ವೈದ್ಯಕೀಯ ಸಿಬ್ಬಂದಿಗಾಗಿ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ ಮಹೀಂದ್ರಾ

ಕರೋನಾ ವೈರಸ್ ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಕರೋನಾ ವೈರಸ್ ಪ್ರತಿಯೊಂದು ದೇಶಕ್ಕೂ ಅಂಟಿಕೊಂಡಿದೆ. ನಿನ್ನೆಯಷ್ಟೇ ಸ್ಪೇನ್ ದೇಶದ ರಾಜಕುಮಾರಿ ಈ ಮಹಾಮಾರಿ ವೈರಸ್ ಗೆ ಬಲಿಯಾಗಿದ್ದರು. ಇಂಗ್ಲೆಂಡ್ ನ ರಾಜಕುಮಾರ ಹಾಗೂ ಅಲ್ಲಿನ ಪ್ರಧಾನಿಯವರಿಗೂ ಈ ವೈರಸ್ ಸೋಂಕು ತಗುಲಿದೆ.

ವೈದ್ಯಕೀಯ ಸಿಬ್ಬಂದಿಗಾಗಿ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ ಮಹೀಂದ್ರಾ

ಭಾರತದಲ್ಲಿಯೂ 1,000ಕ್ಕೂ ಹೆಚ್ಚು ಜನರು ಈ ವೈರಸ್ ನಿಂದ ಬಾಧಿತರಾಗಿದ್ದಾರೆ. ಇದುವರೆಗೂ 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವೈದ್ಯಕೀಯ ಕ್ಷೇತ್ರದ ಸಿಬ್ಬಂದಿ ಹಗಲು ಇರುಳು ಎನ್ನದೇ ಕರೋನಾ ವೈರಸ್ ನಿಂದ ಬಾಧಿತರಾಗಿರುವವರ ಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ. ಈ ವೈದ್ಯಕೀಯ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಚಿಕಿತ್ಸೆ ನೀಡುತ್ತಿದ್ದಾರೆ. ಇವರ ರಕ್ಷಣೆಗಾಗಿ ಹಲವು ಉಪಕರಣಗಳ ಅಗತ್ಯವಿದೆ.

ವೈದ್ಯಕೀಯ ಸಿಬ್ಬಂದಿಗಾಗಿ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ ಮಹೀಂದ್ರಾ

ಇವರಿಗಾಗಿ ಮಹೀಂದ್ರಾ ಕಂಪನಿಯು ಫೇಸ್ ಶೀಲ್ಡ್ ತಯಾರಿಸಲು ಮುಂದಾಗಿದೆ. ಮಹೀಂದ್ರಾ ಕಂಪನಿಯು ಕರೋನಾ ವಿರುದ್ಧ ಹೋರಾಡಲು ಸರ್ಕಾರದ ಜೊತೆಗೆ ಕೈಜೋಡಿಸಿದೆ. ಮಹೀಂದ್ರಾ ಕಂಪನಿಯು ಈಗಾಗಲೇ ತನ್ನ ಕಾರು ಉತ್ಪಾದನಾ ಘಟಕಗಳಲ್ಲಿ ವೈದ್ಯಕೀಯ ಉಪಕರಣಗಳನ್ನು ತಯಾರಿಸುವ ಕೆಲಸದಲ್ಲಿ ನಿರತವಾಗಿದೆ.

ವೈದ್ಯಕೀಯ ಸಿಬ್ಬಂದಿಗಾಗಿ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ ಮಹೀಂದ್ರಾ

ಮಹೀಂದ್ರಾ ಕಂಪನಿಯು ಕರೋನಾ ಸೋಂಕಿತರಿಗಾಗಿ ಕಡಿಮೆ ಬೆಲೆಯ ವೆಂಟಿಲೇಟರ್‌ಗಳನ್ನು ತಯಾರಿಸುತ್ತಿದೆ. ಇದಕ್ಕಾಗಿ ಮೂಲಮಾದರಿಯೊಂದನ್ನು ಅಭಿವೃದ್ಧಿಪಡಿಸಿದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನವನ್ನು ನಡೆಸಲಾಗುತ್ತಿದೆ.

ವೈದ್ಯಕೀಯ ಸಿಬ್ಬಂದಿಗಾಗಿ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ ಮಹೀಂದ್ರಾ

ಈ ವೆಂಟಿಲೇಟರ್‌ಗಳನ್ನು ಸಮಯಕ್ಕೆ ಸರಿಯಾಗಿ ವೈದ್ಯಕೀಯ ವಿಭಾಗಗಳಿಗೆ ತಲುಪಿಸಬೇಕಾಗುತ್ತದೆ. ಇದಕ್ಕಾಗಿ ಮಹೀಂದ್ರಾ ಕಂಪನಿಯ ಉತ್ಪಾದನಾ ಘಟಕಗಳನ್ನು ಬಳಸಿಕೊಳ್ಳಲಾಗುವುದು.

ವೈದ್ಯಕೀಯ ಸಿಬ್ಬಂದಿಗಾಗಿ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ ಮಹೀಂದ್ರಾ

ಕೇವಲ ರೋಗಿಗಳಿಗೆ ಮಾತ್ರವಲ್ಲದೇ, ಅವರನ್ನು ಆರೈಕೆ ಮಾಡುವ ಡಾಕ್ಟರ್, ನರ್ಸ್ ಹಾಗೂ ಇನ್ನಿತರ ಸಿಬ್ಬಂದಿಗಳು ಸಹ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಇಂತಹವರಿಗಾಗಿ ವಿಶೇಷ ಫೇಸ್ ಶೀಲ್ಡ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ.

MOST READ: ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ವೈದ್ಯಕೀಯ ಸಿಬ್ಬಂದಿಗಾಗಿ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ ಮಹೀಂದ್ರಾ

ಈ ವಿಶೇಷ ಫೇಸ್ ಶೀಲ್ಡ್ ಗಳು, ಸಾಮಾನ್ಯ ಮಾಸ್ಕ್ ಗಳಿಗಿಂತ ಹೆಚ್ಚಿನ ರಕ್ಷಣೆಯನ್ನು ನೀಡುತ್ತವೆ. ಈ ವಿಶೇಷ ಫೇಸ್ ಶೀಲ್ಡ್ ಗಳನ್ನು ತಯಾರಿಸುವ ಕೆಲಸವು ಇಂದಿನಿಂದ ಆರಂಭವಾಗಲಿದೆ ಎಂದು ಮಹೀಂದ್ರಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಗೋಯಾಂಕರವರು ತಿಳಿಸಿದ್ದಾರೆ.

MOST READ: ವಾಹನ ಸವಾರರ ಕಾಲಿಗೆ ಬೀಳುತ್ತೇನೆಂದ ಸಂಚಾರಿ ಪೊಲೀಸ್, ಕಾರಣವೇನು ಗೊತ್ತಾ?

ವೈದ್ಯಕೀಯ ಸಿಬ್ಬಂದಿಗಾಗಿ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ ಮಹೀಂದ್ರಾ

ಈ ವಿಶೇಷ ಫೇಸ್ ಶೀಲ್ಡ್ ಗಳ ವಿನ್ಯಾಸವನ್ನು ತಮ್ಮ ಪಾಲುದಾರ ಕಂಪನಿಯಾದ ಫೋರ್ಡ್ ಮೋಟಾರ್ ನಿಂದ ಪಡೆಯಲಾಗಿದೆ ಎಂದು ಅವರು ಹೇಳಿದರು.

MOSTREAD: ವಾಹನ ಉತ್ಪಾದನೆ ಸ್ಥಗಿತದಿಂದಾಗಿ ಸಾವಿರಾರು ಕೋಟಿ ನಷ್ಟ

ವೈದ್ಯಕೀಯ ಸಿಬ್ಬಂದಿಗಾಗಿ ಮೊದಲ ಬಾರಿಗೆ ಹೊಸ ಸಾಹಸಕ್ಕೆ ಕೈ ಹಾಕಿದ ಮಹೀಂದ್ರಾ

ಇದೇ ಮೊದಲ ಬಾರಿಗೆ ಮೆಡಿಕಲ್ ಮಾಸ್ಕ್ ಗಳನ್ನು ತಯಾರಿಸಲಾಗುತ್ತಿದ್ದು, ಮಾರ್ಚ್ 30ರಿಂದ ಇವುಗಳನ್ನು ತಯಾರಿಸಲಾಗುವುದು ಎಂದು ಅವರು ಹೇಳಿದರು.

Most Read Articles

Kannada
English summary
Mahindra will start face shield production from March 30. Read in Kannada.
Story first published: Monday, March 30, 2020, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X