ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಆಟೋ ಉದ್ಯಮವು ಭಾರೀ ಪ್ರಮಾಣ ನಷ್ಟ ಅನುಭವಿಸುತ್ತಿದ್ದು, ಒಂದು ಕಡೆ ವಾಹನ ಮಾರಾಟಕ್ಕೆ ಬ್ರೇಕ್ ಬಿದ್ದಿದ್ದರೆ ಮತ್ತೊಂದು ಕಡೆಗೆ ವಾಹನ ಉತ್ಪಾದನೆಯು ಸಹ ಬಂದ್ ಆಗಿದೆ. ಹೀಗಿರುವಾಗ ಬಿಡುಗಡೆಯ ಹಂತದಲ್ಲಿದ್ದ ಹಲವು ವಾಹನಗಳ ಬಿಡುಗಡೆಯ ಅವಧಿಯನ್ನು ಮುಂದೂಡಲಾಗಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಹೌದು, 2020-21ರ ಹಣಕಾಸು ವರ್ಷದ ಆರಂಭದಲ್ಲಿ ವಿವಿಧ ಮಾದರಿಯ ಹೊಸ ವಾಹನಗಳ ಬಿಡುಗಡೆಯ ಯೋಜನೆಯಲ್ಲಿದ್ದ ಬಹುತೇಕ ಆಟೋ ಕಂಪನಿಗಳಿಗೆ ಮಹಾಮಾರಿ ಕರೋನಾ ವೈರಸ್‌ನಿಂದ ಭಾರೀ ಪ್ರಮಾಣದ ನಷ್ಟ ಉಂಟಾಗುತ್ತಿದ್ದು, ಹೊಸ ವಾಹನಗಳಲ್ಲದೆ ಸದ್ಯ ಸ್ಟಾಕ್ ಇರುವ ವಾಹನಗಳು ಕೂಡಾ ಇದೀಗ ಆಟೋ ಕಂಪನಿಗಳಿಗೆ ಹೊರೆಯಾಗಿ ಪರಿಣಮಿಸಿವೆ. ಇದರಲ್ಲಿ ಕಿಯಾ ಮೋಟಾರ್ಸ್ ಕೂಡಾ ಒಂದಾಗಿದ್ದು, ಸೊನೆಟ್ ಕಾನ್ಸೆಪ್ಟ್ ಕಾರಿನ ಬಿಡುಗಡೆಯನ್ನು ಸದ್ಯಕ್ಕೆ ಮುಂದೂಡಿಕೆ ಮಾಡುವ ಸುಳಿವು ನೀಡಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಸೆಲ್ಟೊಸ್ ಹಾಗೂ ಕಾರ್ನಿವಾಲ್ ನಂತರ ಮೂರನೇ ಕಾರು ಮಾದರಿಯಾಗಿ ಸೊನೆಟ್ ಕಾನ್ಸೆಪ್ಟ್ ಬಿಡುಗಡೆ ಮಾಡಲು ಅಂತಿಮ ಸಿದ್ದತೆ ನಡೆಸಿರುವ ಕಿಯಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲೇ ಹೊಸ ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ಅಂತಿಮ ಹಂತದ ಪರಿಶೀಲನೆಗಾಗಿ ರೋಡ್ ಟೆಸ್ಟಿಂಗ್ ಪೂರ್ಣಗೊಳಿಸುತ್ತಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಕಂಪ್ಯಾಕ್ಟ್ ಎಸ್‌ಯುವಿಯಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ವೆನ್ಯೂ ಮತ್ತು ಮಾರುತಿ ಬ್ರೆಝಾ ಕಾರಿಗೆ ಪೈಪೋಟಿ ಬಿಡುಗಡೆಯಾಗುತ್ತಿರುವ ಸೊನೆಟ್ ಕಾನ್ಸೆಪ್ಟ್ ಭಾರೀ ನೀರಿಕ್ಷೆ ಮೂಡಿಸಿದ್ದು, ಈ ಹೊಸ ಕಾರನ್ನು ಮೊದಲ ಬಾರಿಗೆ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿತ್ತು. ಇದೀಗ ಬಿಡುಗಡೆಯಾಗಿ ಅಂತಿಮ ಹಂತದ ಸಿದ್ದತೆ ನಡೆಸಲಾಗುತ್ತಿದ್ದು, ವೈರಸ್ ಭೀತಿಯಿಂದಾಗಿ ಇನ್ನು ಕೆಲ ಕಾಲ ಮಾರುಕಟ್ಟೆ ಪ್ರವೇಶಿಸುವುದು ಅನುಮಾನ ಎನ್ನಲಾಗಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಇನ್ನು ಸ್ಪೋಟಿ ಲುಕ್ ಜೊತೆಗೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿರುವ ಸೊನೆಟ್ ಕಾರು ಕಂಪ್ಯಾಕ್ಟ್ ಎಸ್‌ಯುವಿ ಮಾರಾಟದಲ್ಲಿ ಹೊಸ ಬದಲಾವಣೆಯ ನೀರಿಕ್ಷೆಯಲ್ಲಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಸ್ಟೊನಿಕ್ ಮಾದರಿಯಲ್ಲೇ ಅಭಿವೃದ್ದಿಗೊಂಡಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಸದ್ಯಕ್ಕೆ ಕ್ಯೂವೈಎ ಕೊಡ್ ನೆಮ್ ಆಧಾರದ ಮೇಲೆ ರೋಡ್ ಟೆಸ್ಟಿಂಗ್ ನಡೆಸುತ್ತಿರುವ ಸೊನೆಟ್ ಕಾರು ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ, ಮಹೀಂದ್ರಾ ಎಕ್ಸ್‌ಯುವಿ300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪ್ರಬಲ ಪೈಪೋಟಿಯಾಗಲಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಹೊಸ ಕಾರಿನ ತಾಂತ್ರಿಕ ಅಂಶಗಳ ಕುರಿತಾಗಿ ಈಗಾಗಲೇ ವಿವಿಧ ಸುತ್ತಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತಿದ್ದು, ಅನಾವರಣ ಕಾರ್ಯಕ್ರಮದಲ್ಲಿ ಹೊಸ ಕಾರಿನ ಯಾವುದೇ ತಾಂತ್ರಿಕ ಅಂಶಗಳ ಕುರಿತಾಗಿ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೆ ಮಾಹಿತಿಗಳ ಪ್ರಕಾರ, ಹೊಸ ಕಾರಿನಲ್ಲಿ ಒಟ್ಟು 2 ಪೆಟ್ರೋಲ್ ಮಾದರಿಗಳು ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆ ಹೊಂದುವ ಸಾಧ್ಯತೆಗಳಿವೆ ಎನ್ನಬಹುದು.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಎಂಜಿನ್ ವೈಶಿಷ್ಟ್ಯತೆ

ಹೊಸ ಸೊನೆಟ್ ಕಾರಿನಲ್ಲಿ ಒಟ್ಟು ಮೂರು ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳಿದ್ದು, 1.2-ಲೀಟರ್ ಪೆಟ್ರೋಲ್ ಮತ್ತು1.5-ಲೀಟರ್ ಟರ್ಬೋ ಡೀಸೆಲ್ ಮತ್ತು ಪರ್ಫಾಮೆನ್ಸ್ ಪರ್ಫಾಮೆನ್ಸ್ ಪ್ರಿಯರಿಗಾಗಿ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದುವ ಸಾಧ್ಯತೆಗಳಿದ್ದು, ಟರ್ಬೋ ಎಂಜಿನ್‌ನಲ್ಲಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾಮಿಷನ್ ಹೊಂದಲಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಹಾಗೆಯೇ ಕಾರಿನ ಒಳಭಾಗದಲ್ಲೂ ಸಾಕಷ್ಟು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಫ್ಲ್ಯಾಟ್ ಬಾಟಮ್ ತ್ರಿ ಸ್ಪೋಕ್ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವೀಲ್ಹ್, ಫ್ರಂಟ್ ಆರ್ಮ್ ರೆಸ್ಟ್, ಸಿಲ್ವರ್ ಹ್ಯಾಂಡಲ್ ಬಾರ್, ರೆಡ್ ಕಾಟ್ರಾಸ್ಟ್ ಹೊಂದಿರುವ ಲೆದರ್ ಸೀಟುಗಳು, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್ ರೆಸ್ಟ್, ಸೀಟ್ ಬ್ಯಾಕ್ ಪ್ಯಾಕೇಟ್ ಸೌಲಭ್ಯಗಳನ್ನು ಹೊಂದಿರುವುದು ರೋಡ್ ಟೆಸ್ಟ್ ವೇಳೆ ಬಹಿರಂಗವಾಗಿದೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಇದರೊಂದಿಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವ ಕಿಯಾ ಮೋಟಾರ್ಸ್ ಕಂಪನಿಯು 4 ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಟರ್ಬೋ ಮಾದರಿಯಲ್ಲಿ ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ಸುರಕ್ಷಾ ಫೀಚರ್ಸ್‌ಗಳಿರಲಿವೆ.

ಕರೋನಾ ಎಫೆಕ್ಟ್- ಮತ್ತಷ್ಟು ವಿಳಂಬವಾಗಲಿದೆ ಕಿಯಾ ಸೊನೆಟ್ ಕಾರು ಬಿಡುಗಡೆ

ಸೊನೆಟ್ ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ಮುಂಬರುವ ಅಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಹೊಸ ಕಾರು ಕರೋನಾ ವೈರಸ್‌ನಿಂದಾಗಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.6.50 ಲಕ್ಷದಿಂದ ರೂ.9 ಲಕ್ಷ ಬೆಲೆ ಅಂತರ ಬಿಡುಗಡೆಯಾಗಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Kia Sonet subcompact SUV launch might be delayed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X