ಬಿಡುಗಡೆಯ ಸನಿಹದಲ್ಲಿ ಮಹೀಂದ್ರಾ ಅಟಾಮ್ ಕ್ವಾರ್ಡ್ರಿಸೈಕಲ್

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಸಾಕಷ್ಟು ಮುನ್ನಡೆ ಸಾಧಿಸಿರುವ ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ವಾಹನಗಳ ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ದವಾಗಿದ್ದು, ಹೊಸ ಯೋಜನೆಗಾಗಿ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆ ಮಾಡುತ್ತಿದೆ.

ಬಿಡುಗಡೆಯ ಸನಿಹದಲ್ಲಿ ಮಹೀಂದ್ರಾ ಅಟಾಮ್ ಕ್ವಾರ್ಡ್ರಿಸೈಕಲ್

ಮಹೀಂದ್ರಾ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಟ್ರಿಯೊ ಜೊರ್ ಎಲೆಕ್ಟ್ರಿಕ್ ರಿಕ್ಷಾ ಮತ್ತು ಇ-ವೆರಿಟೋ ಮಾದರಿಯನ್ನು ಮಾತ್ರವೇ ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಮೂರು ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುವ ಸಿದ್ದತೆಯಲ್ಲಿದೆ. ಬಿಡುಗಡೆಯಾಗುವ ಹೊಸ ಎಲೆಕ್ಟ್ರಿಕ್ ವಾಹನಗಳ ಪಟ್ಟಿಯಲ್ಲಿ ಇಕೆಯುವಿ 100, ಅಟಾಮ್ ಕ್ವಾರ್ಡ್ರಿಸೈಕಲ್ ವಾಹನವು ಪ್ರಮುಖವಾಗಿದ್ದು, ಮತ್ತೊಂದು ಎಲೆಕ್ಟ್ರಿಕ್ ವಾಹನ ವಾಣಿಜ್ಯ ಬಳಕೆಯ ಮಾದರಿಯಾಗಿರಲಿದೆ ಎನ್ನಲಾಗಿದೆ.

ಬಿಡುಗಡೆಯ ಸನಿಹದಲ್ಲಿ ಮಹೀಂದ್ರಾ ಅಟಾಮ್ ಕ್ವಾರ್ಡ್ರಿಸೈಕಲ್

ಬಹುನೀರಿಕ್ಷಿತ ಎಲೆಕ್ಟ್ರಿಕ್ ಕಾರು ಮಾದರಿಯಾದ ಇಎಕ್ಸ್‌ಯುವಿ300 ಕಾರು 2021ರ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಯು ಇದೇ ವರ್ಷಾಂತ್ಯಕ್ಕೆ ಬಿಡುಗಡೆಯಾಗುವ ಸಿದ್ದತೆಯಲ್ಲಿದೆ.

ಬಿಡುಗಡೆಯ ಸನಿಹದಲ್ಲಿ ಮಹೀಂದ್ರಾ ಅಟಾಮ್ ಕ್ವಾರ್ಡ್ರಿಸೈಕಲ್

ಈ ಮೊದಲಿನ ಯೋಜನೆಯೆಂತೆ ಅಟಾಮ್ ಕ್ವಾರ್ಡ್ರಿಸೈಕಲ್ ಮಾದರಿಯು ಇದೇ ಜೂನ್ ಅಥವಾ ಜುಲೈನಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕರೋನಾ ವೈರಸ್ ಪರಿಣಾಮ ಹೊಸ ವಾಹನ ಬಿಡುಗಡೆಯೂ ಮುಂದೂಡಿಕೆಯಾಗಿದ್ದು, ಲಾಕ್‌ಡೌನ್ ಅವಧಿಯಲ್ಲಿ ನಡೆಯಬೇಕಿದ್ದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯು ಇದೀಗ ಪುನಾರಂಭಗೊಂಡಿದೆ.

ಬಿಡುಗಡೆಯ ಸನಿಹದಲ್ಲಿ ಮಹೀಂದ್ರಾ ಅಟಾಮ್ ಕ್ವಾರ್ಡ್ರಿಸೈಕಲ್

ಮಹೀಂದ್ರಾ ಕಂಪನಿಯು ಸದ್ಯ ಹೊಸ ನಿಯಮಗಳಿಗೆ ಅನುಗುಣವಾಗಿ ತನ್ನ ಭವಿಷ್ಯದ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷತೆ ನೀಡುವ ಉದ್ದೇಶದಿಂದ ಈ ಹಿಂದಿನ ಇ2ಓ ಪ್ಲಸ್ ಕಾರಿನ ಉತ್ಪಾದನೆ ಸ್ಥಗಿತಗೊಳಿಸಿ ಹೊಸ ಕಾರು ಉತ್ಪನ್ನಗಳ ಮೇಲೆ ಹೆಚ್ಚಿನ ಗಮನಹರಿಸುತ್ತಿದೆ.

ಬಿಡುಗಡೆಯ ಸನಿಹದಲ್ಲಿ ಮಹೀಂದ್ರಾ ಅಟಾಮ್ ಕ್ವಾರ್ಡ್ರಿಸೈಕಲ್

ಗ್ರಾಹಕರ ಬೇಡಿಕೆಯೆಂತೆ ವಿಶೇಷ ಫೀಚರ್ಸ್ ಮತ್ತು ಅತ್ಯುತ್ತಮ ಬ್ಯಾಟರಿ ಆಯ್ಕೆ ಹೊಂದಲಿರುವ ಹೊಸ ಎಲೆಕ್ಟ್ರಿಕ್ ಪ್ರಯಾಣಿಕರ ಕಾರುಗಳು ಮತ್ತು ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆಯ ಮೇಲೂ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಿಡುಗಡೆಯ ಸನಿಹದಲ್ಲಿ ಮಹೀಂದ್ರಾ ಅಟಾಮ್ ಕ್ವಾರ್ಡ್ರಿಸೈಕಲ್

ಇದರಲ್ಲಿ ಅಟಾಮ್ ಕ್ವಾರ್ಡ್ರಿಸೈಕಲ್ ಎಲೆಕ್ಟ್ರಿಕ್ ವಾಹನವು ಒಂದಾಗಿದ್ದು, ಈ ವಾಹನವು 15kW ಸಾಮರ್ಥ್ಯದ ಲೀಥಿಯಂ ಅಲಾಯ್ ಬ್ಯಾಟರಿ ಪ್ಯಾಕ್‌ನೊಂದಿಗೆ ಪ್ರತಿ ಚಾರ್ಜ್‌ಗೆ 110ಕಿ.ಮೀ ನಿಂದ 130ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿವೆ.

ಹಾಗೆಯೇ ಹೊಸ ವಾಹನದಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಲಾಗಿದ್ದು, ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೇ ಒಳಭಾಗದಲ್ಲೂ ಆಕರ್ಷಕ ಆಸನ ಸೌಲಭ್ಯದೊಂದಿಗೆ ದೊಡ್ಡದಾದ ಕ್ಯಾಬಿನ್ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳನ್ನು ಹೊಂದಿದೆ.

ಬಿಡುಗಡೆಯ ಸನಿಹದಲ್ಲಿ ಮಹೀಂದ್ರಾ ಅಟಾಮ್ ಕ್ವಾರ್ಡ್ರಿಸೈಕಲ್

ಅನಾವರಣ ಹೊರತುಪಡಿಸಿ ಅಟಾಮ್ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಈ ಹೊಸ ಎಲೆಕ್ಟ್ರಿಕ್ ವಾಹನವು ಬಜಾಜ್ ಬಿಡಗಡೆ ಮಾಡಲಿರುವ ಎಲೆಕ್ಟ್ರಿಕ್ ಕ್ಯೂಟ್ ಕ್ವಾರ್ಡ್ರಿಸೈಕಲ್‌ಗೆ ಉತ್ತಮ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Source: Rushlane

Most Read Articles

Kannada
English summary
Mahindra Atom Quadricycle Electric Features Teased. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X