Just In
Don't Miss!
- News
ಕೇಂದ್ರ ಸರ್ಕಾರ ಎನ್ಐಎ ನೋಟಿಸ್ ಮೂಲಕ ಕಿರುಕುಳ ನೀಡುತ್ತಿದೆ:ರೈತರ ಆರೋಪ
- Movies
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- Finance
ಸಿಲಿಂಡರ್ ಬುಕ್ ಮಾಡಿದ ಎರಡು ಗಂಟೆಯೊಳಗೆ ಮನೆ ಬಾಗಿಲಿಗೆ ಡೆಲಿವರಿ
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಮಹೀಂದ್ರಾ ಮರಾಜೋ ಎಂಪಿವಿ
ಹೊಸ ಎಮಿಷನ್ ನಿಯಮ ಅನುಸಾರವಾಗಿ ಕಳೆದ ಏಪ್ರಿಲ್ ತಿಂಗಳಿನಲ್ಲಿಯೇ ಬಿಡುಗಡೆಯಾಗಬೇಕಿದ್ದ ಮಹೀಂದ್ರಾ ಬಿಎಸ್-6 ಮರಾಜೋ ಎಂಪಿವಿ ಕಾರು ಮಾದರಿಯು ಕರೋನಾ ವೈರಸ್ ಪರಿಣಾಮ ಇದೀಗ ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿದ್ದು, ಹೊಸ ಕಾರು ಇದೇ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗುವ ಸುಳಿವು ನೀಡಿದೆ.

ಲಾಕ್‌ಡೌನ್ ತೆರಲವುಗೊಂಡ ನಂತರ ಹೊಸ ಸುರಕ್ಷಾ ಮಾರ್ಗಸೂಚಿಯೊಂದಿಗೆ ಆಟೋ ಉದ್ಯಮ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಬಹುತೇಕ ಆಟೋ ಕಂಪನಿಗಳು ವಾಹನ ಮಾರಾಟ ಪ್ರಕ್ರಿಯೆ ಆರಂಭಿಸುವುದರ ಜೊತೆಗೆ ಹೊಸ ವಾಹನ ಬಿಡುಗಡೆ ಪ್ರಕ್ರಿಯೆಗೂ ಚಾಲನೆ ನೀಡಿವೆ. ಈ ಹಿನ್ನಲೆಯಲ್ಲಿ ಮಹೀಂದ್ರಾ ಕಂಪನಿಯು ಕೂಡಾ ತನ್ನ ಪ್ರಮುಖ ಎಂಪಿವಿ ಆವೃತ್ತಿಯಾದ ಮರಾಜೋ ಕಾರನ್ನು ಸಹ ಹೊಸ ಎಂಜಿನ್ ಆಯ್ಕೆಯೊಂದಿಗೆ ಇದೇ ತಿಂಗಳಾಂತ್ಯಕ್ಕೆ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಹೊಸ ಕಾರು ಬಿಡುಗಡೆಗೂ ಮುನ್ನ ಅಧಿಕೃತ ಡೀಲರ್ಸ್‌ಗಳಲ್ಲಿ ಮರಾಜೋ ಹೊಸ ಆವೃತ್ತಿಯನ್ನು ಸ್ಟಾಕ್ ಮಾಡುತ್ತಿರುವುದು ಕಂಡುಬಂದಿದ್ದು, ಹೊಸ ಕಾರಿನಲ್ಲಿ ಈ ಡೀಸೆಲ್ ಎಂಜಿನ್ ಜೊತೆಗೆ ಹೊಸದಾಗಿ ಪೆಟ್ರೋಲ್ ಮಾದರಿಯನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ.

ಬಿಎಸ್-4 ಮಾದರಿಯಲ್ಲಿ ಕೇವಲ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದ ಮರಾಜೋ ಕಾರು ಈ ಬಾರಿ ಉನ್ನತೀಕರಿಸಿದ ಡೀಸೆಲ್ ಎಂಜಿನ್ ಜೊತೆಗೆ ಹೊಚ್ಚಹೊಸ 1.5-ಲೀಟರ್ ಪೆಟ್ರೋಲ್ ಮಾದರಿಯನ್ನು ಪಡೆದುಕೊಳ್ಳುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಕಾರ್ಯಕ್ಷಮತೆ ಕುರಿತು ರೋಡ್ ಟೆಸ್ಟಿಂಗ್ ಪೂರ್ಣಗೊಳಿಸಲಾಗಿದೆ.

ಸಾಂಪ್ರಾದಾಯಿಕವಾಗಿ ಡೀಸೆಲ್ ಎಂಜಿನ್ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಸಂಸ್ಥೆಯು ಇದೇ ಮೊದಲ ಬಾರಿಗೆ ತನ್ನ ಪ್ರಮುಖ ಎಸ್‌ಯುವಿ ಮತ್ತು ಎಂಪಿವಿ ಕಾರುಗಳಲ್ಲಿ ಪೆಟ್ರೋಲ್ ಜೋಡಣೆಗೆ ಹೆಚ್ಚು ಆಸಕ್ತಿ ವಹಿಸಿದ್ದು, ಮಾರಾಜೋದಲ್ಲಿ ಮಾತ್ರವಲ್ಲ ಥಾರ್ ಸೇರಿದಂತೆ ವಿವಿಧ ಕಾರು ಮಾದರಿಗಳಲ್ಲಿ ಪೆಟ್ರೋಲ್ ಎಂಜಿನ್ ನೀಡುತ್ತಿದೆ.
MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಜೊತೆಗ ಹೊಸ ಎಮಿಷನ್ ನಿಯಮದಿಂದಾಗಿ ಮರಾಜೋ ಎಂಪಿವಿ ಕಾರಿನ ವೆರಿಯೆಂಟ್‌ಗಳಲ್ಲಿ ಕೆಲವು ಬದಲಾವಣೆ ತಂದಿರುವ ಮಹೀಂದ್ರಾ ಕಂಪನಿಯು ಟಾಪ್ ಎಂಡ್ ಮಾದರಿಯಾದ ಎಂ8 ವೆರಿಯೆಂಟ್ ಅನ್ನು 2020ರ ಆವೃತ್ತಿಯಲ್ಲಿ ಕೈಬಿಟ್ಟಿದ್ದು, ಎಂಜಿನ್ ಸಾಮರ್ಥ್ಯಕ್ಕೆ ಅನುಗುಣವಾಗಿ ಪರ್ಫಾಮೆನ್ಸ್‌ನಲ್ಲೂ ಕೆಲವು ಬದಲಾವಣೆಗಳನ್ನು ತರಲಾಗಿದೆ.

ಹೀಗಾಗಿ ಎರಡನೇ ಟಾಪ್ ಎಂಡ್ ಮಾದರಿಯಾಗಿದ್ದ ಎಂ6 ಆವೃತ್ತಿಯೇ ಇದೀಗ ಅಗ್ರಸ್ಥಾನದಲ್ಲಿ ಮಾರಾಟವಾಗಲಿದ್ದು, ಹೊಸ ಕಾರು ಬಿಎಸ್-6 ಎಂಜಿನ್‌ನೊಂದಿಗೆ ಮತ್ತಷ್ಟು ದುಬಾರಿಯಾಗಲಿದ್ದು, ಹೊಸ ಕಾರುಗಳಲ್ಲಿ ಮಾಲಿನ್ಯ ತಗ್ಗಿಸುವಿಕೆ ಮತ್ತು ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯು ಪ್ರಮುಖ ಆಕರ್ಷಣೆಯಾಗಲಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಹಾಗೆಯೇ ಹೊಸ ಎಂಜಿನ್ ನಂತರ ಶೇ.25ರಷ್ಟು ಮಾಲಿನ್ಯ ಹೊರಸೊಸುವಿಕೆಯ ಪ್ರಮಾಣವು ಕಡಿಮೆಯಾಗಿದ್ದಲ್ಲಿ ಶೇ.10ರಷ್ಟು ಮೈಲೇಜ್ ಪ್ರಮಾಣವು ಏರಿಕೆಯಾಗಲಿದೆ. ಮಾಲಿನ್ಯ ತಗ್ಗಿಸುವ ಉದ್ದೇಶದಿಂದಲೇ ಬಿಎಸ್-6 ನಿಯಮ ಜಾರಿಯಾಗಿರುವುದರಿಂದ ಹೊಸ ತಂತ್ರಜ್ಞಾನವು ತುಸು ದುಬಾರಿಯಾಗಿದೆ.