ನ್ಯೂ ಜನರೇಷನ್ ಮಹೀಂದ್ರಾ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ನ್ಯೂ ಜನರೇಷನ್ ಎಕ್ಸ್‌ಯುವಿ500 ಕಾರು ಮಾದರಿಯ ಬಿಡುಗಡೆಗೆ ಸಜ್ಜಾಗಿರುವ ಮಹೀಂದ್ರಾ ಕಂಪನಿಯು ಹೊಸ ಕಾರಿನ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದ್ದು, ಹೊಸ ಕಾರು ಪ್ರಸ್ತುತ ಮಾದರಿಗಿಂತಲೂ ಹಲವಾರು ಹೊಸ ಪ್ರೀಮಿಯಂ ಸೌಲಭ್ಯಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಎರಡನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಎಕ್ಸ್‌ಯುವಿ500 ಕಾರು ಮಾದರಿಯು ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ. ಸದ್ಯ ಬಿಎಸ್-6 ಎಕ್ಸ್‌ಯುವಿ500 ಮಾದರಿಯು ಸದ್ಯ ಡೀಸೆಲ್ ಎಂಜಿನ್‌ನೊಂದಿಗೆ ಮಾತ್ರವೇ ಖರೀದಿಗೆ ಲಭ್ಯವಿದ್ದು, ನ್ಯೂ ಜನರೇಷನ್ ಮಾದರಿಯು ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವು ಹೊಸ ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುವ ಸಿದ್ದತೆಯಲ್ಲಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ತಲೆಮಾರಿನ ಎಕ್ಸ್‌ಯುವಿ500 ಕಾರು ಮಾದರಿಯನ್ನು ಮೊನೊಕೊಕ್ ಪ್ಲಾಟ್‌ಫಾರ್ಮ್‌ನ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದ್ದು, ಕಾರಿನ ವಿನ್ಯಾಸ ಮತ್ತು ಸ್ಟೈಲಿಂಗ್‌ನಲ್ಲಿ ಗಮನಾರ್ಹ ಬದಲಾವಣೆಗಳ ಜೊತೆಗೆ ಹಲವಾರು ನವೀಕರಣಗಳು ಮತ್ತು ಹೆಚ್ಚುವರಿ ಫೀಚರ್ಸ್‌ಗಳನ್ನು ಸಹ ಹೊಂದಿರಲಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಕಾರಿನ ಕ್ಯಾಬಿನ್ ಕೂಡಾ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, 6 ಮತ್ತು 7 ಸೀಟುಗಳ ಆಯ್ಕೆಗಳನ್ನು ಹೊಂದಿರಲಿದೆ. ಇದು ಎಂಜಿ ಹೆಕ್ಟರ್ ಪ್ಲಸ್ 6-ಸೀಟರ್ ಮತ್ತು ಮುಂಬರುವ ಟಾಟಾ ಗ್ರಾವಿಟಾಸ್ ಎಸ್‍ಯುವಿಗಳಿಗೆ ನೇರವಾಗಿ ಪೈಪೋಟಿ ನೀಡುತ್ತದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಹಾಗೆಯೇ ನ್ಯೂ ಜನರೇಷನ್ ಮಾದರಿಯಲ್ಲಿ ನವೀಕರಿಸಲಾದ ಮುಂಭಾಗದ ಗ್ರಿಲ್, ಹೊಸ ವಿನ್ಯಾಸದ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಹಿಂಭಾಗದಲ್ಲಿ ನವೀಕರಿಸಲಾದ ಬಂಪರ್ ಪ್ರಮುಖ ಆಕರ್ಷಣೆಯಾಗಲಿದ್ದು, ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಲಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಕಾರು ಪ್ರಸ್ತುತ ಮಾದರಿಗಿಂತಲೂ ಭಾರೀ ಬದಲಾವಣೆಯನ್ನು ಪಡೆದುಕೊಂಡಿದ್ದು, ನವೀಕೃತ ಮುಂಭಾಗದ ಗ್ರಿಲ್, ಬ್ಯಾನೆಟ್, ಬಂಪರ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್ ಕ್ಲಸ್ಟರ್, ಹಿಂಭಾಗ ಬಂಪರ್, ಟೈಲ್‌ಗೆಟ್ ವಿನ್ಯಾಸವು ಆಕರ್ಷಕವಾಗಿರಲಿವೆ. ಹಾಗೆಯೇ ಕಾರಿನ ಒಳಭಾಗದ ತಾಂತ್ರಿಕ ಅಂಶಗಳಲ್ಲೂ ಸಾಕಷ್ಟು ಬದಲಾವಣೆಗೊಳಿಸಲಾಗಿದ್ದು, ವೆಂಟೆಲೆಟೆಡ್ ಆಸನ ಸೇರಿದಂತೆ ಹಲವು ಐಷಾರಾಮಿ ಫೀಚರ್ಸ್ ಹೊಸ ಕಾರಿನಲ್ಲಿರಲಿವೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಹೊಸ ಕಾರಿನಲ್ಲಿ ಐಷಾರಾಮಿ ಕಾರುಗಳ ಮಾದರಿಯಲ್ಲಿ ಹಾರಿಜೆಂಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಫ್ಲ್ಯಾಟ್ ಬಾಟಮ್ ಸ್ಟ್ರೀರಿಂಗ್ ಜೊತೆಗೆ ಮೌಂಟೆಡ್ ಕಂಟ್ರೋಲ್ಸ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್, ವಿವಿಧ ಡ್ರೈವಿಂಗ್ ಮೋಡ್‌ಗಳು, ಸ್ಟಾರ್ಟ್/ಸ್ಟಾಪ್ ಬಟನ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳಿವೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಜೊತೆಗೆ ನ್ಯೂ ಜನರೇಷನ್ ಎಕ್ಸ್‌ಯುವಿ500 ಕಾರು ಮಾದರಿಯು 2.2 ಡೀಸೆಲ್ ಎಂಜಿನ್ ಜೊತೆ ಹೊಸ ಥಾರ್‌ನಲ್ಲಿ ನೀಡಲಾಗಿರುವ 2.0-ಲೀಟರ್ ಎಂ-ಸ್ಟಾಲಿನ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಸಹ ಪಡೆದುಕೊಳ್ಳಲಿದ್ದು, ಹಲವಾರು ಸ್ಟ್ಯಾಂಡರ್ಡ್ ಸೇಫ್ಟಿ ಫೀಚರ್ಸ್‌ಗಳೊಂದಿಗೆ ಗ್ರಾಹಕರನ್ನು ಗಮನಸೆಳೆಯಲಿವೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಸದ್ಯ ಮಾರುಕಟ್ಟೆಯಲ್ಲಿರುವ ಎಕ್ಸ್‌ಯುವಿ500 ಕಾರು ಮಾದರಿಯು ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ ಮಾರಾಟಕ್ಕೆ ಲಭ್ಯವಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದೆ. ಈ ಮೂಲಕ 153-ಬಿಎಚ್‌ಪಿ ಮತ್ತು 360-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಗ್ರಾಹಕರನ್ನು ಗಮನಸೆಳೆಯಲಿದೆ.

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಆಟೋಮ್ಯಾಟಿಕ್ ಆವೃತ್ತಿಯು ಡಬ್ಲ್ಯು7 ಆಟೋಮ್ಯಾಟಿಕ್ ಆವೃತ್ತಿಯು ಪುಣೆ ಎಕ್ಸ್‌ಶೋರೂಂ ಪ್ರಕಾರ ರೂ. 15.65 ಲಕ್ಷಕ್ಕೆ, ಡಬ್ಲ್ಯು9 ಆಟೋಮ್ಯಾಟಿಕ್ ಮಾದರಿಯು ರೂ. 17.36 ಲಕ್ಷ ಮತ್ತು ಡಬ್ಲ್ಯು9(ಆಪ್ಷನ್) ಆಟೋಮ್ಯಾಟಿಕ್ ಆವೃತ್ತಿಯು ರೂ. 18.88 ಲಕ್ಷ ಬೆಲೆ ಹೊಂದಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಮಹೀಂದ್ರಾ ಹೊಸ ಎಕ್ಸ್‌ಯುವಿ500 ಇಂಟಿರಿಯರ್ ಮಾಹಿತಿ ಬಹಿರಂಗ

ಎಕ್ಸ್‌ಯುವಿ500 ಡೀಸೆಲ್ ಮ್ಯಾನುವಲ್ ಆವೃತ್ತಿಯು ಎಕ್ಸ್‌ಶೋರೂಂ ಪ್ರಕಾರ ರೂ. 13.18 ಲಕ್ಷ ಬೆಲೆ ಹೊಂದಿದ್ದು, ಟಾಪ್ ಎಂಡ್ ಮಾದರಿಯು ರೂ. 17.68 ಲಕ್ಷ ಬೆಲೆ ಹೊಂದಿದೆ. ಬಿಎಸ್-4 ಮಾದರಿಗಿಂತಲೂ ಬಿಎಸ್-6 ಮಾದರಿಯು ವಿವಿಧ ಆವೃತ್ತಿಗಳಿಗೆ ಅನುಗುಣವಾಗಿ ರೂ.1 ಲಕ್ಷದಿಂದ ರೂ. 1.50 ಲಕ್ಷದಷ್ಟು ದುಬಾರಿಯಾಗಿದೆ.

Image Courtesy: SP Auto Tech

Most Read Articles

Kannada
English summary
2021 Mahindra XUV500 Interiors, Features & Engine Revealed. Read in Kannada.
Story first published: Thursday, October 29, 2020, 11:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X