಾರಿನ ಹೊರ ಭಾಗದ ನೋಟಕ್ಕೆ ಮತ್ತಷ್ಟು ಮೆರಗು ನೀಡುತ್ತವೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಹೊಸ ಸೊನೆಟ್ ಕಾರು ಸೆಲ್ಟೊಸ್ ಮಾದರಿಯಲ್ಲಿ ಟೆಕ್ ಲೈನ್ ಮತ್ತು ಜಿಟಿ ಲೈನ್ ವೆರಿಯೆಂಟ್ ಹೊಂದಿದ್ದು, ಹೊಸ ಕಾರು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಟರ್ಬೋ ಪೆಟ್ರೋಲ್ ಮಾದರಿಯನ್ನು ಹೊಂದಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಮೌಂಟ್ ಕಂಟ್ರೋಲ್ಸ್‌ನಲ್ಲಿ ಆಡಿಯೋ, ಕಾಲ್ ಕನೆಕ್ಟ್ ಮತ್ತು ಕಾರಿನ ಪ್ರಮುಖ ತಾಂತ್ರಿಕ ಅಂಶಗಳನ್ನು ಸರಾಗವಾಗಿ ನಿಯಂತ್ರಣ ಮಾಡಬಹುದಾಗಿದ್ದು, ಟರ್ನ್ ಬೈ ಟರ್ನ್ ನ್ಯಾನಿಗೇಷನ್ ಸೌಲಭ್ಯವು ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುತ್ತದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಇದರೊಂದಿಗೆ ರಿಯರ್ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಸನ್‌ರೂಫ್, ಏರ್ ಪ್ಲೂರಿಫ್ಲೈರ್, ವೆಂಟಿಲೆಟೆಡ್ ಫ್ರಂಟ್ ಮತ್ತು ವಿವಿಧ ಫೀಚರ್ಸ್ ಒಂದೇ ಸೂರಿನಡಿ ನಿಯಂತ್ರಣ ಮಾಡಬಲ್ಲ ಯುವಿಒ ಕನೆಟೆಡ್ ಟೆಕ್ನಾಲಜಿ ಸಹ ಈ ಕಾರಿನಲ್ಲಿದ್ದು, ಮ್ಯಾನುವಲ್ ಕ್ಲೈಮೆಟ್ ಕಂಟ್ರೊಲ್ಸ್ ಸ್ವಿಚ್, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್ ಸೌಲಭ್ಯವಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಕಾರಿನ ಒಳಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಅಲ್ಲಲ್ಲಿ ಸಿಲ್ವರ್ ಆಕ್ಸೆಂಟ್ ಸಹ ನೀಡಲಾಗಿದ್ದು, ಗೇರ್ ಲೀವರ್, ಸ್ಟೀರಿಂಗ್ ವೀಲ್ಹ್, ಎಸಿ ವೆಂಟ್ಸ್ ಸುತ್ತ ನೀಡಲಾಗಿದೆ. ಇದು ಕಾರಿನ ಒಳಭಾಗದ ಖದರ್ ಹೆಚ್ಚಿಸಲಿದ್ದು, ಲೆದರ್ ವ್ಯಾರ್ಪ್ ಆಸನಗಳು ಆಕರ್ಷಕವಾಗಿವೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಟಾಪ್ ಎಂಡ್ ಮಾದರಿಯಲ್ಲಿ ಮಾತ್ರವೇ ಮುಂಭಾಗದ ಆಸನಗಳು ವೆಂಟೆಲೆಟೆಡ್ ತಂತ್ರಜ್ಞಾನ ಹೊಂದಿದ್ದು, ಕಾರಿನ ಮುಂಭಾಗ ಮತ್ತು ಹಿಂಭಾಗದ ಆಸದಲ್ಲಿ ಸೆಂಟರ್ ಆರ್ಮ್ ರೆಸ್ಟ್ ಫೀಚರ್ಸ್ ನೀಡಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಎಂಜಿನ್ ಮತ್ತು ಫರ್ಪಾಮೆನ್ಸ್

ಸೊನೆಟ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ವೆನ್ಯೂ ಕಾರಿನಿಂದ ಎರವಲು ಪಡೆದುಕೊಂಡಿರುವ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ 1.-0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯ ಆಯ್ಕೆ ನೀಡಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಿದ್ದರೆ, 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಇಂಟೆಲಿಜೆಂಟ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಟರ್ಬೋ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಜಿಟಿ ಲೈನ್ ಮಾದರಿಯಾಗಿರುವ ಟರ್ಬೋ ಮಾದರಿಯೇ ಸೊನೆಟ್ ಕಾರಿನ ಹೈಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಇತ್ತೀಚೆಗೆ ವೆನ್ಯೂ ಕಾರಿನಲ್ಲಿ ಬಿಡುಗಡೆ ಮಾಡಲಾದ 6-ಸ್ಪೀಡ್ ಇಂಟೆಲಿಜೆಂಟ್ ಮ್ಯಾನುವಲ್ ಗೇರ್‌ಬಾಕ್ಸ್ ಕ್ಲಚ್ ಲೆಸ್ ಗೇರ್‌ಬಾಕ್ಸ್ ವೈಶಿಷ್ಟ್ಯತೆ ಹೊಂದಿದ್ದು, ಇದೀಗ ಸೊನೆಟ್ ಕಾರು ಮಾದರಿಯಲ್ಲೂ ಐಎಂಟಿ ಸೌಲಭ್ಯಗಳನ್ನು ನೀಡಲಾಗಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಸುರಕ್ಷಾ ಫೀಚರ್ಸ್‌ಗಳು

ಪ್ರೀಮಿಯಂ ಫೀಚರ್ಸ್ ಜೊತೆಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರಿನಲ್ಲಿ ಆರು ಏರ್‌ಬ್ಯಾಗ್(ಟಾಪ್ ಎಂಡ್‌ನಲ್ಲಿ), ಎಬಿಎಸ್ ಜೊತೆ ಇಬಿಡಿ, ಟ್ರಾಕ್ಷನ್ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಹೆಚ್ಎಸಿ, ಇಎಸ್‌ಇ, ವಿಎಸ್ಎಂ, ಬ್ರೇಕ್ ಅಸಿಸ್ಟ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ISOFIX ಚೈಲ್ಡ್ ಸೀಟ್ ಸೇರಿದಂತೆ ಹಲವಾರು ಫೀಚರ್ಸ್‌ಗಳಿವೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ವಿಶೇಷ ಎನ್ನಿಸಲಿರುವ ಹೊಸ ಕಾರು ಸಬ್ ಫೋರ್ ಮೀಟರ್ ಉದ್ದಳತೆ ಹೊಂದಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರ್ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ300, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಹೊಸ ಕಾರು ಸದ್ಯ ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳುವ ಮೂಲಕ ಮುಂದಿನ ಸೆಪ್ಟೆಂಬರ್ ಆರಂಭದಲ್ಲಿ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸುವ ಸುಳಿವು ನೀಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.8 ಲಕ್ಷದಿಂದ ರೂ.11.50 ಲಕ್ಷ ಬೆಲೆಯೊಂದಿಗೆ ಮಾರಾಟವಾಗುವ ನೀರಿಕ್ಷೆಯಲ್ಲಿದೆ.

ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಕಿಯಾ ಸೊನೆಟ್?

ಸೊನೆಟ್ ಕಾರಿನ ಕುರಿತಾಗಿ ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಕಿಯಾ ಮೋಟಾರ್ಸ್ ಕಂಪನಿಯು ಕಾರು ಉತ್ಪಾದನೆಯಲ್ಲಿ ತನ್ನದೆ ಆದ ವೈಶಿಷ್ಟ್ಯತೆಯೊಂದಿಗೆ ಜಾಗತಿಕ ಮಾರುಕಟ್ಟೆಗಳಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಕಾರುಗಳ ವಿನ್ಯಾಸ, ಎಂಜಿನ್, ಬೆಲೆ ವಿಚಾರದಲ್ಲಿ ಗ್ರಾಹಕರ ಆಕರ್ಷಣೆ ಕಾರಣವಾಗಿದೆ. ಸದ್ಯ ಸೆಲ್ಟೊಸ್ ಮತ್ತು ಕಾರ್ನಿವಾಲ್ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಕಿಯಾ ಕಂಪನಿಯು ಸೊನೆಟ್ ಮೂಲಕ ಹೊಸ ಸಂಚಲನ ಸೃಷ್ಟಿಸುವ ಎಲ್ಲಾ ಗುಣವೈಶಿಷ್ಟ್ಯತೆಗಳನ್ನು ಹೊಂದಿದ್ದು, ಸೊನೆಟ್ ಕಾರಿನ ಬೆಲೆ ಆಧಾರದ ಮೇಲೆ ಕಾರಿನ ಮಾರಾಟವನ್ನು ನಿರ್ಧಾರವಾಗಿದೆ.

Most Read Articles

Kannada
English summary
Kia Sonet SUV Review. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X