Just In
- 3 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 4 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 6 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 6 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- News RCB: ಆರ್ಸಿಬಿ ಫ್ರಾಂಚೈಸ್ನಿಂದ ಬೆಂಗಳೂರಿನ ಮೂರು ಕೆರೆಗಳ ಪುನಶ್ಚೇತನ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣನೀಯವಾಗಿ ಕುಸಿದ ಮಹೀಂದ್ರಾ ಕಂಪನಿಯ ಕಾರು ಮಾರಾಟ
ಭಾರತದ ಖ್ಯಾತ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ 2020ರ ಜುಲೈ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಈ ಅಂಕಿಅಂಶಗಳ ಪ್ರಕಾರ ಕಂಪನಿಯು ಜುಲೈ ತಿಂಗಳಿನಲ್ಲಿ 10,904 ವಾಹನಗಳನ್ನು ಮಾರಾಟ ಮಾಡಿದೆ.
2019ರ ಜುಲೈ ತಿಂಗಳಿನಲ್ಲಿ ಮಹೀಂದ್ರಾ ಕಂಪನಿಯು 16,024 ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜುಲೈ ತಿಂಗಳಿನಲ್ಲಿ ಕಂಪನಿಯ ಮಾರಾಟವು 32%ನಷ್ಟು ಕುಸಿದಿದೆ. ಮಹೀಂದ್ರಾ ಕಂಪನಿಯು ವಿಭಿನ್ನ ಬಗೆಯ ಕಾರುಗಳನ್ನು ಬಿಡುಗಡೆಗೊಳಿಸುತ್ತದೆಯಾದರೂ ಕಂಪನಿಯ ಬೊಲೆರೊ ಎಂಯುವಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.
ಜುಲೈ 2020ರಲ್ಲಿ ಬೊಲೆರೊದ 4,360 ಯುನಿಟ್ಗಳು ಮಾರಾಟವಾಗಿವೆ. ಮಹೀಂದ್ರಾ ಕಂಪನಿಯ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟದಲ್ಲಿ ಬೊಲೆರೊ ಎಂಯುವಿಯು ಹೆಚ್ಚಿನ ಸಂಖೆಯಲ್ಲಿ ಮಾರಾಟವಾಗಿದೆ. ಆದರೂ ಸಹ 2019ರ ಜುಲೈ ತಿಂಗಳಿಗೆ ಹೋಲಿಸಿದರೆ ಬೊಲೆರೊ ಮಾರಾಟವು 2%ನಷ್ಟು ಕಡಿಮೆಯಾಗಿದೆ.
MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್
2019ರ ಜುಲೈ ತಿಂಗಳಿನಲ್ಲಿ ಬೊಲೆರೊದ 4,446 ಯುನಿಟ್ಗಳು ಮಾರಾಟವಾಗಿದ್ದವು. ಮಹೀಂದ್ರಾ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾದ ಎರಡನೇ ಕಾರು ಸ್ಕಾರ್ಪಿಯೋ ಆಗಿದ್ದು, ಜುಲೈ ತಿಂಗಳಿನಲ್ಲಿ 3,135 ಯುನಿಟ್ ಗಳು ಮಾರಾಟವಾಗಿವೆ. 2019ರ ಜುಲೈ ತಿಂಗಳಿನಲ್ಲಿ 2,864 ಯುನಿಟ್ ಗಳು ಮಾರಾಟವಾಗಿದ್ದವು.
ಮಾದರಿ | ಜುಲೈ 2020 | ಜುಲೈ 2019 | ಪ್ರಗತಿ (%) |
ಮಹೀಂದ್ರಾ ಬೊಲೆರೊ | 4,360 | 4,446 | -2 |
ಮಹೀಂದ್ರಾ ಸ್ಕಾರ್ಪಿಯೋ | 3,135 | 2,846 | 9 |
ಮಹೀಂದ್ರಾ ಎಕ್ಸ್ಯುವಿ 300 | 2,519 | 4,464 | -44 |
ಮಹೀಂದ್ರಾ ಎಕ್ಸ್ಯುವಿ 500 | 813 | 1,116 | -27 |
ಮಹೀಂದ್ರಾ ಕೆಯುವಿ ಎನ್ಎಕ್ಸ್ ಟಿ | 51 | 164 | -69 |
ಮಹೀಂದ್ರಾ ವೆರಿಟೋ | 6 | 21 | -71 |
ಮಹೀಂದ್ರಾ ಮರಾಜೋ | 20 | 956 | -98 |
ಈ ವರ್ಷ ಸ್ಕಾರ್ಪಿಯೋ ಮಾರಾಟವು ಸುಮಾರು 9%ನಷ್ಟು ಹೆಚ್ಚಾಗಿದೆ. 2019ರ ಫೆಬ್ರವರಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಮಹೀಂದ್ರಾ ಎಕ್ಸ್ಯುವಿ 300 ಸಹ ಜನಪ್ರಿಯವಾಗಿದೆ.
MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ
2020ರ ಜುಲೈ ತಿಂಗಳಿನಲ್ಲಿ ಎಕ್ಸ್ಯುವಿ 300ನ 2,519 ಯುನಿಟ್ಗಳು ಮಾರಾಟವಾಗಿವೆ. 2019ರ ಜುಲೈ ತಿಂಗಳಿನಲ್ಲಿ 4,464 ಯುನಿಟ್ಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಕ್ಸ್ಯುವಿ 300ನ ಮಾರಾಟವು 44%ನಷ್ಟು ಕುಸಿದಿದೆ.
2020ರ ಜುಲೈ ತಿಂಗಳಿನಲ್ಲಿ ಮಹೀಂದ್ರಾ ಎಕ್ಸ್ಯುವಿ 500 ಕಾರಿನ ಒಟ್ಟು 813 ಯುನಿಟ್ಗಳು ಮಾರಾಟವಾಗಿವೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಈ ಕಾರಿನ 1,116 ಯುನಿಟ್ಗಳು ಮಾರಾಟವಾಗಿದ್ದವು. ಮಹೀಂದ್ರಾ ಎಕ್ಸ್ಯುವಿ 500 ಮಾರಾಟವು ಕಳೆದ ವರ್ಷದ ಜುಲೈ ತಿಂಗಳಿಗಿಂತ ಈ ವರ್ಷದ ಜುಲೈ ತಿಂಗಳಿನಲ್ಲಿ 27%ನಷ್ಟು ಕುಸಿದಿದೆ.