ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಮಹೀಂದ್ರಾ ಸಂಸ್ಥೆಯು ಹೊಸ ವಾಹನ ಉತ್ಪಾದನೆ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳಿಂತೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಗಮನಸೆಳೆಯುತ್ತಿದೆ. ಇದಕ್ಕೆ ಸಾಕ್ಷಿಯಾಗಿದ್ದು ದೆಹಲಿ ನಡೆಯುತ್ತಿರುವ 2020ರ ಆಟೋ ಎಕ್ಸ್‌ಪೋ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಹೌದು, ಭವಿಷ್ಯದ ವಾಹನ ಮಾದರಿಗಳ ಉತ್ಪಾದನೆಯಲ್ಲಿ ಭಾರೀ ಬದಲಾವಣೆ ಪರಿಚಯಿಸುತ್ತಿರುವ ಮಹೀಂದ್ರಾ ಸಂಸ್ಥೆಯು ದೆಹಲಿ ಎಕ್ಸ್‌ಪೋದಲ್ಲಿ ಕಾರು ಖರೀದಿದಾರರ ಗಮನಸೆಳೆಯುತ್ತಿದ್ದು, ಸಾಮಾನ್ಯ ಕಾರುಗಳಿಂತಲೂ ಹೆಚ್ಚು ಎಲೆಕ್ಟ್ರಿಕ್ ಮಾದರಿಗಳನ್ನು ಮತ್ತು ವಿಶೇಷ ಕಾನ್ಸೆಪ್ಟ್ ಕಾರುಗಳನ್ನು ಪ್ರದರ್ಶನ ಮಾಡಿದೆ. ಹಾಗಾದ್ರೆ ಆಟೋ ಎಕ್ಸ್‌ಪೋ ಪ್ರದರ್ಶನಗೊಂಡ ಮಹೀಂದ್ರಾ ಹೊಸ ಕಾರುಗಳು ಯಾವವು ಮತ್ತು ಅವುಗಳ ವಿಶೇಷತೆ ಏನು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಕೆಯುವಿ100 ಎಲೆಕ್ಟ್ರಿಕ್

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಕೆಯುವಿ100 ಇವಿ ಆವೃತ್ತಿಯನ್ನು ಪ್ರದರ್ಶನಗೊಳಿಸಿದ್ದ ಮಹೀಂದ್ರಾ ಸಂಸ್ಥೆಯು ಇದೀಗ 2020ರ ಆಟೋ ಎಕ್ಸ್‌ಪೋ ಪ್ರದರ್ಶನಗೊಳಿಸಿವುದರ ಜೊತೆಗೆ ಅಧಿಕೃತವಾಗಿ ಖರೀದಿ ಪ್ರಕ್ರಿಯೆಗೂ ಚಾಲನೆ ನೀಡಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 8.25 ಲಕ್ಷ ಬೆಲೆ ಪಡೆದಿದೆ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಕೆಯುವಿ100 ಎಲೆಕ್ಟ್ರಿಕ್ ಕಾರು 54.4 ಬಿಎಚ್‌ಪಿ ಸಾಮಾರ್ಥ್ಯದ 40kW ಎಲೆಕ್ಟ್ರಿಕ್ ಮೋಟಾರ್ ಪಡೆದುಕೊಂಡಿದ್ದು, ಮುಂಭಾಗದ ಚಕ್ರಗಳಿಗೆ ಶಕ್ತಿ ಪೂರೈಸುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 150 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಇದು ನಗರಪ್ರದೇಶದಲ್ಲಿನ ಸಂಚಾರಕ್ಕೆ ಅತ್ಯುತ್ತಮ ಆಯ್ಕೆಯಾಗಿದ್ದು, ಸಾಮಾನ್ಯ ಚಾರ್ಜಿಂಗ್ ಪಾಯಿಂಟ್ ಮೂಲಕ ಪೂರ್ಣಪ್ರಮಾಣದ ಚಾರ್ಜಿಂಗ್ ಮಾಡಲು 5 ಗಂಟೆ 45 ನಿಮಿಷ ತೆಗೆದುಕೊಳ್ಳುತ್ತದೆ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಎಕ್ಸ್‌ಯುವಿ300 ಎಲೆಕ್ಟ್ರಿಕ್

ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ಸದ್ಯ ಉತ್ತಮ ಬೇಡಿಕೆ ಹೊಂದಿರುವ ಎಕ್ಸ್‌ಯುವಿ300 ಮಾದರಿಯ ಎಲೆಕ್ಟ್ರಿಕ್ ವರ್ಷನ್ ಅನಾವರಣಗೊಳಿಸಿರುವ ಮಹೀಂದ್ರಾ ಸಂಸ್ಥೆಯು ಟಾಟಾ ನೆಕ್ಸಾನ್ ಇವಿ ಕಾರಿಗೆ ಪೈಪೋಟಿ ನೀಡುವ ನೀಡಿದೆ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಹೊಸ ಕಾರಿನ ಪ್ರದರ್ಶನ ಹೊರತಾಗಿ ಯಾವುದೇ ಮಾಹಿತಿ ಹಂಚಿಕೊಳ್ಳದ್ದಿದ್ದರೂ ಇಎಕ್ಸ್‌ಯುವಿ300 ಆವೃತ್ತಿಯು ಕಳೆದ ತಿಂಗಳು ಬಿಡುಗಡೆಯಾಗಿರುವ ಟಾಟಾ ನೆಕ್ಸಾನ್ ಇವಿ ಕಾರಿಗೆ ಪೈಪೋಟಿಯಾಗಲಿದ್ದು, ಹೊಸ ಕಾರು ರೂ. 14 ಲಕ್ಷದಿಂದ ರೂ.18 ಲಕ್ಷ ಬೆಲೆ ಅಂತರದಲ್ಲಿ ಪ್ರತಿ ಚಾರ್ಜ್‌ಗೆ 320ಕಿ.ಮೀ ನಿಂದ 350 ಕಿ.ಮೀ ಮೈಲೇಜ್ ಹಿಂದಿರುಗಿಸುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಫನ್‌ಸ್ಟರ್ ಕಾನ್ಸೆಪ್ಟ್

ಮಹೀಂದ್ರಾ ಸಂಸ್ಥೆಯು ಅನಾವರಣಗೊಳಿಸಿರುವ ಫನ್‌ಸ್ಟರ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು 59.1kWh ಬ್ಯಾಟರಿ ಪ್ಯಾಕ್ ಜೋಡಿಸಿದ್ದು, ಪ್ರತಿ ಚಾರ್ಜ್‌ಗೆ ಈ ಕಾರು ಗರಿಷ್ಠ 520 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹಾಗೆಯೇ ಕೇವಲ 5 ಸೇಕೆಂಡುಗಳಲ್ಲಿ ಸೊನ್ನೆಯಿಂದ 100ಕಿ.ಮೀ ವೇಗ ಪಡೆದುಕೊಳ್ಳುವಂತಹ ಸಾಮಾರ್ಥ್ಯವನ್ನು ಸಹ ಹೊಂದಿದೆ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಈ ಮೂಲಕ ಎಲೆಕ್ಟ್ರಿಕ್ ಕಾರು ಮಾದರಿಗಳಲ್ಲೇ ವಿಶೇಷ ಎನ್ನಿಸಿದ್ದರೂ ಫನ್‌ಸ್ಟರ್ ಕಾರನ್ನು ಮಹೀಂದ್ರಾ ಸಂಸ್ಥೆಯು ಭವಿಷ್ಯದಲ್ಲಿ ಉತ್ಪಾದನೆ ಕೈಗೊಳ್ಳುವುದು ಅನುಮಾನ ಎನ್ನಲಾಗಿದ್ದು, ಕಾನ್ಸೆಪ್ಟ್ ಕಾರಿನ ಪ್ರಮುಖ ತಾಂತ್ರಿಕ ಅಂಶಗಳನ್ನು ಎರಡನೇ ತಲೆಮಾರಿನ ಎಕ್ಸ್‌ಯುವಿ500 ಮತ್ತು ಹೊಚ್ಚ ಹೊಸ ಎಕ್ಸ್‌ಯುವಿ500 ಎಲೆಕ್ಟ್ರಿಕ್ ಆವೃತ್ತಿಯ ಅಭಿವೃದ್ದಿಗಾಗಿ ಎರವಲು ಪಡೆದುಕೊಳ್ಳಬಹುದೆಂದು ನೀರಿಕ್ಷಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಎಕ್ಸ್‌ಯುವಿ300 ಪೆಟ್ರೋಲ್ ಟರ್ಬೋ

ಮಹೀಂದ್ರಾ ಸಂಸ್ಥೆಯು ಪರ್ಫಾಮೆನ್ಸ್ ಪ್ರಿಯರಿಗಾಗಿ ಎಕ್ಸ್‌ಯುವಿ300 ಪೆಟ್ರೋಲ್ ಮಾದರಿಯಲ್ಲಿ ಟರ್ಬೋ ಎಂಜಿನ್ ಪರಿಯಚಿಸುತ್ತಿದ್ದ, ಹೊಸ ಕಾರನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದೆ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಹೊಸ ಸ್ಪೋರ್ಟ್ಜ್ ಆವೃತ್ತಿಯಲ್ಲಿ 1.2-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದ್ದು, 130-ಬಿಎಚ್‌ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ಹೊಸ ಕಾರಿನಲ್ಲಿ ಸ್ಪೋರ್ಟಿ ಗ್ರಾಫಿಕ್ಸ್ ಮತ್ತು ಕಾರಿನ ಒಳಭಾಗದಲ್ಲಿ ರೆಡ್ ಲೈನ್‌ಗಳನ್ನು ಬಳಕೆ ಮಾಡಿರುವುದು ಆಕರ್ಷಣಿವಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಕಾರು ಖರೀದಿಗೆ ಲಭ್ಯವಿರಲಿದೆ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಅಟಾಮ್ ಕಾನ್ಸೆಪ್ಟ್

ವಿವಿಧ ಮಾದರಿಯ ಪ್ರಯಾಣಿಕ ಬಳಕೆಯ ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಿರುವ ಮಹೀಂದ್ರಾ ಸಂಸ್ಥೆಯು ಅಟಾಮ್ ಕಾನ್ಸೆಪ್ಟ್ ಮಾದರಿಯನ್ನು ಸಹ ಅನಾವರಣಗೊಳಿಸಿದೆ. ಇದು 4ಜಿ ಕೆನೆಕ್ವಿಟಿಯೊಂದಿಗೆ ಅತ್ಯುತ್ತಮ ಮೈಲೇಜ್ ಹೊಂದಿರುವ ಎಲೆಕ್ಟ್ರಿಕ್ ವಾಹನ ಮಾದರಿಯಾಗಿದ್ದು, ಭವಿಷ್ಯದಲ್ಲಿ ಈ ಕಾನ್ಸೆಪ್ಟ್ ವಾಹನವು ಮೂರು ಚಕ್ರದ ಆಟೋ ರಿಕ್ಷಾಆವೃತ್ತಿಯಾಗಿ ಮಾರ್ಪಾಡುಗೊಳಿಸುವ ಸಾಧ್ಯತೆಗಳಿವೆ.

ಆಟೋ ಎಕ್ಸ್‌ಪೋ 2020: ಮಹೀಂದ್ರಾ ಅನಾವರಣಗೊಳಿಸಿದ ಹೊಸ ಕಾರುಗಳ ಸ್ಪೆಷಲ್ ಏನು?

ಇದರೊಂದಿಗೆ ವಿವಿಧ ಮಾದರಿಯ ವಾಣಿಜ್ಯ ವಾಹನಗಳನ್ನು ಸಹ ಪ್ರದರ್ಶನಗೊಳಿಸಿರುವ ಮಹೀಂದ್ರಾ ಶೀಘ್ರದಲ್ಲೇ ಬಿಎಸ್-6 ಡೀಸೆಲ್ ಎಂಜಿನ್ ವಾಹನ ಮಾರಾಟಕ್ಕೆ ಚಾಲನೆ ನೀಡುವುದಾಗಿ ಹೇಳಿಕೊಂಡಿದ್ದು, ಎಪ್ರಿಲ್ 1ರಿಂದ ಹೊಸ ಎಮಿಷನ್ ನಿಯಮವು ಕಡ್ಡಾಯವಾಗಿ ಜಾರಗೆ ಬರುತ್ತಿದೆ.

Most Read Articles

Kannada
English summary
Mahindra Cars Revealed at auto expo 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X