Just In
Don't Miss!
- Movies
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕರೋನಾ ಭೀತಿಯಿಂದ ಪಾತಾಳಕ್ಕೆ ಕುಸಿತ ಮಾರುತಿ ಸುಜುಕಿ ಕಾರುಗಳ ಮಾರಾಟ
ದೇಶದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಳೆದ ಮೇ ತಿಂಗಳ ಮಾರಾಟದ ವರದಿಯನ್ನು ಬಹಿರಂಗಪಡಿಸಿದೆ. ಕಳೆದ ಮೇ ತಿಂಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಒಟ್ಟು 18,539 ಯುನಿಟ್ಗಳನ್ನು ಮಾರಾಟ ಮಾಡಲಾಗಿದೆ.

ಈ ಒಟ್ಟು ಮಾರಾಟದಲ್ಲಿ 13,865 ಯುನಿಟ್ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ, 4,651 ಯುನಿಟ್ಗಳನ್ನು ರಫ್ತು ಮಾಡಲಾಗಿದೆ.ಇನ್ನು 23 ಯುನಿಟ್ಗಳು ಒಇಎಂ (ಟೊಯೊಟಾ ಗ್ಲಾಂಝಾ) ಆಗಿದೆ. ಮಾರುತಿ ಸುಜುಕಿ ಕಳೆದ ವರ್ಷದ ಮೇ ತಿಂಗಳ ಅವಧಿಗಯಲ್ಲಿ ಮಾರಾಟ ಮಾಡಿರುವುದಕ್ಕೆ ಹೋಲಿಸಿದರೆ ಶೇ.89 ಹೆಚ್ಚು ಕುಸಿತ ಕಂಡಿದೆ. ಕಳೆದ ವರ್ಷದ ಮೇ ತಿಂಗಳಲ್ಲಿ ಮಾರುತಿ ಸುಜುಕಿಯ 1,25,552 ಯುನಿಟ್ಗಳು ಮಾರಾಟವಾಗಿತ್ತು.

ದೇಶದಲ್ಲಿ ಲಾಕ್ ಡೌನ್ ಅನ್ನು ಮಾಡಿದಾಗ ಮಾರುತಿ ಸುಜುಕಿ ಉತ್ಪಾದನೆ ಮತ್ತು ಮಾರಾಟವು ಸಂಪೂರ್ಣವಾಗಿ ಸ್ಥಗಿತವಾಗಿತ್ತು. ಎಲ್ಲಾ ಇತರ ವಾಹನ ತಯಾರಕರಂತೆ ಏಪ್ರಿಲ್ ತಿಂಗಳಲ್ಲಿ ಒಂದು ಕಾರನ್ನು ಕೂಡ ಮಾರಾಟ ಮಾಡಲು ಸಾಧ್ಯವಾಗಿಲ್ಲ.
MOST READ: ಅನಾವರಣವಾಗಲಿದೆ ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್ಲಿಫ್ಟ್ ಎಸ್ಯುವಿ

ಮಾರುತಿ ಸುಜುಕಿ ಕಂಪನಿಯು ಮೇ 12ರಂದು ಮೊದಲ ಬಾರಿಗೆ ತಮ್ಮ ಮನೇಸರ್ ಘಟಕವನ್ನು ತೆರೆದರೆ, ಕೆಲವು ದಿನಗಳ ನಂತರ ಗುರುಗ್ರಾಮ್ ಘಟಕವನ್ನು ಆರಂಭಿಸಿದ್ದರು, ಸರ್ಕಾರದ ಅದೇಶದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮಾರುತಿ ಸುಜುಕಿ ಕಂಪನಿಯು ಉತ್ಪಾದನೆ ಮತ್ತು ಮಾರಾಟವನ್ನು ಆರಂಭಿಸಿದ್ದರು.

ಮಾರುತಿ ಸುಜುಕಿ ಕಂಪನಿಯು ತಮ್ಮ ಗುಜರಾತ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಕೂಡ ಉತ್ಪಾದನೆಯನ್ನು ಮೇ 25ರಂದು ಪುನಾರಂಭಿಸಿದ್ದರು. ಈ ಎಲ್ಲಾ ಮೂರು ಘಟಕದಲ್ಲಿ ಸರ್ಕಾರದ ಮಾರ್ಗಸೂಚಿಗಳು ಮತ್ತು ನಿಯಮಾವಳಿಗಳನ್ನು ಅನುಸರಿಸಿ ಉತ್ಪಾದನೆಯನ್ನು ಆರಂಭಿಸಿದ್ದರು.
MOST READ: ಡೀಲರ್ ಬಳಿ ತಲುಪಿದ ಹೊಸ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿ

ಮಾರುತಿ ಕಂಪನಿಯು ತನ್ನ ಘಟಕದಲ್ಲಿ ಹೊಸ ಎಸ್-ಪ್ರೆಸ್ ಸಿಎನ್ಜಿ ಆವೃತ್ತಿಗಳ ಉತ್ಪಾದನೆಯನ್ನು ಕೂಡ ಪ್ರಾರಂಭಿಸಿದೆ. ಮಾರುತಿ ಸುಜುಕಿ ತನ್ನ ಹೊಸ ಎಸ್-ಪ್ರೆಸ್ಸೊ ಸಿಎನ್ಜಿ ಆವೃತ್ತಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು.

ಎಸ್-ಪ್ರೆಸ್ಸೊ ಕಾರ್ ಅನ್ನು 1.0 ಲೀಟರಿನ ಪೆಟ್ರೋಲ್ ಎಂಜಿನ್ನೊಂದಿಗೆ ಮಾರಾಟ ಮಾಡಲಾಗುತ್ತದೆ. ಕಂಪನಿಯು ಇದೀಗ ಸಿಎನ್ಜಿ ಆವೃತ್ತಿಯಲ್ಲಿ ಎಸ್-ಪ್ರೆಸ್ಸೊ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.
MOST READ: ಹೊಸ ನಿವಸ್ ಎಸ್ಯುವಿಯನ್ನು ಅನಾವರಣಗೊಳಿಸಿದ ಫೋಕ್ಸ್ವ್ಯಾಗನ್

ಪೆಟ್ರೋಲ್ ಎಂಜಿನ್ ಕಾರಿಗಿಂತ ಸಿಎನ್ಜಿ ಕಾರಿನ ಇಂಜಿನ್ ದಕ್ಷತೆಯು ಕಡಿಮೆಯಾಗುವ ಸಾಧ್ಯತೆಗಳಿವೆ. ಸಿಎನ್ಜಿ ಆವೃತ್ತಿಯು 67 ಬಿಹೆಚ್ಪಿ ಪವರ್ ಮತ್ತು 90 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು. ಈ ಕಾರಿನಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್ಬಾಕ್ಸ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ.

ದೇಶದಲ್ಲಿ ಇನ್ನು ಕೂಡ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಸಡಿಲಿಕೆಯಿಂದ ಕಾರು ಉತ್ಪಾದನಾ ಸಂಸ್ಥೆಗಳು ಕಾರ್ಯನಿರ್ವಸುತ್ತಿದ್ದಾರೆ. ನಿಧಾನವಾಗಿ ಕಾರುಗಳ ಮಾರಾಟದಲ್ಲಿ ಚೇತರಿಕೆ ಕಾಣುತ್ತದೆ ಎಂದು ನಿರೀಕ್ಷಿಸುತ್ತೆವೆ.