ಗುಡ್ ನ್ಯೂಸ್: ಎಕ್ಸ್‌ಯುವಿ300 ಕಾರಿನ ಬೆಲೆ ಇಳಿಕೆ ಮಾಡಿದ ಮಹೀಂದ್ರಾ

ಆಟೋ ಉದ್ಯಮದಲ್ಲಿ ಕಾರುಗಳ ಮಾರಾಟವು ಉತ್ತಮವಾಗಿದ್ದರೂ ಸರಿ ಕುಸಿತ ಕಂಡರೂ ಸರಿ ಬೆಲೆ ಇಳಿಕೆಗಿಂತಲೂ ಹೆಚ್ಚು ಬೆಲೆ ಏರಿಕೆಯ ನಿರ್ಧಾರಗಳು ಪ್ರಕಟಗೊಳ್ಳುತ್ತವೆ. ಆದರೆ ಪರಿಸ್ಥಿತಿಗೆ ಅನುಗುಣವಾಗಿ ಮಹೀಂದ್ರಾ ಕಂಪನಿಯು ತನ್ನ ಎಕ್ಸ್‌ಯುವಿ300 ಕಾರು ಮಾದರಿಯ ಬೆಲೆ ಇಳಿಕೆಯ ಮೂಲಕ ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ಗುಡ್ ನ್ಯೂಸ್: ಎಕ್ಸ್‌ಯುವಿ300 ಕಾರಿನ ಬೆಲೆ ಇಳಿಕೆ ಮಾಡಿದ ಮಹೀಂದ್ರಾ

ಹೌದು, ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಸ್ಪರ್ಧೆ ಹೆಚ್ಚುತ್ತಿದ್ದಂತೆ ವಿವಿಧ ಕಾರು ಕಂಪನಿಗಳು ಹಲವಾರು ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಇನ್ನು ಕೆಲವು ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳು ಬಿಡುಗಡೆಯ ಸನಿಹದಲ್ಲಿವೆ. ಈ ಹಿನ್ನಲೆಯಲ್ಲಿ ಎಕ್ಸ್‌ಯುವಿ300 ಮಾದರಿಯ ಬೆಲೆ ಇಳಿಕೆಯ ನಿರ್ಧಾರ ಪ್ರಕಟಿಸಿರುವ ಮಹೀಂದ್ರಾ ಕಂಪನಿಯು ಕಂಪ್ಯಾಕ್ಟ್ ಎಸ್‌ಯುವಿ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಗುಡ್ ನ್ಯೂಸ್: ಎಕ್ಸ್‌ಯುವಿ300 ಕಾರಿನ ಬೆಲೆ ಇಳಿಕೆ ಮಾಡಿದ ಮಹೀಂದ್ರಾ

ಬಜೆಟ್ ಬೆಲೆಯಲ್ಲಿ ಐದು ಸ್ಟಾರ್ ರೇಟಿಂಗ್ ಖ್ಯಾತಿ ಹೊಂದಿರುವ ಎಕ್ಸ್‌ಯುವಿ ಮಾದರಿಯು ಹಲವು ವಿಶೇಷತೆಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಹಲವಾರು ಕಾರು ಮಾದರಿಗಳು ಮಾರುಕಟ್ಟೆಗೆ ಪ್ರವೇಶಿಸಿದ್ದು ಇನ್ನು ಕೆಲವು ಕಾರುಗಳು ಬಿಡುಗಡೆಗೆ ಸಿದ್ದವಾಗಿದೆ.

ಗುಡ್ ನ್ಯೂಸ್: ಎಕ್ಸ್‌ಯುವಿ300 ಕಾರಿನ ಬೆಲೆ ಇಳಿಕೆ ಮಾಡಿದ ಮಹೀಂದ್ರಾ

ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್‌ಯುವಿ300 ಮಾದರಿಗೆ ಪೈಪೋಟಿಯಾಗಿ ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ಮಾರುತಿ ವಿಟಾರಾ ಬ್ರೆಝಾ, ಫೋರ್ಡ್ ಇಕೋಸ್ಪೋರ್ಟ್ ಮಾರಾಟಗೊಳ್ಳುತ್ತಿದ್ದು, ಹೊಸದಾಗಿ ಬಿಡುಗಡೆಯಾಗಲಿರುವ ಕಿಯಾ ಸೊನೆಟ್ ಕಾರು ಕೂಡಾ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

ಗುಡ್ ನ್ಯೂಸ್: ಎಕ್ಸ್‌ಯುವಿ300 ಕಾರಿನ ಬೆಲೆ ಇಳಿಕೆ ಮಾಡಿದ ಮಹೀಂದ್ರಾ

ಈ ಹಿನ್ನಲೆಯಲ್ಲಿ ಪ್ರತಿಸ್ಪರ್ಧಿ ಕಾರುಗಳಿಗೆ ಸಮರ್ಥವಾಗಿ ಪೈಪೋಟಿ ನೀಡಲು ಸ್ಪರ್ಧಾತ್ಮಕ ಬೆಲೆ ನಿರ್ಧಾರಕ್ಕೆ ಬಂದಿರುವ ಮಹೀಂದ್ರಾ ಕಂಪನಿಯು ಎಕ್ಸ್‌ಯುವಿ300 ಕಾರಿನ ಬೆಲೆ ಪರಿಷ್ಕರಣೆ ಮಾಡಿದ್ದು, ವಿವಿಧ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕನಿಷ್ಠ ರೂ. 1 ಸಾವಿರದಿಂದ ಗರಿಷ್ಠ ರೂ.87 ಸಾವಿರದಷ್ಟು ಕಡಿತ ಮಾಡಲಾಗಿದೆ.

ಗುಡ್ ನ್ಯೂಸ್: ಎಕ್ಸ್‌ಯುವಿ300 ಕಾರಿನ ಬೆಲೆ ಇಳಿಕೆ ಮಾಡಿದ ಮಹೀಂದ್ರಾ

ವಿ4 ಡಿಸೇಲ್ ವೆರಿಯೆಂಟ್ ಮಾದರಿಯ ಬೆಲೆಯಲ್ಲಿ ರೂ. 1 ಸಾವಿರ ಕಡಿತವಾಗಿದ್ದರೆ ವಿ8 ಪೆಟ್ರೋಲ್ ಆಪ್ಷನ್ ಬೆಲೆಯಲ್ಲಿ ರೂ. 87,129 ಬೆಲೆ ಕಡಿತ ಮಾಡಲಾಗಿದ್ದು, ಹೊಸ ದರಗಳಲ್ಲೇ ಇದೀಗ ಎಕ್ಸ್‌ಯುವಿ300 ಮಾದರಿಯನ್ನು ಖರೀದಿ ಮಾಡಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಗುಡ್ ನ್ಯೂಸ್: ಎಕ್ಸ್‌ಯುವಿ300 ಕಾರಿನ ಬೆಲೆ ಇಳಿಕೆ ಮಾಡಿದ ಮಹೀಂದ್ರಾ

ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಹೊಸ ದರಪಟ್ಟಿ(ದೆಹಲಿ ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್ ಹಳೆಯ ದರ ಹೊಸ ದರ ಕಡಿಮೆಯಾದ ದರ
ಡಬ್ಲ್ಯು4 ಪೆಟ್ರೋಲ್ ರೂ.8,30,000 ರೂ.7,95,000 ರೂ.35,000
ಡಬ್ಲ್ಯು6 ಪೆಟ್ರೋಲ್ ರೂ.9,15,000 ರೂ.8,98,000 ರೂ.17,000
ಡಬ್ಲ್ಯು8 ಪೆಟ್ರೋಲ್ ರೂ.10,60,000 ರೂ.9,90,000 ರೂ.70,000
ಡಬ್ಲ್ಯು8 ಆಪ್ಷನ್ ಪೆಟ್ರೋಲ್ ರೂ.11,84,000 ರೂ.10,97,000 ರೂ.87,129
ಡಬ್ಲ್ಯು4 ಡೀಸೆಲ್ ರೂ.8,69,000 ರೂ.8,70,000 ರೂ.1,000
ಡಬ್ಲ್ಯು6 ಡೀಸೆಲ್ ರೂ.9,50,000 ರೂ.9,70,000 ರೂ.20,000
ಡಬ್ಲ್ಯು8 ಡೀಸೆಲ್ ರೂ.10,95,000 ರೂ.10,75,000 ರೂ.20,000
ಡಬ್ಲ್ಯು8 ಆಪ್ಷನ್ ಡೀಸೆಲ್ ರೂ.12,14,000 ರೂ.11,75,000 ರೂ.39,000
ಗುಡ್ ನ್ಯೂಸ್: ಎಕ್ಸ್‌ಯುವಿ300 ಕಾರಿನ ಬೆಲೆ ಇಳಿಕೆ ಮಾಡಿದ ಮಹೀಂದ್ರಾ

ಇನ್ನು ಎಕ್ಸ್‌ಯುವಿ300 ಕಾರು ಮಾದರಿಯು ಹೊಸ ದರ ನಿಗದಿಯಾದ ನಂತರ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 7.94 ಲಕ್ಷದಿಂದ ಟಾಪ್ ಎಂಡ್ ಮಾದರಿಯು 12.30 ಲಕ್ಷ ಬೆಲೆ ಹೊಂದಿದ್ದು, ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಟರ್ಬೋ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಗುಡ್ ನ್ಯೂಸ್: ಎಕ್ಸ್‌ಯುವಿ300 ಕಾರಿನ ಬೆಲೆ ಇಳಿಕೆ ಮಾಡಿದ ಮಹೀಂದ್ರಾ

ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ವಿಶೇಷ ತಾಂತ್ರಿಕ ಸೌಲಭ್ಯಗಳೊಂದಿಗೆ ಖರೀದಿಗೆ ಲಭ್ಯವಿರುವ ಎಕ್ಸ್‌ಯುವಿ300 ಮಾದರಿಯು ಸದ್ಯದಲ್ಲೇ ಪರ್ಫಾಮೆನ್ಸ್ ಪ್ರಿಯರಿಗಾಗಿ ಸ್ಪೋಟ್ಜ್ ಮಾದರಿಯನ್ನು ಸಹ ಪಡೆದುಕೊಳ್ಳುತ್ತಿದ್ದು, ಪ್ರತಿಸ್ಪರ್ಧಿ ಕಾರುಗಳಿಗೆ ಪೈಪೋಟಿಯಾಗಿ ಬೆಲೆ ಇಳಿಕೆ ಮಾಡಿದ್ದು ಗ್ರಾಹಕರ ಆಕರ್ಷಣೆ ಕಾರಣವಾಗಿದೆ.

Most Read Articles

Kannada
English summary
Mahindra XUV 300 Prices Reduced. Read in Kannada.
Story first published: Monday, August 10, 2020, 20:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X