ಮಹೀಂದ್ರಾ ಫಸ್ಟ್ ಚಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

ಪ್ರಸ್ತುತ ಮಾರುಕಟ್ಟೆಯಲ್ಲಿ ಹೊಸ ವಾಹನಗಳ ಜೊತೆಗೆ ಬಳಕೆ ಮಾಡಿದ ವಾಹನಗಳ ಮರುಮಾರಾಟ ಮತ್ತು ಖರೀದಿ ಪ್ರಕ್ರಿಯೆ ಸಹ ಜೋರಾಗಿದ್ದು, ಹೊಸ ಉದ್ಯಮ ವ್ಯವಹಾರದಲ್ಲಿ ಮಹೀಂದ್ರಾ ಒಡೆತನದ ಮಹೀಂದ್ರಾ ಫಸ್ಟ್ ಚಾಯ್ಸ್ ಭಾರೀ ಜನಪ್ರಿಯತೆ ಗಳಿಸುತ್ತಿದೆ.

ಮಹೀಂದ್ರಾ ಫಸ್ಟ್ ಛಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

ಲಾಕ್‌ಡೌನ್ ಸಂದರ್ಭದಲ್ಲಿ ಆರಂಭಗೊಂಡಿದ್ದ ಮಹೀಂದ್ರಾ ಫಸ್ಟ್ ಚಾಯ್ಸ್ ಮಲ್ಟಿ ಬ್ರಾಂಡ್ ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳು ಇದೀಗ ಬೇಡಿಕೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಿಗೆ ವಿಸ್ತರಣೆಗೊಳ್ಳುತ್ತಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಹೊಸ ಕಾರುಗಳ ಮಾದರಿಯಲ್ಲೇ ಹಲವಾರು ಆಫರ್ ನೀಡುತ್ತಿರುವುದಲ್ಲದೆ ಗರಿಷ್ಠ ವಾರಂಟಿ ರೋಡ್ ಸೈಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಮಹೀಂದ್ರಾ ಫಸ್ಟ್ ಛಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

ಹೊಸ ವಾಹನ ಖರೀದಿ ಪ್ರಕ್ರಿಯೆಯಲ್ಲಿ ಭಾರೀ ಹೆಚ್ಚಳವಾಗಿರುವ ಹಿನ್ನಲೆ ಎಕ್ಸ್‌ಚೆಂಜ್ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಮಹೀಂದ್ರಾ ಕಂಪನಿಯು ತನ್ನ ಫಸ್ಟ್ ಛಾಯ್ಸ್ ಮಾರಾಟ ಮಳಿಗೆಗಳ ಮೂಲಕ ಹೆಚ್ಚುವರಿ ವಾರಂಟಿಗಳೊಂದಿಗೆ ಮರುಮಾರಾಟ ಮಾಡುತ್ತಿದೆ.

ಮಹೀಂದ್ರಾ ಫಸ್ಟ್ ಛಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

ವಾಹನಗಳ ಮರುಮಾರಾಟದ ನಂತರ ಗ್ರಾಹಕರಿಗೆ ಗುಣಮಟ್ಟದ ಗ್ರಾಹಕರ ಸೇವೆಗಳನ್ನು ಒದಗಿಸುತ್ತಿರುವ ಮಹೀಂದ್ರಾ ಕಂಪನಿಯು ಗ್ರಾಹಕರ ಸೇವೆಗಳನ್ನು ಸಹ ಅತ್ಯುತ್ತಮವಾಗಿ ನಿರ್ವಹಿಸುತ್ತಿದೆ. ಗ್ರಾಹಕರ ಸೇವೆಗಳನ್ನು ಮತ್ತಷ್ಟು ಸರಳಗೊಳಿಸಲು ಮುಂದಾಗಿರುವ ಮಹೀಂದ್ರಾ ಫಸ್ಟ್ ಚಾಯ್ಸ್ ವಿಭಾಗವು ಇದೀಗ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್ ವಹಿಸಿಕೊಡಲಾಗಿದೆ.

ಮಹೀಂದ್ರಾ ಫಸ್ಟ್ ಛಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

ಮಲ್ಟಿ ಬ್ರಾಂಡ್ ಸರ್ವಿಸ್‌ನಲ್ಲಿ ಭಾರೀ ಬೇಡಿಕೆ ಹೊಂದಿರುವ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್ ಕಂಪನಿಯು ಇದೀಗ ಮಹೀಂದ್ರಾ ಫಸ್ಟ್ ಚಾಯ್ಸ್ ವಾಹನಗಳಿಗೂ ಅಧಿಕೃತ ಸೇವೆಗಳನ್ನು ಒದಗಿಸಲಿದ್ದು, ಈ ಮೂಲಕ ಸೆಕೆಂಡ್ ವಾಹನಗಳಿಗೂ ಅತ್ಯುತ್ತಮ ಗ್ರಾಹಕ ಸೇವೆಗಳನ್ನು ಖಾತ್ರಿಪಡಿಸುತ್ತದೆ. ಡಿಜಿಟಲ್ ಪ್ಲ್ಯಾಟ್‌ಫಾಮರ್ಮ್ ಹಲವಾರು ಗ್ರಾಹಕ ಸೇವೆಗಳನ್ನು ಒದಗಿಸುವ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್ ವಿಭಾಗದ ದೇಶದ ಪ್ರಮುಖ ನಗರಗಳಲ್ಲಿ ಸರ್ವಿಸ್ ಸೆಂಟರ್‌ಗಳನ್ನು ಹೊಂದಿದ್ದು, ಮಹೀಂದ್ರಾ ಫಸ್ಟ್ ಚಾಯ್ಸ್ ವಾಹನ ಮಾರಾಟಕ್ಕೆ ಇದು ಪೂರಕವಾಗಲಿದೆ.

ಮಹೀಂದ್ರಾ ಫಸ್ಟ್ ಛಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

ಇನ್ನು ಅಸಂಘಟಿತವಾಗಿ ಕಾರ್ಯನಿರ್ವಹಿಸುತ್ತಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟವನ್ನು ವ್ಯವಸ್ಥಿತವಾಗಿ ಮಾರಾಟಗೊಳಿಸುವ ಗುರಿ ಯೋಜನೆ ಹೊಂದಿರುವ ಮಹೀಂದ್ರಾ ಕಂಪನಿಯು ದೇಶದ ಪ್ರಮುಖ ನಗರಗಳಲ್ಲಿ ಮಹೀಂದ್ರಾ ಫಸ್ಟ್ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಗಳನ್ನು ವಿಸ್ತರಿಸುತ್ತಿದೆ.

ಮಹೀಂದ್ರಾ ಫಸ್ಟ್ ಛಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

ಅಸಂಘಟಿತವಾಗಿರುವ ಸ್ಥಳೀಯ ವ್ಯಾಪಾರಿಗಳ ಬಳಿ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯು ಕೆಲವು ಸಂದರ್ಭಗಳಲ್ಲಿ ಲಾಭಕ್ಕಿಂತ ಹೆಚ್ಚು ನಷ್ಟ ಅನುಭವಿಸಬೇಕಾದ ಸಂದರ್ಭಗಳು ಎದುರಾಗಬಹುದಾಗಿದ್ದು, ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳು ಗ್ರಾಹಕರ ಆಯ್ಕೆಗೆ ಉತ್ತಮ ಎನ್ನಬಹುದು.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮಹೀಂದ್ರಾ ಫಸ್ಟ್ ಛಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

ಜೊತೆಗೆ ಪ್ರಮಾಣೀಕೃತ ಸೆಕೆಂಡ್ ಹ್ಯಾಂಡ್ ವಾಹನಗಳ ಮಾರಾಟ ಮಳಿಗೆಗಳಲ್ಲಿ ಖರೀದಿಸುವ ವಾಹನಗಳಿಗೆ ಹೆಚ್ಚುವರಿಯಾಗಿ ವಾರಂಟಿ ಸಹ ದೊರೆಯಲಿದ್ದು, ಮೋಸ ವ್ಯವಹಾರಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

ಮಹೀಂದ್ರಾ ಫಸ್ಟ್ ಛಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

ಈ ನಿಟ್ಟಿನಲ್ಲಿ ಫಸ್ಟ್ ಚಾಯ್ಸ್ ಮಾರಾಟ ಮಳಿಗೆಗಳನ್ನು ಹೆಚ್ಚಿಸುತ್ತಿರುವ ಮಹೀಂದ್ರಾ ಕಂಪನಿಯು ಮುಂದಿನ 2 ವರ್ಷಗಳಲ್ಲಿ ಭಾರೀ ಪ್ರಮಾಣದ ವಹಿವಾಟು ನಡೆಸುವ ಯೋಜನೆಯಲ್ಲಿದ್ದು, ಸೆಕೆಂಡ್ ಹ್ಯಾಂಡ್ ವಾಹನಗಳಿಗೆ ಮಹಾನಗರಗಳಿಂತಲೂ ಹೆಚ್ಚು 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ಕಂಡುಬರುತ್ತಿದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಹೀಂದ್ರಾ ಫಸ್ಟ್ ಛಾಯ್ಸ್ ಜೊತೆಗೂಡಿದ ಟಿವಿಎಸ್ ಆಟೋಮೊಬೈಲ್ ಸಲ್ಯೂಷನ್

2ನೇ ಮತ್ತು 3ನೇ ದರ್ಜೆ ಮಾಹಾನಗರಗಳಲ್ಲಿ ದುಬಾರಿ ಬೆಲೆಯಲ್ಲಿ ವಾಹನಗಳಿಂತ ಕೈಗೆಟುಕುವ ಬೆಲೆಯಲ್ಲಿ ಉತ್ತಮ ನಿರ್ವಹಣೆಯಲ್ಲಿರುವ ಸೆಕೆಂಡ್ ಹ್ಯಾಂಡ್ ವಾಹನಗಳ ಮಾಲೀಕತ್ವಕ್ಕೆ ಮುಂದಾಗುತ್ತಿರುವುದೇ ಬಳಕೆ ಮಾಡಿದ ವಾಹನಗಳ ಉದ್ಯಮ ವ್ಯವಹಾರವು ದ್ವಿಗುಣಗೊಂಡಿದೆ.

Most Read Articles

Kannada
English summary
Mahindra First Choice Services Now A Subsidiary Of TVS Automobile Solutions. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X