ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಲ್ಯಾಂಬೊರ್ಗಿನಿ ಕಾರುಗಳು ಯುವಜನರ ಕನಸಿನ ವಾಹನಗಳಲ್ಲಿ ಒಂದಾಗಿವೆ. ಆದರೆ ದುಬಾರಿ ಬೆಲೆಯ ಕಾರಣಕ್ಕೆ ಈ ಕಂಪನಿಯ ಕಾರುಗಳ ಖರೀದಿ ಅಷ್ಟು ಸುಲಭಕ್ಕೆ ಕೈಗೆಟುಕುವುದಿಲ್ಲ. ಈಗ ಲ್ಯಾಂಬೊರ್ಗಿನಿ ಕಂಪನಿಯು ಪ್ರತಿಯೊಬ್ಬರೂ ಬಳಸಬಹುದಾದ ಹೊಸ ವಾಹನವನ್ನು ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ.

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಈ ವಾಹನವನ್ನು ಅಭಿವೃದ್ಧಿಪಡಿಸಲು ಲ್ಯಾಂಬೊರ್ಗಿನಿ ಕಂಪನಿಯು ಜನಪ್ರಿಯ ಸೆಲ್ ಫೋನ್ ತಯಾರಕ ಕಂಪನಿಯಾದ ಶಿಯೋಮಿಯೊಂದಿಗೆ ಸಹಭಾಗಿತ್ವವನ್ನು ಮಾಡಿಕೊಂಡಿದೆ. ಶಿಯೋಮಿ ಕಂಪನಿಯು ಸೆಲ್ ಫೋನ್ ಮಾತ್ರವಲ್ಲದೆ ಕೆಲವು ಅಗತ್ಯ ವಸ್ತುಗಳನ್ನು ಸಹ ಉತ್ಪಾದಿಸುತ್ತದೆ. ಶಿಯೋಮಿ ಎಲೆಕ್ಟ್ರಿಕ್ ಉಪಕರಣಗಳನ್ನು ಸಹ ಮಾರಾಟ ಮಾಡುತ್ತದೆ.

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಶಿಯೋಮಿ ಕಂಪನಿಯು ಕೆಲವು ದೇಶಗಳಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಸಹ ಮಾರಾಟ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಲ್ಯಾಂಬೊರ್ಗಿನಿ ಹಾಗೂ ಶಿಯೋಮಿ ಕಂಪನಿಗಳು ಮೈತ್ರಿ ಮಾಡಿಕೊಂಡಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಈ ಮೈತ್ರಿಯಡಿಯಲ್ಲಿ ಎರಡು ಕಂಪನಿಗಳು ಜಂಟಿಯಾಗಿ ಗೋ-ಕಾರ್ಟ್ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸುತ್ತಿವೆ. ಈ ವಾಹನವು ಮಾರುಕಟ್ಟೆಯಲ್ಲಿರುವ ಐಷಾರಾಮಿ ಲ್ಯಾಂಬೊರ್ಗಿನಿ ಕಾರುಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ.

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಈ ವಾಹನವನ್ನು ನೈನ್‌ಬಾಟ್ ಕಾರ್ಕ್ ಪ್ರೊ ಲ್ಯಾಂಬೊರ್ಗಿನಿ ಎಡಿಸನ್ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಸಣ್ಣ ಎಲೆಕ್ಟ್ರಿಕ್ ವಾಹನವನ್ನು ಮಕ್ಕಳಿಂದ ವಯಸ್ಕರವರೆಗೆ ಎಲ್ಲರೂ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಲ್ಯಾಂಬೊರ್ಗಿನಿಯ ಗೋಕಾರ್ಟ್ ಎಲೆಕ್ಟ್ರಿಕ್ ವಾಹನದಲ್ಲಿರುವ ಎಲ್ಲಾ ಲೈಟ್ ಗಳು ಎಲ್ಇಡಿ ಗುಣಮಟ್ಟದ್ದಾಗಿವೆ. ಈ ವಾಹನವು ಸ್ಪಾಯ್ಲರ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಸ್ಪೀಕರ್‌ಗಳನ್ನು ಹೊಂದಿದೆ. ಲ್ಯಾಂಬೊರ್ಗಿನಿಯ ಜನಪ್ರಿಯ ವಿ 10 ಹುರಾಕಾನ್ ಕಾರಿನಲ್ಲಿಯೂ ಈ ಫೀಚರ್ ಅನ್ನು ಕಾಣಬಹುದು.

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಈ ಹೊಸ ಗೋ-ಕಾರ್ಟ್ ಎಲೆಕ್ಟ್ರಿಕ್ ವಾಹನವು ಗಂಟೆಗೆ 40 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ವಾಹನದ ಚಾಲನೆಗೆ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಏಕೆಂದರೆ ಭಾರತದಲ್ಲಿ 25 ಕಿ.ಮೀಗಿಂತ ಹೆಚ್ಚಿನ ವೇಗದಲ್ಲಿ ಚಲಿಸುವ ವಾಹನವನ್ನು ಚಾಲನೆ ಮಾಡಲು ಡ್ರೈವಿಂಗ್ ಲೈಸೆನ್ಸ್ ಹೊಂದುವುದು ಕಡ್ಡಾಯ. ಲ್ಯಾಂಬೊರ್ಗಿನಿ ಕಂಪನಿಯು ಈ ಗೋ-ಕಾರ್ಟ್ ವಾಹನವನ್ನು ಭಾರತದಲ್ಲಿ ಬಿಡುಗಡೆಗೊಳಿಸುವುದು ಅನುಮಾನ.

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಗೋ-ಕಾರ್ಟ್ ಎಲೆಕ್ಟ್ರಿಕ್ ವಾಹನದಲ್ಲಿ 432 ಡಬ್ಲ್ಯುಹೆಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಬ್ಯಾಟರಿಯು ಪೂರ್ತಿಯಾಗಿ ಚಾರ್ಜ್ ಆದ ನಂತರ 20 ಕಿ.ಮೀಗಳವರೆಗೆ ಚಲಿಸಬಹುದು. 100 ಕೆಜಿ ತೂಕವನ್ನು ಹೊಂದಿರುವ ಈ ವಾಹನದ ಬೆಲೆ 1,440 ಅಮೆರಿಕನ್ ಡಾಲರ್ ಗಳಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಭಾರತೀಯ ರೂಪಾಯಿ ಮೌಲ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು. ಈ ಲ್ಯಾಂಬೊರ್ಗಿನಿ ಕಂಪನಿಯ ಪ್ರತಿಯೊಂದು ಕಾರುಗಳು ಕೋಟಿಗಟ್ಟಲೇ ಬೆಲೆ ಬಾಳುತ್ತವೆ. ನೈನ್‌ಬಾಟ್ ಗೋ ಕಾರ್ಟ್ ವಾಹನವು ಹಲವು ಅಲ್ಟ್ರಾ-ಸ್ಪೆಷಲ್ ಫೀಚರ್ ಗಳನ್ನು ಹೊಂದಿದೆ.

ಗೋ-ಕಾರ್ಟ್ ವಾಹನವನ್ನು ಬಿಡುಗಡೆಗೊಳಿಸಿದ ಐಷಾರಾಮಿ ಕಾರು ತಯಾರಕ ಕಂಪನಿ

ಈ ವಾಹನವನ್ನು ಸುಲಭವಾಗಿ ಉರುಳಿಸಲು ಸಾಧ್ಯವಾಗದಂತೆ ಹಾಗೂ ಕ್ರ್ಯಾಶ್ ಆಗದಂತೆ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರನ್ನು ವ್ಹೀಲ್ ಗಳಿಂದ ರಕ್ಷಿಸಲು ಸೆಫ್ಟಿ ಶೀಲ್ಡ್ ಗಳನ್ನು ಅಳವಡಿಸಲಾಗಿದೆ.

Most Read Articles

Kannada
English summary
Lamborghini launches Ninebot Go Kart pro electric vehicle. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X