ಲಾಕ್‌ಡೌನ್ 5.0: ಯಾವ ಯಾವ ರಾಜ್ಯಗಳಲ್ಲಿದೆ ಅಂತರ್‌ರಾಜ್ಯ ಸಂಚಾರ?

ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಜಾರಿಯಲ್ಲಿದ್ದ ಲಾಕ್‌ಡೌನ್ ಅನ್ನು ತೆಗೆದು ಹಾಕಲು ಕೇಂದ್ರ ಸರ್ಕಾರವು ನಿರ್ಧರಿಸಿದೆ. ಈ ಸಂಬಂಧ ನಿರ್ಣಯಗಳನ್ನು ಕೈಗೊಳ್ಳುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಲಾಗಿದೆ. ರಾಜ್ಯ ಸರ್ಕಾರಗಳು ಪರಿಸ್ಥಿತಿಯನ್ನು ಅವಲೋಕಿಸಿ ಆಯಾ ರಾಜ್ಯಗಳಲ್ಲಿ ಲಾಕ್‌ಡೌನ್ ತೆಗೆದುಹಾಕುವ ಅಥವಾ ವಿಸ್ತರಿಸುವ ನಿರ್ಣಯಗಳನ್ನು ಕೈಗೊಳ್ಳಬಹುದು.

ಲಾಕ್‌ಡೌನ್ 5.0: ಯಾವ ಯಾವ ರಾಜ್ಯಗಳಲ್ಲಿದೆ ಅಂತರ್‌ರಾಜ್ಯ ಸಂಚಾರ?

ಕೇಂದ್ರ ಸರ್ಕಾರವು ಜೂನ್ 1ರಿಂದ ಅಂತರರಾಜ್ಯ ಸಂಚಾರಕ್ಕೆ ಅನುಮತಿ ನೀಡಿದೆ. ಆದರೆ ಈ ಬಗ್ಗೆ ರಾಜ್ಯ ಸರ್ಕಾರಗಳು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿವೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ ಹಾಗೂ ಪಂಜಾಬ್ ರಾಜ್ಯಗಳು ಅಂತರರಾಜ್ಯ ಸಾರಿಗೆಗೆ ಅವಕಾಶ ನೀಡಿದ್ದರೆ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಈಶಾನ್ಯ ಭಾರತದ ಕೆಲವು ರಾಜ್ಯಗಳು ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಿಸಿವೆ.

ಲಾಕ್‌ಡೌನ್ 5.0: ಯಾವ ಯಾವ ರಾಜ್ಯಗಳಲ್ಲಿದೆ ಅಂತರ್‌ರಾಜ್ಯ ಸಂಚಾರ?

ಮಹಾರಾಷ್ಟ್ರದಲ್ಲಿ ಅಂತರರಾಜ್ಯ ರಸ್ತೆ, ವಿಮಾನ ಹಾಗೂ ರೈಲು ಸಂಚಾರವನ್ನು ಜೂನ್ 30ರವರೆಗೆ ನಿಷೇಧಿಸಲಾಗಿದೆ. ತಮಿಳುನಾಡಿನಲ್ಲಿಯೂ ಸಹ ಅಂತರರಾಜ್ಯ ಬಸ್ ಸಾರಿಗೆ, ಮೆಟ್ರೋ ಹಾಗೂ ಉಪನಗರ ರೈಲು ಸೇವೆಗಳ ಮೇಲಿನ ನಿರ್ಬಂಧಗಳು ಮುಂದುವರಿಯಲಿವೆ. ಈ ರಾಜ್ಯಗಳಲ್ಲಿ ಅಂತರ್‌ರಾಜ್ಯ ಪ್ರಯಾಣಕ್ಕೆ ಇ-ಪಾಸ್‌ಗಳ ಅಗತ್ಯವಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ 5.0: ಯಾವ ಯಾವ ರಾಜ್ಯಗಳಲ್ಲಿದೆ ಅಂತರ್‌ರಾಜ್ಯ ಸಂಚಾರ?

ಈಶಾನ್ಯದ ಮೇಘಾಲಯ ಹಾಗೂ ಮಿಜೋರಾಂ ರಾಜ್ಯಗಳು ತಮ್ಮ ಗಡಿಯುದ್ದಕ್ಕೂ ವಾಹನಗಳ ಸಂಚಾರವನ್ನು ನಿಷೇಧಿಸಲು ನಿರ್ಧರಿಸಿವೆ. ಈ ರಾಜ್ಯಗಳಲ್ಲಿ ಜೂನ್ 6ರವರೆಗೆ ಅಂತರ ಜಿಲ್ಲೆ ಹಾಗೂ ಅಂತರರಾಜ್ಯ ಸಂಚಾರಕ್ಕೆ ಪಾಸ್‌ಗಳನ್ನು ಕಡ್ಡಾಯಗೊಳಿಸಲಾಗಿದೆ.

ಲಾಕ್‌ಡೌನ್ 5.0: ಯಾವ ಯಾವ ರಾಜ್ಯಗಳಲ್ಲಿದೆ ಅಂತರ್‌ರಾಜ್ಯ ಸಂಚಾರ?

ಪಶ್ಚಿಮ ಬಂಗಾಳ ಸರ್ಕಾರವು ಜೂನ್ 1ರಿಂದ ರಾಜ್ಯದಲ್ಲಿ ಅಂತರ ಜಿಲ್ಲೆ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಿದ್ದರೂ ಅಂತರರಾಜ್ಯ ಬಸ್ಸುಗಳ ಸಂಚಾರಕ್ಕೆ ಅನುಮತಿ ನೀಡಿಲ್ಲ. ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ ಹಾಗೂ ಇತರ ಎನ್‌ಸಿಆರ್ ನಗರಗಳಲ್ಲಿ ಅಂತರರಾಜ್ಯ ಸಾರಿಗೆಯನ್ನು ಪುನರಾರಂಭಿಸಿರುವ ದೆಹಲಿ ಸರ್ಕಾರವು ಹರಿಯಾಣ ಹಾಗೂ ಉತ್ತರ ಪ್ರದೇಶ ಸರ್ಕಾರಗಳ ಅನುಮತಿಗಾಗಿ ಕಾಯುತ್ತಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ 5.0: ಯಾವ ಯಾವ ರಾಜ್ಯಗಳಲ್ಲಿದೆ ಅಂತರ್‌ರಾಜ್ಯ ಸಂಚಾರ?

ಜೂನ್ 1ರಿಂದ ಪಂಜಾಬ್ ಸರ್ಕಾರವು ಅಂತರರಾಜ್ಯ ಸಾರಿಗೆ ಸಂಚಾರವನ್ನು ಪುನರಾರಂಭಿಸುತ್ತಿದೆ. ಜನರ ಅಂತರರಾಜ್ಯ ಸಂಚಾರಕ್ಕೆ ಪಾಸ್‌ಗಳ ಅಗತ್ಯವಿರುವುದಿಲ್ಲ. ಕರೋನಾ ವೈರಸ್ ಅಲರ್ಟ್ ಆ್ಯಪ್ ಅನ್ನು ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳುವುದನ್ನು ಪಂಜಾಬ್ ಸರ್ಕಾರವು ಕಡ್ಡಾಯಗೊಳಿಸಿದೆ.

ಲಾಕ್‌ಡೌನ್ 5.0: ಯಾವ ಯಾವ ರಾಜ್ಯಗಳಲ್ಲಿದೆ ಅಂತರ್‌ರಾಜ್ಯ ಸಂಚಾರ?

ಮಧ್ಯಪ್ರದೇಶವು ಅಂತರರಾಜ್ಯ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದೆ. ಖಾಸಗಿ ವಾಹನ ಮಾಲೀಕರಿಗೆ ಇನ್ನು ಮುಂದೆ ಅಂತರರಾಜ್ಯ ಪ್ರಯಾಣಕ್ಕಾಗಿ ಇ-ಪಾಸ್‌ಗಳ ಅಗತ್ಯವಿರುವುದಿಲ್ಲ. ಅಧಿಕಾರಿಗಳಿಂದ ಅನುಮತಿ ಪಡೆಯದೇ ಅಂತರರಾಜ್ಯ ಪ್ರಯಾಣ ಮಾಡುವಂತಿಲ್ಲವೆಂದು ಛತ್ತೀಸ್‌ಗಢ ಸರ್ಕಾರ ಹೇಳಿದೆ. ಕರ್ನಾಟಕ ಸರ್ಕಾರವು ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
Maharashtra Tamilnadu to continue inter state travel ban in June. Read in Kannada.
Story first published: Monday, June 1, 2020, 17:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X