ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ದೇಶದ ಅತಿ ದೊಡ್ಡ ವಾಹನ ಉತ್ಪಾದನಾ ಕಂಪನಿಯಾದ ಮಾರುತಿ ಸುಜುಕಿ ಹೊಸ ಸೂಪರ್ ಕ್ಯಾರಿ ಬಿಎಸ್-6 ಪ್ರೇರಿತ ಎಸ್-ಸಿಎನ್‌ಜಿ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಹೊಸ ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಸಿಎನ್‌ಜಿ ಮಾದರಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.5.07 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಮಾರುತಿ ಸೂಪರ್ ಕ್ಯಾರಿ ವಾಹನವು ಬಿಎಸ್-6 ಆಗಿರುವ ಭಾರತದ ಮೊದಲ ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್ಸಿವಿ) ಆಗಿದೆ. ಈ ಸೂಪರ್ ಕ್ಯಾರಿ ಸಿಎನ್‌ಜಿಯು ಸ್ಮಾರ್ಟ್ ಹೈಬ್ರಿಡ್ ವಾಹನಗಳನ್ನು ಒಳಗೊಂಡಿರುವ ಬ್ರಾಂಡ್‌ನ 'ಮಿಷನ್ ಗ್ರೀನ್ ಮಿಲಿಯನ್' ನ ಭಾಗವಾಗಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿ ಮತ್ತು ಬಿಎಸ್-6 ಮಾದರಿಯಲ್ಲಿ ಬಿಡುಗಡೆಗೊಳಿಸಿರುವುದಕ್ಕೆ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಈ ವಾಹನದ ಬಗ್ಗೆ ಎಂಎಸ್ಐಎಲ್ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್ ಮತ್ತು ಸೇಲ್ಸ್) ಶಶಾಂಕ್ ಶ್ರೀವಾಸ್ತವ ಅವರು ಮಾತನಾಡಿ, ಹಿಂದಿನ ಸೂಪರ್ ಕ್ಯಾರಿ ಮಾದರಿಯನ್ನು ಮಾರುತಿ ಸುಜುಕಿ ಕಮರ್ಷಿಯಲ್ ಚಾನೆಲ್ ನೆಟ್‌ವರ್ಕ್ ಮೂಲಕ 56,000 ಯುನಿಟ್ ಗಳನ್ನು ಮಾರಾಟ ಮಾಡಲಾಗಿತ್ತು. ಸೂಪರ್ ಕ್ಯಾರಿಯು ನಿರಂತರವಾಗಿ ಮಿನಿ-ಟ್ರಕ್ ವಿಭಾಗವನ್ನು ಮಾರಾಟದಲ್ಲಿ ಮೀರಿಸುತ್ತಿದೆ.

MOST READ: ಖಚಿತವಾಗದ ಬಹುನಿರೀಕ್ಷಿತ ಜಿಮ್ನಿ ಎಸ್‍ಯುವಿಯ ಬಿಡುಗಡೆ

ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ವಿಶೇಷವಾಗಿ ಮಿನಿ ಲೈಟ್ ಕಮರ್ಷಿಯಲ್ ವೆಹಿಕಲ್ ವಿಭಾಗದ ವಾಹನಗಳ ಬಳೆಕೆದಾರರು ಕೂಡ ಹೆಚ್ಚಿನ ಸಂಖ್ಯೆಯಲ್ಲಿದೆ. ಈ ಸೂಪರ್ ಕ್ಯಾರಿಯು ಹೆಚ್ಚು ಪವರ್, ವಿಶಾಲವಾದ ಸ್ಪೇಸ್, ಉತ್ತಮ ಗುಣಮಟ್ಟ ಮತ್ತು ಬಹುಮುಖ ಡೆಕ್ ಅನ್ನು ಹೊಂದಿದೆ ಎಂದು ಹೇಳಿದರು.

ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಸೂಪರ್ ಕ್ಯಾರಿ ವಾಹನವು ವ್ಯವಹಾರಗಳು ತಮ್ಮ ಲಾಭದಾಯಕತೆಯನ್ನು ಹೆಚ್ಚಿಸಲು ಸಹಾಯ ಮಾಡಿತ್ತದೆ, ಇದು ಪ್ರಾರಂಭವಾದ ಕೇವಲ ಎರಡು ವರ್ಷಗಳಲ್ಲಿ ಈ ಮಾದರಿಯು ಎರಡನೇ ಅತಿ ಹೆಚ್ಚು ಮಾರಾಟವಾದ ವಾಹನ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

MOST READ: ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಿಎಸ್-6 ಮಾರುತಿ ಎಸ್-ಕ್ರಾಸ್ ಪೆಟ್ರೋಲ್ ಆವೃತ್ತಿ

ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಬೈ-ಫ್ಯೂಯಲ್ ಎಸ್-ಸಿಎನ್‌ಜಿ ರೂಪಾಂತರವನ್ನು ಸಣ್ಣ ವಾಣಿಜ್ಯ ಉದ್ಯಮದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಈಗಾಗಲೇ ಸೂಪರ್ ಕ್ಯಾರಿ ಮಾರಾಟಕ್ಕೆ ಸುಮಾರು 8% ಕೊಡುಗೆ ನೀಡುತ್ತದೆ.

ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಮಾರುತಿ ಸುಜುಕಿ ಸೂಪರ್ ಕ್ಯಾರಿಯು ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6000 ಆರ್‌ಪಿಎಂನಲ್ಲಿ 64 ಬಿಹೆಚ್‍ಪಿ ಪವರ್ ಮತ್ತು 85 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಭೂಪ್ರದೇಶಗಳಲ್ಲಿ ಗರಿಷ್ಠ ಕಾರ್ಯಕ್ಷಮತೆ, ವರ್ಧಿತ ಡ್ರೈವಿಬಿಲಿಟಿ ನೀಡಲು ವಿಶೇಷವಾಗಿ ಟ್ಯೂನ್ ಮಾಡಲಾಗಿದೆ.

MOST READ: ದಾಖಲೆ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ ಮಾರುತಿ ಸುಜುಕಿ ಎಕ್ಸ್‌ಎಲ್6

ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಮಾರುತಿ ಸುಜುಕಿ ಸೂಪರ್ ಕ್ಯಾರಿಯು ದೇಶದ ಮೊದಲ 4 ಸಿಲಿಂಡರ್ ಚಾಲಿತ ಮಿನಿ ಟ್ರಕ್ ಕಮರ್ಷಿಯಲ್ ವಾಹನವಾಗಿದೆ. ಈ ವಾಹನವು ಹಲವಾರು ಫೀಚರ್ ಗಳನ್ನು ಹೊಂದಿದೆ. ಇದರಲ್ಲಿ ರಿವರ್ಸ್ ಪಾರ್ಕಿಂಗ್ ಸೆನ್ಸರ್‌ಗಳು, ಸೀಟ್-ಬೆಲ್ಟ್ ರಿಮೈಂಡರ್, ಲಾಕ್ ಮಾಡಬಹುದಾದ ಗ್ಲೋವ್‌ಬಾಕ್ಸ್, ದೊಡ್ಡ ಲೋಡಿಂಗ್ ಡೆಕ್ ಮತ್ತು ಇನ್ನೂ ಹಲವು ಫೀಚರ್ ಗಳನ್ನು ಹೊಂದಿದೆ.

ಬಿಡುಗಡೆಯಾಯ್ತು ಮಾರುತಿ ಸುಜುಕಿ ಸೂಪರ್ ಕ್ಯಾರಿ ಬಿಎಸ್-6 ಎಸ್-ಸಿಎನ್‌ಜಿ ಮಾದರಿ

ಹೊಸ ಮಾರುತಿ ಸುಜುಕಿ ಸೂಪರ್ ಕ್ಯಾರಿ ಭಾರತದಲ್ಲಿ ಟಾಟಾ ಏಸ್ ಗೆ ಪೈಪೋಟಿಯನ್ನು ನೀಡುತ್ತದೆ. ಸೂಪರ್ ಕ್ಯಾರಿ ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಲೈಟ್ ಕಮರ್ಷಿಯಲ್ ವೆಹಿಕಲ್ (ಎಲ್‌ಸಿವಿ) ಆಗಿದೆ. ಮಾರುತಿ ಸುಜುಕಿ ಸೂಪರ್ ಕ್ಯಾರಿಯು ದೇಶದ ಮೊದಲ 4 ಸಿಲಿಂಡರ್ ಚಾಲಿತ ಮಿನಿ ಟ್ರಕ್ ಎಂಬ ಹೆಗ್ಗಳಿಕೆಯೊಂದಿಗೆ ಹಲವಾರು ವಿಶೇಷತೆಗಳನ್ನು ಹೊಂದಿದೆ.

Most Read Articles

Kannada
English summary
Maruti Suzuki Super Carry BS6 S-CNG Launched In India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X