ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ಮಹೀಂದ್ರಾ ಕಂಪನಿಯು ತನ್ನ ಹೊಸ ತಲೆಮಾರಿನ ಥಾರ್ ಎಸ್‌ಯುವಿ ಕಾರು ಮಾದರಿಯ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಆಫ್ ರೋಡ್ ಎಸ್‌ಯುವಿ ಮಾದರಿಯ ಕಾರು ಮಾರಾಟದಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದೆ.

ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ಹೊಸ ಥಾರ್ ಕಾರು ಮಾದರಿಯು ಈ ಬಾರಿ ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎಎಕ್ಸ್ ಮತ್ತು ಎಲ್ಎಕ್ಸ್ ಎನ್ನುವ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದೆ. ಆರಂಭಿಕ ಆವೃತ್ತಿಯು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ. 11.90 ಲಕ್ಷದಿಂದ ಟಾಪ್ ಮಾದರಿಯು ರೂ. 12.95 ಲಕ್ಷ ಬೆಲೆ ಪಡೆದುಕೊಂಡಿದ್ದು, ಅತ್ಯುತ್ತಮ ಫೀಚರ್ಸ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದೆ.

ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ಆಸಕ್ತ ಗ್ರಾಹಕರು ಆಫ್ ರೋಡ್ ಎಸ್‌ಯುವಿ ಮಾದರಿಗಾಗಿ ಹೆಚ್ಚುವರಿ ಪ್ಯಾಕೇಜ್‌ನೊಂದಿಗೆ ಮತ್ತಷ್ಟು ಪ್ರೀಮಿಯಂ ಮತ್ತು ಸೆಫ್ಟಿ ಫೀಚರ್ಸ್‌ಗಳನ್ನು ಪಡೆದುಕೊಳ್ಳಬಹುದಾಗಿದ್ದು, ಮಹೀಂದ್ರಾ ಕಂಪನಿಯೇ ಆಫ್ಟರ್ ಮಾರ್ಕೆಟ್ ಆಕ್ಸೆಸರಿಸ್‌ಗಳನ್ನು ಜೋಡಣೆ ಮಾಡುತ್ತದೆ.

ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ಇದರೊಂದಿಗೆ ವಿವಿಧ ಮಾಡಿಫೈ ಕಂಪನಿಗಳು ಕೂಡಾ ಥಾರ್ ಗ್ರಾಹಕರು ಆಸಕ್ತಿಗೆ ಅನುಗುಣವಾಗಿ ವಿವಿಧ ಮಾದರಿಯ ಮಾಡಿಫೈ ಸೌಲಭ್ಯಗಳನ್ನು ಆಕರ್ಷಕ ಬೆಲೆಗಳೊಂದಿಗೆ ಮಾರಾಟ ಮಾಡುತ್ತಿದ್ದು, ವೆಲೊಸಿಟಿ ಟೈರ್ ಎನ್ನುವ ಮಾಡಿಫೈ ಕಂಪನಿಯು ಕೂಡಾ ಹೊಸ ಥಾರ್ ಕಾರು ಮಾದರಿಗಾಗಿ ಐಷಾರಾಮಿ ಮಾದರಿಯ 22 ಇಂಚಿನ ಅಯಾಲ್ ವೀಲ್ಹ್ ಸಿದ್ದಪಡಿಸಿದೆ.

ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ಮಹೀಂದ್ರಾ ಕಂಪನಿಯು ಸ್ಟ್ಯಾಂಡರ್ಡ್ ಆಗಿ 18-ಇಂಚಿನ ಅಲಾಯ್ ವೀಲ್ಹ್ ಜೊತೆಗೆ ಆಲ್ ಟೆರೆನ್ ಟೈರ್ಸ್ ನೀಡುತ್ತಿದ್ದು, ಎಂಜಿನ್ ಸಾಮಾರ್ಥ್ಯ ಮತ್ತು ಕಾರಿನ ಗಾತ್ರಕ್ಕೆ ಪೂರಕವಾಗಿ ಆಸಕ್ತ ಗ್ರಾಹಕರು ಮಾಡಿಫೈ ಚಕ್ರಗಳ ಜೊತೆಗೆ ಹಲವಾರು ತಾಂತ್ರಿಕ ಸೌಲಭ್ಯಗಳನ್ನು ಬದಲಾವಣೆ ಮಾಡಿಮಾಡುತ್ತಿದ್ದಾರೆ.

ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ಮಾಡಿಫೈ ವಾಹನ ಪಟ್ಟಿಯಲ್ಲಿ ಥಾರ್ ಕಾರು ಮಾದರಿಯು ಅಗ್ರಸ್ಥಾನದಲ್ಲಿದ್ದು, ಥಾರ್ ಖರೀದಿ ಮಾಡುವ ಶೇ. 80ಕ್ಕಿಂತಲೂ ಹೆಚ್ಚು ಗ್ರಾಹಕರು ತಮ್ಮ ಇಷ್ಟದಂತೆ ಮಾಡಿಫೈ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಹೀಗಾಗಿ ಹಲವಾರು ಮಾಡಿಫೈ ಕಂಪನಿಗಳು ಥಾರ್ ಕಾರು ಮಾದರಿಗಾಗಿ ಹಲವಾರು ಮಾಡಿಫೈ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಿದ್ದು, ವೆಲೊಸಿಟಿ ಟೈರ್ಸ್ ಕಂಪನಿಯು ಥಾರ್ ಕಾರಿಗೆ ಜೋಡಣೆ ಮಾಡಿರುವ ಹೊಸ ವೀಲ್ಹ್ ಆಕರ್ಷಕವಾಗಿರುವುದರ ಜೊತೆಗೆ ಕಾರಿನ ಖದರ್ ಹೆಚ್ಚಿಸಿದೆ.

ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ಆದರೆ ಕಾರು ಮಾಲೀಕರು ಕೇವಲ ಆಕರ್ಷಕಣೆಯ ಉದ್ದೇಶದಿಂದ ಮಾಡಿಫೈ ಮಾಡಿಸುವ ಮೊದಲು ಯಾವೆಲ್ಲಾ ಮಾಡಿಫೈ ಸೌಲಭ್ಯಗಳು ಕಾನೂನಾತ್ಮಕವಾಗಿವೆ ಮತ್ತು ಯಾವೆಲ್ಲಾ ಮಾಡಿಫೈ ಸೌಲಭ್ಯಗಳು ಕಾನೂನುಬಾಹಿರವಾಗಿವೆ ಎಂಬುವುದನ್ನು ಅರಿತು ಮಾಡಿಫೈ ಸೌಲಭ್ಯ ಅಳವಡಿಸಿಕೊಳ್ಳುವುದು ತುಂಬಾ ಮುಖ್ಯವಾದ ವಿಚಾರ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ಇಲ್ಲವಾದರೆ ಮಾಡಿಫೈ ಸೌಲಭ್ಯಗಳಿಗಾಗಿ ಲಕ್ಷಾಂತರ ಖರ್ಚು ಮಾಡುವುದಲ್ಲದೆ ಅದು ಸಾರಿಗೆ ನಿಯಮಗಳಿಗೆ ವಿರುದ್ಧವಾಗಿದ್ದಲ್ಲಿ ದಂಡ ಕೂಡಾ ಪಾವತಿಸಿಬಹುದಾದ ಪರಿಸ್ಥಿತಿ ಎದುರಾಗಬಹುದು. ಅದಕ್ಕಾಗಿ ಮಾಡಿಫೈ ಸೌಲಭ್ಯಗಳನ್ನು ಪಡೆದುಕೊಳ್ಳುವಾಗ ಸಾಕಷ್ಟು ಎಚ್ಚರಿಕೆ ವಹಿಸಿಬೇಕಿದ್ದು, ಆದಷ್ಟು ಸ್ಟ್ಯಾಂಡರ್ಡ್ ಮಾಡಿಫೈ ಸೌಲಭ್ಯಗಳನ್ನು ಮಾತ್ರ ಬಳಕೆಗೆ ಮಾಡಿ.

ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ವಾಹನ ಮಾಲೀಕರು ಗಮನಿಸಬೇಕಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಅತಿಯಾದ ಮಾಡಿಫೈ ಸೌಲಭ್ಯಗಳು ಕಾರುಗಳಿಗೆ ಆಕರ್ಷಣೆ ನೀಡಬಹುದಾದರೂ ವಾಹನಗಳ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತಲ್ಲದೆ ಸುರಕ್ಷಾ ಸೌಲಭ್ಯಗಳ ಕಾರ್ಯನಿರ್ವಹಣೆಗೂ ಅಡಚಣೆ ಉಂಟು ಮಾಡಬಹುದು.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಾಡಿಫೈ ವೀಲ್ಹ್ ಸೌಲಭ್ಯದೊಂದಿಗೆ ಮಿಂಚಿದ ನ್ಯೂ ಜನರೇಷನ್ ಥಾರ್ ಎಸ್‌ಯುವಿ

ಇನ್ನು ಥಾರ್ ಕಾರು ಮಾದರಿಯಲ್ಲಿ ಮೊದಲ ಬಾರಿಗೆ ಡೀಸೆಲ್ ಎಂಜಿನ್ ಜೊತೆಗೆ ಪೆಟ್ರೋಲ್ ಕಾರಿನ ಆಯ್ಕೆಯನ್ನು ಸಹ ನೀಡಿರುವುದು ಆಫ್-ರೋಡ್ ಕಾರು ಮಾದರಿಯ ಮಾರಾಟದಲ್ಲಿ ಮತ್ತೊಂದು ಹಂತದ ಬದಲಾವಣೆಗೆ ಕಾರಣವಾಗಿದ್ದು, ಲ್ಯಾಡರ್-ಫ್ರೇಮ್ ಚಾರ್ಸಿ ಜೊತೆಗೆ ಹೊಸ ಸಸ್ಪೆಂಷನ್‌ ಸೌಲಭ್ಯವು ಹೊಸ ಥಾರ್ ಕಾರಿನ ಗುಣಮಟ್ಟ ಮತ್ತು ಕಾರ್ಯಕ್ಷಮತೆ ಹೆಚ್ಚಿಸಿದೆ.

Image Courtesy: Velocity Tyres

Most Read Articles

Kannada
English summary
New Mahindra Thars with 22 inch alloy wheels look SICK.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X