ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ 800 ಕಾರು

ಮಾರುತಿ ಸುಜುಕಿ ಭಾರತದ ಬಹುದೊಡ್ಡ ಕಾರು ತಯಾರಕ ಕಂಪನಿಯಾಗಿದೆ. ಭಾರತದಲ್ಲಿ ಮಾರುತಿ ಸುಜುಕಿ ಕಾರುಗಳು ಬಹಳಷ್ಟು ಜನಪ್ರಿಯವಾಗಿವೆ. ಮಾರುತಿ ಸುಜುಕಿ ಪ್ರತಿವರ್ಷ ದೇಶದಲ್ಲಿ ಲಕ್ಷಾಂತರ ಕಾರುಗಳನ್ನು ಮಾರಾಟ ಮಾಡುತ್ತದೆ. ಮಾರುತಿ 800, ಮಾರುತಿ ಕಂಪನಿಯ ಜನಪ್ರಿಯ ಕಾರ್ ಆಗಿದೆ.

ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ 800 ಕಾರು

ಎರಡು ದಶಕಗಳಿಂದ ಮಾರುಕಟ್ಟೆಯಲ್ಲಿದ್ದ ಈ ಕಾರಿನ ಉತ್ಪಾದನೆಯನ್ನು ಈಗ ನಿಲ್ಲಿಸಲಾಗಿದೆ. ಇಂದಿಗೂ ಜನರು ಈ ಕಾರನ್ನು ಬಳಸುತ್ತಿದ್ದಾರೆ. ಚಂಡೀಗಢದ ವ್ಯಕ್ತಿಯೊಬ್ಬರು ತಮ್ಮ ಮಾರುತಿ 800 ಕಾರ್ ಅನ್ನು ವಿಶೇಷ ರೀತಿಯಲ್ಲಿ ಮಾಡಿಫೈಗೊಳಿಸಿದ್ದಾರೆ. ಈ ಕಾರನ್ನು ಸ್ಪೋರ್ಟ್ಸ್ ಕಾರ್ ರೀತಿಯಲ್ಲಿ ಮಾಡಿಫೈ ಮಾಡಲಾಗಿದೆ. ಈ ಕಾರಿನ ರೂಫ್ ಅನ್ನು ಕನ್ವರ್ಟಿಬಲ್ ಮಾಡಲಾಗಿದೆ.

ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ 800 ಕಾರು

ಮಾರುತಿ 800, 4 ಸೀಟುಗಳ ಕಾರು ಆಗಿದ್ದು, ಮಾಡಿಫೈಗೊಂಡ ಕಾರಿನ ಹಿಂಬದಿಯಲ್ಲಿದ್ದ ಎರಡು ಸೀಟುಗಳನ್ನು ತೆಗೆದುಹಾಕಲಾಗಿದೆ. ಕಾರಿನ ಮುಂಭಾಗದ ರಚನೆಯು ಮಾರುತಿ 800ನಂತಿದ್ದರೆ, ಹಿಂದಿನ ರಚನೆಯನ್ನು ಮತ್ತೊಂದು ಕಾರಿನಿಂದ ತೆಗೆದುಕೊಳ್ಳಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ 800 ಕಾರು

ಮಾಡಿಫೈಗೊಂಡ ಕಾರು ಗಾಢ ಕೆಂಪು ಬಣ್ಣವನ್ನು ಹೊಂದಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಕಾರಿನ ಮುಂಭಾಗದ ಬಂಪರ್ ಅನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸಲಾಗಿದೆ. ಮೂಲ ಹೆಡ್‌ಲೈಟ್ ಅನ್ನು 6 ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳೊಂದಿಗೆ ಬದಲಿಸಲಾಗಿದೆ.

ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ 800 ಕಾರು

ಕಾರಿನ ಹಿಂಭಾಗವು ಸೆಡಾನ್ ಕಾರಿನಂತೆ ಕಾಣುತ್ತದೆ. ಸ್ಪೋರ್ಟಿ ಲುಕ್ ನೀಡಲು ಕಾರಿನ ಬೂಟ್‌ ಮೇಲೆ ಸ್ಪಾಯ್ಲರ್ ಅಳವಡಿಸಲಾಗಿದೆ. ಹಿಂಭಾಗದಲ್ಲಿರುವ ಎರಡು ಸೀಟುಗಳನ್ನು ತೆಗೆದುಹಾಕಿರುವುದರಿಂದ ಬೂಟ್‌ನಲ್ಲಿ ಲಗೇಜ್‌ಗಾಗಿ ಹೆಚ್ಚು ಸ್ಥಳವಕಾಶ ಸಿಗಲಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಈ ಕಾರು ಹೊಸ ಬ್ಯಾಕ್ ವೀವ್ ಮಿರರ್ ಅನ್ನು ಹೊಂದಿದ್ದು ಐಷಾರಾಮಿಯಾಗಿ ಕಾಣುತ್ತದೆ. ಇದರ ಜೊತೆಗೆ ಹೊಸ ಅಲಾಯ್ ವ್ಹೀಲ್ ಹಾಗೂ ದೊಡ್ಡ ಟಯರ್‌ಗಳನ್ನು ಅಳವಡಿಸಲಾಗಿದೆ. ಈ ಕಾರಿನ ಮಾಡಿಫೈಗಾಗಿ ರೂ.2.5 ಲಕ್ಷ ಖರ್ಚು ಮಾಡಲಾಗಿದೆ.

ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಮಾರುತಿ 800 ಕಾರು

ಈ ಕಾರಿನ ಮಾಲೀಕರು ಕಾರುಗಳನ್ನು ಮಾಡಿಫೈಗೊಳಿಸುವುದನ್ನು ಇಷ್ಟಪಡುವುದಾಗಿ ಹೇಳಿದ್ದಾರೆ. ಇದೇ ರೀತಿ ಹಲವು ಕಾರುಗಳನ್ನು ಮಾಡಿಫೈಗೊಳಿಸಿರುವುದಾಗಿ ಹೇಳಿದ್ದಾರೆ. ಕಾರಿನ ಫಿನಿಷಿಂಗ್ ಸರಿಯಾಗಿ ಬಂದಿಲ್ಲವಾದರೂ, ಈ ಕಾರು ರಸ್ತೆಗಿಳಿದರೆ ಜನರ ಗಮನವನ್ನು ತನ್ನತ್ತ ಸೆಳೆಯುತ್ತದೆ.

Most Read Articles

Kannada
English summary
Maruti 800 turned into sportscar. Read in Kannada.
Story first published: Saturday, June 13, 2020, 18:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X