ಕೋಟಿ ಬೆಲೆಯ ಹುರಾಕನ್ ಕಾರಿನಂತೆ ತಯಾರಾದ ಸಾಮಾನ್ಯ ಕಾರು

ಬಹುತೇಕ ಕಾರು ಪ್ರಿಯರ ಆಸೆ ಲ್ಯಾಂಬೊರ್ಗಿನಿ ಕಾರು ಖರೀದಿಸುವುದು. ಭಾರತದಲ್ಲಿ ಲ್ಯಾಂಬೊರ್ಗಿನಿ ಕಾರುಗಳನ್ನು ಇಷ್ಟಪಡುವ ಸಹಸ್ರಾರು ಜನರಿದ್ದಾರೆ. ಭಾರತೀಯರು ಈ ಇಟಲಿ ಮೂಲದ ಕಾರಿನ ಮೇಲೆ ವಿಶೇಷ ಪ್ರೀತಿಯನ್ನು ಹೊಂದಿದ್ದಾರೆ. ಜೊತೆಗೆ ಈ ಕಾರಿನ ಮೇಲೆ ಹಲವು ಹಾಡುಗಳನ್ನು ರಚಿಸಿದ್ದಾರೆ.

ಕೋಟಿ ಬೆಲೆಯ ಹುರಾಕನ್ ಕಾರಿನಂತೆ ತಯಾರಾದ ಸಾಮಾನ್ಯ ಕಾರು

ಭಾರತದಲ್ಲಿ ಲ್ಯಾಂಬೊರ್ಗಿನಿಯ ಕಾರುಗಳನ್ನು ಹೊಂದುವುದು ಪ್ರತಿಷ್ಟೆಯ ಸಂಕೇತವಾಗಿದೆ. ಲ್ಯಾಂಬೊರ್ಗಿನಿ ಕೈಗಾರಿಕೋದ್ಯಮಿಗಳ ಹಾಗೂ ಚಲನಚಿತ್ರ ನಟರ ನೆಚ್ಚಿನ ಕಾರ್ ಆಗಿದೆ. ಲ್ಯಾಂಬೊರ್ಗಿನಿಯ ಕಾರುಗಳ ಬೆಲೆ ಕೋಟಿಗಟ್ಟಲೇ ಇರುವುದರಿಂದ ಈ ಕಾರು ಖರೀದಿಸುವುದು ಸಾಮಾನ್ಯ ಜನರಿಗೆ ಕನಸಿನ ಮಾತು. ಆದರೂ ಕೆಲವರು ತಮ್ಮ ಹವ್ಯಾಸಕ್ಕಾಗಿ ಈ ಕಾರನ್ನು ಸ್ವತಃ ವಿನ್ಯಾಸಗೊಳಿಸುತ್ತಿದ್ದಾರೆ.

ಕೋಟಿ ಬೆಲೆಯ ಹುರಾಕನ್ ಕಾರಿನಂತೆ ತಯಾರಾದ ಸಾಮಾನ್ಯ ಕಾರು

ಪಂಜಾಬ್‌ನ ಕಾರ್ ಮಾಡೆಲಿಂಗ್ ಅಂಗಡಿಯೊಂದು ಲ್ಯಾಂಬೊರ್ಗಿನಿ ಹುರಾಕನ್ ಕಾರಿನ ನಕಲು ಮಾದರಿಯನ್ನು ತಯಾರಿಸಿದೆ. ಈ ಕಾರಿನ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಲ್ಯಾಂಬೊರ್ಗಿನಿ ಹುರಾಕನ್‌ ಕಾರಿನಂತೆಯೇ ಈ ಕಾರನ್ನು ವಿನ್ಯಾಸಗೊಳಿಸುವ ಪ್ರಯತ್ನ ಮಾಡಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕೋಟಿ ಬೆಲೆಯ ಹುರಾಕನ್ ಕಾರಿನಂತೆ ತಯಾರಾದ ಸಾಮಾನ್ಯ ಕಾರು

ಸಾಮಾನ್ಯ ಮಾಡೆಲಿಂಗ್ ಅಂಗಡಿಯಲ್ಲಿ ತಯಾರಿಸಿದ ಈ ಹುರಾಕನ್ ಕಾರಿನ ವಿನ್ಯಾಸ ಹಾಗೂ ಫಿನಿಷಿಂಗ್ ನಿಜವಾದ ಕಾರಿಗೆ ಯಾವುದೇ ರೀತಿಯಲ್ಲೂ ಸಾಟಿಯಾಗುವುದಿಲ್ಲ. ಆದರೆ ಈ ಕಾರು ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಇದನ್ನು ನಿಜವಾದ ಕಾರು ಎಂದೇ ಪರಿಗಣಿಸಿದ್ದರು.

ಕೋಟಿ ಬೆಲೆಯ ಹುರಾಕನ್ ಕಾರಿನಂತೆ ತಯಾರಾದ ಸಾಮಾನ್ಯ ಕಾರು

ಸಾಮಾನ್ಯ ಕಾರೊಂದನ್ನು ಲ್ಯಾಂಬೊರ್ಗಿನಿ ಹುರಾಕನ್‌ ಕಾರಿನಂತೆ ವಿನ್ಯಾಸಗೊಳಿಸಲಾಗಿದೆ. ನಿಜವಾದ ಹುರಾಕನ್‌ ಕಾರಿನಲ್ಲಿ ಹಲವಾರು ಐಷಾರಾಮಿ ಫೀಚರ್‌ಗಳಿದ್ದರೆ, ಈ ಮಾಡಿಫೈಗೊಂಡ ಕಾರಿನಲ್ಲಿ ಆ ರೀತಿಯ ಯಾವುದೇ ಫೀಚರ್‌ಗಳಿಲ್ಲ. ಕಾರಿನ ಬಂಪರ್, ಬಾನೆಟ್, ಹೆಡ್‌ಲೈಟ್ ಹಾಗೂ ಹಿಂಭಾಗವನ್ನು ಲ್ಯಾಂಬೊರ್ಗಿನಿ ಹುರಾಕನ್‌ ಕಾರಿನಂತೆಯೇ ವಿನ್ಯಾಸಗೊಳಿಸುವ ಪ್ರಯತ್ನ ಮಾಡಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲ್ಯಾಂಬೊರ್ಗಿನಿ ಹುರಾಕನ್ ಕಾರ್ ಅನ್ನು ಭಾರತದಲ್ಲಿ 2017ರಲ್ಲಿ ಬಿಡುಗಡೆಗೊಳಿಸಲಾಯಿತು. ಲ್ಯಾಂಬೊರ್ಗಿನಿ ಹುರಾಕನ್ ಪ್ರಪಂಚದ ಅತ್ಯಂತ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ 5.2-ಲೀಟರ್ ಆಸ್ಪಿರೇಟೆಡ್ ವಿ 10 ಎಂಜಿನ್, 631 ಬಿಹೆಚ್‌ಪಿ ಪವರ್ ಹಾಗೂ 600 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಕೋಟಿ ಬೆಲೆಯ ಹುರಾಕನ್ ಕಾರಿನಂತೆ ತಯಾರಾದ ಸಾಮಾನ್ಯ ಕಾರು

ಇದು ಫೋರ್ ವ್ಹೀಲ್ ಡ್ರೈವ್ ಕಾರ್ ಆಗಿದ್ದು, ನಾಲ್ಕು ವ್ಹೀಲ್‌ಗಳಿಗೂ ಪವರ್ ನೀಡುತ್ತದೆ. ಈ ಕಾರಿನಲ್ಲಿ 7-ಸ್ಪೀಡಿನ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ನೀಡಲಾಗಿದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 325 ಕಿ.ಮೀಗಳಾಗಿದೆ.

Most Read Articles

Kannada
English summary
Lamborghini Huracan custom made in Punjab. Read in Kannada.
Story first published: Friday, May 29, 2020, 19:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X