ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ಸಹಭಾಗಿತ್ವದ ಆಧಾರದ ಮೇಲೆ ವಿನೂತನ ಮಾದರಿಯ ಹೊಸ ಎಸ್‌ಯುವಿ ಕಾರುಗಳ ಅಭಿವೃದ್ಧಿಗಾಗಿ ಸಹಭಾಗಿತ್ವದ ಯೋಜನೆಗೆ ಚಾಲನೆ ನೀಡಿದ್ದು, ಆಟೋ ದಿಗ್ಗಜ ಕಂಪನಿಗಳು ಹೊಸ ಕಾರುಗಳ ಅಭಿವೃದ್ದಿಗಾಗಿ ಒಂದಾಗಿರುವುದು ಹೊಸ ಸಂಚಲನಕ್ಕೆ ಕಾರಣವಾಗಿವೆ.

ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳು ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಹೊಸ ಹೊಸ ಯೋಜನೆಯನ್ನು ರೂಪಿಸುತ್ತಿದ್ದು, ಹೊಸ ಕಾರು ಉತ್ಪಾದನೆಗಾಗಿ ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳು ಒಂದಾಗಿರುವಂತೆ ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳು ಕೂಡಾ ಸಹಭಾಗಿತ್ವದ ಯೋಜನೆ ಅಡಿ ಕಾರು ಮಾರಾಟ ಮತ್ತು ಹೊಸ ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಕೈ ಜೋಡಿಸಿವೆ.

ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಕಂಪನಿಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಭವಿಷ್ಯದ ಯೋಜನೆಗಳಿಗಾಗಿ ಪರಸ್ಪರ ಕೈ ಜೋಡಿಸಿವೆ.

ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಸಹಕರಿಸುವ ಮೂಲಕ ಎಸ್‌ಯುವಿ ಕಾರುಗಳ ಮೇಲೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದ್ದು, ಗ್ರಾಹಕರ ಬೇಡಿಕೆಯೆಂತೆ ಒಟ್ಟು ಮೂರು ಹೊಸ ಕಾರುಗಳು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಬಿಡುಗಡೆಯಾಗಲಿವೆ.

ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

ಪ್ರಸ್ತುತ ಮಾರುಕಟ್ಟೆಯಲ್ಲಿ ರೂ.15 ಲಕ್ಷ ರೂ.19 ಲಕ್ಷ ಬೆಲೆ ಅಂತರದಲ್ಲಿ ಬಲಿಷ್ಠವಾದ ಸಿ-ಸೆಗ್ಮೆಂಟ್ ಎಸ್‌ಯುವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಮಹೀಂದ್ರಾ ಎಕ್ಸ್‌ಯುವಿ500, ಟಾಟಾ ಹ್ಯಾರಿಯರ್ ಮತ್ತು ಜೀಪ್ ಕಂಪಾಸ್ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಂಡಿರುವುದು ಫೋರ್ಡ್-ಮಹೀಂದ್ರಾ ಸಹಭಾಗಿತ್ವದ ಹೊಸ ಕಾರುಗಳಿಗೆ ಪ್ರಮುಖ ಪ್ರೇರಣೆಯಾಗಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

ಮಾಹಿತಿಗಳ ಪ್ರಕಾರ, ಮಹೀಂದ್ರಾ ಮತ್ತು ಫೋರ್ಡ್ ಕಂಪನಿಗಳ ಜಂಟಿ ಕಾರು ಆವೃತ್ತಿಗಳು 2021ರ ಆರಂಭದಲ್ಲಿ ಬಿಡುಗಡೆ ಮಾಡಲಿದ್ದು, ತದನಂತರ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 7 ವಿವಿಧ ನಮೂನೆಯ ಹೊಸ ಎಸ್‌ಯುವಿ, ಎಂಪಿವಿ ಮತ್ತು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಲಿವೆ.

ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಫೋರ್ಡ್ ಇಕೋಸ್ಪೋರ್ಟ್ ಆವೃತ್ತಿಗೆ ಮಹೀಂದ್ರಾ ಹೊಸ ಟರ್ಬೋ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲು ನಿರ್ಧರಿಸಿದ್ದು, ಬಿಎಸ್-6 ಜಾರಿಯಾಗಿರುವ ಹಿನ್ನಲೆಯಲ್ಲಿ ಇಕೋಸ್ಪೋರ್ಟ್‌ನಲ್ಲಿದ್ದ 1.0-ಲೀಟರ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಕೆಲವು ದಿನಗಳ ಹಿಂದಷ್ಟೇ ಸ್ಥಗಿತಗೊಳಿಸಲಾಗಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

1.0-ಲೀಟರ್ ಟರ್ಬೋ ಪೆಟ್ರೋಲ್ ಬದಲಾಗಿ ಮಹೀಂದ್ರಾ ಹೊಸದಾಗಿ ಅಭಿವೃದ್ದಿ ಪಡಿಸಿರುವ 1.2-ಲೀಟರ್ ಎಂಸ್ಟಾಲಿನ್ ಟರ್ಬೋ ಪೆಟ್ರೋಲ್ ಆವೃತ್ತಿಯನ್ನು ಇಕೋಸ್ಪೋರ್ಟ್‌ನಲ್ಲಿ ಪರಿಚಯಿಸಲು ನಿರ್ಧರಿಸಲಾಗಿದ್ದು, ಹೊಸ ಎಂಜಿನ್ ಮಾದರಿಯು 130-ಬಿಎಚ್‌ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

ಹೊಸ ಎಂಸ್ಟಾಲಿನ್ ಎಂಜಿನ್‌ನಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿರಲಿದ್ದು, ಇದು ಸ್ಥಗಿತಗೊಳಿಸಲಾಗಿರುವ 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚುವರಿಯಾಗಿ 5-ಬಿಎಚ್‌ಪಿ ಮತ್ತು 60-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಮೂರು ಹೊಸ ಮಾದರಿಯ ಎಸ್‌ಯುವಿ ಬಿಡುಗಡೆ ಮಾಡಲಿವೆ ಫೋರ್ಡ್ ಮತ್ತು ಮಹೀಂದ್ರಾ

ಎಂಸ್ಟಾಲಿನ್ ಎಂಜಿನ್ ಮಾದರಿಯನ್ನು ವಿಶೇಷವಾಗಿ ಎಕ್ಸ್‌ಯುವಿ300 ಸ್ಪೋರ್ಟ್ಜ್ ಕಾರು ಮಾದರಿಗಾಗಿ ಅಭಿವೃದ್ದಿಗೊಳಿಸಿರುವ ಮಹೀಂದ್ರಾ ಸಂಸ್ಥೆಯು ಅದೇ ಎಂಜಿನ್ ಅನ್ನು ಸಹಭಾಗಿತ್ವದಲ್ಲಿ ಅಭಿವೃದ್ದಿಗೊಳಿಸಲಾಗುವ ಇಕೋಸ್ಪೋರ್ಟ್ ಆವೃತ್ತಿಯಲ್ಲೂ ಜೋಡಣೆ ಮಾಡಲಿದೆ.

Most Read Articles

Kannada
English summary
Mahindra-Ford alliance Develop Three new SUV. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X