ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಅಂಡ್ ಮಹೀಂದ್ರಾ ಲಿಮಿಟೆಡ್ ಕಂಪನಿಯು ತನ್ನ ಜನಪ್ರಿಯ ಬಿ‍ಎಸ್-4 ಮಾದರಿಗಳಿಗೆ ಭರ್ಜರಿ ಆಫರ್ ಅನ್ನು ಘೋಷಿಸಿದೆ. ಮಹೀಂದ್ರಾ ಕಂಪನಿಯು ತನ್ನ ಬಿಎಸ್-4 ಕಾರುಗಳಿಗೆ ಮಾತ್ರ ರಿಯಾಯಿತಿಯನ್ನು ನೀಡಿದೆ.

ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಕಂಪನಿಯು ತನ್ನ ಸರಣಿಯಲ್ಲಿರುವ ಜನಪ್ರಿಯ ಕಾರುಗಳಾದ ಕೆ‍ಯುವಿ100, ಟಿ‍ಯುವಿ300, ಬೊಲೆರೊ ಪವರ್ ಪ್ಲಸ್, ಥಾರ್ ಮತ್ತು ಸ್ಕಾರ್ಪಿಯೋ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. ಆದರೆ ಈ ರಿಯಾಯಿತಿಗಳು ಡೀಲರ್‍‍ಗಳ ಮೇಲೆ ಅವಲಂಬಿಸಿದೆ. ಡೀಲರ್‍‍‍ಗಳಿಂದ ಡೀಲರ್‍‍ಗಳಿಗೆ ಭಿನ್ನವಾದ ರಿಯಾಯಿತಿಗಳಿರುತ್ತದೆ. ಮಹೀಂದ್ರಾ ಬಿಎಸ್-4 ಕಾರುಗಳ ಮೇಲೆ ಇರುವ ರಿಯಾಯಿತಿಗಳ ಮಾಹಿತಿ ಇಲ್ಲಿವೆ.

ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಕೆಯುವಿ100

ಮಹೀಂದ್ರಾ ಕೆಯುವಿ100 ಕಾರಿನ ರೂಪಾಂತರಗಳ ಮೇಲೆ ರಿಯಾಯಿತಿಯನ್ನು ಘೋಷಿಸಲಾಗಿದೆ. ಮಹೀಂದ್ರಾ ಕೆಯುವಿ100 ಕಾರಿನ ಬೇಸ್ ಸ್ಪೆಕ್‍ ಆದ ಕೆ2 ರೂಪಾಂತರಕ್ಕೆ ರೂ.17 ಸಾವಿರಗಳವರೆಗೆ ರಿಯಾಯಿತಿ ನೀಡದರೆ, ಕೆ4 ರೂಪಾಂತರಕ್ಕೆ ರೂ.23 ಸಾವಿರ, ಕೆ6 ಮತ್ತು ಟಾಪ್ ಸ್ಪೆಕ್ ಕೆ8 ರೂಪಾಂತರಕ್ಕೆ ರೂ.38 ಸಾವಿರದವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಟಿ‍‍ಯುವಿ 300

ಟಿ‍‍ಯುವಿ 300 ಕಾರಿಗೆ ಭರ್ಜರಿ ರಿಯಾಯಿತಿಯನ್ನು ಮಹೀಂದ್ರಾ ಕಂಪನಿಯು ಘೋಷಿಸಿದೆ. ಕೆಯುವಿ300 ಟಿ4 ಮತ್ತು ಟಿ6 ರೂಪಾಂತರಗಳಿಗೆ ರೂ.56,000 ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಇದರೊಂದಿಗೆ ಟಿಯುವಿ300 ಟಾಪ್ ಸ್ಪೆಕ್ ಟಿ10 ರೂಪಾಂತರಕ್ಕೆ ರೂ.38,000ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಬೊಲೆರೊ ಪವರ್ ಪ್ಲಸ್

ಮಹೀಂದ್ರಾ ಬೊಲೆರೊ ಪವರ್ ಪ್ಲಸ್ ಕೂಡ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಮಹೀಂದ್ರಾ ಕಂಪನಿಯ ಸರಣಿಯಲ್ಲಿ ಬೊಲೆರೊ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಮಹೀಂದ್ರಾ ಬೊಲೆರೊ ಪ್ಲಸ್‍ಗೆ ರೂ.6 ಸಾವಿರಗಳವರೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ.

ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಬೊಲೆರೊ ಪವರ್ ಪ್ಲಸ್ 1.5 ಲೀಟರ್ ಎಮ್ಹಾಕ್ ಡಿ 70 ಡೀಸೆಲ್ ಎಂಜಿನ್ ಹೊಂದಿದೆ. ಈ ಎಂಜಿನ್ 3600 ಆರ್‍‍ಪಿಎಂನಲ್ಲಿ 70 ಬಿಎಚ್‍ಪಿ ಮತ್ತು 1400-2200 ಆರ್‍‍ಪಿಎಂನಲ್ಲಿ 195 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿ‍ನ್‍‍ನೊಂದಿಗೆ ಸ್ಟ್ಯಾಡಂರ್ಡ್ 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಿದ್ದಾರೆ.

ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಥಾರ್

ಐಕಾನಿಕ್ ಆಫ್-ರೋಡರ್ ಥಾರ್ ಅನ್ನು ಬಿಎಸ್-6 ಆವೃತ್ತಿಯಲ್ಲಿ ಈ ವರ್ಷದ ಮಧ್ಯದಲ್ಲಿ ಬಿಡುಗಡೆಗೊಳಿಸುವುದಾಗಿ ಮಹೀಂದ್ರಾ ಕಂಪನಿಯು ಖಚಿತಪಡಿಸಿದೆ. ಇದೀಗ ಮಹೀಂದ್ರಾ ಕಂಪನಿಯು ಬಿಎಸ್-4 ಥಾರ್‍‍ಗೆ ರೂ.30 ಸಾವಿರಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಬಿಎಸ್-4 ಥಾರ್ ಸ್2.5 ಲೀಟರ್ ಡೀಸೆಲ್ ಬಿಎಸ್ 4 ಎಂಜಿನ್‌ ಹೊಂದಿದೆ. ಈ ಎಂಜಿನ್ 105 ಬಿ‍‍ಹೆಚ್‌ಪಿ ಪವರ್ ಹಾಗೂ 247 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಬಿಎಸ್-4 ಮಹೀಂದ್ರಾ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಮಹೀಂದ್ರಾ ಸ್ಕಾರ್ಪಿಯೋ

ಮಹೀಂದ್ರಾ ಸ್ಕಾರ್ಪಿಯೋ ಕಾರಿಗೆ ರೂ.20,00ಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಮಹೀಂದ್ರಾ ಕಂಪನಿಯು ತಮ್ಮ ಬಳಿ ಇರುವ ಬಿಎಸ್-4 ಸ್ಟಾಕ್ ಗಳನ್ನು ಮಾರಾಟ ಮಾಡಲು ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ.

Most Read Articles

Kannada
English summary
Mahindra Giving Discount on BS4 Cars. Read in Kannada.
Story first published: Sunday, March 8, 2020, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X