ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ

ಲ್ಯಾಂಬೊರ್ಗಿನಿ ಕಂಪನಿಯು ತನ್ನ ಹುರಾಕನ್ ಇವೊ ರೇರ್ ವ್ಹೀಲ್ ಡ್ರೈವ್(ಆರ್‍‍ಡಬ್ಲ್ಯುಡಿ) ಸೂಪರ್ ಕಾರನ್ನು ಜನವರಿ 29ರಂದು ಬಿಡುಗಡೆಗೊಳಿಸಲಿದೆ. ಇಟಲಿಯ ಐಷಾರಾಮಿ ಕಾರು ತಯಾರಕ ಕಂಪನಿಯಾದ ಲ್ಯಾಂಬೊರ್ಗಿನಿ ಇತ್ತೀಚೆಗೆ ಈ ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿತ್ತು.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಸೂಪರ್‍ ಕಾರು

ಹೊಸ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ ವಿನ್ಯಾಸವು ಹಿಂದಿನ ಮಾದರಿಯಾದ ಆಲ್-ವ್ಹೀಲ್ ಡ್ರೈವ್(ಎಡಬ್ಲ್ಯುಡಿ) ಆವೃತ್ತಿಯನ್ನು ಹೋಲುತ್ತದೆ. ಈ ಕಾರಿನಲ್ಲಿ ಸುಧಾರಿತ ಏರೋಡೈನಾಮಿಕ್ ಸಿಸ್ಟಂ ಅನ್ನು ಹೊಂದಿದೆ. ಇನ್ನೂ ಹೊಸ ಕಾರಿನಲ್ಲಿ ಫ್ರಂಟ್ ಸ್ಪ್ಲಿಟರ್ ಮತ್ತು ದೊಡ್ಡ ಫ್ರಂಟ್ ಏರ್‍‍ಟೇಕ್‍‍ಗಳನ್ನು ಒಳಗೊಂಡಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಸೂಪರ್‍ ಕಾರು

ಈ ಸೂಪರ್‍‍ಕಾರ್ ವಿನೂತನವಾದ ಡಿಫ್ಯೂಸರ್ ಅನ್ನು ಹೊಂದಿದೆ. ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಕಾರಿನಲ್ಲಿ ಹೆಚ್‍ಎಂಐ 8.4 ಇಂಚಿನ ಟಚ್‍‍ಸ್ಕ್ರೀನ್ ಅನ್ನು ಹೊಂದಿದೆ. ಇದರಲ್ಲಿ ಕಾರಿನ ಹಲವು ಫೀಚರ್ಸ್‍‍ಗಳನ್ನು ನಿಯಂತ್ರಿಸಬಹುದಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಸೂಪರ್‍ ಕಾರು

ಇದರಲ್ಲಿ ಪೋನ್ ಕನೆಕ್ಟಿವಿಟಿ, ಇಂಟರ್ನೆಟ್ ಎಕ್ಸಸ್ ಮತ್ತು ಆ್ಯಪಲ್ ಕಾರ್‍‍ಪ್ಲೇಗಳು ಸೇರಿವೆ. ಹುರಾಕಾನ್ ಇವೊ ಆರ್‍‍ಡಬ್ಲ್ಯುಡಿ ಅದೇ ಐಕಾನಿಕ್ ಎಂಜಿನ್ ಅನ್ನು ಹೊಂದಿದೆ. ಇದು 5.2 ಲೀಟರ್ ವಿ10 ಎಂಜಿನ್ 109 ಬಿ‍‍ಹೆಚ್‍‍ಪಿ ಪವರ್ ಮತ್ತು 540 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಸೂಪರ್‍ ಕಾರು

ಈ ಕಾರು ಎಡಬ್ಲ್ಯೂಡಿ ರೂಪಾಂತರಕ್ಕಿಂತ 33ಕೆಜಿ ಕಡಿಮೆ ತೂಕವನ್ನು ಹೊಂದಿದೆ. ಹೊಸ ಹುರಾಕಾನ್ ಕಾರು ಕೇವಲ 3.3 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ಕ್ರಮಿಸುತ್ತದೆ. ಈ ಸೂಪರ್ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 325 ಕಿ.ಮೀಗಳಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಸೂಪರ್‍ ಕಾರು

ಈ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಉನ್ನತ ಮಟ್ಟದ ಸುರಕ್ಷತಾ ಫೀಚರ್ಸ್‍ಗಳನ್ನು ಅಳವಡಿಸಲಾಗಿದೆ. ಪವರ್ ಅನ್ನು ನಿಯಂತ್ರಿಸಲು ಕಾರು ಪರ್ಫಾಮೆನ್ಸ್ ಟಾಕ್ಷನ್ ಕಂಟ್ರೋಲ್ (ಪಿ-ಟಿಸಿಎಸ್) ಅನ್ನು ಹೊಂದಿದೆ. ಇದರೊಂದಿಗೆ ಎಬಿಎಸ್, ಏರ್‍‍ಬ್ಯಾಗ್, ಇಬಿಡಿ, ಇಎಸ್‍ಪಿ ಸೇರಿದಂತೆ ಹಲವಾರು ಫೀಚರ್ಸ್‍‍ಗಳನ್ನು ಅಳವಡಿಸಲಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಸೂಪರ್‍ ಕಾರು

ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಎಡಬ್ಲೂಡಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.3.73 ಕೋಟಿಗಳಾಗಿದೆ. ಈ ಬೆಲೆಗೆ ಹೋಲಿಸಿದರೆ ಆರ್‍‍ಡಬ್ಲೂಡಿ ಮಾದರಿಯನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬಹುದು.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಸೂಪರ್‍ ಕಾರು

ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ಸುಮಾರು ರೂ.2.90 ರಿಂದ ರೂ.3 ಕೋಟಿಗಳಿರಬಹುದು. ಇನ್ನೂ ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಸ್ಪೈಡರ್ ಕಾರು ಅತಿ ಹೆಚ್ಚು ಬೆಲೆಯನ್ನು ಹೊಂದಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.1 ಕೋಟಿಗಳಾಗಿದೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಸೂಪರ್‍ ಕಾರು

ಇತ್ತೀಚೆಗೆ ಲ್ಯಾಂಬೊರ್ಗಿನಿ ಕಂಪನಿಯು ಬೆಂಗಳೂರಿನ ಲಾವೆಲ್ಲೆ ರಸ್ತೆಯಲ್ಲಿ ಹೊಸ ಶೋರೂಂ ಅನ್ನು ತೆರೆದಿದೆ. 4,370 ಚ.ಮೀ ವಿಸ್ತೀರ್ಣದ ಈ ಶೋರೂಂ ಅನ್ನು ಮ್ಯಾಟಿಯೊ ಆರ್ಟೆಂಜಿ ಹಾಗೂ ಶರದ್ ಅಗರ್‍‍ವಾಲ್‍‍‍ರವರು ಉದ್ಘಾಟಿಸಿದರು. ದುಬಾರಿ ಲ್ಯಾಂಬೊರ್ಗಿನಿ ಕಾರುಗಳನ್ನು ಖರೀದಿಸುವವರಲ್ಲಿ ವಿಶ್ವದಲ್ಲೇ ಬೆಂಗಳೂರಿಗರು ಮೊದಲನೇ ಸ್ಥಾನದಲ್ಲಿದ್ದಾರೆ.

ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಲ್ಯಾಂಬೊರ್ಗಿನಿ ಸೂಪರ್‍ ಕಾರು

ಲ್ಯಾಂಬೊರ್ಗಿನಿ ಹುರಾಕಾನ್ ಇವೊ ಆರ್‍‍ಡಬ್ಲ್ಯೂಡಿ ಕಾರು ಹಿಂದಿನ ಮಾದರಿಯಾದ ಹುರಾಕಾನ್ ಇವೊ ಎಡಬ್ಲ್ಯೂಡಿ ಕಾರಿಗಿಂತ ಕಡಿಮೆ ತೂಕವನ್ನು ಹೊಂದಿರುವುದರಿಂದ ಟ್ರ್ಯಾಕ್‍‍ನಲ್ಲಿ ಉತ್ತಮ ಪಫಾರ್ಮೆನ್ಸ್ ನೀಡುತ್ತದೆ. ಸೂಪರ್‍‍ಕಾರು ಪ್ರಿಯರ ಮೆಚ್ಚಿನ ಬ್ರ್ಯಾಂಡ್ ಆದ ಲ್ಯಾಂಬೊರ್ಗಿನಿ ಮತ್ತೊಂದು ಹೊಸ ಕಾರು ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಮೆರೆಯಲು ಸಜ್ಜಾಗಿದೆ.

Most Read Articles

Kannada
English summary
Lamborghini Huracan EVO RWD India Launch Date Confirmed For 29th Of January. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X