ಸೆಲೆರಿಯೊ ಎಕ್ಸ್ ಆರೆಂಜ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ನ್ಯೂ ಜನರೇಷನ್ ಸೆಲೆರಿಯೊ ಬಿಡುಗಡೆಯ ತನಕವು ಖರೀದಿಗೆ ಲಭ್ಯವಿರಲಿರುವ ಸೆಲೆರಿಯೊ ಎಕ್ಸ್ ಮಾದರಿಯು ತದನಂತರ ಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ನ್ಯೂ ಜನರೇಷನ್ ಮಾದರಿಯು ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ.

ಸೆಲೆರಿಯೊ ಎಕ್ಸ್ ಆರೆಂಜ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ನ್ಯೂ ಜನರೇಷನ್ ಸೆಲೆರಿಯೊ ಬಿಡುಗಡೆಯ ತನಕವು ಖರೀದಿಗೆ ಲಭ್ಯವಿರಲಿರುವ ಸೆಲೆರಿಯೊ ಎಕ್ಸ್ ಮಾದರಿಯು ತದನಂತರ ಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ನ್ಯೂ ಜನರೇಷನ್ ಮಾದರಿಯು ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಹೊಸ ಸೆಲೆರಿಯ ಕಾರು ಈಗಾಗಲೇ ಉತ್ಪಾದನಾ ಆವೃತ್ತಿಯೊಂದಿಗೆ ಬಿಡುಗಡೆಗಾಗಿ ಸಿದ್ದವಾಗಿದ್ದು, ವಿವಿಧ ಹಂತದ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತಿದೆ.

ಸೆಲೆರಿಯೊ ಎಕ್ಸ್ ಆರೆಂಜ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಹೀಗಾಗಿ ಸೆಲೆರಿಯೊ ಎಕ್ಸ್ ಕಾರು ಸದ್ಯ ಸ್ಟಾಕ್ ಇರುವ ಟಾರ್ಕ್ ಬ್ಲ್ಯೂ, ಗ್ಲಿಸ್ಟರಿಂಗ್ ಗ್ರೇ, ಕ್ಯಾಪಿನೆ ಬ್ರೌನ್ ಮತ್ತು ಆರ್ಟಿಕ್ ವೈಟ್ ಬಣ್ಣಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ನ್ಯೂ ಜನರೇಷನ್ ಮಾದರಿಯಲ್ಲಿ ಹಲವಾರು ಹೊಸ ಬಣ್ಣಗಳ ಆಯ್ಕೆಯನ್ನು ನೀಡಲಾಗಿದೆ.

ಸೆಲೆರಿಯೊ ಎಕ್ಸ್ ಆರೆಂಜ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಸೆಲೆರಿಯೊ ಎಕ್ಸ್ ಮಾದರಿಯು ಸ್ಟ್ಯಾಂಡರ್ಡ್ ಸೆಲೆರಿಯೊ ಮಾದರಿಗಿಂತ ತುಸು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಸ್ಪೋರ್ಟಿ ಲುಕ್ ಹೊಂದಿದ್ದು, ಎಂಜಿನ್ ಮಾದರಿಯು ಸಾಮಾನ್ಯ ಕಾರು ಮಾದರಿಯಲ್ಲೇ ಪಡೆದುಕೊಂಡಿದೆ.

ಸೆಲೆರಿಯೊ ಎಕ್ಸ್ ಆರೆಂಜ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಆದರೆ ನ್ಯೂಜನರೇಷನ್ ಸೆಲೆರಿಯೊ ಮಾದರಿಯಲ್ಲಿ ಸೆಲೆರಿಯೊ ಎಕ್ಸ್ ಮಾರಾಟಗೊಳ್ಳುವುದು ಅನುಮಾನ ಎನ್ನಲಾಗಿದ್ದು, ಸಾಮಾನ್ಯ ಮಾದರಿಯಲ್ಲಿ ಮಾರಾಟಗೊಳ್ಳುವ ನೀರಿಕ್ಷೆಯಿದೆ. ಹೊಸ ತಲೆಮಾರಿನ ಸೆಲೆರಿಯೊ ಕಾರು ಮುಂಬರುವ ದೀಪಾವಳಿ ಹೊತ್ತಿಗೆ ರಸ್ತೆಗಿಳಿಯಲ್ಲಿದ್ದು, ಕಾರು ಈ ಬಾರಿಗೆ ಭಾರೀ ಬದಲಾವಣೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಸೆಲೆರಿಯೊ ಎಕ್ಸ್ ಆರೆಂಜ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಇನ್ನು ಬಿಎಸ್-6 ಹೊಸ ಎಮಿಷನ್ ಪ್ರಕಾರ ಡೀಸೆಲ್ ಕಾರುಗಳ ಮಾರಾಟದಲ್ಲಿ ಮಹತ್ವದ ಬದಲಾವಣೆ ತಂದಿರುವ ಮಾರುತಿ ಸುಜುಕಿ ಕಂಪನಿಯು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟಕ್ಕೆ ಗುಡ್‌ಬೈ ಹೇಳಿದ್ದು, ಪೆಟ್ರೋಲ್, ಪೆಟ್ರೋಲ್ ಹೈಬ್ರಿಡ್ ಮತ್ತು ಸಿಎನ್‌ಜಿ ಕಾರುಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಸೆಲೆರಿಯೊ ಎಕ್ಸ್ ಆರೆಂಜ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಹಲವು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿರುವುದೇ ಡೀಸೆಲ್ ಎಂಜಿನ್ ಮಾರಾಟದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಮಾರುತಿ ಸುಜುಕಿ ಸೇರಿದಂತೆ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಡೀಸೆಲ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಿವೆ.

ಸೆಲೆರಿಯೊ ಎಕ್ಸ್ ಆರೆಂಜ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಇದಕ್ಕೆ ಕಾರಣಕ್ಕೆ ಬಿಎಸ್-4 ಡೀಸೆಲ್ ಮಾದರಿಗಳನ್ನು ಬಿಎಸ್-6 ನಿಯಮ ಅನುಸಾರ ಉನ್ನತೀಕರಣವು ಕಾರುಗಳ ಬೆಲೆಯಲ್ಲಿ ಸಾಕಷ್ಟು ದುಬಾರಿಯಾಗಲಿದ್ದು, ಈ ಹಿನ್ನಲೆಯಲ್ಲಿ ಬಹುತೇಕ ಕಾರು ಕಂಪನಿಗಳು ಎಂಟ್ರಿ ಲೆವಲ್ ಕಾರುಗಳಲ್ಲಿ ಡೀಸೆಲ್ ಕಾರುಗಳನ್ನು ಸ್ಥಗಿತಗೊಳಿಸಿ ಪೆಟ್ರೋಲ್ ಮತ್ತು ಸಿಎನ್‌ಜಿ ಕಾರುಗಳನ್ನು ಹೆಚ್ಚಿಸುತ್ತಿವೆ.

MOST READ: ರೂ.5 ಲಕ್ಷಕ್ಕಿಂತ ಕಡಿಮೆ ಬೆಲೆಯ ಜನಪ್ರಿಯ ಕಾರುಗಳಿವು

ಸೆಲೆರಿಯೊ ಎಕ್ಸ್ ಆರೆಂಜ್ ವೆರಿಯೆಂಟ್ ಸ್ಥಗಿತಗೊಳಿಸಿದ ಮಾರುತಿ ಸುಜುಕಿ

ಮಾರುತಿ ಸುಜುಕಿ ಕೂಡಾ ಈ ನಿಟ್ಟಿಯಲ್ಲಿ ಹಲವು ಕಾರು ಮಾದರಿಗಳಲ್ಲಿ ಡೀಸೆಲ್ ಎಂಜಿನ್ ಆಯ್ಕೆಯನ್ನು ಸ್ಥಗಿತಗೊಳಿಸಿದ್ದು, 800 ಸಿಸಿ, 1.0-ಲೀಟರ್, 1.2-ಲೀಟರ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ.

Most Read Articles

Kannada
English summary
Maruti Celerio X ‘Paprika Orange’ Paint Scheme Discontinued. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X