ಕರೋನಾ ಎಫೆಕ್ಟ್- ಕಾರುಗಳ ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ಕರೋನಾ ವೈರಸ್‌ನಿಂದಾಗಿ ಇಡೀ ವಿಶ್ವವೇ ಆತಂತದಲ್ಲಿ ದಿನದೂಡುವಂತಾಗಿದ್ದು, ವೈರಸ್ ಹರಡದಂತೆ ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ದಿನಬಳಕೆಯ ವಸ್ತುಗಳ ವ್ಯಾಪರ ವಹಿವಾಟು ಹೊರತುಪಡಿಸಿ ಇನ್ನುಳಿದ ಎಲ್ಲಾ ವಾಣಿಜ್ಯ ವ್ಯವಹಾರಗಳು ಸ್ಥಗಿತಗೊಂಡಿರುವುದು ದೇಶದ ಆರ್ಥಿಕತೆ ಮೇಲೆ ಭಾರೀ ಹೊಡೆತ ಬಿದ್ದಿದೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ವೈರಸ್ ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಅನಿವಾರ್ಯವಾಗಿ ಲಾಕ್ ಡೌನ್ ವಿಧಿಸಿದ್ದರಿಂದ ಕೈಗಾರಿಕೆ ವಲಯದಲ್ಲಿ ಉತ್ಪಾದನಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಟೋ ಕಂಪನಿಗಳು ಸಹ ಭಾರೀ ಪ್ರಮಾಣದ ನಷ್ಟ ಅನುಭವಿಸಿವೆ. ಅದರಲ್ಲೂ ಬ್ಯಾನ್ ಭೀತಿಯಲ್ಲಿದ್ದ ಬಿಎಸ್-4 ವಾಹನ ಮಾರಾಟಕ್ಕೆ ಹಲವು ಕಠಿಣ ಷರತ್ತುಗಳನ್ನು ವಿಧಿಸಲಾಗಿದ್ದು, ಹೊಸ ವಾಹನಗಳ ಉತ್ಪಾದನೆ ಕುಂಠಿತವಾಗಿರುವುದಲ್ಲದೆ ಹಳೆಯ ವಾಹನ ಮಾರಾಟದಲ್ಲೂ ನಷ್ಟ ಭೀತಿ ಎದುರಾಗಿದೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಲಾಕ್ ಡೌನ್‌ನಿಂದಾಗಿ ಮಾರ್ಚ್ ಅವಧಿಯಲ್ಲಿ ಶೇ. 88ರಷ್ಟು ಹೊಸ ವಾಹನಗಳ ಮಾರಾಟ ಕುಸಿತವನ್ನು ಕಂಡಿದ್ದು, ಪ್ಯಾಸೆಂಜರ್ ಮತ್ತು ವಾಣಿಜ್ಯ ವಾಹನಗಳ ಮಾರಾಟವು ಡಿಧೀರ್ ನೆಲಕಚ್ಚಿದೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ಇದರಲ್ಲದೇ ಬಿಎಸ್-4 ವಾಹನಗಳ ಸ್ಟಾಕ್ ಪ್ರಮಾಣವು ಮಹೀಂದ್ರಾ ಕಂಪನಿಗೆ ಭಾರೀ ಪ್ರಮಾಣದ ನಷ್ಟ ಉಂಟುಮಾಡಲಿದ್ದು, ಬಿಎಸ್-6 ಕಡ್ಡಾಯಕ್ಕೂ ಮುನ್ನ ಹಳೆಯ ವಾಹನಗಳ ಸ್ಟಾಕ್ ಪೂರ್ಣಗೊಳಿಸುವ ಯೋಜನೆಯಲ್ಲಿದ್ದ ಕಂಪನಿಯ ಯೋಜನೆಗೆ ಕರೋನಾ ವೈರಸ್ ಭಾರೀ ಹೊಡೆತ ಕೊಟ್ಟಿದೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ಭಾರತದಲ್ಲಿ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ 2018ರ ಅಕ್ಟೋಬರ್‌ನಲ್ಲಿ ಮಹತ್ವದ ಆದೇಶ ಹೊರಡಿಸಿದ್ದ ಸುಪ್ರೀಂಕೋರ್ಟ್ 2020ರ ಏಪ್ರಿಲ್ 1ರಿಂದ ಕಡ್ಡಾಯವಾಗಿ ಬಿಎಸ್-6 ನಿಯಮವನ್ನು ಜಾರಿಗೆ ತರುವಂತೆ ಆದೇಶ ನೀಡಿತ್ತು. ಸುಪ್ರೀಂ ಆದೇಶದಂತೆ ಇಂದಿನಿಂದ ಬಿಎಸ್-6 ವಾಹನಗಳ ಮಾರಾಟವು ಕಡ್ಡಾಯವಾಗಿದ್ದರೂ ಪರಿಸ್ಥಿತಿಗೆ ಅನುಗುಣವಾಗಿ ಇನ್ನು ಕೂಡಾ ಬಿಎಸ್-4 ವಾಹನಗಳವನ್ನು ಮುಂದಿನ ಕೆಲ ದಿನಗಳ ಕಾಲ ಮುಂದುವರಿಸಲಾಗಿದೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

2020ರ ಏಪ್ರಿಲ್ 1ರಿಂದಲೇ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಲಿಸಿದ್ದು, ಕರೋನಾ ವೈರಸ್ ತಡೆ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ಬಿಎಸ್-6 ಜಾರಿಗೆ ಮುನ್ನ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿತ್ತು. ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ಇದರಿಂದ ಆಟೋ ಕಂಪನಿಗಳಿಗೆ ವಿನಾಯ್ತಿಯೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿ ಮಾರಾಟಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ಬ್ಯಾನ್ ನಷ್ಟ ತಡೆಗೆ ಸಹಕರಿಸಿದೆ.ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಮಾರಾಟ ಅವಧಿಯನ್ನು ವಿಸ್ತರಣೆ ಮಾಡಿದೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ಏಪ್ರಿಲ್ 1ರಿಂದಲೇ ನಿಷೇಧಗೊಳ್ಳಬೇಕಿದ್ದ ಬಿಎಸ್-4 ವಾಹನಗಳ ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದ್ದು, ಪ್ರತಿ ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದಿದೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ಜೊತೆಗೆ ಬಿಎಸ್-4 ವಾಹನ ಮಾರಾಟ ಅವಧಿ ವಿಸ್ತರಣೆಯ ವಿನಾಯ್ತಿಯು ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಮಾಲಿನ್ಯ ತಡೆಯಲು ಹಳೆಯ ವಾಹನಗಳಿಗೆ ಕಡಿವಾಣ ಹಾಕುವುದೇ ಮುಖ್ಯ ಎಂದಿದೆ.

ಕರೋನಾ ವೈರಸ್ ಎಫೆಕ್ಟ್- ಕಾರು ಮಾರಾಟದಲ್ಲಿ ನೆಲಕಚ್ಚಿದ ಮಹೀಂದ್ರಾ

ಮಾಹಿತಿಗಳ ಪ್ರಕಾರ, ವಿವಿಧ ಆಟೋ ಕಂಪನಿಗಳ ಬಳಿ ಇನ್ನು ಸುಮಾರು 7 ಲಕ್ಷ ಬಿಎಸ್-4 ಎಂಜಿನ್ ಪ್ರೇರಿತ ವಾಹನಗಳ ಸ್ಟಾಕ್ ಇದ್ದು, ಇದು ರೂ.6,400 ಕೋಟಿ ಮೌಲ್ಯವನ್ನು ಹೊಂದಿದೆ.

Most Read Articles

Kannada
English summary
Mahindra March sales declined 88 percent details. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X