ಕರೋನಾ ವೈರಸ್ ಎಫೆಕ್ಟ್: ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ದೇಶದ ಹಲವೆಡೆ ಲಾಕ್‌ಡೌನ್ ಇನ್ನೂ ಜಾರಿಯಲ್ಲಿದೆ. ಈ ಪ್ರದೇಶಗಳಲ್ಲಿ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಈ ಕಾರಣಕ್ಕೆ ವಾಹನ ತಯಾರಕ ಕಂಪನಿಗಳು ತಮ್ಮ ಗ್ರಾಹಕರಿಗೆ ಪರಿಹಾರ ನೀಡಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.

ಕರೋನಾ ವೈರಸ್ ಎಫೆಕ್ಟ್: ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ಭಾರತದ ನಂ 1 ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಉಚಿತ ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದೆ. ಫ್ರೀ ಸರ್ವೀಸ್, ವಾರಂಟಿ ಹಾಗೂ ಎಕ್ಸ್‌ಟೆಂಟೆಡ್ ವಾರಂಟಿಯನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಮಾರುತಿ ಸುಜುಕಿ ಘೋಷಿಸಿದೆ. ಇದರಿಂದ 2020ರ ಮೇ ತಿಂಗಳಿನಲ್ಲಿ ವಾರಂಟಿ ಅವಧಿ ಮುಗಿಯುವ ಗ್ರಾಹಕರಿಗೆ ಅನುಕೂಲವಾಗಲಿದೆ.

ಕರೋನಾ ವೈರಸ್ ಎಫೆಕ್ಟ್: ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ಲಾಕ್‌ಡೌನ್‌ನಿಂದ ವಾರಂಟಿ ಹಾಗೂ ಎಕ್ಸ್‌ಟೆಂಟೆಡ್ ವಾರಂಟಿಯ ಲಾಭ ಪಡೆಯಲು ಸಾಧ್ಯವಾಗದ ಗ್ರಾಹಕರಿಗಾಗಿ ಮಾರುತಿ ಸುಜುಕಿ ಕಂಪನಿಯು ಈ ಕ್ರಮ ಕೈಗೊಂಡಿದೆ. ಭಾರತದಲ್ಲಿ ಮಾರ್ಚ್ 25ರಿಂದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕರೋನಾ ವೈರಸ್ ಎಫೆಕ್ಟ್: ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ಕಾರು ಖರೀದಿಸುವ ಗ್ರಾಹಕರಿಗೆ ಹಣಕಾಸು ಸೌಲಭ್ಯಗಳನ್ನು ನೀಡಲು ಮಾರುತಿ ಸುಜುಕಿ ಕಂಪನಿಯು ಹೆಚ್‌ಡಿಎಫ್‌ಸಿ ಬ್ಯಾಂಕಿನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ಈ ಪಾಲುದಾರಿಕೆ ಅಡಿಯಲ್ಲಿ, ಮಾರುತಿ ಸುಜುಕಿಯ ಆಯ್ದ ಕಾರು ಮಾದರಿಗಳ ಮೇಲೆ ಹೆಚ್‌ಡಿಎಫ್‌ಸಿ ಬ್ಯಾಂಕ್ 100% ಹಣಕಾಸು ನೆರವು ಒದಗಿಸಲಿದೆ.

ಕರೋನಾ ವೈರಸ್ ಎಫೆಕ್ಟ್: ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಸೆಟಪ್ ಕಾರ್ ಹಣಕಾಸು ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯಡಿಯಲ್ಲಿ 84 ತಿಂಗಳವರೆಗೆ ಪ್ರತಿ 1 ಲಕ್ಷಕ್ಕೆ ಪ್ರತಿ ತಿಂಗಳು ರೂ.1,100 ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಸಂಬಳ ಪಡೆಯುವ ಗ್ರಾಹಕರಿಗಾಗಿ ಮೊದಲ 6 ತಿಂಗಳು ಹಾಗೂ ಸ್ವಯಂ ಉದ್ಯೋಗಿ ಗ್ರಾಹಕರಿಗಾಗಿ ಮೊದಲ 3 ತಿಂಗಳು ಕನಿಷ್ಠ ರೂ.899 ಪಾವತಿಸುವ ಯೋಜನೆಯನ್ನು ಸಹ ಪರಿಚಯಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ಕೋವಿಡ್ -19 ವೈರಸ್‌ನಿಂದ ರಕ್ಷಿಸಲು ಮಾರುತಿ ಸುಜುಕಿ ಕೆಲವು ಆಕ್ಸೆಸರಿಗಳನ್ನು ಬಿಡುಗಡೆಗೊಳಿಸಿದೆ. ಈ ಆಕ್ಸೆಸರಿಗಳನ್ನು ಮಾರುತಿ ಸುಜುಕಿಯ ಅಧಿಕೃತ ಶೋರೂಂಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕರೋನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಲು ಈ ಆಕ್ಸೆಸರಿಗಳು ಹಲವಾರು ರಕ್ಷಣಾ ಸಾಧನಗಳನ್ನು ಹೊಂದಿವೆ.

ಕರೋನಾ ವೈರಸ್ ಎಫೆಕ್ಟ್: ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ಈ ಆಕ್ಸೆಸರಿಗಳು ಕಾರಿನ ಕ್ಯಾಬಿನ್ ಅನ್ನು ಬೇರ್ಪಡಿಸಲು ಪಾರದರ್ಶಕವಾದ ಪ್ಲಾಸ್ಟಿಕ್ ಶೀಟ್‌ಗಳನ್ನು ಹೊಂದಿರುತ್ತವೆ. ಈ ಶೀಟ್‌ಗಳು ಡ್ರೈವರ್ ಹಾಗೂ ಕಾರಿನಲ್ಲಿರುವವರನ್ನು ಪ್ರತ್ಯೇಕವಾಗಿಸುತ್ತವೆ. ಈ ಶೀಟ್‌ಗಳನ್ನು ಎರ್ಟಿಗಾ, ಎಕ್ಸೆಲ್ 6, ಸಿಯಾಜ್, ಎಸ್-ಕ್ರಾಸ್, ವ್ಯಾಗನ್ಆರ್, ರಿಟ್ಜ್, ಡಿಸೈರ್ ಟೂರ್, ಸೆಲೆರಿಯೊ ಹಾಗೂ ಆಲ್ಟೊ ಕಾರುಗಳಿಗಾಗಿ ಸಿದ್ಧಪಡಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಎಫೆಕ್ಟ್: ಸರ್ವೀಸ್ ಹಾಗೂ ವಾರಂಟಿ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕಂಪನಿಯು ಮಾತ್ರವಲ್ಲದೇ ಇತರ ವಾಹನ ತಯಾರಕ ಕಂಪನಿಗಳು ಸಹ ತಮ್ಮ ಗ್ರಾಹಕರಿಗಾಗಿ ವಾರಂಟಿ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿವೆ. ಮುಂದಿನ ದಿನಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಗ್ರಾಹಕರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವ ಸಾಧ್ಯತೆಗಳಿವೆ.

Most Read Articles

Kannada
English summary
Maruti car warranty period free service extended. Read in Kannada.
Story first published: Saturday, May 30, 2020, 17:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X