ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ...

ಏಪ್ರಿಲ್ 1ರಿಂದ ದೇಶಾದ್ಯಂತ ಬಿಎಸ್-6 ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದ್ದು, ಹೊಸ ಎಮಿಷನ್ ನಿಯಮ ಪಾಲಿಸಲು ಸಾಧ್ಯವಿಲ್ಲದ ಹಲವು ಜನಪ್ರಿಯ ಕಾರುಗಳು ಮಾರುಕಟ್ಟೆಯಿಂದ ಸ್ಥಗಿತಗೊಳ್ಳುವುದು ಬಹುತೇಕ ಖಚಿತವಾಗಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಡೆಯಲು ಕೇಂದ್ರ ಸರ್ಕಾರವು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರುತ್ತಿದ್ದು, ಬಿಎಸ್-6 ಎಮಿಷನ್ ನಿಯಮವು ಕೂಡಾ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ಹಾಗಾದ್ರೆ ಹೊಸ ನಿಯಮದಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕೆಲವು ಕಾರುಗಳ ಸ್ಥಗಿತಕ್ಕೆ ಕಾರಣವೇನು? ಮತ್ತು ಸ್ಥಗಿತಗೊಳ್ಳಲಿರುವ ಕಾರುಗಳು ಯಾವವು? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಚರ್ಚಿಸಲಾಗಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-4 ಡೀಸೆಲ್ ಎಂಜಿನ್‌ಗಳನ್ನು ಬಿಎಸ್-6 ನಿಯಮ ಅನುಸಾರವಾಗಿ ಉನ್ನತೀಕರಣವುದು ಅಸಾಧ್ಯ ಎನ್ನಲಾಗುತ್ತಿದ್ದು, ಆರ್ಥಿಕವಾಗಿ ಹೊರೆಯಾಗಲಿರುವ ಉನ್ನತೀಕರಣ ಪ್ರಕ್ರಿಯೆಯಿಂದ ಬಹುತೇಕ ಕಾರು ಕಂಪನಿಗಳು ಹೊಸ ಯೋಜನೆಯಿಂದ ಹಿಂದೆ ಸರಿದಿವೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಕೆಲವು ಕಠಿಣ ನಿಯಮಗಳೇ ಡೀಸೆಲ್ ಎಂಜಿನ್ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಮಹೀಂದ್ರಾ, ಟೊಯೊಟಾ, ಹ್ಯುಂಡೈ, ರೆನಾಲ್ಟ್, ಫೋಕ್ಸ್‌ವ್ಯಾಗನ್ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬಂದಿವೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಏ.1ರಿಂದ ಸ್ಥಗಿತಗೊಳ್ಳಲಿರುವ ಕಾರುಗಳು

ಮಾರುತಿ ಸುಜುಕಿ ಬಲೆನೊ

ಬಲೆನೊ ಆವೃತ್ತಿಯಲ್ಲಿ 1.2-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಮಾದರಿಯನ್ನು ಮಾರಾಟ ಮಾಡುತ್ತಿದ್ದ ಮಾರುತಿ ಸುಜುಕಿಯು ಪೆಟ್ರೋಲ್ ಆವೃತ್ತಿಯನ್ನು ಮಾತ್ರವೇ ಬಿಎಸ್-6 ನಿಯಮದೊಂದಿಗೆ ಬಿಡುಗಡೆಗೊಳಿಸಿದ್ದು, ಜನಪ್ರಿಯ 1.3-ಲೀಟರ್ ಡೀಸೆಲ್ ಎಂಜಿನ್ ಅನ್ನು ಸಂಪೂರ್ಣವಾಗಿ ಕೈಬಿಟ್ಟಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಆದರೆ ಬಲೆನೊ ಆವೃತ್ತಿಯಲ್ಲಿ ಹೊಸ ಡೀಸೆಲ್ ಎಂಜಿನ್ ಆಯ್ಕೆ ನೀಡುವ ಸಾಧ್ಯತೆಗಳು ಕಡಿಮೆಯಿದ್ದು, ಇನ್ಮುಂದೆ ಹೊಸ ಬಲೆನೊದಲ್ಲಿ ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮಾತ್ರವೇ ಖರೀದಿಗೆ ಲಭ್ಯವಿದೆ. ಹಾಗೆಯೇ ಹೊಸ ಕಾರಿನಲ್ಲಿ ಸಿಎನ್‌ಜಿ ಆವೃತ್ತಿಯನ್ನು ಸಹ ಪರಿಚಯಿಸುವ ಸಾಧ್ಯತೆಗಳಿದ್ದು, ಒಂದು ವೇಳೆ ಹೊಸ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.5-ಲೀಟರ್ ಡೀಸೆಲ್ ಎಂಜಿನ್ ನೀಡಿದರೂ ಕಾರಿನ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಇದಲ್ಲದೇ 1.3-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ವಿಟಾರಾ ಬ್ರೆಝಾ, ಡಿಜೈರ್, ಎಸ್-ಕ್ರಾಸ್ ಕಾರುಗಳಲ್ಲೂ ಎಂಜಿನ್ ಆಯ್ಕೆಯನ್ನು ಬದಲಾವಣೆಗೊಳಿಸುತ್ತಿದ್ದು, ಬಿಎಸ್-6 ನಿಯಮ ಅನುಸಾರವಾಗಿ ಹೊಸ ತಂತ್ರಜ್ಞಾನ ಪ್ರೇರಿತ ಎಂಜಿನ್ ಆಯ್ಕೆ ನೀಡಲಾಗುತ್ತಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಟಾಟಾ ಬೊಲ್ಟ್ ಮತ್ತು ಜೆಸ್ಟ್

ಹೊಸ ಕಾರು ಮಾರಾಟದಲ್ಲಿ ಭಾರೀ ಬದಲಾವಣೆ ತರುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಕಾರು ಉತ್ಪನ್ನಗಳನ್ನು ಅಭಿವೃದ್ದಿಗೊಳಿಸುತ್ತಿದ್ದು, ಎಂಜಿನ್ ಉನ್ನತೀಕರಣ ಸಾಧ್ಯವಿಲ್ಲದ ಬೊಲ್ಟ್ ಮತ್ತು ಜೆಸ್ಟ್ ಕಾರುಗಳನ್ನು ಸ್ಥಗಿತಗೊಳಿಸುತ್ತಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

2014-15ರ ಅವಧಿಯಲ್ಲಿ ಬಿಡುಗಡೆಗೊಂಡಿದ್ದ ಬೊಲ್ಟ್ ಮತ್ತು ಜೆಸ್ಟ್ ಕಾರುಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯೊಂದಿಗೆ ಮಾರಾಟಗೊಂಡಿದ್ದರೂ ಇತ್ತೀಚೆಗೆ ಪ್ರತಿಸ್ಪರ್ಧಿ ಕಾರುಗಳಿಂದ ತೀವ್ರ ಹಿನ್ನಡೆ ಅನುಭವಿಸಿವೆ. ಹೀಗಾಗಿ ಹಳೆಯ ಆವೃತ್ತಿಗಳನ್ನು ಕೈಬಿಡುತ್ತಿರುವ ಟಾಟಾ ಸಂಸ್ಥೆಯು ಹೊಸ ಮಾದರಿಯ ಕಾರುಗಳ ಮೇಲೆ ಹೆಚ್ಚು ಗಮನಹರಿಸುತ್ತಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಟಾಟಾ ಸುಮೊ

1994ರಲ್ಲಿ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದ ಸುಮೊ ಎಸ್‌ಯುವಿ ಆವೃತ್ತಿಯು ಇದುವರೆಗೆ ಹಲವಾರು ಬದಲಾವಣೆಗಳೊಂದಿಗೆ ಮಾರಾಟವಾಗುತ್ತಿದೆ. ಆದರೆ ಹೊಸ ಎಮಿಷನ್ ನಿಯಮದೊಂದಿಗೆ ಸುಮೊ ಉತ್ಪಾದನೆ ಮುಂದುವರಿಸುವುದು ಕಷ್ಟಸಾಧ್ಯ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ಟಾಟಾ ಸಂಸ್ಥೆಯು ಸುಮೊ ಕಾರಿಗೆ ಗುಡ್‌ಬೈ ಹೇಳಲು ನಿರ್ಧರಿಸಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

2011ರಲ್ಲಿ ಸುಮೊ ಕಾರನ್ನು ಸುಮೊ ಗೋಲ್ಡ್ ಹೆಸರಿನೊಂದಿಗೆ ಹೊಸ ತಲೆಮಾರಿನ ಆವೃತ್ತಿಯನ್ನು ಬಿಡುಗಡೆ ಮಾಡಿದ್ದ ಟಾಟಾ ಸಂಸ್ಥೆಯು ಕಾಲಕಾಲಕ್ಕೆ ಬದಲಾವಣೆ ಮಾಡುತ್ತಾ ಮಾರಾಟ ಮುಂದುವರಿಸಿತ್ತು. ಆದರೆ ಬದಲಾದ ಮಾರುಕಟ್ಟೆಯ ಸನ್ನಿವೇಶದಲ್ಲಿ ಟಾಟಾ ಕೆಲವು ಮಹತ್ವದ ನಿರ್ಧಾರಗಳನ್ನು ತಗೆದುಕೊಂಡಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಟಾಟಾ ಸಫಾರಿ ಸ್ಟ್ರೋಮ್

1998ರಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದ್ದ ಸಫಾರಿ ಎಸ್‌ಯುವಿ ಆವೃತ್ತಿಯು ಅತಿ ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟವಾದ ಕಾರು ಮಾದರಿಯಾಗಿದ್ದು, 2012ರಲ್ಲಿ ಸಫಾರಿ ಸ್ಟ್ರೋಮ್ ಮಾದರಿಯಾಗಿ ಮರುಬಿಡುಗೊಂಡಿತ್ತು. ಆದರೆ ಇತ್ತೀಚೆಗೆ ಬಿಡುಗಡೆಯಾದ ಹೊಸ ಮಾದರಿಯ ಎಸ್‌ಯುವಿ ಆವೃತ್ತಿಗಳಿಂದಾಗಿ ಸಫಾರಿ ಸ್ಟ್ರೋಮ್ ಬೇಡಿಕೆಯಲ್ಲಿ ಭಾರೀ ಇಳಿಕೆಯಾಗಿದ್ದು, ಇದೀಗ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ರೆನಾಲ್ಟ್ ಲೋಡ್ಜಿ

ರೆನಾಲ್ಟ್ ಕಂಪನಿಯು ತನ್ನ ಜನಪ್ರಿಯ ಲೋಡ್ಜಿ ಸೇರಿದಂತೆ ಪ್ರಮುಖ ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಕೈಬಿಟ್ಟು ಪೆಟ್ರೋಲ್, ಸಿಎನ್‌ಜಿ ಮತ್ತು ಎಲೆಕ್ಟ್ರಿಕ್ ಆವೃತ್ತಿಗಳ ಉತ್ಪಾದನೆಯತ್ತ ಹೆಚ್ಚಿನ ಗಮನಹರಿಸಲು ಮುಂದಾಗಿವೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ರೆನಾಲ್ಟ್ ಸಂಸ್ಥೆಯು ನಿಸ್ಸಾನ್ ಉತ್ಪಾದನೆಯ ಡೀಸೆಲ್ ಎಂಜಿನ್ ಕೈಬಿಟ್ಟಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ 1.3-ಲೀಟರ್ ಟರ್ಬೋ ಪೆಟ್ರೋಲ್ ಮತ್ತು1.6-ಲೀಟರ್ ಇನ್-ಲೈನ್ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಮಾದರಿಯನ್ನೇ ಉನ್ನತಿಕರಿಸಿ ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಮಹೀಂದ್ರಾ ಕೆಯುವಿ100 ಮತ್ತು ವೆರಿಟೊ

ಹೊಸ ಎಮಿಷನ್ ಜಾರಿಗೆ ಬರುತ್ತಿರುವ ಹಿನ್ನಲೆಯಲ್ಲಿ ಮಹೀಂದ್ರಾ ಸಂಸ್ಥೆಯು ತನ್ನ ಎಂಟ್ರಿ ಲೆವಲ್ ಕ್ರಾಸ್ ಓವರ್ ಹ್ಯಾಚ್‌ಬ್ಯಾಕ್ ಮಾದರಿಯಾದ ಕೆಯುವಿ100 ಎಂಜಿನ್‌ ಆಯ್ಕೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಹೊಸ ಕೆಯುವಿ100 ಕಾರಿನಲ್ಲಿ ಇನ್ಮುಂದೆ ಡೀಸೆಲ್ ಎಂಜಿನ್ ಕೈಬಿಟ್ಟು ಪೆಟ್ರೋಲ್ ಮತ್ತು ಹೊಸದಾಗಿ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಮಾತ್ರ ನೀಡಲು ಮುಂದಾಗಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಹಾಗೆಯೇ ವೆರಿಟೊ ಸೆಡಾನ್ ಆವೃತ್ತಿಯನ್ನು ಈ ಹಿಂದೆಯೇ ಸ್ಥಗಿತಗೊಳಿಸಲಾಗಿದ್ದು, ಎಲೆಕ್ಟ್ರಿಕ್ ವೆರಿಟೊ ಆವೃತ್ತಿಯನ್ನು ಮಾತ್ರವೇ ಮಾರಾಟ ಮಾಡುತ್ತಿದೆ. ವೆರಿಟೊ ಮೊದಲ ಬಾರಿಗೆ ರೆನಾಲ್ಟ್ ಜೊತೆಗೂಡಿ ಬಿಡುಗಡೆ ಮಾಡಲಾಗಿದ್ದ ಲೊಗಾನ್ ಆವೃತ್ತಿಯ ಹೊಸ ಆವೃತ್ತಿಯಾಗಿದ್ದು, ರೆನಾಲ್ಟ್ ಸ್ವತಂತ್ರ ಕಾರ್ಯಚಾರಣೆಯ ನಂತರ ವೆರಿಟೊ ಕಾರನ್ನು ಅಭಿವೃದ್ದಿಪಡಿಸಲಾಗಿತ್ತು.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಟೊಯೊಟಾ ಇಟಿಯಾಸ್ ಸೀರಿಸ್

ಟೊಯೊಟಾ ಸಂಸ್ಥೆಯು ಪ್ರೀಮಿಯಂ ಕಾರು ಮಾದರಿಗಳ ಹೆಚ್ಚು ಗಮನಹರಿಸುತ್ತಿದ್ದು, ಗ್ರಾಹಕರ ಬೇಡಿಕೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಇಟಿಯಾಸ್ ಸೆಡಾನ್ ಮತ್ತು ಇಟಿಯಾಸ್ ಲಿವಾ ಹ್ಯಾಚ್‌ಬ್ಯಾಕ್ ಕಾರುಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

2011ರಲ್ಲಿ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯನ್ನು ಪ್ರವೇಶಿಸಿದ್ದ ಇಟಿಯಾಸ್ ಸೆಡಾನ್ ಮತ್ತು ತದನಂತರ ಬಂದ ಇಟಿಯಾಸ್ ಲಿವಾ ಹ್ಯಾಚ್‌ಬ್ಯಾಕ್ ಕಾರುಗಳು ಮೊದಮೊದಲ ಉತ್ತಮ ಬೇಡಿಕೆ ಪಡೆದುಕೊಂಡರೂ ಇತ್ತೀಚೆಗೆ ಬಂದ ಹೊಸ ಮಾದರಿಯ ಕಾರುಗಳ ಅಬ್ಬರ ಮುಂದೆ ತೀವ್ರಗತಿಯಲ್ಲಿ ಕುಸಿತ ಕಂಡಿವೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಈ ಹಿನ್ನಲೆಯಲ್ಲಿ ಇಟಿಯಾಸ್, ಇಟಿಯಾಸ್ ಲಿವಾ ಮತ್ತು ಹೊಸ ಆವೃತ್ತಿಯಾದ ಇಟಿಯಾಸ್ ಕ್ರಾಸ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲು ಮುಂದಾಗಿರುವ ಟೊಯೊಟಾ ಸಂಸ್ಥೆಯು ಹೊಸ ಕಾರು ಉತ್ಪನ್ನಗಳ ಬಿಡುಗಡೆ ಆಸಕ್ತಿ ವಹಿಸಿದೆ.

ಬಿಎಸ್-6 ಎಫೆಕ್ಟ್- ಇನ್ಮುಂದೆ ಈ ಜನಪ್ರಿಯ ಕಾರುಗಳು ಖರೀದಿಗೆ ಸಿಗುವುದಿಲ್ಲ..

ಫೋಕ್ಸ್‌ವ್ಯಾಗನ್ ಆಮಿಯೊ

ಸಬ್ ಫೋರ್ ಮೀಟರ್ ಕಂಪ್ಯಾಕ್ಟ್ ಸೆಡಾನ್ ಕಾರುಗಳ ಮಾರಾಟದಲ್ಲಿ ಉತ್ತಮ ಬೇಡಿಕೆ ಹೊಂದಿದ್ದ ಫೋಕ್ಸ್‌ವ್ಯಾಗನ್ ಆಮಿಯೊ ಕಾರು ಎಪ್ರಿಲ್ 1 ನಂತರ ಖರೀದಿಗೆ ಲಭ್ಯವಿರುದಿಲ್ಲ. ಬಿಎಸ್-6 ನಿಯಮದಿಂದಾಗಿ ಸಣ್ಣ ಗಾತ್ರದ ಡೀಸೆಲ್ ಎಂಜಿನ್‌ಗೆ ಗುಡ್ ಬೈ ಹೇಳಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸಂಪೂರ್ಣವಾಗಿ ಪೆಟ್ರೋಲ್ ಕಾರುಗಳ ಮೇಲೆ ಹೆಚ್ಚು ಆಸಕ್ತಿ ವಹಿಸುತ್ತಿದೆ.

Most Read Articles

Kannada
English summary
List Of BS4 Cars To Be Discontinued In India. Read in Kannada.
Story first published: Friday, March 13, 2020, 18:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X