ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಕಿಯಾ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಸ್‌ಯುವಿ ಆವೃತ್ತಿಯಾದ ಸೊರೆಂಟೊ ಹೊಸ ತಲೆಮಾರಿನ ಆವೃತ್ತಿಯನ್ನು ಯುಎಸ್ಎ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಹೊಸ ಕಾರಿನ ಉತ್ಪಾದನೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಕಳೆದ ತಿಂಗಳ ಹಿಂದಷ್ಟೇ ಹೊಸ ಸೊರೆಂಟೊ ಕಾರನ್ನು ಅನಾವರಣಗೊಳಿಸಿದ್ದ ಕಿಯಾ ಮೋಟಾರ್ಸ್ ಕಂಪನಿಯು ಇದೀಗ ಯುಎಸ್ಎ, ಯುರೋಪಿನ್ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ಉತ್ಪಾದನಾ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ. ದಕ್ಷಿಣ ಕೊರಿಯಾದಲ್ಲಿರುವ ತನ್ನ ಪ್ರಮುಖ ಕಾರು ಉತ್ಪಾದನಾ ಘಟಕದಿಂದಲೇ ಹೊಸ ಕಾರನ್ನು ಉತ್ಪಾದನೆ ಮಾಡಿ ರಫ್ತುಗೊಳಿಸಲಿದ್ದು, ಹೊಸ ಕಾರು ಈ ಬಾರಿ ಸಾಕಷ್ಟು ಬದಲಾವಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಹೊಸ ಸೊರೆಂಟೊ ಕಾರನ್ನು ಭಾರತದಲ್ಲೂ ಬಿಡುಗಡೆಗಾಗಿ ಎದುರು ನೋಡುತ್ತಿರುವ ಕಿಯಾ ಕಂಪನಿಯು ಹೊಸ ಕಾರಿನಲ್ಲಿ ಕೆಲವು ತಾಂತ್ರಿಕ ಅಂಶಗಳನ್ನು ಬದಲಿಸಿ ಮಾರಾಟ ಮಾಡುವ ಸಾಧ್ಯತೆಗಳಿದ್ದು, ಭಾರರತದಲ್ಲಿ ಇದು ಹೋಂಡಾ ಸಿಆರ್-ವಿ, ಮಹೀಂದ್ರಾ ಆಲ್ಟುರಾಸ್ ಜಿ4 ಜೊತೆಗೆ ಫೋರ್ಡ್ ಎಂಡೀವರ್, ಟೊಯೊಟಾ ಫಾರ್ಚೂನರ್ ಕಾರುಗಳಿಗೂ ಪೈಪೋಟಿ ನೀಡುವ ವೈಶಿಷ್ಟ್ಯತೆಗಳನ್ನು ಹೊಂದಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಸೆಲ್ಟೊಸ್ ಹಾಗೂ ಕಾರ್ನಿವಾಲ್ ಎಂಪಿವಿ ಬಿಡುಗಡೆಗೊಳಿಸಿದ ನಂತರ ಭಾರತದಲ್ಲಿ ಅತಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಕಾರು ಮಾರಾಟ ಮಾಡಿರುವ ಕಿಯಾ ಕಂಪನಿಯು ಇದೀಗ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದಗೊಳಿಸುತ್ತಿದ್ದು, ಸೊರೆಂಟೊ ಎಸ್‌ಯುವಿ ಕೂಡಾ ಕಿಯಾ ಬಿಡುಗಡೆ ಮಾಡಲಿರುವ ಹೊಸ ಕಾರುಗಳ ಪಟ್ಟಿಯಲ್ಲಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

7 ಸೀಟರ್ ಎಸ್‌ಯುವಿ ಮಾದರಿಯಾಗಿರುವ ಸೊರೆಂಟೊ ಕಾರು ಯುಎಸ್ಎ ಮತ್ತು ಯುರೋಪ್ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುವ ಕಾರುಗಳ ಪೈಕಿ ಅಗ್ರಸ್ಥಾನದಲ್ಲಿದ್ದು, ಹೊಸ ಕಾರು ಹಲವು ಹೊಸ ಫೀಚರ್ಸ್‌ಗಳೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದೆ. ಭಾರತದಲ್ಲಿ ಮಾರಾಟಗೊಳ್ಳುತ್ತಿರುವ ಫಾರ್ಚೂನರ್ ಕಾರಿಗಿಂತಲೂ 40-ಎಂಎಂ ಹೆಚ್ಚುವರಿ ಉದ್ದಳತೆ ಹೊಂದಿದ್ದು, ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಹೆಚ್ಚುವರಿ ಸ್ಥಳಾವಕಾಶ ಕಲ್ಪಿಸಲಾಗಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಸೊರೆಂಟೊ ಕಾರು 4,835-ಎಂಎಂ ಉದ್ದ, 1,890-ಎಂಎಂ ಅಗಲ, 1,685-ಎಂಎಂ ಎತ್ತರ ಮತ್ತು 2,785-ಎಂಎಂ ವೀಲ್ಹ್ ಬೆಸ್ ಹೊಂದಿದ್ದು, ಪೆಟ್ರೋಲ್ ಹೈಬ್ರಿಡ್, ಡೀಸೆಲ್ ಮತ್ತು ಪ್ಲಗ್ ಇನ್ ಹೈಬ್ರಿಡ್ ಆವೃತ್ತಿಗಳಲ್ಲಿ ಬಿಡುಗಡೆಯಾಗುತ್ತಿದೆ.

MOST READ: ಹೊಸ ಪೊಲೊ ಕಾರು ವಿತರಣೆ ಮಾಡಿದ ಎರಡೇ ನಿಮಿಷದಲ್ಲಿ ನಡೆಯಿತು ಅಪಘಾತ..!

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಸದ್ಯಕ್ಕೆ ಪೆಟ್ರೋಲ್ ಹೈಬ್ರಿಡ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರುವ ಸೊರೆಂಟೊ ಕಾರಿನಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 202-ಬಿಎಚ್‌ಪಿ ಪ್ರೇರಿತ 2.2-ಲೀಟರ್ ಟರ್ಬೋ ಡೀಸೆಲ್ ಮತ್ತು 230-ಬಿಎಚ್‌ಪಿ ಪ್ರೇರಿತ 1.6-ಲೀಟರ್ ಟರ್ಬೋ ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಇದರಲ್ಲಿ ಬಿಡುಗಡೆಗಾಗಿ ಅಭಿವೃದ್ದಿಪಡಿಸಲಾಗುತ್ತಿರುವ ಪ್ಲಗ್ ಇನ್ ಹೈಬ್ರಿಡ್ ಆವೃತ್ತಿಯು 16.6-kWh ಬ್ಯಾಟರಿ ಪ್ಯಾಕ್‌ ಜೋಡಣೆ ಹೊಂದಿರಲಿದ್ದು, ಪೆಟ್ರೋಲ್ ಎಂಜಿನ್ ಹೊರತುಪಡಿಸಿ ಕೇವಲ ಎಲೆಕ್ಟ್ರಿಕ್ ಮೋಟಾರ್ ಮೂಲಕವೇ 90-ಬಿಎಚ್‌ಪಿ ಉತ್ಪಾದನೆಯೊಂದಿಗೆ ಉತ್ತಮ ಮೈಲೇಜ್ ಹಿಂದಿರುಗಿಸಬಲ್ಲದು.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಸೊರೆಂಟೊ ಕಾರಿನಲ್ಲಿ ಹೈ ಎಂಡ್ ಆವೃತ್ತಿಯಾಗಲಿರುವ ಪ್ಲಗ್ ಇನ್ ಹೈಬ್ರಿಡ್ ಆವೃತ್ತಿಯು 4x4 ಡ್ರೈವ್ ಟೆಕ್ನಾಲಜಿ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊಂದಿದ್ದು, ಹೊಸ ಕಾರಿನ ಕುರಿತಾಗಿ ಹೆಚ್ಚಿನ ಮಾಹಿತಿಯು ಅಧಿಕೃತ ಬಿಡುಗಡೆ ವೇಳೆ ಲಭ್ಯವಾಗಲಿದೆ.

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಸೊರೆಂಟೊ ಕಾರು ಸದ್ಯ ಅಮೆರಿಕದಲ್ಲಿ ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ ಆರಂಭಿಕವಾಗಿ ರೂ.28 ಲಕ್ಷದಿಂದ ಹೈ ಎಂಡ್ ಮಾದರಿಯು ರೂ. 34 ಲಕ್ಷ ಬೆಲೆ ಹೊಂದಿದ್ದು, ಭಾರತದಲ್ಲಿ ಈ ಕಾರು ಬಿಡುಗಡೆಗೊಂಡಲ್ಲಿ ಫಾರ್ಚೂನರ್ ಮತ್ತು ಎಂಡೀವರ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ವಿದೇಶಿ ಮಾರುಕಟ್ಟೆಗಳಿಗಾಗಿ ಸೊರೆಂಟೊ ಕಾರು ಉತ್ಪಾದನೆಯನ್ನು ಆರಂಭಿಸಿದ ಕಿಯಾ ಮೋಟಾರ್ಸ್

ಇನ್ನು ಹೊಸ ಕಾರುಗಳ ಮಾರಾಟದಲ್ಲಿ ಭಾರೀ ಸಂಚಲನ ಸೃಷ್ಠಿಸುತ್ತಿರುವ ಕಿಯಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ವಿವಿಧ ಮಾದರಿಯ ಹಲವು ಹೊಸ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಸೆಲ್ಟೊಸ್, ಕಾರ್ನಿವಾಲ್ ನಂತರ ಸೊನೆಟ್ ಕಾನ್ಸೆಪ್ಟ್, ಸ್ಟೊನಿಕ್ ಕಾರುಗಳು ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿವೆ.

Most Read Articles

Kannada
English summary
Kia Sorento Hybrid SUV Production Commence. Read in Kannada.
Story first published: Friday, July 10, 2020, 20:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X