ಅಲ್ಫಾ ಬಿಎಸ್-6 ವಾಹನ ಮಾದರಿಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ವಾಣಿಜ್ಯ ವಾಹನಗಳ ವಿಭಾಗವು ತನ್ನ ಜನಪ್ರಿಯ ಅಲ್ಫಾ ತ್ರಿ ಚಕ್ರ ವಾಹನ ಮಾದರಿಗಳನ್ನು ಹೊಸ ಎಮಿಷನ್ ನಿಯಮ ಅನುಸಾರವಾಗಿ ಉನ್ನತೀಕರಿಸಿ ಬಿಡುಗಡೆ ಮಾಡಿದ್ದು, ಹೊಸ ವಾಹನಗಳು ಸುಧಾರಿತ ತಂತ್ರಜ್ಞಾನ ಪ್ರೇರಿತ ಎಂಜಿನ್ ಮೂಲಕ ಎಂಜಿನ್ ಕಾರ್ಯಕ್ಷಮತೆ ಮತ್ತು ಮೈಲೇಜ್ ಪ್ರಮಾಣದಲ್ಲಿ ಗಮನಸೆಳೆಯಲಿವೆ.

ಅಲ್ಫಾ ಬಿಎಸ್-6 ವಾಹನ ಮಾದರಿಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಅಲ್ಪಾ ತ್ರಿ ವಾಹನಗಳು ಗ್ರಾಹಕರ ಬೇಡಿಕೆಯೆಂತೆ ಪ್ಯಾಸೆಂಜರ್ ಮತ್ತು ಕಾರ್ಗೋ ವೆರಿಯೆಂಟ್‌ಗಳನ್ನು ಹೊಂದಿದ್ದು, ಹೊಸ ವಾಹನಗಳು ಮಹೀಂದ್ರಾ ಪ್ರಕಾರ, ಆಲ್ಫಾ ಬ್ರಾಂಡ್ ವಿಭಾಗದಲ್ಲಿ ಹೆಚ್ಚು ಇಂಧನ ದಕ್ಷತೆ ಪಡೆದುಕೊಂಡಿವೆ ಎಂದಿದೆ. ಕರೋನಾ ವೈರಸ್ ಪರಿಣಾಮ ಹೊಸ ವಾಹನಗಳನ್ನು ತಡವಾಗಿ ಬಿಡುಗಡೆ ಮಾಡಲಾಗಿದ್ದು, ದಸರಾ ಮತ್ತು ದೀಪಾವಳಿ ಹೊತ್ತಿಗೆ ಹೊಸ ವಾಹನಗಳು ಹೆಚ್ಚು ಮಾರಾಟವಾಗುವ ನೀರಿಕ್ಷೆಗಳಿವೆ.

ಅಲ್ಫಾ ಬಿಎಸ್-6 ವಾಹನ ಮಾದರಿಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಮಹೀಂದ್ರಾ ಹೊಸ ವಾಹನಗಳನ್ನು ಬಿಡುಗಡೆ ಮಾಡಿದ್ದರೂ ಬೆಲೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಹೊಸ ವಾಹನಗಳನ್ನು ಗ್ರಾಹಕರ ಬೇಡಿಕೆಯೆಂತೆ ಮಾಡಿಫೈಗೊಳಿಸುತ್ತಿರುವುದರಿಂದ ನಿಖರ ಬೆಲೆ ಮಾಹಿತಿ ಕೊಟ್ಟಿಲ್ಲ ಎನ್ನಲಾಗಿದ್ದು, ಹೊಸ ಎಂಜಿನ್‌ನಿಂದಾಗಿ ಬಿಎಸ್-4 ಮಾದರಿಗಿಂತಲೂ ರೂ.20 ಸಾವಿರದಿಂದ ರೂ. 35 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿವೆ.

ಅಲ್ಫಾ ಬಿಎಸ್-6 ವಾಹನ ಮಾದರಿಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಅಲ್ಫಾ ವಾಹನ ಮಾದರಿಗಳು ಹೊಸ ಎಂಜಿನ್ ಜೋಡಣೆ ನಂತರ ಶೇಕಡಾ 37 ರಷ್ಟು ಹೆಚ್ಚುವರಿ ಇಂಧನ ದಕ್ಷತೆ , ಶೇ.16 ರಷ್ಟು ಹೆಚ್ಚುವರಿ ಎಂಜಿನ್ ಪವರ್ ಮತ್ತು ಶೇ. 12ರಷ್ಟು ಹೆಚ್ಚು ಟಾರ್ಕ್ ಉತ್ಪಾದನೆಯೊಂದಿಗೆ ಉತ್ತಮ ಸಾಗಾಣಿಕೆ ಸೌಲಭ್ಯ ಪಡೆದುಕೊಂಡಿದೆ.

ಅಲ್ಫಾ ಬಿಎಸ್-6 ವಾಹನ ಮಾದರಿಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಬಿಎಸ್-6 ಎಂಜಿನ್ ನಂತರ ಹೊಸ ಆಲ್ಫಾ ತ್ರಿಚಕ್ರ ವಾಹನಗಳು ಪಿಕಪ್ ಮತ್ತು ಇಳಿಜಾರುಗಳಲ್ಲಿ ಸುಲಭವಾಗಿ ಎಳೆಯುವ ಶಕ್ತಿಯನ್ನು ಹೊಂದಿದ್ದು, ಹೊಸ ವಾಹನಗಳಲ್ಲಿ ಸಿಂಗಲ್ ಸಿಲಿಂಡರ್ 597.7 ಸಿಸಿ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಈ ಮೂಲಕ ಹೊಸ ಎಂಜಿನ್ ಮಾದರಿಯು 9.3-ಬಿಎಚ್‌ಪಿ ಮತ್ತು 23.5-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಅಲ್ಫಾ ಬಿಎಸ್-6 ವಾಹನ ಮಾದರಿಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಎಂಜಿನ್ ಜೋಡಣೆ ನಂತರ ಅಲ್ಪಾ ಪ್ಯಾಸೆಂಜರ್ ಮಾದರಿಯು ಪ್ರತಿ ಲೀಟರ್‌ಗೆ 28.9 ಕಿ.ಮೀ ಮತ್ತು ಕಾರ್ಗೋ ಮಾದರಿಯು 29.4 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ವಿಸ್ತರಿತ ವೀಲ್ಹ್‌ಬೆಸ್ ಮತ್ತು ಹೆಚ್ಚುವರಿ ಗ್ರೌಂಡ್ ಕ್ಲಿಯೆರೆನ್ಸ್ ಗಮನಸೆಳೆಯುತ್ತವೆ.

ಅಲ್ಫಾ ಬಿಎಸ್-6 ವಾಹನ ಮಾದರಿಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ವಾಹನಗಳ ಮೂಲಕ ಸಾಗಾಣಿಕೆ ವೆಚ್ಚವನ್ನು ಪರಿಣಾಮಕಾರಿಯಾಗಿ ತಗ್ಗಿಸಿರುವ ಮಹೀಂದ್ರಾ ಕಂಪನಿಯು ಗರಿಷ್ಠ ಪ್ರಮಾಣದ ಲಾಭದಾಯಕ ಸಾಗಣಿಕೆಗೆ ಅನುವು ಮಾಡಿಕೊಟ್ಟಿದ್ದು, ಸೆಗ್ಮೆಂಟ್ ಮಾದರಿಗಳಲ್ಲೇ ಹೆಚ್ಚಿನ ಮಟ್ಟದ ಇಂಧನ ದಕ್ಷತೆ, ಗರಿಷ್ಠ ಶಕ್ತಿ ಉತ್ಪಾದನೆ ಮತ್ತು ಟಾರ್ಕ್ ಒದಗಿಸಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಅಲ್ಫಾ ಬಿಎಸ್-6 ವಾಹನ ಮಾದರಿಗಳನ್ನು ಬಿಡುಗಡೆ ಮಾಡಿದ ಮಹೀಂದ್ರಾ

ಹೊಸ ಅಲ್ಪಾ ಮಾದರಿಗಳ ಬಿಡುಗಡೆಗೂ ಮುನ್ನ ಎಂಜಿನ್ ಕಾರ್ಯಕ್ಷಮತೆಯನ್ನು ಅರಿಯಲು ಮತ್ತು ಸುಧಾರಣೆಗೊಳಿಸುವುದಕ್ಕಾಗಿ ಸುಮಾರು 4 ಲಕ್ಷ ಕಿ.ಮೀ ಪರೀಕ್ಷಿಸಿ ಅಂತಿಮವಾಗಿ ಹೊಸ ಎಂಜಿನ್ ಮಾದರಿಯ ಉತ್ಪಾದನೆಯನ್ನು ಕೈಗೊಳ್ಳಲಾಗಿದ್ದು, ಧೀರ್ಘಾವಧಿಯ ಪರೀಕ್ಷೆಗಳ ನಂತರ ಹೊಸ ಎಂಜಿನ್ ಮಾದರಿಯು ಉತ್ತಮ ಕಾರ್ಯಕ್ಷಮತೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

Most Read Articles

Kannada
English summary
Mahindra Alfa BS6 Models Introduced In India. Read in Kannada.
Story first published: Wednesday, October 14, 2020, 15:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X