ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ನಮ್ಮ ಬೆಂಗಳೂರಿನಲ್ಲಿ ಮಹೀಂದ್ರಾ ಅಡ್ವೆಂಚರ್ ವಿಭಾಗವು ಹಮ್ಮಿಕೊಂಡಿದ್ದ ಎರಡು ದಿನಗಳ ಅಡ್ವೆಂಚರ್ ಕ್ಲಬ್ ಚಾಲೆಂಜ್ ಟೂರ್ನಿಯ 5ನೇ ಆವೃತ್ತಿಯು ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಲ್ಲದೇ, 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ ನಡೆಯಿತು.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ಭಾರತದಲ್ಲಿ ಅತಿ ಹೆಚ್ಚು ಆಫ್ ರೋಡ್ ಅಡ್ವೆಂಚರ್‌ ಡ್ರೈವ್ ಹಮ್ಮಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಅಡ್ವೆಂಚರ್ ವಿಭಾಗವು ಸತತ ಐದನೇ ಬಾರಿಗೆ ಯಶಸ್ವಿಯಾಗಿ ಅಡ್ವೆಂಚರ್ ಕ್ಲಬ್ ಚಾಲೆಂಜ್ ಟೂರ್ನಿಯನ್ನು ಮುಕ್ತಾಯಗೊಳಿಸಿದ್ದು, ಬೆಂಗಳೂರಿನ ಹೆಬ್ಬಾಳದ ಬಳಿ ನಡೆದ ಆಫ್ ರೋಡ್ ಚಾಲೆಂಜ್ ಟೂರ್ನಿಯಲ್ಲಿ ದೇಶದ ವಿವಿಧಡೆಯಿಂದ 15ಕ್ಕೂ ಹೆಚ್ಚು ಆಫ್ ರೋಡ್ ಕ್ಲಬ್‌ಗಳು ಭಾಗಿಯಾಗಿದ್ದವು.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ಅಡ್ವೆಂಚರ್ ಕ್ಲಬ್ ಚಾಲೆಂಜ್ ಟೂರ್ನಿಯಲ್ಲಿ ಒಟ್ಟು ಆರು ವಿಭಾಗಗಳಲ್ಲಿ ಸೆಣಿಸಿದ ವಿವಿಧ ತಂಡಗಳು ಮೂರು ಮಾದರಿಯ ಎಸ್‌ಯುವಿ ಕಾರುಗಳನ್ನು ಬಳಕೆ ಮಾಡಿಕೊಳ್ಳುವ ಮೂಲಕ ಸಮಗ್ರ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ಪಾಸ್ ದ ಬ್ಯಾಟನ್, ಹ್ಯಾಂಡ್ ಆಫ್ ಗಾಡ್, ಸಿಂಗಲ್ ಲಾಗ್ ಚಾಲೆಂಜ್, ಡ್ರ್ಯಾಗ್ ರೇಸ್, ಥಗ್ ಆಫ್ ವಾರ್ ಮತ್ತು ಡೆಮಾಲಿಷನ್ ಡೆಬ್ರಿ ವಿಭಾಗಗಳಲ್ಲಿನ ಪ್ರಶಸ್ತಿಗಾಗಿ ಕಾದಾಡಿದ ಸ್ಪರ್ಧಾಳುಗಳು ವಿವಿಧ ಹಂತದ ಆಫ್ ರೋಡ್ ಗುರಿತಲುಪಲು ಸ್ಟಾಕ್, ಮಾಡಿಫೈಡ್ ಮತ್ತು ಪ್ರೋ-ಮಾಡಿಫೈಡ್ ಎಸ್‌ಯುವಿ ಕಾರುಗಳನ್ನು ಬಳಕೆ ಮಾಡಿಕೊಂಡಿದ್ದರು.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ಆಫ್ ರೋಡ್ ಚಾಲೆಂಜ್‌ನಲ್ಲಿ ಭಾಗಿಯಾಗಿದ್ದ ಒಟ್ಟು 90 ಸ್ಪರ್ಧಾಳುಗಳು ವ್ಯಯಕ್ತಿಕ ಮತ್ತು ಗುಂಪು ವಿಭಾಗದಲ್ಲಿ ಸ್ಪರ್ಧಿಸುವ ಮೂಲಕ ನೆರೆದಿದ್ದ ಸಾವಿರಾರು ಜನ ಆಫ್ ರೋಡ್ ಪ್ರಿಯರನ್ನು ರಂಜಿಸಿದ್ದಲ್ಲದೆ ಪ್ರತಿಷ್ಠಿತ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಯನ್ನು ತಮ್ಮದೇ ಪಾಲಾಗಬೇಕೆಂಬ ಗುರಿಯೊಂದಿಗೆ ಕೊನೆಯ ಕ್ಷಣದ ತನಕವು ಭಾರೀ ಹಣಾಹಣಿ ನಡೆಸಿದರು. ಅಂತಿಮವಾಗಿ ವಿವಿಧ ವಿಭಾಗಗಳಲ್ಲಿ ಉತ್ತಮ ಆಫ್ ರೋಡಿಂಗ್ ಕೌಶಲ್ಯ ತೋರಿದ ವಯನಾಡ್ ಜೀಪರ್ಸ್ ಕ್ಲಬ್ ತಂಡವು ಸಮಗ್ರ ಪ್ರಶಸ್ತಿಯನ್ನು ತನ್ನಗಾಗಿಸಿಕೊಂಡಿತು.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಯ ಜೊತೆಗೆ ರೂ.5 ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡ ವಯನಾಡ್ ಜೀಪರ್ಸ್ ಕ್ಲಬ್, ಅತಿ ಕ್ಲಿಷ್ಟಕರವಾದ ಡೆಮಾಲಿಷನ್ ಡೆಬ್ರಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ತೋರಿತು.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ಎರಡನೇ ರನ್ನರ್ ಆಫ್ ಪ್ರಶಸ್ತಿ ಬಾಚಿಕೊಂಡ ಬೆಂಗಳೂರು ಆಫ್‍ ರೋಡ್‍ ಡ್ರೈವರ್ಸ್‍ ಅಸೋಸಿಯೇಶನ್‌ಗೆ ರೂ.3 ಲಕ್ಷ ನಗದು ಬಹುಮಾನ ದೊರತರೆ, 3ನೇ ರನ್ನರ್ ಆಫ್ ಪ್ರಶಸ್ತಿ ಪಡೆದುಕೊಂಡ ಆರ್ & ಟಿ ಆಫ್‍ ರೋಡ್‍ ಕ್ಲಬ್‌ಗೆ ರೂ.2 ಲಕ್ಷ ನಗದು ಬಹುಮಾನ ನೀಡಲಾಯ್ತು.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ಈ ಬಾರಿಯ ಅಡ್ವೆಂಚರ್ ಕ್ಲಬ್ ಚಾಲೆಂಜ್ ಟೂರ್ನಿಯ ವಿಶೇಷ ಸ್ಪರ್ಧೆ ಅಂದ್ರೆ ಅದು ಡೆಮಾಲಿಷನ್ ಡೆಬ್ರಿ ಸೆಣಸಾಟ. ಇದು ಇತರೆ ಆಫ್ ರೋಡ್ ಕೌಶಲ್ಯಕ್ಕಿಂತಲೂ ಹೆಚ್ಚು ಕ್ಲಿಷ್ಟಕರ ಸ್ಪರ್ಧೆಯಲ್ಲದೆ ಅಪಾಯಕಾರಿ ಸ್ಪರ್ಧೆ ಕೂಡಾ ಹೌದು.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ಮಹೀಂದ್ರಾ ಸಂಸ್ಥೆಯು ಇದೇ ಮೊದಲ ಬಾರಿಗೆ ಕ್ಲಬ್ ಚಾಲೆಂಜ್ ಟೂರ್ನಿಯಲ್ಲಿ ಡೆಮಾಲಿಷನ್ ಡೆಬ್ರಿ ಪರಿಚಯಿಸಿದ್ದು, ಇದರಲ್ಲಿ ಆಫ್‍ರೋಡ್‍ ವಾಹನಗಳನ್ನು ಗುಜರಿ ವಾಹನಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಮಾರ್ಗ ನಿರ್ಮಿಸಿಕೊಳ್ಳುವ ಮೂಲಕ ಮುಂದೆ ಸಾಗಬೇಕಿತ್ತು.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ಇದೊಂದು ಸಾಹಸಮಯವಾದ ಆಫ್ ರೋಡ್ ಕೌಶಲ್ಯವಾಗಿದ್ದು, ಅಪಾಯದ ಸಂದರ್ಭಗಳಲ್ಲಿ ಮಾರ್ಗ ನಿರ್ಮಾಣ ಮಾಡಿಕೊಳ್ಳುವಂತಹ ಒಂದು ತಂತ್ರ ಇದಾಗಿದೆ. ಈ ಮೂಲಕ ವಿವಿಧ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ ಸ್ಪರ್ಧಿಗಳು ನೋಡುಗರಲ್ಲಿ ಮೈ ಜುಮ್ ಅನ್ನಿಸುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.

ಮಹೀಂದ್ರಾ ಅಡ್ವೆಂಚರ್‌ನ 'ಬೆಸ್ಟ್ ಆಫ್‍ ರೋಡ್‍ ಕ್ಲಬ್' ಪ್ರಶಸ್ತಿಗಾಗಿ ಭಾರೀ ಹಣಾಹಣಿ..!

ಇನ್ನು ಇದೇ ಸ್ಪರ್ಧೆಯಲ್ಲಿ ಮಾಧ್ಯಮ ಮಿತ್ರರಿಗೂ ಸ್ಪರ್ಧೆಯಲ್ಲಿ ಅವಕಾಶ ನೀಡಿದ್ದ ಮಹೀಂದ್ರಾ ಸಂಸ್ಥೆಯು ಪಾಸ್ ದ ಬ್ಯಾಟನ್ ವಿಭಾಗದಲ್ಲಿ ಮೂರು ತಂಡಗಳನ್ನಾಗಿ ವಿಭಜಿಸಿ ಸ್ಪರ್ಧೆ ಎರ್ಪಡಿಸಿತ್ತು. ಇದರಲ್ಲಿ ಅತ್ಯುತ್ತಮ ಆಫ್ ರೋಡ್ ಕೌಶಲ್ಯ ತೋರಿದ ಡ್ರೈವ್‌ಸ್ಪಾರ್ಕ್ ತಂಡದ ಪುನೀತ್ ಭಾರದ್ವಾಜ್ ಮತ್ತು ಸಮೀರ್ ಎನ್ ಮೊದಲ ಪ್ರಶಸ್ತಿಯನ್ನು ಬಾಚಿಕೊಂಡಿದ್ದು ವಿಶೇಷವಾಗಿತ್ತು.

Most Read Articles

Kannada
English summary
Mahindra Adventure Club Challenge 2020 Bangalore: Highlights & Results. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X