ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಮಲಯಾಳಂ ಚಿತ್ರರಂಗದ ಖ್ಯಾತ ನಟ ಜಯಸೂರ್ಯ ಅವರು ಹೊಸ ಮಿನಿ ಕ್ಲಬ್‍‍ಮ್ಯಾನ್ ಕಾರನ್ನು ಖರೀದಿಸಿದ್ದಾರೆ. ಇದು ಹೊಸ ಮಿನಿ ಕ್ಲಬ್‍‍ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಸ್ಪೆಷಲ್ ಎಡಿಷನ್ ಆಗಿದೆ.

ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಓಣಂ ಹಬ್ಬದಂದು ನಟ ಜಯಸೂರ್ಯ ತನ್ನ ಕುಟುಂಬ ಸದ್ಯಸರೊಂದಿಗೆ ತೆರಳಿ ಹೊಸ ಅತಿಥಿ ಮಿನಿ ಕ್ಲಬ್‍‍ಮ್ಯಾನ್ ಕಾರನ್ನು ಪಡೆದುಕೊಂಡಿದ್ದಾರೆ. ಇವರು ಮಿನಿ ಕ್ಲಬ್‍‍ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಸ್ಪೆಷಲ್ ಎಡಿಷನ್ ಟಾಪ್ ವೆರಿಯೆಂಟ್ ಕಾರನ್ನು ಖರೀದಿಸಿದ್ದಾರೆ. ಈ ಜನಪ್ರಿಯ ನಟನಿಗೆ ಕಾರುಗಳ ಕ್ರೇಜ್ ಹೆಚ್ಚಿದೆ. ಜಯಸೂರ್ಯ ಅವರ ಗ್ಯಾರೇಜ್ ನಲ್ಲಿ ಹಲವಾರು ಐಷಾರಾಮಿ ಕಾರುಗಳಿವೆ. ಈ ಜನಪ್ರಿಯ ನಟನಿಗೆ ಕರ್ನಾಟಕದಲ್ಲಿಯು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.

ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಮಿನಿ ಕ್ಲಬ್‍‍ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಸ್ಪೆಷಲ್ ಎಡಿಷನ್ ಕಾರನ್ನು ಹೊಂದಿರುವ ಕೇರಳದ ಮೊದಲ ವ್ಯಕ್ತಿ ಇವರಾಗಿದ್ದಾರೆ. ಇನ್ನು ಭಾರತದಲ್ಲಿ ಈ ಕಾರನ್ನು ಹೊಂದಿರುವ ಮೂರನೇ ವ್ಯಕ್ತಿ ಇವರಾಗಿದ್ದಾರೆ. ಕೊಚ್ಚಿಯ ಮಿನಿ ಡೀಲರ್ ಬಳಿ ಇವರು ಕಾರನ್ನು ಖರೀದಿಸಿದ್ದಾರೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಮಿನಿ ಕ್ಲಬ್‍‍ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಸ್ಪೆಷಲ್ ಎಡಿಷನ್ ಅನ್ನು ಭಾರತದಲ್ಲಿ 2020ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಳಿಸಿದ್ದರು. ಈ ವಿಶೇಷ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 15 ಯುನಿಟ್‍‍ಗಳಿಗೆ ಸೀಮಿತವಾಗಿ ಬಿಡುಗಡೆಗೊಳಿಸಲಾಗಿತ್ತು

ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಇದು ಸಾಮಾನ್ಯ ಕ್ಲಬ್‍‍ಮ್ಯಾನ್ ಮಾದರಿಯಂತೆ ಆಕರ್ಷಕ ಲುಕ್ ಅನ್ನು ಹೊಂದಿದೆ. ಈ ಹೊಸ ಕಾರು ಇಂಡಿಯನ್ ಸಮ್ಮರ್ ಮೆಟಾಲಿಕ್ ರೆಡ್ ಬಣ್ಣವನ್ನು ಹೊಂದಿದೆ. ಇದರ ಹೊರಭಾಗದಲ್ಲಿ ಮಿರರ್ ಕ್ಯಾಪ್ಸ್ ಮತ್ತು ಫ್ರಂಟ್ ಗ್ರಿಲ್‍‍ನಂತಹ ಪಿಯಾನೊ ಬ್ಲ್ಯಾಕ್ ಎಕ್ಸಟ್‍‍ಗಳನ್ನು ಹೊಂದಿದೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಈ ವಿಶೇಷ ಆವೃತ್ತಿಯಲ್ಲಿ ಮರುವಿನ್ಯಾಸ ಮಾಡಲಾದ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳು, ಫಾಗ್ ಲ್ಯಾಂಪ್ ಮತ್ತು ಎಲ್‍ಇಡಿ ಟೇಲ್‍‍ಲೈಟ್‍‍ಗಳನ್ನು ಹೊಂದಿದೆ. ಸೀಮಿತ ಆವೃತ್ತಿಯ ಕ್ಲಬ್‍‍ಮ್ಯಾನ್‍‍ನಲ್ಲಿ ಹೊಸ ಟೇಲ್ ಲ್ಯಾಪ್‍‍ಗಳು ವಿಶಿಷ್ಟವಾದ ಯೂನಿಯನ್ ಜ್ಯಾಕ್ ವಿನ್ಯಾಸವನ್ನು ಹೊಂದಿದೆ.

ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಇನ್ನು ಇಂಟಿರಿಯರ್‍‍‍ನಲ್ಲಿ ಆಂಬಿಯೆಂಟ್ ಲೈಟಿಂಗ್, ಪ್ರೊಜೆಕ್ಟ್ ಲ್ಯಾಂಪ್ ಮೆಮೊರಿ ಫಂಕ್ಷನ್ ಮತ್ತು ಚಾಲಕ ಮತ್ತು ಮುಂಭಾಗದಲ್ಲಿನ ಪ್ರಯಾಣಿಕರ ಸೀಟ್ ಅನ್ನು ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾಗಿದೆ. 6.5 ಇಂಚಿನ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಹೊಸ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಕಾರಿನಲ್ಲಿ 2.0 ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿ‍‍ಹೆಚ್‍ಪಿ ಪವರ್ ಮತ್ತು 280 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

ಮಿನಿ ಕ್ಲಬ್‍‍ಮ್ಯಾನ್ ಸ್ಪೆಷಲ್ ಎಡಿಷನ್ ಕಾರು ಖರೀದಿಸಿದ ಮಲಯಾಳಂ ಚಿತ್ರರಂಗದ ಖ್ಯಾತ ನಟ

ಈ ಕಾರು 228 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರು 7.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಇನ್ನು ಈ ಕಾರಿನಲ್ಲಿ ಸುರಕ್ಷತೆಗಾಗಿ ಬ್ರೇಕ್ ಅಸಿಸ್ಟ್ ಮೂರು ಪಾಯಿಂಟ್ ಸೀಟ್‍‍ಬೆಲ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಕಾರ್ನರಿಂಗ್ ಕಂಟ್ರೋಲ್, ಬಿಎಂಡಬ್ಲ್ಯು ರನ್-ಫ್ಲಾಟ್ ಟಯರ್ ಮತ್ತು ಮಲ್ಟಿಪಲ್ ಏರ್‌ಬ್ಯಾಗ್‌ಗಳನ್ನು ಅಳವಡಿಸಿದ್ದಾರೆ.

Image Courtesy: Justin Paul/Instagram

Most Read Articles

Kannada
Read more on ಮಿನಿ mini
English summary
Malayalam Actor Jayasurya Bought Mini Cluban Summer Edition. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X