ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಮುಂದಿನ ಏಪ್ರಿಲ್ ತಿಂಗಳಲ್ಲಿ ಭಾರತದಲ್ಲಿ ಬಿಎಸ್-6 ಮಾಲಿನ್ಯ ನಿಯಮ ಜಾರಿಯಾಗುತ್ತಿದೆ. ಇದರಿಂದ ಭಾರತದ ಜನಪ್ರಿಯ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಕಂಪನಿಯು ತನ್ನ ಸರಣಿಯಲ್ಲಿನ 1.3 ಲೀಟರ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿತ್ತು.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಆದರೆ ಇದೀಗ ಮಾರುತಿ ಸುಜುಕಿ ಸಂಸ್ಥೆಯು ಯುಟರ್ನ್ ಯುಟರ್ನ್ ಹೊಡೆದಿರುವಂತೆ ತೋರುತ್ತಿದೆ. ಮಾರುತಿ ಸುಜುಕಿ ಸಂಸ್ಥೆಯು ಮತ್ತೆ ಈ ವರ್ಷದ ಆರಂಭದಲ್ಲಿ ಅಥವಾ ಈ ವರ್ಷದ ಕೊನೆಯಲ್ಲಿ ಡೀಸೆಲ್ ಆವೃತ್ತಿಗಳನ್ನು ಪರಿಚಯಿಸಲಿದೆ ಎಂದು ವರದಿಗಳಾಗಿದೆ. ಮಾರುತಿ ಸುಜುಕಿ ಇಂಡಿಯಾ ತನ್ನ ಎರ್ಟಿಗಾ ಟೂರ್ ಎಂ ಎಂಪಿವಿಯನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ಮಾಡಿದೆ. ಎರ್ಟಿಗಾ ಎಂಪಿವಿಯು ಬಿಎಸ್-6 ಎಂಜಿನ್ ನವೀಕರಿಸುತ್ತಿರುವ ಸಲುವಾಗಿ ಸ್ಪಾಟ್ ಟೆಸ್ಟ್ ನಡೆಸಿರುವುದನ್ನು ಗಾಡಿವಾಡಿ ಬಹಿರಂಗಪಡಿಸಿದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಸ್ಪಾಟ್ ಟೆಸ್ಟ್ ನಲ್ಲಿ ಕಾಣಿಸಿಕೊಂಡ ಎರ್ಟಿಗಾ ಟೂರ್ ಎಂ, ಎಂಪಿವಿಯಲ್ಲಿ ಬಿಎಸ್-6 ಪ್ರೇರಿತ 1.5 ಲೀಟರಿನ ಎ ಡೀಸೆಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 94 ಬಿ‍‍ಹೆಚ್‍‍ಪಿ ಪವರ್ ಮತ್ತು 225 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍ನೊಂದಿಗೆ 6 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಮಾರುತಿ ಸುಜುಕಿ ಕಂಪನಿಯು ತನ್ನ ಸ್ವಿಫ್ಟ್, ಬಾಲೆನೊ ಮತ್ತು ಡಿಜೈರ್ ನಂತಹ ಸಣ್ಣ ಕಾರುಗಳಲ್ಲಿ ಡೀಸೆಲ್ ಎಂಜಿನ್ ಅನ್ನು ಪರಿಚಯಿಸುವ ಸಾಧ್ಯತೆಗಳಿಲ್ಲ. ಆದರೆ 1.5 ಡೀಸೆಲ್ ಎಂಜಿನ್ ಅನ್ನು ವಿಟಾರ ಬ್ರೆಝಾ, ಎರ್ಟಿಗಾ, ಎಸ್-ಕ್ರಾಸ್ ಮತ್ತು ಸಿಯಾಜ್‍‍ನಂತಹ ಕಾರುಗಳಲ್ಲಿ ಡೀಸೆಲ್ ಎಂಜಿನ್ ಅನ್ನು ಪರಿಚಯಿಸಬಹುದು.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಮಾರುತಿ ಸುಜುಕಿ ಇಂಡಿಯಾ ಕಳೆದ ನಾಲ್ಕು ವರ್ಷಗಳ ಹಿಂದೆ ಎರ್ಟಿಗಾ ಮಾದರಿಯನ್ನು ಬಿಡುಗಡೆಗೊಳಿಸಿತ್ತು. ಎರ್ಟಿಗಾ ಎಂಪಿವಿಯು ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನಸೆಳೆಯುವಲ್ಲಿ ಯಶ್ವಸಿಯಾಗಿದೆ. ಮಾರುತಿ ಸುಜುಕಿ ಎರ್ಟಿಗಾ ಮಾದರಿಯು ಹರ್ಟೆಕ್ಟ್ ಪ್ಲಾಟ್‌ಫಾರ್ಮ್ ವಿನ್ಯಾಸವನ್ನು ಆಧರಿಸಿದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಮಾರುಕಟ್ಟೆಯಲ್ಲಿರುವ ಎರ್ಟಿಗಾ ಎಂ‍ಪಿವಿ ಕಾರು, ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍ ಅನ್ನು ಹೊಂದಿದೆ. ಹಾಗೆಯೇ ಫ್ಲೋಟಿಂಗ್ ರೂಫ್ ವಿನ್ಯಾಸ, 15-ಇಂಚಿನ ಅಲಾಯ್ ವ್ಹೀಲ್‍‍ಗಳು ಮತ್ತು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೇಲ್ ಲೈಟ್ ಅನ್ನು ಹೊಂದಿದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಮಾರುಕಟ್ಟೆಯಲ್ಲಿರುವ ಎರ್ಟಿಗಾದಲ್ಲಿ 7-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಆಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯನ್ನು ನೀಡಲಾಗಿದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಎರ್ಟಿಗಾ ಎಂಪಿವಿಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಇದಲ್ಲದೆ ಹೈ ಎಂಡ್ ಮಾದರಿಗಳಲ್ಲಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರೇರ್ ಪಾರ್ಕಿಂಗ್ ಸೆನ್ಸಾರ್ ಅನ್ನು ನೀಡಲಾಗಿದೆ.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಹೊಸ ಎರ್ಟಿಗಾ ಕಾರುಗಳನ್ನು ಒಟ್ಟು ಐದು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು. ಇದರಲ್ಲಿ ಪರ್ಲ್ ಮೆಟಾಲಿಕ್ ಅಬರ್ನ್ ರೆಡ್, ಮೆಟಾಲಿಕ್ ಮ್ಯಾಗ್ಮಾ ಗ್ರೇ, ಪರ್ಲ್ ಮೆಟಾಲಿಕ್ ಆಕ್ಸ್ಫಾರ್ಡ್ ಬ್ಲೂ, ಪರ್ಲ್ ಆರ್ಕ್ಟಿಕ್ ವೈಟ್ ಮತ್ತು ಮೆಟಾಲಿಕ್ ಸಿಲ್ಕಿ ಗ್ರೇ ಬಣ್ಣಗಳನ್ನು ಆಯ್ಕೆ ಮಾಡಬಹುದು.

ಸ್ಫಾಟ್ ಟೆಸ್ಟ್‌ನಲ್ಲಿ ಕಾಣಿಸಿಕೊಂಡ ಹೊಸ ಮಾರುತಿ ಸುಜುಕಿ ಎರ್ಟಿಗಾ ಡೀಸೆಲ್ ಆವೃತ್ತಿ

ಹೊಸ ಎರ್ಟಿಗಾ ಬಿಎಸ್-6 ಎಂಜಿನ್ ಅನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಹೊಸ ಬಿಎಸ್-6 ಎರ್ಟಿಗಾ ಎಂಪಿವಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಗಳಿವೆ. ಪ್ರಸ್ತುತ ಎರ್ಟಿಗಾ ಎಂಪಿವಿಯ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.55 ಲಕ್ಷದಿಂದ ರೂ.11.21 ಲಕ್ಷಗಳಾಗಿದೆ.

Most Read Articles

Kannada
English summary
BS6 Maruti Suzuki Ertiga diesel spied testing in India. Read in Kannada.
Story first published: Saturday, February 22, 2020, 17:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X