ಕೋವಿಡ್ 19: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಮಹೀಂದ್ರಾ ಕಂಪನಿಯು ಈಗಾಗಲೇ ಅಗ್ಗದ ಬೆಲೆಯ ವೆಂಟಿಲೆಟರ್‌ಗಳನ್ನು ಉತ್ಪಾದನೆ ಮಾಡುವ ಮೂಲಕ ವೈರಸ್ ವಿರುದ್ಧ ಹೋರಾಟಕ್ಕೆ ಬಹುದೊಡ್ಡ ಶಕ್ತಿ ತುಂಬಿದ್ದು, ಇದೀಗ ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪ್ರಾಣರಕ್ಷಣೆಗಾಗಿ ಹೊಸ ಮಾದರಿಯ ಉಪಕರಣವೊಂದನ್ನು ಸಿದ್ದಪಡಿಸಿದೆ.

ಕೋವಿಡ್ 19: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಮಹಾಮಾರಿ ಕರೋನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ಈಗಾಗಲೇ ಹಲವು ಆಟೋ ಉತ್ಪಾದನಾ ಕಂಪನಿಗಳು ತಮ್ಮದೆ ಆದ ರೀತಿಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ನೆರವು ನೀಡುತ್ತಿದ್ದು, ಮಹೀಂದ್ರಾ ಕಂಪನಿಯು ಸಹ ದೇಣಿಗೆ ಮಾತ್ರವಲ್ಲದೆ ವೈರಸ್ ಹರಡುವಿಕೆ ತಡೆಗಟ್ಟಲು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ವೈರಸ್ ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ತುಂಬುತ್ತಿದೆ.

ಕೋವಿಡ್ 19: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಮಹೀಂದ್ರಾ ಕಂಪನಿಯು ಕರೋನಾ ವೈರಸ್ ವಿರುದ್ಧ ಹೋರಾಟಕ್ಕೆ ಅಗತ್ಯವಿರುವ ಹ್ಯಾಂಡ್ ಸ್ಯಾನಿಟೈಜರ್ ಉತ್ಪನ್ನದಿಂದ ವೆಂಟಿಲೆಟರ್ ತನಕವು ಎಲ್ಲಾ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಸಿದ್ದಪಡಿಸಿ ವಿತರಣೆ ಮಾಡಿದ್ದು, ಇಂದು ಬರೋಬ್ಬರಿ 80 ಸಾವಿರ ಫೇಸ್ ಶೀಲ್ಡ್‌ಗಳನ್ನು ಸಹ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದೆ.

ಕೋವಿಡ್ 19: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಇದರ ಜೊತೆಗೆ ಮತ್ತೊಂದು ಸಿಹಿಸುದ್ದಿ ನೀಡಿರುವ ಮಹೀಂದ್ರಾ ಕಂಪನಿಯು ಇದೇ ಮೊದಲ ಬಾರಿಗೆ ಕರೋನಾ ವೈರಸ್ ಸೋಂಕು ಪಿಡಿತರ ಪ್ರಾಣ ಉಳಿಸಲು ಹಗಲು-ರಾತ್ರಿ ಶ್ರಮಿಸುತ್ತಿರುವ ವೈದ್ಯರ ಜೀವ ಹಾನಿ ತಡೆಯುವುದಕ್ಕೆ ಹೊಸ ತಂತ್ರಜ್ಞಾನ ಪ್ರೇರಿತ ಉಪಕರಣವೊಂದನ್ನು ಸಿದ್ದಪಡಿಸಿದೆ.

MOST READ: ಲಾಕ್ ಡೌನ್ ವೇಳೆ ಜಾಲಿ ರೈಡ್ ಮಾಡುತ್ತಿದ್ದ ಬೈಕ್ ಸವಾರನಿಗೆ ಕೊನೆಗೆ ಶಾಕ್..!

ಕೋವಿಡ್ 19: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಉತ್ತರ ಅಮೆರಿಕದಲ್ಲಿರುವ ಮಹೀಂದ್ರಾ ಡೆಟ್ರಾಯಿಟ್ ಡಿಸೈನ್ ತಂಡವು ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಯಾವುದೇ ರೀತಿ ಸೋಂಕು ತಗುಲದಂತೆ ತಡೆಯಲು ಏರೋಸೊಲ್ ಬಾಕ್ಸ್ ಅನ್ನು ಸಿದ್ದಪಡಿಸಿ ಉತ್ಪಾದನೆಗೆ ಚಾಲನೆ ನೀಡಿದೆ.

ಕೋವಿಡ್ 19: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಭಾರತದಲ್ಲೂ ಶೀಘ್ರದಲ್ಲೇ ಏರೋಸೊಲ್ ಬಾಕ್ಸ್ ಉತ್ಪಾದನೆಗೆ ಚಾಲನೆ ನೀಡುವುದಾಗಿ ಹೇಳಿಕೊಂಡಿರುವ ಮಹೀಂದ್ರಾ ಹಿರಿಯ ಅಧಿಕಾರಿಗಳು, ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡುವಾಗ ಯಾವುದೇ ರೀತಿಯ ವೈರಸ್ ವೈದ್ಯರಿಗೆ ಬಾರದಿರುವಂತೆ ತಡೆಯಲು ಇದು ಸಾಕಷ್ಟು ಸಹಕಾರಿಯಾಗಲಿದೆ ಎಂದಿದ್ದಾರೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಕೋವಿಡ್ 19: ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಈಗಾಗಲೇ ಹಲವಾರು ವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯು ಸೋಂಕು ಪಿಡಿತರಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಯಾವುದೋ ಒಂದು ಮಾರ್ಗದಿಂದ ಸೋಂಕು ತಗುಲಿದ ಹಲವು ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನಲೆಯಲ್ಲಿ ವೈದ್ಯರಿಗೆ ಶೇ.100ರಷ್ಟು ಸುರಕ್ಷೆ ನೀಡುವುದಕ್ಕಾಗಿ ಏರೋಸೊಲ್ ಬಾಕ್ಸ್‌ಗಳು ಸಾಕಷ್ಟು ಸಹಕಾರಿಯಾಗಲಿದೆ.

ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಇನ್ನು ವೈರಸ್ ತೀವ್ರತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಅನ್ನು ಇದೀಗ ಮತ್ತೆ ಮುಂದುವರಿಸಲಾಗಿದ್ದು, ಈ ವೇಳೆ ವಾಹನ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವ ಆಟೋ ಉತ್ಪಾದನಾ ಕಂಪನಿಗಳು ವೈದ್ಯಕೀಯ ಉಪಕರಣ ಉತ್ಪಾದನೆನೊಂದಿಗೆ ವೈರಸ್ ವಿರುದ್ಧದ ಹೋರಾಟಕ್ಕೆ ಸರ್ಕಾರದ ಜೊತೆ ಕೈಜೋಡಿಸಿವೆ.

MOST READ: ಕರೋನಾ ಕಾರಣಕ್ಕೆ ಕಾರಿನಲ್ಲೇ ತಂಗುತ್ತಿರುವ ವೈದ್ಯ..

ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ದೇಶದ ಪ್ರಮುಖ ಕಾರು ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಮಹೀಂದ್ರಾ ಕೂಡಾ ಇದೀಗ ಕಾರು ಉತ್ಪಾದನೆ ಸ್ಥಗಿತಗೊಳಿಸಿದ್ದು, ಈ ಹಿನ್ನಲೆಯಲ್ಲಿ ಹೊಸ ಮಾದರಿಯ ಅಗ್ಗದ ವೆಂಟಿಲೆಟರ್ ಸೇರಿದಂತೆ ವಿವಿಧ ಮಾದರಿಯ ವೈದ್ಯಕೀಯ ಉಪಕರಣಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದೆ.

ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಕಳೆದ ತಿಂಗಳ ಕೊನೆಯಲ್ಲಿ ಮೂರು ವಿವಿಧ ಮಾದರಿಯ ಫೋಟೋಟೈಪ್ ವೆಂಟಿಲೆಟರ್‌ಗಳನ್ನು ಸಿದ್ದಪಡಿಸಿ ಪ್ರದರ್ಶನ ಮಾಡಿದ್ದ ಮಹೀಂದ್ರಾ ಕಂಪನಿಯು ಇದೀಗ ಒಂದು ಫೋಟೋಟೈಪ್ ಮಾದರಿಯನ್ನು ಅಂತಿಮಗೊಳಿಸಿ ಉತ್ಪಾದನೆಗೆ ಚಾಲನೆ ನೀಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಹೊಸ ಮಾದರಿಯ ವೆಂಟಿಲೆಟರ್ ಸಾಧನಕ್ಕೆ ಏರ್ 100 ಎಂದು ಹೆಸರಿಸಿರುವ ಮಹೀಂದ್ರಾ ಕಂಪನಿಯು ಹೊಸ ಸಾಧನದ ಉತ್ಪಾದನೆಗೂ ಅನುಮೊದನೆ ಪಡೆದುಕೊಂಡಿದ್ದು, ಶೀಘ್ರದಲ್ಲೇ ಬೇಡಿಕೆ ಆಧಾರದ ಉತ್ಪಾದನೆಯನ್ನು ತೀವ್ರಗೊಳಿಸಲಿದೆ.

ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಅತಿ ಕಡಿಮೆ ಬೆಲೆಗೆ ಏರ್ 100 ವೆಂಟಿಲೆಟರ್

ಹೌದು, ಸಾಮಾನ್ಯವಾಗಿ ಒಂದು ಸಾಮಾನ್ಯ ವೆಂಟಿಲೆಟರ್ ಬೆಲೆಯು ಪ್ರಸ್ತುತ ಮಾರುಕಟ್ಟೆಯಲ್ಲಿ ತಂತ್ರಜ್ಞಾನಕ್ಕೆ ಅನುಗುಣವಾಗಿ ರೂ. 3 ಲಕ್ಷದಿಂದ ರೂ. 7 ಲಕ್ಷ ಬೆಲೆ ಹೊಂದಿದ್ದು, ಮಹೀಂದ್ರಾ ಕಂಪನಿಯು ಹೊಸ ಏರ್ 100 ವೆಂಟಿಲೆಟರ್ ಸಾಧನವನ್ನು ಕೇವಲ ರೂ.7,500ಕ್ಕೆ ಒದಗಿಸಲಿದೆ.

ವೈದ್ಯರ ನೆರವಿಗೆ ಬರಲಿದೆ ಮಹೀಂದ್ರಾ ನಿರ್ಮಾಣದ ವಿಶೇಷ ಏರೋಸೊಲ್ ಬಾಕ್ಸ್

ಮಹೀಂದ್ರಾ ಉತ್ಪಾದನೆ ಮಾಡಿರುವ ವೆಂಟಿಲೆಟರ್‌ಗಳು ಗಾತ್ರದಲ್ಲಿ ದೀರ್ಘ ಬಾಳಕೆಯ ವೆಂಟಿಲೆಟರ್‌ಗಳಿಂತಲೂ ತುಸು ಕಡಿಮೆ ಸಾಮಾರ್ಥ್ಯವನ್ನು ಹೊಂದಿರಲಿದ್ದು, ತುರ್ತು ಸಂದರ್ಭದಲ್ಲಿ ಇವುಗಳು ಸಾಕಷ್ಟು ಅನುಕೂಲಕರವಾಗಲಿವೆ.

Most Read Articles

Kannada
English summary
Mahindra Equips Medical Personnel With Game Changing Gear To Fight Coronavirus. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X