ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ಇಟಾಲಿಯನ್ ಕಾರು ಉತ್ಪಾದನಾ ಕಂಪನಿಯಾದ ಲಂಬೋರ್ಗಿನಿ ತನ್ನ ಜನಪ್ರಿಯ ಸೂಪರ್ ಕಾರು ಮಾದರಿಯಾದ ಹುರಾಕನ್ ಆವೃತ್ತಿಯಲ್ಲಿ ರೇಸಿಂಗ್ ತಂತ್ರಜ್ಞಾನ ಹೊಂದಿರುವ ಹುರಾಕನ್ ಎಸ್‌ಟಿಒ ಮಾದರಿಯನ್ನು ಜಾಗತಿಕ ಮಾರುಕಟ್ಟೆಗಾಗಿ ಅನಾವರಣಗೊಳಿಸಿದೆ.

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ಲಂಬೋರ್ಗಿನಿ ನಿರ್ಮಾಣ ಮತ್ತೊಂದು ಜನಪ್ರಿಯ ಕಾರು ಮಾದರಿಯಾಗಿರುವ ಹುರಾಕನ್ ಜಿಟಿ3 ರೇಸಿಂಗ್ ಕಾರು ಮಾದರಿಯ ಪ್ರೇರಣೆಯೊಂದಿಗೆ ಅಭಿವೃದ್ದಿ ಹೊಸ ಹುರಾಕನ್ ಎಸ್‌ಟಿಒ ಮಾದರಿಯು ಸಾರಿಗೆ ಇಲಾಖೆಯ ಹೊಸ ನಿಮಯದ್ವಯ ರೇಸಿಂಗ್ ಟ್ರ್ಯಾಕ್‌ನಿಂದ ಸಾಮಾನ್ಯ ರಸ್ತೆಗಳಿಗೆ ಮೊದಲ ಬಾರಿಗೆ ಪ್ರವೇಶ ಪಡೆದಿದೆ. ಸುರಕ್ಷತೆ ದೃಷ್ಠಿಯಿಂದ ಈ ಹಿಂದೆ ರೇಸ್ ಟ್ರ್ಯಾಕ್‌ಗಳಿಗೆ ಮಾತ್ರ ಸೀಮಿತವಾಗಿದ್ದ ಹುರಾಕನ್ ಜಿಟಿ 3 ಕಾರು ಮಾದರಿಯು ಇದೀಗ ಹುರಾಕನ್ ಎಸ್‌ಟಿಒ ಅಥವಾ ಸೂಪರ್ ಟ್ರೋಫಿಯೋ ಓಮೊಲೊಗಾಟಾ ಹೆಸರಿನೊಂದಿಗೆ ಲೈಫ್‌ಸ್ಟೈಲ್ ಸೂಪರ್ ಕಾರು ಮಾದರಿಯಾಗಿ ಅಭಿವೃದ್ದಿಗೊಂಡಿದೆ.

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ಸತತ ಮೂರು ವರ್ಷಗಳ 24 ಅವರ್ಸ್ ಡೇಟೋನಾ ರೇಸಿಂಗ್ ಸರಣಿ ಗೆದ್ದಿರುವ ಜಿಟಿ3 ಕಾರು ಮಾದರಿಯು ಸೂಪರ್ ಕಾರುಗಳ ವಿಭಾಗದಲ್ಲಿ ತನ್ನದೆ ಆದ ಜನಪ್ರಿಯತೆ ಹೊಂದಿದ್ದು, ರೇಸ್ ಟ್ರ್ಯಾಕ್‌ನಿಂದ ಇದೀಗ ಸಾಮಾನ್ಯ ರಸ್ತೆಗೂ ಪ್ರವೇಶಿಸುತ್ತಿರುವುದು ಸೂಪರ್ ಕಾರು ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ.

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ನೇಮ್ ಪ್ಲೇಟ್ ಹೊರತುಪಡಿಸಿ ಹುರಾಕನ್ ಎಸ್‌ಟಿಒ ಸೂಪರ್ ಕಾರು ಮಾದರಿಯು ಮೂಲ ಮಾದರಿಯಲ್ಲಿರುವಂತೆಯೇ ರೇಸಿಂಗ್ ವಿನ್ಯಾಸದೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಕಾರಿನ ಏರೋ ಡೈನಾಮಿಕ್ ಸೌಲಭ್ಯ ಕಾರಿನ ಪರ್ಫಾಮೆನ್ಸ್ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ಹೊಸ ಸೂಪರ್ ಕಾರಿನ ಮುಂಭಾಗದಲ್ಲಿ ಏರೋ ಸ್ಕೂಪ್ಸ್ ಜೋಡಣೆಯು ಪ್ರಮುಖ ಆಕರ್ಷಣೆಯಾಗಿದ್ದು, ಇದರ ಜೊತೆಗೆ ರೂಫ್ ಸ್ಕೂಪ್, ಶಾರ್ಕ್ ಫಿನ್ ನೀಡಲಾಗಿದೆ. ಹಾಗೆಯೇ ಹೊಸ ಸೂಪರ್ ಕಾರಿನ ಡಿಸೈನ್‌ಗೆ ಪೂರಕವಾದ ರಿಯರ್ ವಿಂಗ್, ದೊಡ್ಡದಾದ ಡಿಫ್ಯೂಸರ್, ಏರ್ ಔಟ್‌ಲೆಟ್ ಚಾನೆಲ್ಸ್‌ಗಳನ್ನು ನೀಡಲಾಗಿದ್ದು, ಹೊಸ ಏರ್ ಡೈನಾಮಿಕ್ ವಿನ್ಯಾಸದ ಮೂಲಕ ಶೇ.37ರಷ್ಟು ಏರ್ ಫ್ಲೋ ಎಫಿಸಿಯೆನ್ಸಿ ಮತ್ತು ಹುರಾಕನ್ ಪರ್ಫಾರ್ಮೆಂಟ್‌ಗೆ ಹೋಲಿಕೆ ಮಾಡಿದರೆ ಶೇ.57 ರಷ್ಟು ಹೆಚ್ಚು ಡೌನ್‌ಫೋರ್ಸ್ ಸೃಷ್ಟಿಸುತ್ತದೆ.

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ರೇಸಿಂಗ್ ತಂತ್ರಜ್ಞಾನದ ಭಾಗವಾಗಿ ಹೊಸ ಹುರಾಕನ್ ಎಸ್‌ಟಿಒ ಸೂಪರ್ ಕಾರು ಮಾದರಿಯನ್ನು ಶೇ.75 ರಷ್ಟು ಕಾರ್ಬನ್ ಫೈಬರ್‌ನೊಂದಿಗೆ ಅಭಿವೃದ್ದಿಗೊಳಿಸಲಾಗಿದ್ದು, ಇದು ಕಾರಿನ ತೂಕ ಇಳಿಕೆಯ ಮಾಡುವ ಮೂಲಕ ಪರ್ಫಾಮೆನ್ಸ್ ಹೆಚ್ಚಿಸುವ ಪ್ರಮುಖ ಅಂಶವಾಗಿದೆ.

ಇದಲ್ಲದೆ ಕಾರಿನ ಪ್ರಮುಖ ಬಿಡಿಭಾಗಗಳನ್ನು ಗುಣಮಟ್ಟದ ಜೊತೆಗೆ ಹಗುರ ಸಾಧನಗಳನ್ನು ಬಳಕೆ ಮಾಡಲು ಯತ್ನಿಸಲಾಗಿದ್ದು, ಹುರಾಕನ್ ಪರ್ಫಾರ್ಮೆಂಟ್‌ ಕಾರಿನಲ್ಲಿರುವ ವಿಂಡ್‍ಸ್ಕೀನ್‌ಗಳಿಂತಲೂ ಎಸ್‌ಟಿಒಯಲ್ಲಿ ಶೇ.20ರಷ್ಟು ಹಗುರವಾಗಿರುವ ವಿಂಡ್‍ಸ್ಕೀನ್‌ ಜೋಡಿಸಲಾಗಿದೆ.

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ಈ ಮೂಲಕ ಹುರಾಕನ್ ಪರ್ಫಾರ್ಮೆಂಟ್‌ ಕಾರಿಗಿಂತಲೂ 43 ಕಿ.ಮಿ ಕಡಿಮೆ ತೂಕ ಹೊಂದಿರುವ ಹುರಾಕನ್ ಎಸ್‍ಟಿಒ ಕಾರು ಮಾದರಿಯು ಒಟ್ಟು 1,339 ಕೆಜಿ ತೂಕ ಹೊಂದಿದ್ದು, ಹೊರ ಭಾಗದ ವಿನ್ಯಾಸಗಳಿಗಾಗಿ ಹಳೆಯ ಸೂಪರ್ ಕಾರು ಮಾದರಿಗಳಾದ ಮಿಯುರಾ ಮತ್ತು ಸೆಸ್ಟೊ ಎಲಿಮೆಂಟೊಗಳಿಂದಲೂ ಹೊಸ ಕಾರು ಸ್ಫೂರ್ತಿ ಪಡೆದಿದೆ.

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ಸಾಂಪ್ರದಾಯಿಕ ಸೂಪರ್ ಕಾರು ಮಾದರಿಗಳಂತೆಯೇ ಹುರಾಕನ್ ಎಸ್‌ಟಿಒ ಕಾರಿನಲ್ಲಿ ಸಿಂಗಲ್-ಪೀಸ್ ಬಾಡಿ ಪ್ಯಾನೆಲ್‌ನೊಂದಿಗೆ ಅಭಿವೃದ್ದಿಗೊಂಡಿದ್ದು, ಇದರಲ್ಲಿ ಮುಂಭಾಗದ ಬಾನೆಟ್, ಫೆಂಡರ್ ಮತ್ತು ಫ್ರಂಟ್ ಬಂಪರ್ ಒಳಗೊಂಡಿರುತ್ತದೆ. ಇದನ್ನು ಲಂಬೋರ್ಗಿನಿ ಕಂಪನಿಯು 'ಕೋಫಂಗೊ' ಎಂದು ಹೆಸರಿಸಿದ್ದು, ಹೊಸ ಕಾರಿಗೆ ಮತ್ತಷ್ಟು ಬಲಿಷ್ಠತೆ ನೀಡುತ್ತದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ಇನ್ನು ಹೊಸ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಸೂಪರ್ ಕಾರು ಮಾದರಿಯಲ್ಲಿ 5.2-ಲೀಟರ್(5,200 ಸಿಸಿ) ಸಾಮರ್ಥ್ಯದ ನ್ಯಾಚುರಲಿ ಆಸ್ಪೆರೆಟೆಡ್ ವಿ10 ಎಂಜಿನ್ ಬಳಕೆ ಮಾಡಲಾಗಿದ್ದು, 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 640-ಬಿಎಚ್‌ಪಿ, 565-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ರೇಸಿಂಗ್ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಹುರಾಕನ್ ಎಸ್‌ಟಿಒ ಕಾರು ಕೇವಲ 3 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ಮತ್ತು 9 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 200 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಹೊಸ ಕಾರು ಪ್ರತಿ ಗಂಟೆಗೆ 310 ಕಿ.ಮೀ ಟಾಪ್ ಸ್ಪೀಡ್ ಪಡೆದುಕೊಂಡಿದೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಜಿಟಿ3 ಪ್ರೇರಣೆಯ ಲಂಬೋರ್ಗಿನಿ ಹುರಾಕನ್ ಎಸ್‌ಟಿಒ ಅನಾವರಣ

ಸೂಪರ್ ಕಾರು ಮಾದರಿಗಳಲ್ಲೇ ಅತಿ ಹೆಚ್ಚು ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಹೊಂದಿರುವ ಹೊಸ ಕಾರು ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಹೊಸ ಕಾರಿನ ಬೆಲೆಯು ಬಿಡುಗಡೆ ವೇಳೆಗೆ ಪ್ರಕಟಿಸಲಾಗುತ್ತದೆ. ಹೊಸ ಕಾರು ಜಾಗತಿಕವಾಗಿ ಬಿಡುಗಡೆಯಾಗಲಿದ್ದರೂ ಕೆಲವೇ ಕೆಲವು ಗ್ರಾಹಕರಿಗೆ ಮಾತ್ರ ಲಭ್ಯವಾಗುವ ಸಾಧ್ಯತೆಗಳಿದ್ದು, ಸೀಮಿತ ಸಂಖ್ಯೆಯಲ್ಲಿ ಮಾತ್ರ ಈ ಕಾರು ಉತ್ಪಾದನೆ ಮಾಡಬಹುದಾಗಿದೆ.

Most Read Articles

Kannada
English summary
Lamborghini Huracan STO has been globally unveiled. Read in Kannada.
Story first published: Thursday, November 19, 2020, 11:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X