ಹೊಸ ಸೂಪರ್‌ಕಾರಿನ ಟೀಸರ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ

ಇಟಲಿ ಮೂಲದ ಸ್ಪೋರ್ಟ್ಸ್ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಮುಂದಿನ ವಾರ ತನ್ನ ವಿ 10 ಸೂಪರ್‌ಕಾರಿನ ಲುಕ್ ಹಾಗೂ ವಿವರಗಳನ್ನು ಅಧಿಕೃತವಾಗಿ ಅನಾವರಣಗೊಳಿಸಲಿದೆ.

ಹೊಸ ಸೂಪರ್‌ಕಾರಿನ ಟೀಸರ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿಯ ಹೊಸ ರೇಸಿಂಗ್ ಕಾರಿನ ಬಗೆಗೆ ಬೇರೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಈಗ ಬಿಡುಗಡೆಗೊಳಿಸಲಾಗಿರುವ ಟೀಸರ್ ಚಿತ್ರಗಳಲ್ಲಿ ಲ್ಯಾಂಬೊರ್ಗಿನಿ ಕಾರನ್ನು ಕವರ್‌ನಿಂದ ಮುಚ್ಚಲಾಗಿದೆ. ಲ್ಯಾಂಬೊರ್ಗಿನಿ ಕಂಪನಿಯು ರೇಸ್ ಟ್ರ್ಯಾಕ್‌ನಿಂದ ಹಿಡಿದು ರಸ್ತೆಗಳವರೆಗೆ ಹಲವು ರೀತಿಯ ಕಾರುಗಳನ್ನು ಬಿಡುಗಡೆಗೊಳಿಸಿದೆ.

ಹೊಸ ಸೂಪರ್‌ಕಾರಿನ ಟೀಸರ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಕಂಪನಿಯು ತನ್ನ ವಿ 10 ಕಾರನ್ನು ನವೆಂಬರ್ 18ರಂದು ಸಂಜೆ 4 ಗಂಟೆಗೆ ಬಿಡುಗಡೆಗೊಳಿಸಲಿದೆ ಎಂದು ಹೇಳಲಾಗಿದೆ. ಈ ಲ್ಯಾಂಬೊರ್ಗಿನಿ ರೇಸಿಂಗ್ ಕಾರಿಗೆ ಪೈಪೋಟಿ ನೀಡಲಿರುವ ಫೆರಾರಿ ಕಂಪನಿಯ ಎಸ್‌ಎಫ್ 90 ಕಾರು ಮರುದಿನ ಬಿಡುಗಡೆಯಾಗಲಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಸೂಪರ್‌ಕಾರಿನ ಟೀಸರ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ

ವಿ 10 ಸೂಪರ್‌ಕಾರು ಬಿಡುಗಡೆಯಾದ ನಂತರ ಲ್ಯಾಂಬೊರ್ಗಿನಿ ಕಂಪನಿಯು ಆ ಕಾರನ್ನು ಹೇಗೆ ವಿನ್ಯಾಸಗೊಳಿಸಿದೆ ಎಂಬುದು ತಿಳಿಯಲಿದೆ. ಈ ಕಾರಿನ ಹೆಡ್‌ಲೈಟ್‌ಗಳನ್ನು ರೇರ್ ವ್ಹೀಲ್ ಡ್ರೈವ್ ಸಿಸ್ಟಂ ಹೊಂದಿರುವ ಹುರಾಕನ್ ಇವೊ ಕಾರಿನಿಂದ ಪಡೆಯಲಾಗಿದೆ.

ಹೊಸ ಸೂಪರ್‌ಕಾರಿನ ಟೀಸರ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ

ಲ್ಯಾಂಬೊರ್ಗಿನಿ ಕಂಪನಿಯು ಲಾಕ್ ಡೌನ್ ಕಾರಣದಿಂದಾಗಿ ತನ್ನ ಕಾರುಗಳ ಬಿಡುಗಡೆಯನ್ನು ಮುಂದೂಡಿತ್ತು. ಈಗ ಕಳೆದ ಕೆಲವು ತಿಂಗಳುಗಳಿಂದ ಲ್ಯಾಂಬೊರ್ಗಿನಿ ಕಂಪನಿಯು ಹುರಾಕನ್ ಕಾರಿನ ಹಲವು ಮಾದರಿಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಸೂಪರ್‌ಕಾರಿನ ಟೀಸರ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ

ವಿ 10 ಸೂಪರ್‌ಕಾರು, ಹುರಾಕನ್ ಇವೊ ಕಾರಿನ ಹೊಸ ಮಾದರಿ ಎಂದು ಊಹಾಪೋಹಾಗಳಾಗಿದ್ದವು. ವಿ 10 ಸೂಪರ್‌ಕಾರನ್ನು ಸೀಮಿತ ಸಂಖ್ಯೆಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ.

ಹೊಸ ಸೂಪರ್‌ಕಾರಿನ ಟೀಸರ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ

ಈ ಕಾರನ್ನು ರೇಸ್ ಟ್ರ್ಯಾಕ್‌ ಹಾಗೂ ಸಾರ್ವಜನಿಕ ರಸ್ತೆಗಳಲ್ಲಿಯೂ ಬಳಸಬಹುದಾಗಿದೆ. ಟೀಸರ್ ನೋಡಿದರೆ ಈ ಕಾರು ಹುರಾಕನ್ ಇವೊ ಎಸ್‌ಟಿಒ (ಸೂಪರ್ ಟ್ರೋಫಿಯೊ ಒಮರೊಗೋಟಾ) ವಿಶೇಷ ಆವೃತ್ತಿಯ ಕಾರಿನಂತೆ ಕಂಡು ಬರುತ್ತದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಸೂಪರ್‌ಕಾರಿನ ಟೀಸರ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ

ಮಾರುಕಟ್ಟೆಯಲ್ಲಿರುವ ಸೂಪರ್ ಟ್ರೋಫಿಯೊ ಒಮರೊಗೋಟಾ ಇವೊ ಹುರಾಕನ್ ಕಾರು, ಪರ್ಫಾರ್ಮೆನ್ಸ್ ಕಾರ್‌ಗಿಂತ ಭಿನ್ನವಾಗಿದ್ದು, ರೇರ್ ವ್ಹೀಲ್ ಡ್ರೈವ್ ರೇಸಿಂಗ್ ಕಾರ್ ಆಗಿದೆ.

ಹೊಸ ಸೂಪರ್‌ಕಾರಿನ ಟೀಸರ್ ಬಿಡುಗಡೆಗೊಳಿಸಿದ ಲ್ಯಾಂಬೊರ್ಗಿನಿ

ಈ ಕಾರಿನಲ್ಲಿರುವ ಏರೋಡೈನಾಮಿಕ್ ಭಾಗಗಳು ಹುರಾಕನ್ ಪರ್ಫಾಮೆನ್ಸ್ ಕಾರುಗಳಿಗಿಂತ ದೊಡ್ಡದಾಗಿದ್ದು, ಅವುಗಳನ್ನು ಅಪ್ ಡೇಟ್ ಮಾಡಲಾಗಿದೆ.

Most Read Articles

Kannada
English summary
Lamborghini company releases upcoming V 10 super car teaser. Read in Kannada.
Story first published: Sunday, November 15, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X