Just In
- 1 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 11 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 11 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- News
ವಿಶ್ವದಾದ್ಯಂತ ಕೊರೊನಾಗೆ ಬಲಿಯಾದವರ ಸಂಖ್ಯೆ 2 ಕೋಟಿ ದಾಟಿದೆ!
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕಂಪ್ಯಾಕ್ಟ್ ಎಸ್ಯುವಿ ಮಾದರಿಯಲ್ಲೇ ವಿಶೇಷ ವಿನ್ಯಾಸ ಮತ್ತು ಎಂಜಿನ್ ಪಡೆಯಲಿದೆ ಕಿಯಾ ಸೊನೆಟ್
ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯು ಕಳೆದ ವಾರವಷ್ಟೇ ಅನಾವರಣಗೊಂಡಿದ್ದು, ಹೊಸ ಕಾರು ಮಾದರಿಯು ಶೀಘ್ರದಲ್ಲೇ ಅಧಿಕೃತವಾಗಿ ಮಾರುಕಟ್ಟೆ ಪ್ರವೇಶಿಸಲಿದೆ. ಸಬ್ ಫೋರ್ ಮೀಟರ್ ಕಾರು ಮಾದರಿಗಳಲ್ಲೇ ವಿಶೇಷ ವಿನ್ಯಾಸ ಮತ್ತು ಎಂಜಿನ್ ಆಯ್ಕೆ ಹೊಂದಿರುವ ಸೊನೆಟ್ ಕಾರು ಪ್ರತಿಸ್ಪರ್ಧಿ ಕಾರು ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಲಿದೆ.

ಸೊನೆಟ್ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ಮೂರು ಎಂಜಿನ್ ಆಯ್ಕೆಗಳನ್ನು ನೀಡಲಾಗಿದ್ದು, ಒಟ್ಟು 17 ವೆರಿಯೆಂಟ್ಗಳಲ್ಲಿ ಖರೀದಿ ಲಭ್ಯವಿರಲಿದೆ. ಹಾಗೆಯೇ 8 ಬಣ್ಣಗಳ ಆಯ್ಕೆ ಹೊಂದಿರುವ ಸೊನೆಟ್ ಕಾರು ಅತ್ಯುತ್ತಮ ಉದ್ದಳತೆಯೊಂದಿಗೆ ಅರಾಮದಾಯಕ ಒಳಾಂಗಣ ವಿನ್ಯಾಸ ಹೊಂದಿದೆ. ಹೊಸ ಕಾರು 3,995-ಎಂಎಂ ಉದ್ದ, 1,790-ಎಂಎಂ ಅಗಲ, 1,647-ಎಂಎಂ ಎತ್ತರ, 2,500-ಎಂಎಂ ವೀಲ್ಹ್ ಬೆಸ್, 211-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 392-ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ಪಡೆದುಕೊಂಡಿದೆ.

ಶಾರ್ಪ್ ಸ್ಟೈಲಿಷ್ ಲುಕ್ ಹೊಂದಿರುವ ಹೊಸ ಕಿಯಾ ಸೊನೆಟ್ ಕಾರಿನಲ್ಲಿ ಕ್ರೌನ್ ಜ್ಯುವೆಲ್ ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಡಿಆರ್ಎಸ್ ಮತ್ತು ಟರ್ನ್ ಇಂಡಿಕೇಟರ್, ಎಲ್ಇಡಿ ಪ್ರೋಜೆಕ್ಟರ್ ಫಾಗ್ ಲ್ಯಾಂಪ್, ಹಾರ್ಟ್ಬೀಟ್ ವಿನ್ಯಾಸದ ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಟೈಲ್ ಲೈಟ್ಗೆ ಹೊಂದಿಕೊಂಡಿರುವ ರಿಪ್ಲೆಕ್ಟರ್ ಸ್ಟ್ಪೀಪ್ ಆಕರ್ಷಕವಾಗಿದೆ.

ಹೊಸ ಕಾರಿನಲ್ಲಿ ಡ್ಯುಯಲ್ ಮಫ್ಲರ್ ಕೂಡಾ ಆಕರ್ಷಕವಾಗಿದ್ದು, ಮುಂಭಾಗದಲ್ಲಿ ಸ್ಕೀಡ್ ಪ್ಲೇಟ್, ಫ್ರಂಟ್ ಮತ್ತು ರಿಯರ್ ಬಂಪರ್, 16-ಇಂಚಿನ ಡ್ಯುಯಲ್ ಟೋನ್ ಅಯಾಲ್ ವೀಲ್ಹ್ ಮತ್ತು ಸ್ಕ್ವಾರಿಷ್ ಆರ್ಚ್ ನೀಡಲಾಗಿದೆ. ಡ್ಯುಯಲ್ ಟೋನ್ ಬ್ಲ್ಯಾಕ್ ಔಟ್ ರೂಫ್, ಸಿಲ್ವರ್ ರೈಲ್ಸ್, ಟರ್ಬೋ ಶೇಫ್ ಸ್ಕೀಡ್ ಪ್ಲೇಟ್, ಟೈಗರ್ ನೋಸ್ ಫ್ರಂಟ್ ಗ್ರಿಲ್, ತ್ರಿ ಡಿ ಡೈಮೆಷನ್ ಮೆಷ್ ಕೂಡಾ ಈ ಕಾರಿನಲ್ಲಿದ್ದು, ಇವು ಕಾರಿನ ಹೊರ ಭಾಗದ ನೋಟಕ್ಕೆ ಮತ್ತಷ್ಟು ಮೆರಗು ನೀಡುತ್ತವೆ.

ಹಾಗೆಯೇ ಕಾರಿನ ಇಂಟಿರಿಯರ್ ಕೂಡಾ ಆಕರ್ಷಕವಾಗಿದ್ದು, ಆರಾಮದಾಯಕ ಆಸನ ಸೌಲಭ್ಯದೊಂದಿಗೆ ರಿಯರ್ ಎಸಿ ವೆಂಟ್ಸ್, ಎಲೆಕ್ಟ್ರಿಕ್ ಸನ್ರೂಫ್, ಏರ್ ಪ್ಲೂರಿಫ್ಲೈರ್, ವೆಂಟಿಲೆಟೆಡ್ ಫ್ರಂಟ್ ಮತ್ತು ವಿವಿಧ ಫೀಚರ್ಸ್ ಒಂದೇ ಸೂರಿನಡಿ ನಿಯಂತ್ರಣ ಮಾಡಬಲ್ಲ ಯುವಿಒ ಕನೆಟೆಡ್ ಟೆಕ್ನಾಲಜಿ ಸಹ ಈ ಕಾರಿನಲ್ಲಿದೆ. ಕಾರಿನ ಒಳಭಾಗದ ವಿನ್ಯಾಸಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ ಅಲ್ಲಲ್ಲಿ ಸಿಲ್ವರ್ ಆಕ್ಸೆಂಟ್ ಸಹ ನೀಡಲಾಗಿದ್ದು, ಗೇರ್ ಲೀವರ್, ಸ್ಟೀರಿಂಗ್ ವೀಲ್ಹ್, ಎಸಿ ವೆಂಟ್ಸ್ ಸುತ್ತ ನೀಡಲಾಗಿದೆ.

ಇದು ಕಾರಿನ ಒಳಭಾಗದ ಖದರ್ ಹೆಚ್ಚಿಸಲಿದ್ದು, ಲೆದರ್ ವ್ಯಾರ್ಪ್ ಆಸನಗಳು, ವೈರ್ ಲೆಸ್ ಚಾರ್ಜರ್ ಪ್ರಮುಖವಾಗಿರಲಿವೆ. ಹೊಸ ಸೊನೆಟ್ ಕಾರು ಸೆಲ್ಟೊಸ್ ಮಾದರಿಯಲ್ಲಿ ಟೆಕ್ ಲೈನ್ ಮತ್ತು ಜಿಟಿ ಲೈನ್ ವೆರಿಯೆಂಟ್ ಹೊಂದಿದ್ದು, ಹೊಸ ಕಾರು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಜೊತೆಗೆ ಟರ್ಬೋ ಪೆಟ್ರೋಲ್ ಮಾದರಿಯನ್ನು ಹೊಂದಿದೆ.

ಸೊನೆಟ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯು ವೆನ್ಯೂ ಕಾರಿನಿಂದ ಎರವಲು ಪಡೆದುಕೊಂಡಿರುವ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಪರ್ಫಾಮೆನ್ಸ್ ಪ್ರಿಯರಿಗಾಗಿ 1.-0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯ ಆಯ್ಕೆ ನೀಡಲಾಗಿದೆ.
MOST READ: ಪ್ರತಿ ಚಾರ್ಜ್ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

1.2-ಲೀಟರ್ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಜೊತೆಗೆ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ಹೊಂದಿದ್ದರೆ, 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಇಂಟೆಲಿಜೆಂಟ್ ಮ್ಯಾನುವಲ್ ಗೇರ್ಬಾಕ್ಸ್ ಜೊತೆಗೆ ಆಟೋಮ್ಯಾಟಿಕ್ ಗೇರ್ಬಾಕ್ಸ್ ಪಡೆದುಕೊಂಡಿದೆ. ಟರ್ಬೋ ಪೆಟ್ರೋಲ್ ಮಾದರಿಯು ಸ್ಟ್ಯಾಂಡರ್ಡ್ ಆಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿದ್ದು, ಜಿಟಿ ಲೈನ್ ಮಾದರಿಯಾಗಿರುವ ಟರ್ಬೋ ಮಾದರಿಯೇ ಸೊನೆಟ್ ಕಾರಿನ ಹೈಎಂಡ್ ಮಾದರಿಯಾಗಿ ಮಾರಾಟಗೊಳ್ಳಲಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಮಹೀಂದ್ರಾ ಎಕ್ಸ್ಯುವಿ300, ಟಾಟಾ ನೆಕ್ಸಾನ್, ಹ್ಯುಂಡೈ ವೆನ್ಯೂ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿರುವ ಹೊಸ ಕಾರು ಇದೇ ತಿಂಗಳಾಂತ್ಯಕ್ಕೆ ಇಲ್ಲವೆ ಸೆಪ್ಟೆಂಬರ್ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ಫೀಚರ್ಸ್ಗಳಿಗೆ ಅನುಗುಣವಾಗಿ ಬೆಲೆ ನಿಗದಿ ಮಾಡಲಾಗಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಸೊನೆಟ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯ ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ.7 ಲಕ್ಷ ಬೆಲೆ ಹೊಂದಲಿದ್ದರೆ ಟಾಪ್ ಎಂಡ್ ಮಾದರಿಯು ಪ್ರೀಮಿಯಂ ಫೀಚರ್ಸ್ನೊಂದಿಗೆ ರೂ.11.50 ಲಕ್ಷ ಅಂತರದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಬೆಸ್ ವೆರಿಯೆಂಟ್ ಮತ್ತು ಹೈ ಎಂಡ್ ವೆರಿಯೆಂಟ್ ನಡುವೆ ಸಾಕಷ್ಟು ಬೆಲೆ ಅಂತರವಿದ್ದು, ರೂ. 2 ಲಕ್ಷದಿಂದ ರೂ.4 ಲಕ್ಷ ಬೆಲೆ ಅಂತರದ ನಡುವೆಯೂ ಬೆಸ್ ವೆರಿಯೆಂಟ್ನಲ್ಲಿ ಹಲವಾರು ಫೀಚರ್ಸ್ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ.