ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ಮಾರುತಿ ಸುಜುಕಿ ನಿರ್ಮಾಣದ ಮೈಕ್ರೊ ಎಸ್‌ಯುವಿ ಆವೃತ್ತಿ ಎಸ್-ಪ್ರೆಸ್ಸೊ ಕಾರಿಗೆ ವಿದೇಶಿ ಮಾರುಕಟ್ಟೆಗಳಲ್ಲೂ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಮೊದಲ ಬಾರಿಗೆ ಎಸ್-ಪ್ರೆಸ್ಸೊ ಆವೃತ್ತಿಯನ್ನು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಿಗೆ ಮತ್ತು ದಕ್ಷಿಣ ಆಫ್ರಿಕಾಕ್ಕೆ ರಫ್ತು ಮಾಡಲು ಚಾಲನೆ ನೀಡಲಾಗಿದೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಮೈಕ್ರೊ ಎಸ್‌ಯುವಿ ವೈಶಿಷ್ಟ್ಯತೆ ಹೊಂದಿರುವ ಎಸ್-ಪ್ರೆಸ್ಸೊ ಕಾರು ಅತಿ ಕಡಿಮೆ ಬೆಲೆಯೊಂದಿಗೆ ಅತ್ಯುತ್ತಮ ಎಂಟ್ರಿ ಲೆವಲ್ ಕಾರು ಮಾದರಿಯಾಗಿದ್ದು, ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ಎಸ್-ಪ್ರೆಸ್ಸೊ ಕಾರು ದೇಶಿಯ ಮಾರುಕಟ್ಟೆಯಲ್ಲಿನ ಆವೃತ್ತಿಗಿಂತಲೂ ತುಸು ವಿಭಿನ್ನ ವೈಶಿಷ್ಟ್ಯತೆಯೊಂದಿಗೆ ಮಾರಾಟಗೊಳ್ಳಲಿದೆ. ದಕ್ಷಿಣ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕನ್ ರಾಷ್ಟ್ರಗಳಲ್ಲಿ ಈಗಾಗಲೇ ಮಾರುತಿ ಸುಜುಕಿ ನಿರ್ಮಾಣದ ಸ್ವಿಫ್ಟ್ ಮತ್ತು ಬಲೆನೊ ಕಾರಿಗೂ ಅತಿ ಹೆಚ್ಚು ಬೇಡಿಕೆಯಿದ್ದು, ಇದೀಗ ಎಸ್-ಪ್ರೆಸ್ಸೊ ಕೂಡಾ ಬೇಡಿಕೆ ಪಡೆದುಕೊಳ್ಳುತ್ತಿರುವುದು ಮಾರುತಿ ಸುಜುಕಿಗೆ ಉತ್ಪಾದನಾ ಪ್ರಮಾಣ ಹೆಚ್ಚಳಕ್ಕೆ ಮತ್ತಷ್ಟು ಸಹಕಾರಿಯಾಗಿದೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಇನ್ನು ಎಂಟ್ರಿ ಲೆವೆಲ್ ಕಾರುಗಳಲ್ಲೇ ವಿನೂತನ ಫೀಚರ್ಸ್ ಮತ್ತು ಬಿಎಸ್-6 ಎಂಜಿನ್ ಹೊತ್ತು ಬಂದಿರುವ ಎಸ್-ಪ್ರೆಸ್ಸೊ ಕಾರು ಮಾರುತಿ ಸುಜುಕಿ ನಿರ್ಮಾಣದ ಕಾರುಗಳ ಪಟ್ಟಿಯಲ್ಲಿ 3 ಸ್ಥಾನದಲ್ಲಿದ್ದು, ಆಲ್ಟೊ ಮತ್ತು ವ್ಯಾಗನ್‌ಆರ್ ನಂತರ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕಾರುಗಳ ಪೈಕಿ ಎಸ್-ಪ್ರೆಸ್ಸೊ ಕಾರು ಹೊಸ ಸಂಚಲನಕ್ಕೆ ಕಾರಣವಾಗಿದೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಆರ್ಥಿಕ ಹಿಂಜರಿತದಿಂದಾಗಿ ಹೊಸ ಕಾರು ಮಾರಾಟದಲ್ಲಿ ಸತತ ಹಿನ್ನಡೆ ಅನುಭವಿಸಿದ್ದ ಮಾರುತಿ ಸುಜುಕಿ ಸಂಸ್ಥೆಗೆ ಎಸ್-ಪ್ರೆಸ್ಸೊ ಕಾರು ಮಾರಾಟವು ಬಲತುಂಬಿದ್ದು, ಅವಧಿಗೂ ಮುನ್ನವೇ ಬಿಎಸ್-6 ಕಾರುಗಳನ್ನು ಬಿಡುಗಡೆ ಮಾಡಿರುವುದು ಗ್ರಾಹಕರ ಆಕರ್ಷಣೆಗೆ ಕಾರಣವಾಗಿದೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಸ್-ಪ್ರೆಸ್ಸೊ ಕಾರು ಸದ್ಯ ಪ್ರಮುಖ ಆರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್ ಆಯ್ಕೆ ಮಾಡಬಹುದಾಗಿದೆ. ಇದರಲ್ಲಿ ಆರಂಭಿಕ ವೆರಿಯೆಂಟ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.3.69 ಲಕ್ಷ ಖರೀದಿಗೆ ಲಭ್ಯವಿದ್ದಲ್ಲಿ ಟಾಪ್ ಎಂಡ್ ವೆರಿಯೆಂಟ್ ಬೆಲೆಯನ್ನು ರೂ. 4.91 ಲಕ್ಷಕ್ಕೆ ನಿಗದಿಪಡಿಸಲಾಗಿದೆ. ಆಲ್ಟೊ ಕೆ10 ಮತ್ತು ವ್ಯಾಗನ್ಆರ್ ಮಧ್ಯದ ಕಾರು ಆವೃತ್ತಿಯಾಗಿ ಎಸ್-ಪ್ರೆಸ್ಸೊ ಮಾರಾಟಗೊಳ್ಳುತ್ತಿದ್ದು, ಹೊಸ ಕಾರು ಕೇವಲ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಮಾತ್ರವೇ ಹೊಂದಿದೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮದಂತೆ ಎಸ್ ಪ್ರೆಸ್ಸೊ ಕಾರಿನ ಎಂಜಿನ್ ಅನ್ನು ಅಭಿವೃದ್ದಿಗೊಳಿಸಲಾಗಿದ್ದು, ಆರಂಭಿಕ ಆವೃತ್ತಿಗಳಲ್ಲಿ ಮ್ಯಾನುವಲ್ ಮತ್ತು ಹೈ ಎಂಡ್ ಕಾರುಗಳಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲಾಗಿದೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಂಜಿನ್ ಸಾಮಾರ್ಥ್ಯ ಮತ್ತು ಮೈಲೇಜ್

ಎಸ್-ಪ್ರೆಸ್ಸೊ ಕಾರು 998 ಸಿಸಿ ತ್ರಿ-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ‌68-ಬಿಎಚ್‌ಪಿ ಮತ್ತು 90-ಎನ್ಎಂ ಟಾರ್ಕ್ ಉತ್ಪಾದನೆ ಮೂಲಕ ಉತ್ತಮ ಇಂಧನ ಕಾರ್ಯಕ್ಷಮತೆ ಪಡೆದಿದೆ. ಆರಂಭಿಕ ಕಾರು ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಹೈ ಎಂಡ್ ಮಾದರಿಯಲ್ಲಿ 5-ಸ್ಪೀಡ್ ಆಟೋ ಗೇರ್ ಶಿಫ್ಟ್(ಎಜಿಎಸ್) ಆಯ್ಕೆ ಲಭ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್‌ಗೆ 21.7 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಹಾಗೆಯೇ ಹೊಸ ಕಾರು ಮೈಕ್ರೋ ಎಸ್‌ಯುವಿ ವಿನ್ಯಾಸದೊಂದಿಗೆ ಆಕರ್ಷಕ ಗ್ರೌಂಡ್ ಕ್ಲಿಯೆರೆನ್ಸ್, 14-ಇಂಚಿನ ಸ್ಟೀಲ್ ವೀಲ್ಹ್, ಸ್ಲಿಕ್ ಫ್ರಂಟ್ ಗ್ರಿಲ್, ಕ್ರೋಮ್ ಇನ್ಸರ್ಟ್, ಆಯತಾಕಾರದ ಹೆಡ್‌ಲ್ಯಾಂಪ್, ವಿಸ್ತರಿತ ಸೆಂಟರ್ ಏರ್ ಇನ್‌ಟೆಕ್, ಸಿ ಶೇಫ್ ಟೈಲ್‌ಗೆಟ್ ಸೌಲಭ್ಯವು ಕಾರಿನ ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಇದರೊಂದಿಗೆ ಎಸ್-ಪ್ರೆಸ್ಸೊ ಕಾರಿನ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಜೋಡಿಸಲಾಗಿದ್ದು, ಬಾಡಿ ಕಲರ್ ಡ್ಯಾಶ್‌ಬೋರ್ಡ್, ಸೆಂಟರ್ ಕನ್ಸೊಲ್‌ನಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಟ್ಯಾಚೊ ಮೀಟರ್, ಇನ್‌ಸ್ಟ್ರುಮೆಂಟ್ ಡಿಸ್‌ಪ್ಲೇ, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಮಾರುತಿ ನಿರ್ಮಾಣದ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಸಿಸ್ಟಂ,ಆ್ಯಪಲ್ ಕಾರ್ ಪ್ಲೇ/ಆಂಡ್ರಾಯಿಡ್ ಆಟೋ, ಆರೇಂಜ್ ಕಲರ್ ಆಕ್ಸೆಂಟ್ ಸೌಲಭ್ಯವಿದೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಎಸಿ ವೆಂಟ್ಸ್, ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್, ಮ್ಯಾನುವಲ್ ಹೊಂದಾಣಿಕೆಯ ರಿಯರ್ ವ್ಯೂ ಮಿರರ್, 12ವೊಲ್ಟ್ ಚಾರ್ಜಿಂಗ್ ಸ್ಯಾಕೆಟ್, ಯುಎಸ್‌ಬಿ ಕನೆಕ್ಟ್ ಸಹ ಹೊಂದಿದ್ದು, ಕೇಂದ್ರ ಸರ್ಕಾರದ ಕ್ರ್ಯಾಶ್ ಟೆಸ್ಟ್ ನಿಯಮಗಳಿಗೆ ಅನುಗುಣವಾಗಿ ಹಲವಾರು ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ವಿದೇಶಿ ಮಾರುಕಟ್ಟೆಗಳಿಗೂ ರಫ್ತುಗೊಂಡ ಮಾರುತಿ ಸುಜುಕಿ ಎಸ್-ಪ್ರೆಸ್ಸೊ

ಹೊಸ ಕಾರಿನಲ್ಲಿ ಕೀ ಲೆಸ್ ಎಂಟ್ರಿ,ಬ್ಲೂ‌ಥೂತ್ ಕನೆಕ್ಟಿವಿಟಿ, ಪವರ್ ವಿಂಡೋ, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಸ್ಪೀಡ್ ವಾರ್ನಿಂಗ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದ್ದು, ಎ-ಪಿಲ್ಲರ್ ವಿಭಾಗದಲ್ಲಿನ ಹೊಸ ವಿನ್ಯಾಸದೊಂದಿಗೆ ಚಾಲಕನಿಗೆ ಅನುಕೂಲಕರ ಚಾಲನಾ ಸೌಲಭ್ಯಗಳನ್ನು ಒದಗಿಸುವುದರ ಮೂಲಕ ಹಿಂಬದಿಯ ಸವಾರರಿಗೂ ಅನುಕೂಲಕರ ಆಸನ ವ್ಯವಸ್ಥೆಯನ್ನು ಜೋಡಿಸಲಾಗಿದೆ.

Most Read Articles

Kannada
English summary
Maruti Spresso export sales begin in Africa, Latin America more details. Read in Kannada.
Story first published: Friday, January 24, 2020, 19:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X