ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಬಿಎಸ್-6 ಬೊಲೆರೊ ಎಸ್‍ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ. ಹೊಸ ಬೊಲೆರೊ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.98 ಲಕ್ಷಗಳಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಎಸ್‍‍ಯುವಿ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾಗುವ ವಾಹನಗಳಲ್ಲಿ ಬೊಲೆರೊ ಕೂಡ ಒಂದಾಗಿದೆ. ಬೊಲೆರೊ ಎಸ್‍‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ದೀರ್ಘಕಾಲದಿಂದ ಉತ್ತಮವಾಗಿ ಮಾರಾಟವಾಗುತ್ತಿದೆ. ಹೊಸ ಬೊಲೆರೊ ಎಸ್‍ಯುವಿಯ ಬೆಲೆಯನ್ನು ಮುಂದಿನ ದಿನಗಳಲ್ಲಿ ರೂ.70,000 ಗಳಷ್ಟು ಹೆಚ್ಚಿಸುವ ಸಾಧ್ಯತೆಗಳಿದೆ. ಹೊಸ ಬೊಲೆರೊ ಬಿ4, ಬಿ6 ಮತ್ತು ಬಿ6(ಒ) ಎಂಬ ಮೂರು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಹೊಸ ಬೊಲೆರೊ ಬಿ6(ಒ) ಟಾಪ್ ಎಂಡ್ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.8.64 ಲಕ್ಷಗಳಾಗಿದೆ. ಮಹೀಂದ್ರಾ ಕಂಪನಿಯು ಈ ಬೊಲೆರೊವನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಬಿಎಸ್-6 ಬೊಲೆರೊ ಎಸ್‍‍ಯುವಿನಲ್ಲಿ ಹೊಸ ಕ್ರ್ಯಾಶ್ ಟೆಸ್ಟ್ ಸುರಕ್ಷತಾ ನಿಯಮಕ್ಕೆ ಅನುಗುಣವಾಗಿ ಅದರ ಮಂಭಾಗವನ್ನು ನವೀಕರಿಸಲಾಗಿದೆ. ಮುಂಭಾಗದ ಪ್ರಯಾಣಿಕರ ಸುರಕ್ಷತೆಗೆ ಈ ಹೊಸ ನವೀಕರಣವು ಸಹಕಾರಿಯಾಗಲಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಹೊಸ ಬೊಲೆರೊ ಮುಂಭಾಗದಲ್ಲಿ ಹೊಸ ಬಂಪರ್, ಗ್ರಿಲ್ ಮತ್ತು ಮರುವಿನ್ಯಾಸಗೊಳಿಸಲಾದ ಹೆಡ್ ಲ್ಯಾಂಪ್ ಗಳನ್ನು ಅಳವಡಿಸಲಾಗಿದೆ. ಹೊಸ ಬೊಲೆರೊ ಆಕರ್ಷಕ ಲುಕ್ ಅನ್ನು ಹೊಂದಿದೆ.

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಹೊಸ ಮಹೀಂದ್ರಾ ಬೊಲೆರೊ ಎಸ್‍‍ಯುವಿಯಲ್ಲಿ ಸುರಕ್ಷತೆಗಾಗಿ ಏರ್‍‍ಬ್ಯಾಗ್‍‍ಗಳು, ರೇರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ(ಎ‍‍ಬಿಎಸ್) ಅನ್ನು ಅಳವಡಿಸಬಹುದು. ಬೊಲೆರೊ ಎಸ್‍‍ಯು‍ವಿ ವಿಭಾಗದಲ್ಲಿ ಹೆಚ್ಚು ಮಾರಾಟವಾದ ಎಸ್‍ಯುವಿಗಳಲ್ಲಿ ಒಂದಾಗಿದೆ.

MOST READ: ಸ್ಪಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ 2020ರ ಮಹೀಂದ್ರಾ ಥಾರ್

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಹೊಸ ಬೊಲೆರೊ ಎಸ್‍‍ಯುವಿಯ ಇಂಟಿರಿಯರ್‍‍ನಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೊಸ ಬೊಲೆರೊದಲ್ಲಿ 1.5 ಎಲ್ 3-ಸಿಲಿಂಡರ್ ಎಮ್ಹಾಕ್ 75 ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೆಲೆರಿಯೊ ಎಕ್ಸ್

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಈ 1.5 ಲೀಟರ್‍‍ ಎಂಜಿನ್ ಟಿ‍ಯುವಿ ಎಸ್‍‍ಯುವಿ ಮಾದರಿಯಲ್ಲಿ 75 ಬಿ‍‍ಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. ಇದರೊಂದಿಗೆ ಈ ಎಂಜಿನ್ 195 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 5 ಸ್ಪೀಡ್ ಮಾನ್ಯುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-6 ಎಂಜಿನ್‍‍ನಲ್ಲಿ ಬಿಡುಗಡೆಯಾಯ್ತು ಮಹೀಂದ್ರಾ ಬೊಲೆರೊ

ಈ ಹೊಸ ಎಸ್‍ಯುವಿಯು ಈಗಾಗಲೇ ಡೀಲರ್‍ ಬಳಿ ತಲುಪಿದೆ. ಹೊಸ ಬಿಎಸ್-6 ಮಹೀಂದ್ರಾ ಬೊಲೆರೊ ಬಾಕ್ಸೀ ವಿನ್ಯಾಸವನ್ನು ಹೊಂದಿದೆ. ಹೊಸ ಬೊಲೆರೊ ಎಸ್‍‍ಯುವಿಯಲ್ಲಿ ಹೆಚ್ಚಿನ ಸುರಕ್ಷತೆಯನ್ನು ನೀಡುವುದರಿಂದ ದೇಶಿಯ ಮಾರುಕಟ್ಟೆಯಲ್ಲಿ ಇನ್ನಷ್ಟು ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
2020 Mahindra Bolero Launched With Metal Bumpers, From Rs. 7.98 Lakh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X