ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ವರ್ಷನ್

ಕಳೆದ ವಾರವಷ್ಟೇ ನಮ್ಮ ಬೆಂಗಳೂರಿನ ಹೊರವಲಯದಲ್ಲಿ ಮೊದಲ ಬಾರಿಗೆ ರೋಡ್ ಟೆಸ್ಟಿಂಗ್ ನಡೆಸಿದ್ದ ಮಹೀಂದ್ರಾ ಎಕ್ಸ್‌ಯುವಿ300 ಸ್ಪೋರ್ಟ್ಜ್ ಆವೃತ್ತಿಯು ಬಿಡುಗಡೆಗೆ ಸಜ್ಜಾಗುತ್ತಿದ್ದು, ತಾಂತ್ರಿಕ ಅಂಶಗಳ ಕುರಿತಾಗಿ ಅಂತಿಮ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ವರ್ಷನ್

ಸ್ಪೋಟ್ಜ್ ಆವೃತ್ತಿಯಲ್ಲಿ ಸಾಮಾನ್ಯ ಮಾದರಿಯ ಪೆಟ್ರೋಲ್ ಎಂಜಿನ್ ಹೊರತುಪಡಿಸಿ ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಹೊಸದಾಗಿ ಅಭಿವೃದ್ದಿಗೊಳಿಸಲಾದ 1.2-ಲೀಟರ್ ಟಿ-ಜಿಡಿಐ ಪೆಟ್ರೋಲ್ ಎಂಜಿನ್‌ ಜೋಡಣೆ ಹೊಂದಿದೆ. ಇದು ಅತಿ ಹೆಚ್ಚು ಬಿಎಚ್‌ಪಿ ಉತ್ಪಾದನಾ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಪಡೆದುಕೊಂಡಿರುವುದು ರೋಡ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ವರ್ಷನ್

ಹೊಸದಾಗಿ ಅಭಿವೃದ್ದಿಗೊಳಿಸಲಾಗಿರುವ 1.2-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಎಂಸ್ಟಾಲಿನ್ ಎಂದು ಹೆಸರಿಸಿರುವ ಮಹೀಂದ್ರಾ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚು ಸುಧಾರಿತ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ದಿಗೊಳಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ವರ್ಷನ್

ಹೊಸ ಎಂಜಿನ್ ಅನ್ನು ಸ್ಪೋರ್ಟ್ಜ್ ವರ್ಷನ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದ್ದು, ಹೊಸ ಕಾರು ಮುಂಬರುವ ಅಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಹೊಸ ಎಂಜಿನ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಹೊಂದಲಿದೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ವರ್ಷನ್

ಹೊಸ ಎಂಜಿನ್ ಮಾದರಿಯು 130-ಬಿಎಚ್‌ಪಿ ಮತ್ತು 230-ಎನ್ಎಂ ಟಾರ್ಕ್ ಉತ್ಪಾದನಾ ಸಾಮಾರ್ಥ್ಯ ಪಡೆದುಕೊಂಡಿದ್ದು, ಇದು ಎಕ್ಸ್‌ಯುವಿ300 ಸಾಮಾನ್ಯ ಪೆಟ್ರೋಲ್ ಮಾದರಿಗಿಂತಲೂ 20-ಬಿಎಚ್‌ಪಿ ಹೆಚ್ಚುವರಿಯಾಗಿ ಉತ್ಪಾದನೆ ಮಾಡಬಲ್ಲದು.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ವರ್ಷನ್

ಸಾಮಾನ್ಯ ಆವೃತ್ತಿಯಲ್ಲಿ ಪೆಟ್ರೋಲ್ ಮಾದರಿಯು 1.2-ಲೀಟರ್ ಎಂಜಿನ್‍‌ನೊಂದಿಗೆ 110-ಬಿಎಚ್‌ಪಿ ಸಾಮರ್ಥ್ಯವನ್ನು ಹೊಂದಿದ್ದು, ಸಾಮಾನ್ಯ ಪೆಟ್ರೋಲ್ ಆವೃತ್ತಿಗಿಂತಲೂ ಹೊಸ ಕಾರು ಹೆಚ್ಚುವರಿಯಾಗಿ ರೂ.80 ಸಾವಿರದಿಂದ ರೂ. 1 ಲಕ್ಷದಷ್ಟು ಹೆಚ್ಚುವರಿ ಬೆಲೆ ಪಡೆಯಲಿದೆ.

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ವರ್ಷನ್

ಹಾಗೆಯೇ ಹೊಸ ಕಾರನ್ನು ಸ್ಪೋರ್ಟ್ಜ್ ಮಾದರಿಯಾಗಿ ಗುರುತಿಸಿಕೊಳ್ಳಲು ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದ್ದು, ಸ್ಪೋರ್ಟಿ ಗ್ರಾಫಿಕ್ಸ್ ಮತ್ತು ಕಾರಿನ ಒಳಭಾಗದಲ್ಲಿ ರೆಡ್ ಲೈನ್‌ಗಳನ್ನು ಬಳಕೆ ಮಾಡಿರುವುದು ಆಕರ್ಷಣಿವಾಗಿದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಬಿಡುಗಡೆಗೆ ಸಜ್ಜಾದ ಮಹೀಂದ್ರಾ ಎಕ್ಸ್‌ಯುವಿ300 ಪರ್ಫಾಮೆನ್ಸ್ ವರ್ಷನ್

ಹೊಸ ಎಂಜಿನ್ ಮಾದರಿಯನ್ನು ಕೇವಲ ಎಕ್ಸ್‌ಯುವಿ300 ಸ್ಪೋರ್ಟ್ಜ್ ವರ್ಷನ್‌ನಲ್ಲಿ ಮಾತ್ರವಲ್ಲದೇ ಮುಂಬರುವ ಫೋರ್ಡ್ ಹೊಸ ಇಕೋಸ್ಪೋರ್ಟ್ಸ್ ಆವೃತ್ತಿಯಲ್ಲೂ ಇದೇ ಎಂಜಿನ್ ಅನ್ನು ಬಳಕೆ ಮಾಡಲಾಗುತ್ತಿದ್ದು, ಸಹಭಾಗಿತ್ವ ಯೋಜನೆಯಲ್ಲಿ ಕಾರು ಉತ್ಪಾದನೆ ಮಾಡುತ್ತಿರುವ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಯು ಹೊಸ ಎಂಜಿನ್ ಅನ್ನು ವಿವಿಧ ಕಾರು ಮಾದರಿಗಳಲ್ಲಿ ಬಳಕೆ ಮಾಡಿಕೊಳ್ಳಲಿವೆ.

Source: Gaadiwaadi

Most Read Articles

Kannada
English summary
Mahindra XUV300 T-GDi Turbo-Petrol Spotted Testing Ahead Of Launch. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X