Just In
- 3 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 4 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 6 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 6 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಹಿರಂಗವಾಯ್ತು ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಮಾಹಿತಿ
ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಸ್ಕಾರ್ಪಿಯೋ ಎಸ್ಯುವಿಯನ್ನು ಬಿಡುಗಡೆಗೊಳಿಸದೆ. ಈ ಬಿಎಸ್-6 ಸ್ಕಾರ್ಪಿಯೋ ಎಸ್ಯುವಿಯ ಪ್ರಮುಖ ಮಾಹಿತಿಗಳು ಬಹಿರಂಗವಾಗಿದೆ.
ಮಹೀಂದ್ರಾ ಕಾರು ಉತ್ಪಾದನಾ ಕಂಪನಿಯು ಸದ್ಯ ಎಸ್ಯುವಿ ಸೆಗ್ಮೆಂಟಿನ ಮಾರಾಟದಲ್ಲಿ ಅಧಿಪತ್ಯ ಸಾಧಿಸುತ್ತಿದ್ದು, ಸ್ಕಾರ್ಪಿಯೋ, ಎಕ್ಸ್ಯುವಿ500 ಮತ್ತು ಥಾರ್ ಕಾರುಗಳ ಮೂಲಕ ಭಾರೀ ಜನಪ್ರಿಯತೆ ಗಳಿಸುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ತನ್ನ ಜನಪ್ರಿಯ ಎಸ್ಯುವಿಗಳಾದ ಸ್ಕಾರ್ಪಿಯೋ, ಎಕ್ಸ್ಯುವಿ500 ಮತ್ತು ಥಾರ್ ನ್ಯೂ ಜನರೇಷನ್ ಆವೃತ್ತಿಗಳನ್ನು ಮಹೀಂದ್ರಾ ಕಂಪನಿಯು ಮುಂಬರುವ ದಿನಗಳಲ್ಲಿ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಅಪ್ಗ್ರೇಡ್ ಮಾಡಿ ಬಿಡುಗಡೆಗೊಳಿಸಲಿದೆ.
ಮಹೀಂದ್ರಾ ಕಂಪನಿಯ ಸರಣಿಯ ಕಾರು ಮಾರಾಟದಲ್ಲಿ ಸ್ಕಾರ್ಪಿಯೋ ಎಸ್ಯುವಿಯ ಕೊಡುಗೆಯು ದೊಡ್ಡದು. 2002ರಲ್ಲಿ ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡುಗಡೆಗೊಳಿಸಿದ ನಂತರ ಎರಡು ಬಾರಿ ನವೀಕರಣಗೊಳಿಸಿದೆ. ಕಂಪನಿಯು ಸ್ಕಾರ್ಪಿಯೋ ಎಸ್ಯುವಿಯನ್ನು 2006ರಲ್ಲಿ ಮತ್ತು 2014ರಲ್ಲಿ ನವೀಕರಣಗೊಳಿಸಿತ್ತು.
ಮಹೀಂದ್ರಾ ಕಂಪನಿಯು ಬಿಎಸ್-6 ಸ್ಕಾರ್ಪಿಯೋ ಎಸ್ಯುವಿಯನ್ನು ಬಿಡುಗಡೆಗೊಳಿಸುವ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ ಈ ಎಸ್ಯುವಿಯ ಹಲವು ಮಾಹಿತಿಗಳು ಆನ್ಲೈನ್ನಲ್ಲಿ ಬಹಿರಂಗವಾಗಿದೆ.
ಬಹಿರಂಗವಾಗಿರುವ ಮಾಹಿತಿ ಪ್ರಕಾರಬಿಎಸ್-6 ಸ್ಕಾರ್ಪಿಯೋ ಎಸ್ಯುವಿಯು ಎಸ್5, ಎಸ್7, ಎಸ್9 ಮತ್ತು ಎಸ್11 ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಲಿದೆ.ಇದರಲ್ಲಿ ಎಸ್3 ರೂಪಾಂತರವು ಎಂಟ್ರಿ-ಲೆವೆಲ್ ಆದರೆ ಎಸ್11 ಟಾಪ್-ಎಂಡ್ ಎಡಬ್ಲ್ಯೂಡಿ ರೂಪಾಂತರವಾಗಿದೆ.
ಹೊಸ ಸ್ಕಾರ್ಪಿಯೋ 2.2 ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿರಲಿದೆ. ಹೊಸ ಸ್ಕಾರ್ಪಿಯೋದಲ್ಲಿ ಬಿಎಸ್-6 ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ನೊಂದಿಗೆ ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಅಳವಡಿಸಬಹುದು.
ಹೊಸ ಸ್ಕಾರ್ಪಿಯೊ ಇಂಟಿರಿಯರ್ನಲ್ಲಿ ಸೆಂಟರ್ ಕನ್ಸೋಲ್ ಮತ್ತು ಕಂಟ್ರೋಲ್ ಡಯಲ್ ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಯಲ್ಲಿದೆ. ಮೌಂಟಡ್ ಕಂಟ್ರೋಲ್ನೊಂದಿಗೆ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.
ಇದರೊಂದಿಗೆ 6 ಏರ್ಬ್ಯಾಗ್ಗಳು, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ರೇರ್ ಪಾರ್ಕಿಂಗ್ ಕ್ಯಾಮೆರಾ, ರೂಫ್ ರೈಲ್ಸ್, ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ಫಾಗ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಲೈಟ್, ಸಿಲ್ವರ್ ಸ್ಕೀಡ್ ಪ್ಲೇಟ್, ರೇರ್ ಎಸಿ ವೆಂಟ್ಸ್ ಗಳನ್ನು ಹೊಂದಿದೆ.
ಹೊಸ ಸ್ಕಾರ್ಪಿಯೋ ಇಂಟಿರಿಯರ್ನಲ್ಲಿ ಹೆಚ್ಚು ಪ್ರೀಮಿಯಂ ಲುಕ್ ಅನ್ನು ಹೊಂದಿದೆ. ಇಂಟಿರಿಯರ್ ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಹೈ ಎಂಡ್ ಆ್ಯಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಹೊಂದಿರುವ ದೊಡ್ದ ಟಚ್ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ.
ಹೊಸ ಸ್ಕಾರ್ಪಿಯೋದ ಇಂಟಿರಿಯರ್ನಲ್ಲಿ ಹೆಚ್ಚಿನ ಸ್ಪೇಸ್ ಅನ್ನು ನೀಡಲಾಗಿದೆ. ಇದರಿಂದಾಗಿ ಪ್ರಯಾಣಿಕರಿಕೆ ಆರಾಮದಾಯಕವಾಗಿ ಪ್ರಯಾಣಿಸಬಹುದು. ಬಿಎಸ್-6 ಮಹೀಂದ್ರಾ ಸ್ಕಾರ್ಪಿಯೋ ಎಸ್ಯುವಿಯು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ.