ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ದೇಶಾದ್ಯಂತ ಲಾಕ್‌ಡೌನ್ ನಿಯಮಗಳಲ್ಲಿ ಸಡಿಲಿಕೆಗೊಳಿಸಿದಾಗ ಸರ್ಕಾರದ ಅದೇಶಗಳನ್ನು ಪಾಲಿಸಿ ಮಾರುತಿ ಸುಜುಕಿ ಕಂಪನಿಯು ಕಾರುಗಳ ಉತ್ಪಾದನೆಯನ್ನು ಇತ್ತೀಚೆಗೆ ಪ್ರಾರಂಭಿಸಿದ್ದರು. ಮಾರುತಿ ಕಂಪನಿಯು ತನ್ನ ಘಟಕದಲ್ಲಿ ಹೊಸ ಎಸ್-ಪ್ರೆಸ್ ಸಿಎನ್‌ಜಿ ಆವೃತ್ತಿಗಳ ಉತ್ಪಾದನೆಯನ್ನು ಕೂಡ ಪ್ರಾರಂಭಿಸಿದೆ.

ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ಭಾರತದ ಅತಿ ದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ತನ್ನ ಹೊಸ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿಯನ್ನು ಇತ್ತೀಚೆಗೆ ನಡೆದ 2020ರ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿತ್ತು. ಇದು ಮಾರುತಿ ಸುಜುಕಿ ಕಂಪನಿಯ ಆರನೇ ಸಿ‍ಎನ್‍‍ಜಿ ಕಾರು ಆಗಿದೆ. 2019ರಲ್ಲಿ ಬಿಡುಗಡೆಯಾದ ಮಾರುತಿ ಎಸ್-ಪ್ರೆಸ್ಸೊ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ.

ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರ್ ಅನ್ನು 1.0 ಲೀಟರಿನ ಪೆಟ್ರೋಲ್ ಎಂಜಿನ್‍‍‍ನೊಂದಿಗೆ ಮಾರಾಟ ಮಾಡಲಾಗುತ್ತದೆ. ಕಂಪನಿಯು ಇದೀಗ ಸಿ‍ಎನ್‍‍ಜಿ ಆವೃತ್ತಿಯಲ್ಲಿ ಎಸ್-ಪ್ರೆಸ್ಸೊ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ.

MOST READ: ಹೋಂಡಾ ಡಬ್ಲ್ಯು‍ಆರ್-ವಿ ಫೇಸ್‍‍ಲಿಫ್ಟ್ ಕಾರಿನ ಮೈಲೇಜ್ ಮಾಹಿತಿ ಬಹಿರಂಗ

ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾದ ಎಸ್-ಪ್ರೆಸ್ಸೊ ಹ್ಯಾಚ್‍‍ಬ್ಯಾಕ್ ಕಾರು ಹೊಸ ಪ್ಯಾಕ್ಟರಿ-ಫಿಟ್ ಪರಿಕರಗಳನ್ನು ಒಳಗೊಂಡಿದೆ. ಇದರಲ್ಲಿ ಡೆಕಲ್ಸ್, ರೂಫ್ ಸ್ಪಾಯ್ಲರ್‍ ಮತ್ತು ಡೋರ್ ಪ್ಯಾನೆಲ್‍‍ಗಳು ಸೇರಿವೆ. ಮಾರುತಿ ಸುಜುಕಿ ಕಂಪನಿಯು ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಕಾರಿನ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳನ್ನು ಬಹಿರಂಗಪಡಿಸಿಲ್ಲ.

ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ಪೆಟ್ರೋಲ್ ಎಂಜಿನ್ ಕಾರಿಗಿಂತ ಸಿ‍ಎನ್‍‍ಜಿ ಕಾರಿನ ಇಂಜಿನ್ ದಕ್ಷತೆಯು ಕಡಿಮೆಯಾಗುವ ಸಾಧ್ಯತೆಗಳಿವೆ. ಸಿ‍ಎನ್‍‍ಜಿ ಆವೃತ್ತಿಯು 67 ಬಿ‍ಹೆಚ್‍ಪಿ ಪವರ್ ಮತ್ತು 90 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು. ಈ ಕಾರಿನಲ್ಲಿ 5 ಸ್ಪೀಡಿನ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ.

MOST READ: ಭಾರತದಲ್ಲಿ ಬಿಡುಗಡೆಯಾಯ್ತು ಬಹುನಿರೀಕ್ಷಿತ ಸ್ಕೋಡಾ ಕರೋಕ್ ಎಸ್‍ಯುವಿ

ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಸಿ‍ಎನ್‍‍ಜಿ ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಸಿ‍ಎನ್‍‍ಜಿ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಮಾರುತಿ ಸುಜುಕಿ ಕಂಪನಿಯು ಆಲ್ಟೋ, ಎರ್ಟಿಗಾ ಮತ್ತು ವ್ಯಾಗ್‍‍‍ನ್ಆರ್ ಕಾರುಗಳನ್ನು ಈಗಾಗಲೇ ಸಿ‍ಎನ್‍‍ಜಿ ಆವೃತ್ತಿಯಲ್ಲಿ ಬಿಡುಗಡೆಗೊಳಿಸಿದೆ.

ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ಸಾಮಾನ್ಯ ಎಸ್-ಪ್ರೆಸ್ಸೊ ಪೆಟ್ರೋಲ್ ಆವೃತ್ತಿಯಲ್ಲಿ ಇಂಟಿರಿಯರ್‍‍‍ನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್‌ಗಳಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಇನ್ಸ್ ಟ್ರೂಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ, ಆರೇಂಜ್ ಕಲರ್ ಆಕ್ಸೆಂಟ್ ಸೌಲಭ್ಯವಿದೆ.

MOST READ: ಭಾರತದಲ್ಲಿ ಬಿಡುಗಡೆಯಾಯ್ತು ಅತಿ ವೇಗದ ಹೊಸ ಮರ್ಸಿಡಿಸ್ ಎಎಂಜಿ ಜಿಟಿ-ಆರ್ ಕಾರು

ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ಇನ್ನು ಎಸ್-ಪ್ರೆಸೊನಲ್ಲಿ ಕೀ ಲೆಸ್ ಎಂಟ್ರಿ, ಬ್ಲೂ‌ಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರೇರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದೆ.

ಸಿಎನ್‍ಜಿ ಆವೃತ್ತಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ

ಮಾರುತಿ ಎಸ್-ಪ್ರೆಸ್ಸೊ ಪೆಟ್ರೋಲ್ ಆವೃತ್ತಿಯಲ್ಲಿ ಲಭ್ಯವಿರುವ ನಾಲ್ಕು ರೂಪಾಂತರಗಳು ಸಿಎನ್‍ಜಿ ಆವೃತ್ತಿಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ. ಸಮಾನ್ಯ ಮಾರುತಿ ಎಸ್-ಪ್ರೆಸ್ಸೊ ಪೆಟ್ರೋಲ್ ಆವೃತ್ತಿಗಿಂತ ಸಿಎನ್‍ಜಿ ಆವೃತ್ತಿಯು ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
Maruti Suzuki S-Presso CNG Variant Production Beings. Read In Kannada.
Story first published: Wednesday, May 27, 2020, 21:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X