ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಹೀಂದ್ರಾ ಇಎಕ್ಸ್‌ಯುವಿ 300

ಮಹೀಂದ್ರಾ ಕಂಪನಿಯು ತನ್ನ ಹೊಸ ಇಎಕ್ಸ್‌ಯುವಿ 300 ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ. ಸಾಮಾನ್ಯ ಮಹೀಂದ್ರಾ ಎಕ್ಸ್‌ಯುವಿ 300ಗೆ ಹೋಲಿಸದರೆ ವಿನ್ಯಾಸದಲ್ಲಿ ಗಮನಾರ್ಹ ಬದಲಾವಣೆಗಳನ್ನು ಹೊಂದಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಹೀಂದ್ರಾ ಇಎಕ್ಸ್‌ಯುವಿ 300

ಮಹೀಂದ್ರಾ ಇಎಕ್ಸ್‌ಯುವಿ 300 ಬಿಡುಗಡೆಯಾದ ಬಳಿಕೆ ಟಾಟಾ ನೆಕ್ಸಾನ್‍‍ಗೆ ನೇರ ಪೈಪೋಟಿಯನ್ನು ನೀಡುತ್ತದೆ. ಟಾಟಾ ನೆಕ್ಸಾನ್ ಕಾಂಪ್ಯಾಕ್ಟ್ ಎಸ್‍ಯುವಿಯು 30.2 ಕಿ.ವ್ಯಾಟ್ ಬ್ಯಾಟರಿ ಪ್ಯಾಕ್‍ನೊಂದಿಗೆ ಬ್ರ್ಯಾಂಡ್‍‍ನ ಜಿಪ್ಟ್ರಾನ್ ಎಲೆಕ್ಟ್ರಿಕ್ ಮೋಟಾರ್ ಅನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಕಾಂಪ್ಯಾಕ್ಟ್ ಎಸ್‍‍ಯುವಿಯು 127 ಬಿ‍‍ಹೆಚ್‍ಪಿ ಪವರ್ ಮತ್ತು 245 ಎನ್‍‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಕಾಂಪ್ಯಾಕ್ಟ್ ಎಸ್‍ಯುವಿಯು 10 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಹೀಂದ್ರಾ ಇಎಕ್ಸ್‌ಯುವಿ 300

ಮಹೀಂದ್ರಾ ಇಎಕ್ಸ್‌ಯುವಿ 300 ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚು ವ್ಯಾಪ್ತಿಯನ್ನು ಚಲಿಸುತ್ತದೆ. ಮಹೀಂದ್ರಾ ಇಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‍‍ಯುವಿಯು ಒಂದು ಬಾರಿ ಪೂರ್ಣ ಪ್ರಮಾಣದ ಜಾರ್ಜ್ ಮಾಡಿದರೆ 300 ಕಿ.ಮೀ ಚಲಿಸುತ್ತದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಹೀಂದ್ರಾ ಇಎಕ್ಸ್‌ಯುವಿ 300

ಮಹೀಂದ್ರಾ ಎಕ್ಸ್‌ಯುವಿ 300 ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಕಾಂಪ್ಯಾಕ್ಟ್ ಎಸ್‍ಯುವಿಗಳಲ್ಲಿ ಒಂದಾಗಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆಗೊಳಿಸುತ್ತಿದೆ. ಅದರಂತೆ ಮಹೀಂದ್ರಾ ಕಂಪನಿಯು ತನ್ನ ಜನಪ್ರಿಯ ಎಕ್ಸ್‌ಯುವಿ 300 ಮಾದರಿಯನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಹೀಂದ್ರಾ ಇಎಕ್ಸ್‌ಯುವಿ 300

ಕಳೆದ ವರ್ಷ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ 300 ಅನ್ನು ಎಲೆಕ್ಟ್ರಿಕ್ ರೂಪಾಂತರದಲ್ಲಿ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿತ್ತು. ಇಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‍ಯುವಿಯು ಟಿವೊಲಿ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದೆ. ಹೊಸ ಇಎಕ್ಸ್‌ಯುವಿ 300 ಬಳಿ ಬಣ್ಣದದಿಂದ ಕೊಡಿದೆ. ಈ ಇಎಕ್ಸ್‌ಯುವಿ 300 ವಿಶಿಷ್ಟವಾದ ಹೆಡ್‍‍ಲ್ಯಾಂಪ್‍ ಮತ್ತು ಮುಂಭಾಗದಲ್ಲಿ ಗ್ರಿಲ್ ಅನ್ನು ಅಳವಡಿಸಲಾಗಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಹೀಂದ್ರಾ ಇಎಕ್ಸ್‌ಯುವಿ 300

ಮುಂಭಾಗದ ಹೆಡ್‍‍ಲ್ಯಾಂಪ್‍ಗಳ ಮೇಲೆ ನೀಲಿ ಎಕ್ಸೆಟ್ ಗಳು ಸುತ್ತುವರೆದಿದೆ. ಮುಂಭಾಗದಲ್ಲಿ ಲಿಪ್ ಸ್ಪಾಯ್ಲರ್‍‍ಗಳನ್ನು ಅಳವಡಿಸಲಾಗಿದೆ. ಹಿಂಭಾಗವು ಸಮಾನ್ಯ ಎಸ್‍ಯುವಿ ಮಾದರಿಯಂತಿದೆ. ಆದರೆ ಎಲ್ಇಡಿ ಟೇಲ್ ಲ್ಯಾಂಪ್ ವಿಭಿನ್ನವಾಗಿದೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಹೀಂದ್ರಾ ಇಎಕ್ಸ್‌ಯುವಿ 300

ಇಕೆ‍‍ಯುವಿ 100ನಂತೆ ಈ ಎಸ್‍ಯುವಿಯು ನೀಲಿ ಎಕ್ಸೆಟ್ ಗಳನ್ನು ಹೊಂದಿದೆ. ಇನ್ನೂ ಹೈ-ಮೌಂಟೆಡ್ ಸ್ಟಾಪ್ ಲ್ಯಾಂಪ್, ಲಿಪ್ ಸ್ಪಾಯ್ಲರ್ ಮತ್ತು ಟೇಲ್ ಲ್ಯಾಂಪ್‍ಗೆ ಬ್ಲ್ಯಾಕ್ ಬಣ್ಣದ ಅಂಶಗಳು ಆಕರ್ಷಕವಾಗಿದೆ. ಇನ್ನೂ ಡ್ಯಾಶ್‍ ಬೋರ್ಡ್‍‍ನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಮತ್ತು ಎಸಿ ವೆಂಟ್ಸ್ ಗಳಿವೆ.

ಆಟೋ ಎಕ್ಸ್‌ಪೋ 2020: ಅನಾವರಣವಾಯ್ತು ಮಹೀಂದ್ರಾ ಇಎಕ್ಸ್‌ಯುವಿ 300

2020ರ ಆಟೋ ಎಕ್ಸ್ ಪೋದಲ್ಲಿ ಇ‍‍ಎಕ್ಸ್‌ಯುವಿ 300 ಅಲ್ಲದೇ ಕೆಯು‍ವಿ 100 ಮತ್ತು ಫನ್‍‍ಸ್ಟರ್ ಕಾರುಗಳನ್ನು ಅನಾವರಣಗೊಳಿಸಿದೆ. ಹೊಸ ಮಹೀಂದ್ರಾ ಇಎಕ್ಸ್‌ಯುವಿ 300 ಕಾಂಪ್ಯಾಕ್ಟ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ.

Most Read Articles

Kannada
English summary
Mahindra XUV300 Electric at Auto Expo 2020. Read in Kannada
Story first published: Wednesday, February 5, 2020, 16:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X