ಮಹೀಂದ್ರಾ ಹೊಸ ಆಫರ್- ಸದ್ಯಕ್ಕೆ ಕಾರು ಖರೀದಿಸಿ, 2021ಕ್ಕೆ ಇಎಂಐ ಪಾವತಿಸಿ...!

ಆಟೋ ಉದ್ಯಮ ಸೇರಿದಂತೆ ಎಲ್ಲಾ ವಲಯದಲ್ಲೂ ಕರೋನಾ ಮಹಾಮಾರಿಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದ್ದು, ವ್ಯಾಪಾರ ಅಭಿವೃದ್ದಿಯು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ. ಸದ್ಯಕ್ಕೆ ಆಟೋ ಉದ್ಯಮಕ್ಕೆ ಕೆಲವು ವಿನಾಯ್ತಿಗಳನ್ನು ನೀಡಲಾಗಿದ್ದರೂ ಕೂಡಾ ವಾಹನ ಖರೀದಿದಾರರು ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ.

ಮಹೀಂದ್ರಾ ಹೊಸ ಆಫರ್- ಸದ್ಯಕ್ಕೆ ಕಾರು ಖರೀದಿಸಿ, 2021ಕ್ಕೆ ಇಎಂಐ ಪಾವತಿಸಿ...!

ಲಾಕ್‌ಡೌನ್‌ನಿಂದ ಬಹುತೇಕ ವಾಣಿಜ್ಯ ಚಟುವಟಿಕೆಗಳು ನೆಲಕಚ್ಚಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಉದ್ಯೋಗದ ಅಭದ್ರತೆ ಇದೀಗ ಅತಿ ದೊಡ್ಡ ಸಮಸ್ಯೆಯಾಗಿ ಕಾಡತೋಡಗಿದೆ. ಹೀಗಿರುವಾಗ ಹೊಸ ವಾಹನಗಳ ಮಾರಾಟವನ್ನು ಸರಿದಾರಿಗೆ ತರಲು ಯತ್ನಿಸುತ್ತಿರುವ ಆಟೋ ಕಂಪನಿಯು ಕೆಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದು, ಹೊಸ ವಾಹನ ಖರೀದಿದಾರರಿಗೆ ಇಎಂಐ ತಗ್ಗಿಸಿ ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಮಹೀಂದ್ರಾ ಹೊಸ ಆಫರ್- ಸದ್ಯಕ್ಕೆ ಕಾರು ಖರೀದಿಸಿ, 2021ಕ್ಕೆ ಇಎಂಐ ಪಾವತಿಸಿ...!

ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಇದೀಗ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿದ್ದು, ಮಾರಾಟ ಮಳಿಗೆಗಳು ಪುನಾರಂಭಗೊಂಡ ನಂತರವೂ ವಾಹನ ಖರೀದಿ ಬದಲು ಬುಕ್ಕಿಂಗ್ ಹಣ ವಾಪಸ್ ನೀಡುವಂತೆ ಬೇಡಿಕೆಯಿಡುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

ಮಹೀಂದ್ರಾ ಹೊಸ ಆಫರ್- ಸದ್ಯಕ್ಕೆ ಕಾರು ಖರೀದಿಸಿ, 2021ಕ್ಕೆ ಇಎಂಐ ಪಾವತಿಸಿ...!

ಮಾರ್ಚ್ 15ರ ಮುನ್ನ ದೇಶಾದ್ಯಂತ ಹೊಸ ವಾಹನಗಳಿಗೆ ಬುಕ್ಕಿಂಗ್ ಮಾಡಿದ್ದ ಗ್ರಾಹಕರಲ್ಲಿ ಸುಮಾರು ಶೇ.60ರಿಂದ ಶೇ.70ರಷ್ಟು ಜನ ಹೊಸ ವಾಹನ ಖರೀದಿಯಿಂದ ಹಿಂದೆ ಸರಿದಿದ್ದು, ಉದ್ಯೋಗದ ಅಭದ್ರತೆ ಮತ್ತು ಆದಾಯಕ್ಕಿಂತ ಖರ್ಚು ಹೆಚ್ಚುತ್ತಿರುವುದು ಹೊಸ ವಾಹನಗಳ ಖರೀದಿಯ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಇಳಿಕೆಯಾಗಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಮಹೀಂದ್ರಾ ಹೊಸ ಆಫರ್- ಸದ್ಯಕ್ಕೆ ಕಾರು ಖರೀದಿಸಿ, 2021ಕ್ಕೆ ಇಎಂಐ ಪಾವತಿಸಿ...!

ಇದರಿಂದ ಗ್ರಾಹಕರನ್ನು ಸೆಳೆಯಲು ಆಟೋ ಕಂಪನಿಗಳು ಅತಿ ಸುಲಭವಾದ ಸಾಲಸೌಲಭ್ಯಗಳನ್ನು ನೀಡುತ್ತಿದ್ದು, ಮಹೀಂದ್ರಾ ಕೂಡಾ ತನ್ನ ಜನಪ್ರಿಯ ಎಸ್‌ಯುವಿ ಕಾರುಗಳ ಮೇಲೆ ವಿಶೇಷ ಆಫರ್‌ಗಳನ್ನು ನೀಡಿದೆ.

ಮಹೀಂದ್ರಾ ಹೊಸ ಆಫರ್- ಸದ್ಯಕ್ಕೆ ಕಾರು ಖರೀದಿಸಿ, 2021ಕ್ಕೆ ಇಎಂಐ ಪಾವತಿಸಿ...!

ಎಸ್‌ಯುವಿ ಕಾರುಗಳನ್ನು ಖರೀದಿಸುವ ಗ್ರಾಹಕರು ಸದ್ಯಕ್ಕೆ ಯಾವುದೇ ಹಣಪಾವತಿ ಮಾಡದೆ ಕಾರಿನ ಮಾಲೀಕತ್ವದ ಹೊಂದಬಹುದಾಗಿದ್ದು, 2021ರ ಜನವರಿಯಿಂದ ಇಎಂಐ ಅನ್ವಯವಾಗುವಂತೆ ಸಾಲ ಸೌಲಭ್ಯ ನೀಡಲಾಗುತ್ತಿದೆ.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಮಹೀಂದ್ರಾ ಹೊಸ ಆಫರ್- ಸದ್ಯಕ್ಕೆ ಕಾರು ಖರೀದಿಸಿ, 2021ಕ್ಕೆ ಇಎಂಐ ಪಾವತಿಸಿ...!

ವಾರ್ಷಿಕವಾಗಿ ರೂ.7.75 ರಷ್ಟು ಬಡ್ಡಿದರದಲ್ಲಿ ಸಾಲಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಪ್ರತಿ ಲಕ್ಷಕ್ಕೆ ರೂ.1,234 ಇಎಂಐ ನಿಗದಿಪಡಿಸಲಾಗಿದೆ. ಸಾಲ ಮರುಪಾವತಿಗಾಗಿ ಗರಿಷ್ಠ ಎಂಟು ವರ್ಷಗಳ ಕಾಲಾವಕಾಶ ನೀಡಲಾಗಿದ್ದು, ಶೇ.100ರಷ್ಟು ಆನ್ ರೋಡ್ ಸಾಲಸೌಲಭ್ಯ ದೊರೆಯುತ್ತದೆ.

ಮಹೀಂದ್ರಾ ಹೊಸ ಆಫರ್- ಸದ್ಯಕ್ಕೆ ಕಾರು ಖರೀದಿಸಿ, 2021ಕ್ಕೆ ಇಎಂಐ ಪಾವತಿಸಿ...!

ಹಾಗೆಯೇ ಸೀಮಿತ ಅವಧಿಗಾಗಿ ಕರೋನಾ ವಾರಿಯರ್ಸ್‌ಗೂ ವಿಶೇಷ ಆಫರ್‌ಗಳನ್ನು ಘೋಷಿಸಿರುವ ಮಹೀಂದ್ರಾ ಕಂಪನಿಯು ಕಾರು ಖರೀದಿ ಪ್ರಕ್ರಿಯೆ ಮೇಲಿನ ಶುಲ್ಕದಲ್ಲಿ ಶೇ.50ರಷ್ಟು ವಿನಾಯ್ತಿ, ಗರಿಷ್ಠ ಸಾಲ ಸೌಲಭ್ಯ ಮತ್ತು ಬಿಎಸ್-4 ಮಾದರಿಗೆ ಪಾವತಿ ಮಾಡಲಾಗುತ್ತಿದ್ದ ಇಎಂಐ ಲೆಕ್ಕಾಚಾರದಲ್ಲೇ ಬಿಸ್-6 ಮಾದರಿಯ ಖರೀದಿಗೂ ಅವಕಾಶ ನೀಡಲಾಗುತ್ತಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಮಹೀಂದ್ರಾ ಹೊಸ ಆಫರ್- ಸದ್ಯಕ್ಕೆ ಕಾರು ಖರೀದಿಸಿ, 2021ಕ್ಕೆ ಇಎಂಐ ಪಾವತಿಸಿ...!

ಮಹೀಂದ್ರಾ ನೀಡಿರುವ ಹೊಸ ಕಾರು ಖರೀದಿಯ ಆಫರ್‌ಗಳು 2020ರ ಜೂನ್ ಕೊನೆಯವರೆಗೂ ಲಭ್ಯವಿರಲಿದ್ದು, ಕುಸಿದಿರುವ ಕಾರು ಮಾರಾಟವನ್ನು ಸುಧಾರಣೆ ತರಲು ಕೆಲವು ಮಹತ್ವದ ನಿರ್ಧಾರಗಳು ಸದ್ಯ ಆಟೋ ಉದ್ಯಮಕ್ಕೆ ಅನಿವಾರ್ಯವಾಗಿ ಪರಿಣಮಿಸಿವೆ.

Most Read Articles

Kannada
English summary
Mahindra Introduces ‘Own Now, Pay In 2021’ Finance Scheme To Boost Vehicle Demand In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X