ಕರೋನಾ ನಂತರ ವಿಮಾನಯಾನಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ಭಾರತವು ಕರೋನಾ ವೈರಸ್ ಸಂಕಷ್ಟದಿಂದ ಹೊರ ಬರುವ ಮುನ್ನವೇ ಮತ್ತೊಂದು ಸಂಕಷ್ಟ ಎದುರಾಗಿದೆ. ಮಿಡತೆಗಳು ಏಕಾಏಕಿ ಜಮೀನುಗಳಿಗೆ ದಾಳಿ ಮಾಡುತ್ತಿವೆ. ಮಿಡತೆಗಳು ರೈತರಿಗೆ ಮಾತ್ರವಲ್ಲದೇ ವಿಮಾನಗಳು ಹಾಗೂ ಪ್ರಯಾಣಿಕರಿಗೂ ಅಪಾಯವನ್ನುಂಟು ಮಾಡಲಿವೆ.

ಕರೋನಾ ನಂತರ ವಿಮಾನಯಾನಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ಈ ಹಿನ್ನೆಲೆಯಲ್ಲಿ ವಿಮಾನ ಪೈಲಟ್‌ಗಳು ಹಾಗೂ ಎಂಜಿನಿಯರ್‌ಗಳಿಗಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (ಡಿಜಿಸಿಎ) ಸುತ್ತೋಲೆಯನ್ನು ಹೊರಡಿಸಿದ್ದಾರೆ. ಮಿಡತೆಗಳ ಸಮೂಹವು ವಿಮಾನಗಳಿಗೆ ಅಪಾಯಕಾರಿ ಎಂದು ಡಿಜಿಸಿಎ ವರದಿ ಮಾಡಿದೆ. ಮಿಡತೆಗಳು ಕೆಳಕ್ಕೆ ಹಾರಿ ವಿಮಾನಗಳು ಟೇಕ್-ಆಫ್ ಅಥವಾ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಅಪಘಾತಗಳಿಗೆ ಕಾರಣವಾಗಲಿವೆ. ಮಿಡತೆಗಳು ಹಿಂಡು ಹಿಂಡಾಗಿ ಬರುವುದರಿಂದ ಪೈಲಟ್‌ಗಳಿಗೆ ಏನು ಕಾಣದಂತಾಗುತ್ತದೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತವೆ.

ಕರೋನಾ ನಂತರ ವಿಮಾನಯಾನಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ಭಾರತವು 21 ವರ್ಷಗಳ ನಂತರ ಈ ಮರುಭೂಮಿ ಮಿಡತೆಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಮರುಭೂಮಿ ಮಿಡತೆಗಳ ಗುಂಪು ಪಾಕಿಸ್ತಾನದ ಮೂಲಕ ರಾಜಸ್ಥಾನವನ್ನು ಪ್ರವೇಶಿಸಿವೆ. ನಂತರ ಪಂಜಾಬ್, ಗುಜರಾತ್, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶಗಳಿಗೆ ಹರಡಿವೆ. ಹೋದ ಕಡೆಯಲ್ಲೆಲ್ಲಾ ಬೆಳೆಗಳನ್ನು ನಾಶಪಡಿಸುತ್ತಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ನಂತರ ವಿಮಾನಯಾನಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ಮಿಡತೆಗಳು ಭೂಮಿಯ ಮೇಲ್ಮೈ ಬಳಿ ಹಾರಾಟ ನಡೆಸುತ್ತವೆ. ಇದರಿಂದಾಗಿ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೈಲಟ್‌ಗಳು ಟೇಕಾಫ್ ಮಾಡುವಾಗ ಅಥವಾ ಲ್ಯಾಂಡಿಂಗ್ ಮಾಡುವಾಗ ಜಾಗರೂಕರಾಗಿರುವಂತೆ ಹೇಳಲಾಗಿದೆ.

ಕರೋನಾ ನಂತರ ವಿಮಾನಯಾನಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ವಿಮಾನಗಳು ಹತ್ತಿರ ಬಂದಾಗ ಮಿಡತೆಗಳು ವಿಮಾನದೊಳಗೆ ಪ್ರವೇಶಿಸುವ ಸಾಧ್ಯತೆಗಳಿವೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಮಿಡತೆಗಳು ಎಂಜಿನ್, ಏರ್ ಕಂಡಿಷನರ್ ಪ್ಯಾಕ್‌ಗಳನ್ನು ಸೇರಿವಿಮಾನಗಳನ್ನು ಹಾನಿಗೊಳಿಸುತ್ತವೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ನಂತರ ವಿಮಾನಯಾನಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ಮಿಡತೆಗಳು ವಿಮಾನಗಳ ವೈರ್‌ಲೆಸ್ ಸಂಪರ್ಕ, ಗಾಳಿಯ ವೇಗ ಹಾಗೂ ದಿಕ್ಕನ್ನು ಪತ್ತೆಹಚ್ಚುವ ಸಾಧನಗಳಿಗೂ ಹಾನಿಯನ್ನುಂಟು ಮಾಡಬಹುದು ಎಂದು ಡಿಜಿಸಿಎ ವರದಿ ಹೇಳಿದೆ. ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರಕ್ಕೆ ತುರ್ತು ಯೋಜನೆಯನ್ನು ಜಾರಿಗೆ ತರುವಂತೆ ಕೋರಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಕರೋನಾ ನಂತರ ವಿಮಾನಯಾನಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ

ಎನ್‌ಜಿಒ ಸಲ್ಲಿಸಿದ ಅರ್ಜಿಯಲ್ಲಿ, ತುರ್ತು ಯೋಜನೆಗಳ ಹೊರತಾಗಿಯೂ ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ರಾಜ್ಯಗಳು ಫೆಬ್ರವರಿಯಿಂದ ಮಿಡತೆ ದಾಳಿಯನ್ನು ಎದುರಿಸುತ್ತಿದ್ದು, ಹಲವು ಪ್ರದೇಶಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಲಾಗಿದೆ.

Most Read Articles

Kannada
English summary
DGCA to set guidelines for aircraft engineers and pilots amidst Locusts invasion. Read in Kannada.
Story first published: Saturday, May 30, 2020, 16:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X