ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಟ್ರಿಯೊ ಸರಣಿಯಲ್ಲಿ ಟ್ರಿಯೊ ಜೊರೆ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ವಾಹನಗಳು ವಾಣಿಜ್ಯ ವಾಹನಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ತವಕದಲ್ಲಿವೆ.

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ತ್ರಿ ವೀಲ್ಹರ್ ವಾಣಿಜ್ಯ ವಾಹನ ಮಾದರಿಯಾಗಿರುವ ಟ್ರಿಯೊ ಜೊರ್ ಕಾರ್ಗೊ ಆವೃತ್ತಿಗಳು ಗ್ರಾಹಕರ ಬೇಡಿಕೆಯೆಂತೆ ಪ್ರಮುಖ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಟ್ರಿಯೊ ಜೊರ್ ಕಾರ್ಗೊ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.73 ಲಕ್ಷ ಬೆಲೆ ಹೊಂದಿದ್ದು, ಗ್ರಾಹಕರು ತಮ್ಮ ಬೇಡಿಕೆಯೆಂತೆ ಹೊಸ ಇವಿ ವಾಣಿಜ್ಯ ವಾಹನವನ್ನು ಡೆಲಿವರಿ ವ್ಯಾನ್, ಪಿಕ್ಅಪ್ ಮತ್ತು ಫ್ಲ್ಯಾಟ್‌ಬೆಡ್ ಮಾದರಿಗಳನ್ನು ಪರಿಚಯಿಸಲಾಗಿದೆ.

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಡೆಲಿವರಿ ವ್ಯಾನ್ ಮತ್ತು ಪಿಕ್‌ಅಪ್ ವ್ಯಾನ್ ಹೊರತುಪಡಿಸಿ ಫ್ಲ್ಯಾಟ್‌ಬೆಡ್ ಮಾದರಿಯನ್ನು ಗ್ರಾಹಕರು ತಮ್ಮ ವ್ಯವಹಾರ ಉದ್ಯಮಗಳಿಗೆ ಅನುಗುಣವಾಗಿ ಮಾಡಿಫೈ ಬಾಡಿ ಕವರ್ ಆಯ್ಕೆ ಮಾಡಬಹುದಾಗಿದ್ದು, ಡೀಸೆಲ್ ಎಂಜಿನ್ ಮಾದರಿಗಿಂತಲೂ ಹೊಸ ವಾಹನಗಳು ಅತಿ ಕಡಿಮೆ ನಿರ್ವಹಣಾ ವೆಚ್ಚ ಹೊಂದಿವೆ.

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳು ಬೆಸ್ಟ್ ಕ್ಲಾಸ್ ಫೀಚರ್ಸ್‌ಗಳೊಂದಿಗೆ ಗರಿಷ್ಠ 550 ಕೆ.ಜಿ ಲೋಡಿಂಗ್ ಸಾಮರ್ಥ್ಯ ಹೊಂದಿದ್ದು, ಹೊಸ ವಾಹನಗಳವು ಕೇಂದ್ರ ಸರ್ಕಾರದ ಫೇಮ್ 2 ಸಬ್ಸಡಿ ಯೋಜನೆ ಒಳಗೊಂಡಿದೆ.

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಬ್ಯಾಟರಿ ಮತ್ತು ಮೈಲೇಜ್

ಮಹೀಂದ್ರಾ ಕಂಪನಿಯು ಮಾರುಕಟ್ಟೆಯಲ್ಲಿ ಈಗಾಗಲೇ ಟ್ರಿಯೊ ಸರಣಿಯ ಆಟೋ ರಿಕ್ಷಾ ಮಾದರಿಯನ್ನು ಬಿಡುಗಡೆ ಮಾಡಿದ್ದು, ಇದೀಗ ಬಿಡುಗಡೆ ಮಾಡಲಾಗಿರುವ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳಲ್ಲಿ ಈ ಹಿಂದಿನಂತೆಯೇ 8 ಕಿಲೋ ವ್ಯಾಟ್ ಲೀಥಿಯಂ ಅಯಾನ್ ಬ್ಯಾಟರಿ ಜೋಡಣೆಯೊಂದಿಗೆ ಸೆಗ್ಮೆಂಟ್ ಇನ್ ಬೆಸ್ಟ್ ಮೈಲೇಜ್ ಪಡೆದುಕೊಂಡಿದೆ.

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳು ಪ್ರತಿ ಚಾರ್ಜ್‌ಗೆ ಗರಿಷ್ಠ 125ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಪೂರ್ಣ ಪ್ರಮಾಣದ ಚಾರ್ಜಿಂಗ್ ಪಡೆದುಕೊಳ್ಳಲು ಚಾರ್ಜಿಂಗ್ ವಿಧಾನದ ಆಧಾರದ ಮೇಲೆ ಕನಿಷ್ಠ 3 ರಿಂದ 4 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ.

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಒಂದೇ ವೇಳೆ ಗ್ರಾಹಕರು ಸೂಪರ್ ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳ ಮೂಲಕ ಚಾರ್ಜ್ ಮಾಡಿದ್ದಲ್ಲಿ ಕೇವಲ 50 ನಿಮಿಷಗಳಲ್ಲಿ ಶೇ. 80 ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಡೀಸೆಲ್ ಎಂಜಿನ್ ಮಾದರಿಗಳ ಕಾರ್ಯಾಚರಣೆ ವೆಚ್ಚಗಳಿಗೆ ಹೊಲಿಕೆ ಮಾಡಿದ್ದಲ್ಲಿ ಇವಿ ವಾಹನಗಳ ಖರ್ಚು ಸಾಕಷ್ಟು ಕಡಿಮೆಯಾಗುವ ಮೂಲಕ ಹೆಚ್ಚು ಲಾಭ ತಂದುಕೊಡುತ್ತವೆ.

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಡೀಸೆಲ್ ಎಂಜಿನ್ ಪ್ರೇರಿತ ಕಾರ್ಗೊ ವಾಹನಗಳ ಕಾರ್ಯಾಚರಣೆಯ ವೆಚ್ಚವನ್ನು ಹೊಸ ಎಲೆಕ್ಟ್ರಿಕ್ ಕಾರ್ಗೊ ಮಾದರಿಗಳೊಂದಿಗೆ ಹೋಲಿಕೆ ಮಾಡಿದ್ದಲ್ಲಿ ಎಲೆಕ್ಟ್ರಿಕ್ ಕಾರ್ಗೊ ವಾಹನಗಳ ಬಳಕೆಯ ಮೂಲಕ ಪ್ರತಿ ಕಿ.ಮೀ ಗೆ ರೂ. 2.10 ಪೈಸೆ ಇಂಧನ ವೆಚ್ಚವನ್ನು ಉಳಿತಾಯವಾಗಲಿದ್ದು, ಇದು ವರ್ಷಕ್ಕೆ ಸರಾಸರಿಯಾಗಿ ರೂ. 60 ಸಾವಿರದಷ್ಟು ಆದಾಯವನ್ನು ತಂದುಕೊಡಲಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಜೊತೆಗೆ ಡೀಸೆಲ್ ಎಂಜಿನ್ ಮಾದರಿಯ ನಿರ್ವಹಣೆಗಾಗಿ ಪ್ರತಿ ಕಿ.ಮೀ 60 ಪೈಸೆ ಖರ್ಚು ಮಾಡಬೇಕಾದ ಅವಶ್ಯಕತೆಯಿದ್ದು, ಎಲೆಕ್ಟ್ರಿಕ್ ವಾಹನಗಳ ನಿರ್ವಹಣೆಗಾಗಿ ಪ್ರತಿ ಕಿ.ಮೀ ಗೆ ಕೇವಲ 40 ಪೈಸೆ ವೆಚ್ಚ ಹೊಂದಿದ್ದು, ಸೆಗ್ಮೆಂಟ್ ಮಾದರಿಗಳಲ್ಲೇ ಆಕರ್ಷಕವಾದ 2,216 ಎಂಎಂ ವೀಲ್ಹ್ ಬೆಸ್ ಪಡೆದುಕೊಂಡಿದೆ.

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಹೊಸ ಎಲೆಕ್ಟ್ರಿಕ್ ವಾಹನಗಳ ಮೇಲೆ ಮಹೀಂದ್ರಾ ಕಂಪನಿಯು 80 ಸಾವಿರ ಕಿ.ಮೀ ಅಥವಾ 3 ವರ್ಷಗಳ ವಾರಂಟಿ ಘೋಷಣೆ ಮಾಡಿದ್ದು,ವಿವಿಧ ಮಾದರಿಯ ಹೆಚ್ಚುವರಿ ಪ್ಯಾಕೇಜ್‌ನೊಂದಿಗೆ 1.50 ಲಕ್ಷ ಕಿ.ಮೀ ವ್ಯಾಪ್ತಿಗೆ ವಾರಂಟಿ ಹೆಚ್ಚಿಸಿಕೊಳ್ಳುವ ಆಯ್ಕೆ ನೀಡಲಾಗಿದೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಮಹೀಂದ್ರಾ ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳ ಬಿಡುಗಡೆ

ಇನ್ನು ಟ್ರಿಯೊ ಜೊರ್ ಕಾರ್ಗೊ ಎಲೆಕ್ಟ್ರಿಕ್ ವಾಣಿಜ್ಯ ವಾಹನಗಳು ಅತ್ಯುತ್ತಮ ಕ್ಯಾಬಿನ್ ಡಿಸೈನ್‌ನೊಂದಿಗೆ ಚಾಲನೆಗೆ ಅರಾಯದಾಯಕವಾಗಿದ್ದು, ಟೆಲಿಮ್ಯಾಟಿಕ್, ವೀಂಡ್ ಸ್ಕ್ರೀನ್ ಜೊತೆ ವೈಪಿಂಗ್ ಸಿಸ್ಟಂ, ಮೂರು ಹಂತದ ಡ್ರೈವಿಂಗ್ ಮೋಡ್, ಗ್ಲೋ ಬಾಕ್ಸ್, 12 ವಿ ಸಾಕೆಟ್, 15 ಎಎಂಪಿ ಆಫ್ ಬೋರ್ಡ್ ಚಾರ್ಜರ್ ಸೇರಿದಂತೆ ಹಲವಾರು ಬೆಸ್ಟ್ ಇನ್ ಕ್ಲಾಸ್ ಫೀಚರ್ಸ್‌ಗಳಿವೆ.

Most Read Articles

Kannada
English summary
Mahindra Treo Zor Cargo EV Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X