ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಕ್ವಾಡ್ರಿಸೈಕಲ್

ಮಹೀಂದ್ರಾ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ತನ್ನ ಮೊದಲ ಕ್ವಾಡ್ರಿಸೈಕಲ್ ಆದ ಆಟಂ ಇವಿಯ ಬಿಡುಗಡೆಯನ್ನು ಖಚಿತಪಡಿಸಿತ್ತು. ಇದಾದ ನಂತರ ಮರೆಮಾಡಲಾಗಿರುವ ಆಟಂ ಇವಿಯ ಮಾದರಿಯನ್ನು ಚೆನ್ನೈನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಕ್ವಾಡ್ರಿಸೈಕಲ್

ಆಟಂ ಇವಿಯನ್ನು 2018ರ ಆಟೋ ಎಕ್ಸ್‌ಪೋದಲ್ಲಿ ಕಾನ್ಸೆಪ್ಟ್ ಆಗಿ ಪ್ರದರ್ಶಿಸಲಾಗಿತ್ತು. ಈ ಎರಡು ವರ್ಷಗಳಲ್ಲಿ ಕ್ವಾಡ್ರೈಸಿಕಲ್ ಸೆಗ್‍‍ಮೆಂಟ್ ಭಾರತದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಮಹೀಂದ್ರಾ ಈ ಸೆಗ್‍‍ಮೆಂಟ್‍‍ನಲ್ಲಿ ಬಜಾಜ್ ಆಟೋ ಕಂಪನಿಯ ನಂತರ ವಾಹನ ಅಭಿವೃದ್ಧಿಪಡಿಸುತ್ತಿರುವ ಎರಡನೇ ವಾಹನ ತಯಾರಕ ಕಂಪನಿಯಾಗಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಕ್ವಾಡ್ರಿಸೈಕಲ್

ಮಹೀಂದ್ರಾ ಆಟಂ ವಾಹನವನ್ನು 2020ರ ಮೂರನೇ ತ್ರೈಮಾಸಿಕದಲ್ಲಿ ಬಿಡುಗಡೆಗೊಳಿಸಲಾಗುವುದು. ಬಿಡುಗಡೆಯಾದ ನಂತರ ಈ ವಾಹನವು ಭಾರತದ ಮೊದಲ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ಆಗಲಿದೆ. ಚೆನ್ನೈನಲ್ಲಿ ಸ್ಪಾಟ್ ಟೆಸ್ಟ್ ಮಾಡಲಾಗುತ್ತಿರುವ ಆಟಂ ವಾಹನದ ಚಿತ್ರಗಳನ್ನು ಮೋಟರ್ ವಿಕಟನ್ ಬಿಡುಗಡೆಗೊಳಿಸಿದೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಕ್ವಾಡ್ರಿಸೈಕಲ್

ಮಹೀಂದ್ರಾ ಆಟಂ ಉತ್ಪಾದನಾ ಆವೃತ್ತಿಯನ್ನು ಫೆಬ್ರವರಿ 5ರಂದು ಆರಂಭವಾಗಲಿರುವ 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗುವುದು. ಸ್ಪಾಟ್ ಟೆಸ್ಟ್ ಮಾಡಲಾದ ಈ ಟೆಸ್ಟ್ ಮಾದರಿಯಲ್ಲಿ ಮೂಲ ಶೇಪ್ ಹಾಗೂ ಕ್ವಿರ್ಕಿ ಸ್ಟೈಲಿಂಗ್‍‍ಗಳಿವೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಕ್ವಾಡ್ರಿಸೈಕಲ್

ಪ್ರೀಮಿಯಂ ಅಂಶಗಳಾದ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಟೇಲ್‍‍ಲೈಟ್, ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಸಿಸ್ಟಂ ಹೊಂದಿರುವ ಸ್ವಾಂಕಿ ಇಂಟಿರಿಯರ್, ಹೆಚ್‍‍ವಿ‍ಎ‍‍ಸಿ ಯುನಿಟ್ ಮುಂತಾದವುಗಳನ್ನು ನೀಡುವ ಸಾಧ್ಯತೆಗಳಿಲ್ಲ. ಆಟಂ ಎಲೆಕ್ಟ್ರಿಕ್‍‍ನ ಪ್ರಮುಖ ಗ್ರಾಹಕರು ಸಾರ್ವಜನಿಕ ಸಾರಿಗೆಯನ್ನು ಬಳಸುವವರಾಗಿದ್ದಾರೆ. ಅವರು ಇವುಗಳ ಕಾರ್ಯಾಚರಣೆಗೆ ಎಲ್ಲಕ್ಕಿಂತ ಹೆಚ್ಚಿನ ಆದ್ಯತೆಯನ್ನು ನೀಡುತ್ತಾರೆ.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಕ್ವಾಡ್ರಿಸೈಕಲ್

ಮಹೀಂದ್ರಾ ಕಂಪನಿಯು ಆಟಂ ವಾಹನದಲ್ಲಿ ಹೆಚ್ಚು ಆರಾಮದಾಯಕ ಸೌಲಭ್ಯಗಳನ್ನು ಅಳವಡಿಸಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ. ಸ್ಕ್ವಾರಿಷ್ ಡಿಸೈನ್ ಹೊಂದಿರುವ ಆಟಂ ಎಲೆಕ್ಟ್ರಿಕ್ ವಾಹನದಲ್ಲಿ ಡ್ರೈವರ್ ಸೇರಿದಂತೆ ಐದು ಜನರು ಸಂಚರಿಸಬಹುದು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಕ್ವಾಡ್ರಿಸೈಕಲ್

ಕ್ವಾಡಿಸೈಕಲ್‍‍ಗಳ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 70 ಕಿ.ಮೀಗಳಾಗಿದೆ. ಆಟಂ ವಾಹನವನ್ನು ಈ ನಿಯಮದನ್ವಯ ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ. ಈ ಎಲೆಕ್ಟ್ರಿಕ್ ವಾಹನದಲ್ಲಿ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಹಾಗೂ 15 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಅಳವಡಿಸಲಾಗುವುದು.

ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಮಹೀಂದ್ರಾ ಕ್ವಾಡ್ರಿಸೈಕಲ್

ಮಹೀಂದ್ರಾ ಆಟಂ ಎಲೆಕ್ಟ್ರಿಕ್ ಕ್ವಾಡ್ರೈಸಿಕಲ್ ಅನ್ನು ಬೆಂಗಳೂರಿನಲ್ಲಿರುವ ಮಹೀಂದ್ರಾ ಕಂಪನಿಯ ಘಟಕದಲ್ಲಿ ತಯಾರಿಸಲಾಗುವುದು. ಸದ್ಯಕ್ಕೆ, ಪೆಟ್ರೋಲ್ ಎಂಜಿನ್ ಹೊಂದಿರುವ ಬಜಾಜ್ ಕ್ಯೂಟ್ ಮಾತ್ರ ಆಟಂ ವಾಹನಕ್ಕೆ ಪೈಪೋಟಿ ನೀಡಲಿದೆ. ಬಜಾಜ್ ಕಂಪನಿಯು ಸಹ ಇದೇ ರೀತಿಯ ಎಲೆಕ್ಟ್ರಿಕ್ ಕ್ವಾಡ್ರಿಸೈಕಲ್ ವಾಹನವನ್ನು ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ವರದಿಗಳಾಗಿವೆ. ಫೇಮ್ 2 ಸಬ್ಸಿಡಿಯೊಂದಿಗೆ ಮಾರಾಟ ಮಾಡಲಾಗುವ, ಮಹೀಂದ್ರಾ ಆಟಂ ಎಲೆಕ್ಟ್ರಿಕ್ ಕ್ವಾಡ್ರಿ ಸೈಕಲ್ ಹೆಚ್ಚಿನ ಸಂಖ್ಯೆಯ ಕಮರ್ಶಿಯಲ್ ಗ್ರಾಹಕರನ್ನು ಸೆಳೆಯುವ ಸಾಧ್ಯತೆಗಳಿವೆ.

Most Read Articles

Kannada
English summary
Mahindra Atom electric quadricycle spied testing. Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X