ಗಣನೀಯವಾಗಿ ಕುಸಿದ ಮಹೀಂದ್ರಾ ಕಂಪನಿಯ ಕಾರು ಮಾರಾಟ

ಭಾರತದ ಖ್ಯಾತ ಕಾರು ತಯಾರಕ ಕಂಪನಿಯಾದ ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ 2020ರ ಜುಲೈ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಈ ಅಂಕಿಅಂಶಗಳ ಪ್ರಕಾರ ಕಂಪನಿಯು ಜುಲೈ ತಿಂಗಳಿನಲ್ಲಿ 10,904 ವಾಹನಗಳನ್ನು ಮಾರಾಟ ಮಾಡಿದೆ.

ಗಣನೀಯವಾಗಿ ಕುಸಿದ ಮಹೀಂದ್ರಾ ಕಂಪನಿಯ ಕಾರು ಮಾರಾಟ

2019ರ ಜುಲೈ ತಿಂಗಳಿನಲ್ಲಿ ಮಹೀಂದ್ರಾ ಕಂಪನಿಯು 16,024 ವಾಹನಗಳನ್ನು ಮಾರಾಟ ಮಾಡಿತ್ತು. ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜುಲೈ ತಿಂಗಳಿನಲ್ಲಿ ಕಂಪನಿಯ ಮಾರಾಟವು 32%ನಷ್ಟು ಕುಸಿದಿದೆ. ಮಹೀಂದ್ರಾ ಕಂಪನಿಯು ವಿಭಿನ್ನ ಬಗೆಯ ಕಾರುಗಳನ್ನು ಬಿಡುಗಡೆಗೊಳಿಸುತ್ತದೆಯಾದರೂ ಕಂಪನಿಯ ಬೊಲೆರೊ ಎಂಯುವಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ.

ಗಣನೀಯವಾಗಿ ಕುಸಿದ ಮಹೀಂದ್ರಾ ಕಂಪನಿಯ ಕಾರು ಮಾರಾಟ

ಜುಲೈ 2020ರಲ್ಲಿ ಬೊಲೆರೊದ 4,360 ಯುನಿಟ್‌ಗಳು ಮಾರಾಟವಾಗಿವೆ. ಮಹೀಂದ್ರಾ ಕಂಪನಿಯ ದೇಶಿಯ ಮಾರುಕಟ್ಟೆಯಲ್ಲಿನ ಮಾರಾಟದಲ್ಲಿ ಬೊಲೆರೊ ಎಂಯುವಿಯು ಹೆಚ್ಚಿನ ಸಂಖೆಯಲ್ಲಿ ಮಾರಾಟವಾಗಿದೆ. ಆದರೂ ಸಹ 2019ರ ಜುಲೈ ತಿಂಗಳಿಗೆ ಹೋಲಿಸಿದರೆ ಬೊಲೆರೊ ಮಾರಾಟವು 2%ನಷ್ಟು ಕಡಿಮೆಯಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಗಣನೀಯವಾಗಿ ಕುಸಿದ ಮಹೀಂದ್ರಾ ಕಂಪನಿಯ ಕಾರು ಮಾರಾಟ

2019ರ ಜುಲೈ ತಿಂಗಳಿನಲ್ಲಿ ಬೊಲೆರೊದ 4,446 ಯುನಿಟ್‌ಗಳು ಮಾರಾಟವಾಗಿದ್ದವು. ಮಹೀಂದ್ರಾ ಸರಣಿಯಲ್ಲಿ ಅತಿ ಹೆಚ್ಚು ಮಾರಾಟವಾದ ಎರಡನೇ ಕಾರು ಸ್ಕಾರ್ಪಿಯೋ ಆಗಿದ್ದು, ಜುಲೈ ತಿಂಗಳಿನಲ್ಲಿ 3,135 ಯುನಿಟ್ ಗಳು ಮಾರಾಟವಾಗಿವೆ. 2019ರ ಜುಲೈ ತಿಂಗಳಿನಲ್ಲಿ 2,864 ಯುನಿಟ್ ಗಳು ಮಾರಾಟವಾಗಿದ್ದವು.

ಮಾದರಿ ಜುಲೈ 2020 ಜುಲೈ 2019 ಪ್ರಗತಿ (%)
ಮಹೀಂದ್ರಾ ಬೊಲೆರೊ 4,360 4,446 -2
ಮಹೀಂದ್ರಾ ಸ್ಕಾರ್ಪಿಯೋ 3,135 2,846 9
ಮಹೀಂದ್ರಾ ಎಕ್ಸ್‌ಯುವಿ 300 2,519 4,464 -44
ಮಹೀಂದ್ರಾ ಎಕ್ಸ್‌ಯುವಿ 500 813 1,116 -27
ಮಹೀಂದ್ರಾ ಕೆಯುವಿ ಎನ್ಎಕ್ಸ್ ಟಿ 51 164 -69
ಮಹೀಂದ್ರಾ ವೆರಿಟೋ 6 21 -71
ಮಹೀಂದ್ರಾ ಮರಾಜೋ 20 956 -98
ಗಣನೀಯವಾಗಿ ಕುಸಿದ ಮಹೀಂದ್ರಾ ಕಂಪನಿಯ ಕಾರು ಮಾರಾಟ

ಈ ವರ್ಷ ಸ್ಕಾರ್ಪಿಯೋ ಮಾರಾಟವು ಸುಮಾರು 9%ನಷ್ಟು ಹೆಚ್ಚಾಗಿದೆ. 2019ರ ಫೆಬ್ರವರಿಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ಮಹೀಂದ್ರಾ ಎಕ್ಸ್‌ಯುವಿ 300 ಸಹ ಜನಪ್ರಿಯವಾಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಗಣನೀಯವಾಗಿ ಕುಸಿದ ಮಹೀಂದ್ರಾ ಕಂಪನಿಯ ಕಾರು ಮಾರಾಟ

2020ರ ಜುಲೈ ತಿಂಗಳಿನಲ್ಲಿ ಎಕ್ಸ್‌ಯುವಿ 300ನ 2,519 ಯುನಿಟ್‌ಗಳು ಮಾರಾಟವಾಗಿವೆ. 2019ರ ಜುಲೈ ತಿಂಗಳಿನಲ್ಲಿ 4,464 ಯುನಿಟ್‌ಗಳು ಮಾರಾಟವಾಗಿದ್ದವು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎಕ್ಸ್‌ಯುವಿ 300ನ ಮಾರಾಟವು 44%ನಷ್ಟು ಕುಸಿದಿದೆ.

ಗಣನೀಯವಾಗಿ ಕುಸಿದ ಮಹೀಂದ್ರಾ ಕಂಪನಿಯ ಕಾರು ಮಾರಾಟ

2020ರ ಜುಲೈ ತಿಂಗಳಿನಲ್ಲಿ ಮಹೀಂದ್ರಾ ಎಕ್ಸ್‌ಯುವಿ 500 ಕಾರಿನ ಒಟ್ಟು 813 ಯುನಿಟ್‌ಗಳು ಮಾರಾಟವಾಗಿವೆ. ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಈ ಕಾರಿನ 1,116 ಯುನಿಟ್‌ಗಳು ಮಾರಾಟವಾಗಿದ್ದವು. ಮಹೀಂದ್ರಾ ಎಕ್ಸ್‌ಯುವಿ 500 ಮಾರಾಟವು ಕಳೆದ ವರ್ಷದ ಜುಲೈ ತಿಂಗಳಿಗಿಂತ ಈ ವರ್ಷದ ಜುಲೈ ತಿಂಗಳಿನಲ್ಲಿ 27%ನಷ್ಟು ಕುಸಿದಿದೆ.

Most Read Articles

Kannada
English summary
Mahindra car sales declines in July 2020. Read in Kannada.
Story first published: Friday, August 7, 2020, 16:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X